ನೀರೊಳಗಿನ ಈ ಹೊಟೇಲ್ ಹೇಗಿದೆ ಗೊತ್ತಾ? ವೀಡಿಯೋ ಸಖತ್ ವೈರಲ್
ಮಾಲ್ಡೀವ್ಸ್‌ನಲ್ಲಿರುವ ಈ ನೀರೊಳಗಿನ ಹೋಟೆಲ್‌ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗ್ರಾಹಕರು ನೀರಿನ ಮೂಲಕ ಹೋಟೆಲ್‌ಗೆ ಪ್ರವೇಶಿಸಿ ಊಟ ಸವಿಯಬಹುದು. ಈ ವಿಶಿಷ್ಟ ಹೋಟೆಲ್ ಅನುಭವದ ಬಗ್ಗೆ ನೆಟ್ಟಿಗರು ಕುತೂಹಲ, ಆತಂಕಗಳನ್ನು ವ್ಯಕ್ತಪಡಿಸಿದ್ದಾರೆ.
ಪ್ರವಾಸೋದ್ಯಮವನ್ನು ಆಕರ್ಷಿಸಲು ಜನರ ಸೆಳೆಯಲು ಹೋಟೇಲ್ ಉದ್ಯಮಿಗಳು ತರ ತರಹದ ತಂತ್ರಗಳನ್ನು ಮಾಡುತ್ತಾರೆ. ರೂಪ್ ಟಾಪ್ ಮೇಲೆ ಊಟ ನೀಡುವುದು ಗ್ಲಾಸ್ ಬ್ರಿಡ್ಜ್‌ನಂತಹ ನೆಲ ಕಾಣುವ ಹೊಟೇಲ್‌ಗಳಲ್ಲಿ ಅತಿಥ್ಯ ನೀಡುವುದು ಹೀಗೆ ತರಹೇವಾರಿ ಹೊಟೇಲ್ ಅತಿಥ್ಯಗಳನ್ನು ನೀವು ನೋಡಿರಬಹುದು. ಅದೇ ರೀತಿ ಈಗ ಇಲ್ಲೊಂದು ಕಡೆ ನೀರೋಳಗೆ ಹೊಟೇಲನ್ನು ನಿರ್ಮಿಸಿ ಅಲ್ಲಿ ಅತಿಥಿಗಳಿಗೆ ಆತಿಥ್ಯ ನೀಡಲಾಗುತ್ತದೆ. ಅದರ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ. ಅಂದಹಾಗೆ ಈ ನೀರೊಳಗಿನ ರೆಸ್ಟೋರೆಂಟ್ ಇರುವುದು ಮಾಲ್ಡೀವ್ಸ್‌ನಲ್ಲಿ zuziagorecka ಎಂಬ ವಾಲಿಬಾಲ್ ಪ್ಲೇಯರ್ ಒಬ್ಬರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಲಕ್ಷಾಂತರ ಜನರ ಗಮನ ಸೆಳೆದಿದೆ.
ವೀಡಿಯೋದಲ್ಲಿ ಕಾಣಿಸುವಂತೆ ಮಹಿಳೆಯೊಬ್ಬರು ನೀರೊಳಗೆ ನಿರ್ಮಿತವಾದ ಈ ಹೊಟೇಲ್‌ನ ಮೇಲಿನ ಮಹಡಿಯಿಂದ ಕೆಳಗೆ ಕೆಳಗೆ ಮೆಟ್ಟಿಲುಗಳ ಮೂಲಕ ಇಳಿಯುತ್ತಾ ನೀರಿನತ್ತ ಸಾಗುತ್ತಾರೆ. ಆಕೆ ಕೆಳಗಿಳಿದು ಹೋಗುತ್ತಿದ್ದಂತೆ ಅಲ್ಲೊಂದು ಬಾಗಿಲು ಕಾಣಿಸುತ್ತದೆ. ಅಲ್ಲಿ ಸ್ವಾಗತಕಾರರು ಇದ್ದು, ಆಕೆಯನ್ನು ಅಲ್ಲಿಗೆ ಆಹ್ವಾನಿಸುತ್ತಾರೆ. ಆಕೆ ಒಳಗೆ ಹೋದಂತೆ ಅಲ್ಲಿ ಹೊಟೇಲ್‌ನಲ್ಲಿರುವಂತೆ ಟೇಬಲ್ ಹಾಗೂ ಮೇಜುಗಳಿದ್ದು, ಕೆಲವರು ಗ್ರಾಹಕರು ಈಗಾಗಲೇ ಅಲ್ಲಿ ಕುಳಿತಿದ್ದಾರೆ. ಬಳಿಕ ಮಹಿಳೆ ಅಲ್ಲಿ ಕುಳಿತು ತನ್ನ ಊಟವನ್ನು ಸೇವಿಸುತ್ತಿದ್ದರೆ, ಆ ಹೊಟೇಲ್‌ನ ಹೊರಭಾಗದಲ್ಲಿ ನೀರು ಬಂದು ಹೊಟೇಲ್‌ನ ಹೊರಭಾಗಕ್ಕೆ ಅಪ್ಪಳಿಸುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ಹೈದರಾಬಾದ್‌ನಲ್ಲಿವೆ ಟಾಲಿವುಡ್ ಸ್ಟಾರ್‌ಗಳ ನಾಲ್ಕು ಐಷಾರಾಮಿ ರೆಸ್ಟೋರೆಂಟ್‌ಗಳು
ಈ ಹೊಟೇಲ್‌ನ ಒಳಭಾಗದಿಂದ ಗ್ಲಾಸ್‌ನ ವಿಂಡೋ ಮೂಲಕ ಹೊರಭಾಗವನ್ನು ನೋಡಬಹುದಾಗಿದೆ. ಸಮುದ್ರದೊಳಗೆ ನಿರ್ಮಿತವಾದಂತೆ ಕಾಣುತ್ತಿರುವ ಈ ಹೊಟೇಲ್ ಹೊರಭಾಗದಲ್ಲಿರುವ ನೀರಿನಲ್ಲಿ ಮೀನುಗಳು ಹೊರಳಾಡುವಂತೆ ಕಾಣುತ್ತಿದೆ. 73 ಮಿಲಿಯನ್‌ಗೂ ಹೆಚ್ಚು ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. 3 ಮಿಲಿಯನ್‌ಗೂ ಅಧಿಕ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೀಡಿಯೋ ಪೋಸ್ಟ್ ಮಾಡಿದವರು 'ಇದು ಎಂತಹಾ ಸುಂದರವಾದ ಅನುಭವ ಎಂದು ಬರೆದುಕೊಂಡು ವೀಡಿಯೋ ಪೋಸ್ಟ್ ಮಾಡಿದ್ದಾರೆ. ಅನೇಕರು ಈ ವಿಭಿನ್ನವಾದ ನೀರೊಳಗಿನ ಹೊಟೇಲ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವರು ಗ್ಲಾಸ್ ಒಡೆದು ಒಳಗೆ ನೀರು ಹರಿದು ಬಂದರೆ ಹೇಗಿರುತ್ತೆ ಎಂದು ಭಯ ವ್ಯಕ್ತಪಡಿಸಿದ್ದಾರೆ. ಇದು ಫಿಶ್ ಟ್ಯಾಂಕ್ ಅಲ್ಲ, ಹ್ಯೂಮನ್ ಟ್ಯಾಂಕ್ ಎಂದು ಕಾಮೆಂಟ್ ಮಾಡಿದ್ದಾರೆ.
ಅಪ್ಪನ ಜೊತೆ ರೆಸ್ಟೋರೆಂಟ್‌ಗೆ ಹೋದ ಮಹಿಳೆ ದುರುಗುಟ್ಟಿ ನೋಡಿದ ಜನ; ಈ ಬೋರ್ಡ್ ಹಿಡಿದು ಕುಳಿತ ಯುವತಿ!
ಭಾರತದಲ್ಲೂ ಅಹಮದಾಬಾದ್‌ನಲ್ಲಿ, ದಿ ರಿಯಲ್ ಪೋಸಿಡಾನ್ ಹೆಸರಿನ ನೀರೊಳಗಿನ ರೆಸ್ಟೊರೆಂಟ್ ಇದೆ, ನೆಲಮಟ್ಟದಿಂದ 20 ಅಡಿ ಕೆಳಗೆ ಊಟದ ಡೈನಿಂಗ್ ಹಾಲನ್ನು ನಿರ್ಮಿಸಲಾಗಿದೆ. ಅಹಮದಾಬಾದ್ ಉದ್ಯಮಿ ಭರತ್ ಭಟ್ ಅವರು ನಡೆಸುತ್ತಿರುವ ಈ 32-ಆಸನಗಳ ರೆಸ್ಟೋರೆಂಟ್ ಥಾಯ್, ಮೆಕ್ಸಿಕನ್ ಮತ್ತು ಭಾರತೀಯ ಆಹಾರ ಸೇರಿದಂತೆ ಉನ್ನತ ಶ್ರೇಣಿಯ ತಿನಿಸುಗಳನ್ನು ಒದಗಿಸುತ್ತದೆ, ಆದರೆ ಎಲ್ಲವೂ ಸಸ್ಯಾಹಾರಿ ಆಹಾರವಾಗಿದೆ.. ಈ ರೆಸ್ಟೋರೆಂಟ್ ನೆಲಮಟ್ಟದಿಂದ 20 ಅಡಿ ಕೆಳಗಿದೆ ಮತ್ತು 1,60,000 ಲೀಟರ್ ನೀರನ್ನು ಹೊಂದಿರುವ ಬೃಹತ್ ಅಕ್ವೇರಿಯಂನಿಂದ ಮುಚ್ಚಲ್ಪಟ್ಟಿದೆ ಮತ್ತು ಒಳಗೆ ಸುಮಾರು 4000 ವಿವಿಧ ಜಾತಿಯ ಮೀನುಗಳಿಂದ ತುಂಬಿದೆ.