Asianet Suvarna News Asianet Suvarna News

ಸ್ಪರ್ಧೆಯಲ್ಲಿ ಗೆದ್ದ ಹಣದಿಂದ ಅಮ್ಮನಂತಹ ಮನೆಕೆಲಸದಾಕೆಗೆ ಮೊಬೈಲ್‌ ತೆಗೆಸಿಕೊಟ್ಟ ಬಾಲಕ

ಪೋಷಕರಿಗಿಂತ ಹೆಚ್ಚು ಮಕ್ಕಳಿಗೆ ತನ್ನ ಜೊತೆ ಸದಾಕಾಲ ಕಾಲ ಕಳೆಯುವ ತನ್ನ ಕ್ಷೇಮ ವಿಚಾರಿಸಿ ಪ್ರೀತಿ ತುಂಬುವ ಪರ್ಯಾಯ ಪೋಷಕರಂತಿರುವ ನಿಯತ್ತಿನ ಮನೆಕೆಲಸದವರ ಮೇಲೆ  ಸಹಜವಾಗಿಯೇ ಪ್ರೀತಿ ಬಂದಿರುತ್ತದೆ. ಅಂತಹ ಪ್ರೀತಿಗೆ ಸಾಕ್ಷಿ ಈ ಪುಟ್ಟ ಬಾಲಕನ ಕೆಲಸ.

A boy who took the mobile phone of a housemaid with the money he won in the competition akb
Author
First Published Dec 15, 2023, 6:04 PM IST

ಇತ್ತೀಚೆಗಂತೂ ನಗರಗಳಲ್ಲಿ ಬಹುತೇಕ ಮನೆಗಳಲ್ಲಿ ಅಪ್ಪ ಅಮ್ಮ ಇಬ್ಬರೂ ಉದ್ಯೋಗಸ್ಥರಾಗಿದ್ದು, ಇವರ ಮಕ್ಕಳನ್ನು ಮನೆಕೆಲಸದವರೇ ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಹೀಗಾಗಿಯೇ ಪೋಷಕರಿಗಿಂತ ಹೆಚ್ಚು ಮಕ್ಕಳಿಗೆ ತನ್ನ ಜೊತೆ ಸದಾಕಾಲ ಕಾಲ ಕಳೆಯುವ ತನ್ನ ಕ್ಷೇಮ ವಿಚಾರಿಸಿ ಪ್ರೀತಿ ತುಂಬುವ ಪರ್ಯಾಯ ಪೋಷಕರಂತಿರುವ ನಿಯತ್ತಿನ ಮನೆಕೆಲಸದವರ ಮೇಲೆ  ಸಹಜವಾಗಿಯೇ ಪ್ರೀತಿ ಬಂದಿರುತ್ತದೆ. ಅಂತಹ ಪ್ರೀತಿಗೆ ಸಾಕ್ಷಿ ಈ ಪುಟ್ಟ ಬಾಲಕನ ಕೆಲಸ.

ಹೌದು ಬಾಲಕನೋರ್ವ ತನ್ನ ಶಾಲೆ ಹಾಗೂ ಇತರೆಡೆ ನಡೆದ ಹಲವು ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದ ಪ್ರಶಸ್ತಿ ಮೊತ್ತದಲ್ಲಿ ಸಿಕ್ಕಿದ ಹಣದಿಂದ ತನ್ನನ್ನು ಪುಟ್ಟ ಮಗುವಾಗಿದ್ದಾಗಿನಿಂದಲೂ ನೋಡಿಕೊಳ್ಳುತ್ತಿದ್ದ ಅಮ್ಮನ ಮನಸ್ಸಿನ ಅಜ್ಜಿಯ ಪ್ರೀತಿ ತುಂಬಿದ ಮನೆಕೆಲಸದಾಕೆಗೆ ಮೊಬೈಲ್ ಫೋನ್ ತೆಗೆಸಿಕೊಟ್ಟಿದ್ದಾನೆ.  ಪುಟ್ಟ ಬಾಲಕನ ಈ ದೊಡ್ಡತನದ ಸ್ಟೋರಿ ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ಅನೇಕರು ಬಾಲಕನಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

ಮನೆಯ ಕಾರಿಡಾರ್‌ನಲ್ಲಿ ವಾಕ್ ಮಾಡುವಾಗ ಅಮ್ಮ ನನ್ನ ಸುತ್ತಲೂ ಇದ್ದಾರೆ ಅನ್ನಿಸುತ್ತೆ; ಜಾನ್ವಿ ಕಪೂರ್

ವಿ ಬಾಲಾಜಿ ಎಂಬುವವರ ಪುತ್ರ ಈತನಾಗಿದ್ದು, ಸ್ವತಃ ಈ ಕತೆಯನ್ನು ಬಾಲಕನ ತಂದೆಯೇ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವಾರಾಂತ್ಯಗಳಲ್ಲಿ ನಡೆಯುವ ಟೂರ್ನ್‌ಮೆಂಟ್‌ನಲ್ಲಿ ಭಾಗವಹಿಸಿ ಪುತ್ರ ಅಂಕಿತ್ ಇದುವರೆಗೆ 7 ಸಾವಿರ ರೂಪಾಯಿಯನ್ನು ಗಳಿಸಿದ್ದಾನೆ. ಹಾಗೂ ಆ ಹಣದಲ್ಲಿ ಇಂದು ಆತ ನಮ್ಮ ಮನೆಯ ಅಡುಗೆ ಕೆಲಸದವರಾದ ಸರೋಜಾ ಅವರಿಗೆ 2 ಸಾವಿರ ರೂಪಾಯಿ ಮೊತ್ತದ ಮೊಬೈಲ್ ಫೋನ್ ಅನ್ನು ಖರೀದಿಸಿ ನೀಡಿದ್ದಾನೆ. ಆತ ಆರು ತಿಂಗಳ ಮಗುವಾಗಿದ್ದಾಗಿನಿಂದಲೂ ಸರೋಜಾ ಅವರು ಆತನ ಲಾಲನೆ ಪಾಲನೆ ಮಾಡುತ್ತಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಅಂಕಿತ್‌ನ ಪೋಷಕರಾದ ನನಗೆ ಹಾಗೂ ಮೀರಾಗೆ ಇದಕ್ಕಿಂತ ದೊಡ್ಡ ಖುಷಿಯ ವಿಚಾರ ಇಲ್ಲ ಎಂದು ಅವರು ಬರೆದುಕೊಂಡಿದ್ದಾರೆ.

ಇದು ಭಾರತದ ಅತೀ ದೊಡ್ಡ ಕೂಡು ಕುಟುಂಬ: ಒಂದೇ ಸೂರಿನಡಿ ಬದುಕ್ತಿದ್ದಾರೆ 150ಕ್ಕೂ ಹೆಚ್ಚು ಜನ!

ಇವರ ಈ ಟ್ವಿಟ್‌ ಈಗ ಸಖತ್ ವೈರಲ್ ಆಗಿದ್ದು, ಅನೇಕರು ಬಾಲಕ ಅಂಕಿತ್‌ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮೂರು ಲಕ್ಷಕ್ಕೂ ಹೆಚ್ಚು ಜನ ಈ ಟ್ವಿಟ್ ವೀಕ್ಷಣೆ ಮಾಡಿದ್ದಾರೆ. ಅನೇಕರು ಅಂಕಿತ್ ಪೋಷಕರನ್ನು ಕೂಡ ಕೊಂಡಾಡಿದ್ದು,ಬಾಲ್ಯದಲ್ಲೇ ಮಗನಿಗೆ ಜೀವನ ಮೌಲ್ಯಗಳನ್ನು ಕಲಿಸಿ ಮುನ್ನೆಡೆಸುತ್ತಿರುವ ಪೋಷಕರಿಗೆ ಧನ್ಯವಾದ ತಿಳಿಸಿದ್ದಾರೆ. ಅನೇಕರು ಈ ಬಾಲಕನ ಕೆಲಸಕ್ಕೆ ಹೆಮ್ಮೆಯಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇದೊಂದು ಸ್ಪೂರ್ತಿಯುತವಾದ ಕೆಲಸ, ಆತ ಜೀವನದಲ್ಲಿ ಇನ್ನೂ ತುಂಬಾ ದೂರ ಸಾಗಲಿದ್ದಾನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 
 

 

 

Follow Us:
Download App:
  • android
  • ios