ಧಾರ್ಮಿಕ ಟೂರಿಸಂಗೆ ಬಂಪರ್‌ ಟೈಮ್‌, ಪುಣ್ಯಕ್ಷೇತ್ರ ನೋಡಲು ಭಾರತೀಯರು ಉತ್ಸುಕ!

ಮೇಕ್‌ಮೈಟ್ರಿಪ್‌ನ ಒಳನೋಟದ ಪ್ರಕಾರ, ಕಳೆದ ಎರಡು ಕ್ಯಾಲೆಂಡರ್‌ ವರ್ಷದಲ್ಲಿ ಭಾರತದಲ್ಲಿ ಅಧ್ಯಾತ್ಮಿಕ ತಾಣಗಳ ಹುಡುಕಾಟದಲ್ಲಿ ಶೇ. 97ರಷ್ಟು ಏರಿಕೆಯಾಗಿದೆ. ನಿರೀಕ್ಷೆಯಂತೆಯೇ ಅಯೋಧ್ಯೆ ಭಾರತೀಯರ ಫೇವರಿಟ್‌ ಧಾರ್ಮಿಕ ಕ್ಷೇತ್ರ ಎನಿಸಿದೆ.

MakeMyTrip Insights Ayodhya Ujjain Badrinath among top searched destinations Religious tourism takes center stage in India san

ನವದೆಹಲಿ (ಜ.15): ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ದಿನಾಂತ ಹತ್ತಿರವಾಗುತ್ತಿದೆ. ಇದರ ನಡುವೆ ಭಾರತದ ಟ್ರಾವೆಲ್‌ ಪೋರ್ಟಲ್‌ಗಳಲ್ಲಿ ಅಯೋಧ್ಯೆ ಮಾತ್ರವಲ್ಲದೆ ದೇಶದ ಧಾರ್ಮಿಕ ಸ್ಥಳಗಳ ಹುಡುಕಾಟ ಹಾಗೂ ಬುಕ್ಕಿಂಗ್‌ಗಳಲ್ಲಿ ದೊಡ್ಡಮಟ್ಟದ ಜಿಗಿತವನ್ನು ಕಂಡಿದೆ. ಇತ್ತೀಚೆಗೆ ದೇಶದ ಪ್ರಮುಖ ಟ್ರಾವೆಲ್‌ ವೆಬ್‌ಸೈಟ್‌ ಆಗಿರುವ ಮೇಕ್‌ಮೈಟ್ರಿಪ್‌ ತನ್ನ ಒಳನೋಟಗಳನ್ನು ತಿಳಿಸಿದ್ದು, ಕಳೆದ ಎರಡು ವರ್ಷಗಳಲ್ಲಿ ದೇಶದ ಆಧ್ಯಾತ್ಮಿಕ ಸ್ಥಳಗಳ ಬಗ್ಗೆ ತಮ್ಮ ವೆಬ್‌ಸೈಟ್‌ನಲ್ಲಿ ಹೆಚ್ಚಿನ ಹುಡುಕಾಟ ನಡೆದಿದೆ. 2021ರ ಕ್ಯಾಲೆಂಡರ್‌ ವರ್ಷದಿಂದ 2023ರ ಕ್ಯಾಲೆಂಡರ್‌ ವರ್ಷದ ವರೆಗೆ ಶೇ. 97ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ. ಪ್ರಮುಖ ಹಾಟ್‌ಸ್ಟಾಟ್‌ಗಳಲ್ಲಿ ಅಯೋಧ್ಯೆ ನಿಸ್ಸಂಶಯವಾಗಿ ಮೊದಲ ಸ್ಥಾನದಲ್ಲಿದೆ. ಅಯೋಧ್ಯೆ ಕುರಿತು ಮೇಕ್‌ಮೈಟ್ರಿಪ್‌ನ ಹುಡುಕಾಟದಲ್ಲಿ ಶೇ. 585ರಷ್ಟು ಬೆಳವಣಿಗೆಯಾಗಿದೆ.

ಹಾಗಂತ ಅಯೋಧ್ಯೆ ಎನ್ನುವ ಸ್ಥಳದ ಬಗ್ಗೆ ಮಾತ್ರವೇ ಜನರು ಹುಡುಕಾಟ ನಡೆಸುತ್ತಿಲ್ಲ. ದೇಶದ ಪ್ರಮುಖ ತೀರ್ಥಕ್ಷೇತ್ರಗಳ ಹುಡುಕಾಟದಲ್ಲಿ ಜನರು ಗಮನಾರ್ಹವಾದ ಆಸಕ್ತಿ ತೋರಿದಿದ್ದಾರೆ. ಅಯೋಧ್ಯ ನಂತರದ ಸ್ಥಾನದಲ್ಲಿ ದೇಶದ ಜನರು ಹುಡುಕಾಟ ನಡೆಸಿದ ಟಾಪ್‌ 10 ಸ್ಥಳಗಳ ಬಗ್ಗೆ ನೋಡುವುದಾದರೆ, ಉಜ್ಜಯನಿ (ಶೇ. 359), ಬದ್ರಿನಾಥ್‌ (ಶೇ. 343), ಅಮರನಾಥ್‌ (ಶೇ.329), ಕೇದಾರನಾಥ್‌ (ಶೇ.322), ಮಥುರಾ (ಶೇ.223), ದ್ವಾರಕಾಧೀಶ್‌ (ಶೇ. 193), ಶಿರಡಿ (ಶೇ. 181), ಹರಿದ್ವಾರ (ಶೇ. 117) ಹಾಗೂ ಬೋಧಗಯಾ (ಶೇ. 114) ಸ್ಥಾನ ಪಡೆದಿವೆ.

ಅಯೋಧ್ಯೆಯ ಪ್ರಾಣ ಪ್ರತಿಷ್ಠಾಪನೆ ದಿನಾಂಕ ಘೋಷಣೆಯಿಂದಾಗಿ ಅಯೋಧ್ಯೆಯ ಕ್ಷೇತ್ರದ ಹುಡುಕಾಟದಲ್ಲಿ ಏರಿಕೆಗೆ ಕಾರಣವಾಗಿದೆ. ರಾಮ ಮಂದಿರದ ಉದ್ಘಾಟನೆ ದಿನಾಂಕ ಘೋಷಣೆಯಾದ ಬಳಿಕ ಅಯೋಧ್ಯೆ ಕ್ಷೇತ್ರದ ಬಗ್ಗೆ ದಾಖಲೆಯ ಶೇ. 1806ರಷ್ಟು ಸರ್ಚ್‌ಗಳು ಮೇಕ್‌ಮೈಟ್ರಿಪ್‌ ವೆಬ್‌ಸೈಟ್‌ನಲ್ಲಿ ನಡೆದಿದೆ. ಅಯೋಧ್ಯೆಯ ಏರ್‌ಪೋರ್ಟ್‌ ಉದ್ಘಾಟನೆ ದಿನವಾದ ಡಿಸೆಂಬರ್‌ 30ರಂದು ಇದು ಉನ್ನತ ಮುಟ್ಟಕ್ಕೇರಿತ್ತು.

ಹಾಗತ ಅಯೋಧ್ಯೆಯ ಬಗ್ಗೆ ದೇಶದ ನಾಗರೀಕರು ಮಾತ್ರವಲ್ಲ, ವಿದೇಶದಲ್ಲಿರುವ ವ್ಯಕ್ತಿಗಳೂ ಸರ್ಚ್‌ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಅಮೆರಿಕ ಮುಂದಿದ್ದು, ಶೇ. 22.5ರಷ್ಟು ಸರ್ಚ್‌ಗಳು ಅಮೆರಿಕದಿಂದ ಆಗಿವೆ. ಅಮೆರಿಕದ ಸನಿಹದಲ್ಲಿಯೇ ಗಲ್ಫ್‌ ವಲಯವಿದೆ. ಗಲ್ಫ್‌ ವಲಯದಿಂದ ಶೇ. 22.2ರಷ್ಟು ಆಸಕ್ತಿ ವ್ಯಕ್ತವಾಗಿದೆ. ಕೆನಡಾ, ನೇಪಾಳ ಮತ್ತು ಆಸ್ಟ್ರೇಲಿಯಾ ದೇಶಗಳಿಂದ ಕ್ರಮವಾಗಿ ಶೇ. 9.3, ಶೇ. 6.6 ಹಾಗೂ ಶೇ.6.1 ಸರ್ಚ್‌ಗಳು ನಡೆದಿವೆ.

'ಶ್ರೀರಾಮ ಬಿಪಿಎಲ್‌ ಕಾರ್ಡ್‌ ಹೋಲ್ಡರ್‌..' ರಾಮಮಂದಿರ ಲೇವಡಿ ಮಾಡಿದ ಇಂಡಿಯಾ ಮೈತ್ರಿ ನಾಯಕಿ!

ಆಧ್ಯಾತ್ಮಿಕ ಪ್ರವಾಸೋದ್ಯಮದ ಬಗ್ಗೆ ಈ ಉಲ್ಬಣವು ಭಾರತದ ಪವಿತ್ರ ಸ್ಥಳಗಳಲ್ಲಿ ಬೆಳೆಯುತ್ತಿರುವ ಆಸಕ್ತಿಯನ್ನು ಸೂಚಿಸುತ್ತದೆ ಆದರೆ ಜಾಗತಿಕ ಆಧ್ಯಾತ್ಮಿಕ ನಕ್ಷೆಯಲ್ಲಿ ಅಯೋಧ್ಯೆಯ ಹೊಸ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದೆ.

 

ಇಲ್ಲಿದೆ ಸಾಕ್ಷಿ, ದೇಶದ ಅತಿದೊಡ್ಡ ತೀರ್ಥಕ್ಷೇತ್ರ-ಪ್ರವಾಸಿ ಸ್ಥಳವಾಗುವ ಹಾದಿಯಲ್ಲಿ ಅಯೋಧ್ಯೆ!

Latest Videos
Follow Us:
Download App:
  • android
  • ios