Asianet Suvarna News Asianet Suvarna News

LGBTಗಾಗಿಯೇ ಮೀಸಲಿರೋ ಪ್ರೈಡ್ ಮಂಥ್, ಭಾರತದಲ್ಲಿ ಈ ಸ್ಥಳಕ್ಕೆ ನೀಡಬಹುದು ಭೇಟಿ!

ಲೆಸ್ಬಿಯನ್, ಗೇ, ಟ್ರಾನ್ಸ್ಜೆಂಡರ್ ಸೇರಿದಂತೆ ಇಂಥ ಸಮುದಾಯಕ್ಕಾಗಿಯೇ ಜೂನ್ ತಿಂಗಳು ಮೀಸಲಿದೆ. ಈ ತಿಂಗಳು ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ. ಈ ತಿಂಗಳು ಸಂಗಾತಿ ಜೊತೆ ಸುತ್ತಾಡಬೇಕೆನ್ನುವವರು ಭಾರತದ ಕೆಲ ಸ್ಥಳಕ್ಕೆ ಭೇಟಿ ನೀಡ್ಬಹುದು.
 

LGBTQ Friendly Places In India roo
Author
First Published Jun 5, 2023, 4:03 PM IST

ಕಾನೂನಿನ ರಕ್ಷಣೆಯಿದೆ, ಕಾನೂನಿನ ಒಪ್ಪಗೆ ಇದೆ, ಎಲ್ಲರ ಕಣ್ಣಿಗೆ ಅವರೂ ಸಾಮಾನ್ಯರು ಅಂತಾ ಏನೇ ಹೇಳಿದ್ರೂ ಇನ್ನೂ ಸಮಾಜ ಅವರನ್ನು ಒಪ್ಪಿಕೊಂಡಿಲ್ಲ ಎಂಬುದು ಸತ್ಯ. ಅವರು ಅಂದ್ರೆ ಎಲ್ ಜಿಬಿಟಿಕ್ಯೂ ಜನರು. ಎಲ್ ಜಿ ಬಿಟಿಕ್ಯೂ ಅಂದ್ರೆ ಲೆಸ್ಬಿಯನ್, ಗೇ, ಬಯೋಸೆಕ್ಸುವಲ್, ಟ್ರಾನ್ಸ್ಜೆಂಡರ್, ಕ್ವೀರ್. ಜೂನ್ ಒಂದರಿಂದ ಜೂನ್ 30ರ ಸಮಯ ಈ ಸಮುದಾಯದ ಜನರಿಗೆ ವಿಶೇಷವಾಗಿದೆ. ಯಾಕೆಂದ್ರೆ ವರ್ಷದ ಜೂನ್ ತಿಂಗಳನ್ನು ಎಲ್ ಜಿಬಿಟಿಕ್ಯೂ ಸಮುದಾಯಕ್ಕೆ ಮೀಸಲಿಡಲಾಗಿದೆ. ಇದನ್ನು ಅವರು ಪ್ರೈಡ್ ಮಂತ್ ಎಂದು ಆಚರಣೆ ಮಾಡಲಾಗುತ್ತದೆ.

LGBTQIA+ ಸಮುದಾಯದ ಜನರು ಎದುರಿಸುತ್ತಿರುವ ಹೋರಾಟಗಳು ಮತ್ತು ಸವಾಲುಗಳು ಗ್ರಹಿಕೆಗೆ ಮೀರಿದ್ದಾಗಿದೆ. ಅವರ ಬಗ್ಗೆ ಧನಾತ್ಮಕ ಬದಲಾವಣೆಯನ್ನು ಸೃಷ್ಟಿಸುವುದು ಪ್ರೈಡ್ ತಿಂಗಳ ಆಚರಣೆಯ ಮುಖ್ಯ ಉದ್ದೇಶವಾಗಿದೆ. ಪ್ರೈಡ್ ಮಂತನ್ನು ಅಮೆರಿಕಾ ಮೊದಲು ಪ್ರಾರಂಭಿಸಿತು. 2000ನೇ ಇಸವಿಯಲ್ಲಿ ಯುಎಸ್ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮೊದಲ ಬಾರಿ ಇದ್ರ ಆಚರಣೆ ಶುರು ಮಾಡಿದ್ರು. ಈಗ ಅನೇಕ ದೇಶಗಳು ಇದ್ರ ಆಚರಣೆ ಮಾಡ್ತವೆ. ಜೂನ್ ತಿಂಗಳಿನಲ್ಲಿ ಇದ್ರ ಆಚರಣೆ ನಡೆಯುತ್ತಿದ್ದು, ಅವರಿಗೆ ಈ ತಿಂಗಳು ಸ್ವಚ್ಛಂದವಾಗಿ ವಿಹರಿಸಲು ಅವಕಾಶ ನೀಡಬೇಕು ಎನ್ನಲಾಗುತ್ತದೆ.  ಆಚರಣೆ ಏನೇ ಇದ್ದರೂ ಎಲ್ಲ ಪ್ರದೇಶಗಳೂ ಜನಸಾಮಾನ್ಯರಂತೆ LGBTQ ಸಮುದಾಯಕ್ಕೆ ಸೂಕ್ತವಲ್ಲ. LGBTQ ಪ್ರಯಾಣಿಕರು ಎಲ್ಲೆಂದರಲ್ಲಿ ಸುತ್ತಾಡಲು ಸಾಧ್ಯವಿಲ್ಲ. ಕೆಲ ಪ್ರದೇಶ ಅವರಿಗೆ ನಿಷೇಧವಿದ್ರೆ ಮತ್ತೆ ಕೆಲವೆಡೆ ಅವಮಾನದ ಮಾತುಗಳನ್ನು ಕೇಳಬೇಕಾಗುತ್ತದೆ.

Live In Relationship: ಮದ್ವೆಗೂ ಮುನ್ನ ದೈಹಿಕ ಸಂಪರ್ಕ ಬೆಳೆಸೋದು ಈ ದೇಶಗಳಲ್ಲಿ ಅಪರಾಧ!

ಜೂನ್ ತಿಂಗಳಿನಲ್ಲಿ ಆಚರಿಸುವ ಈ ಪ್ರೈಡ್ ಮಂತ್ ಸಂಭ್ರಮದಲ್ಲಿ LGBTQ ಸಮುದಾಯದ ಪ್ರವಾಸಿಗರು ಕೈ ಕೈ ಹಿಡಿದು ತಿರುಗಾಡಲು ಭಾರತ ಯೋಗ್ಯವಾಗಿದೆ. ಭಾರತದ ಕೆಲವು ಸ್ಥಳಗಳಿಗೆ ಇವರು ಯಾವುದೇ ಭಯವಿಲ್ಲದೆ ಹೋಗ್ಬಹುದು. ಅದು ಯಾವುದು ಅಂತಾ ನಾವಿಂದು ಹೇಳ್ತೇವೆ.

ಗೋವಾ :  ದೇಶದ ಪ್ರವಾಸಿಗರನ್ನು ಮಾತ್ರವಲ್ಲ ವಿದೇಶಿ ಪ್ರವಾಸಿಗರನ್ನು ಸೆಳೆದಿರುವ ರಾಜ್ಯ ಗೋವಾ. ಇದನ್ನು ಸ್ವರ್ಗವೆಂದೇ ಕರೆಯಲಾಗುತ್ತದೆ. ಗೋವಾದ ರಾತ್ರಿ ಜೀವನ ಪ್ರಪಂಚದಾದ್ಯಂತ ಬಹಳ ಪ್ರಸಿದ್ಧವಾಗಿದೆ. ಪ್ರತಿ ತಿಂಗಳು ಸಾವಿರಾರು ಪ್ರವಾಸಿಗರು ಇಲ್ಲಿನ ಬೀಚ್‌ಗೆ ಭೇಟಿ ನೀಡುತ್ತಾರೆ. ಸಾವಿರಾರು LGBTQ ಪ್ರವಾಸಿಗರು ಗೋವಾಕ್ಕೆ ಬರ್ತಾರೆ. ಇಲ್ಲಿ ಯಾವುದೇ ಅಡೆತಡೆಯಿಲ್ಲದೆ ಕೈ ಕೈ ಹಿಡಿದು ಸುತ್ತಾಡಬಹುದು. ಪ್ರೈಡ್ ತಿಂಗಳನ್ನು ಆನಂದಿಸಬಹುದು.

ದೆಹಲಿ : ರಾಷ್ಟ್ರ ರಾಜಧಾನಿ ದೆಹಲಿ ಕೂಡ LGBTQ ಸಮುದಾಯದ ಜನರನ್ನು ಸ್ವಾಗತಿಸುತ್ತದೆ. ದೆಹಲಿಗೆ ಪ್ರತಿದಿನ ಸಾವಿರಾರು ಮಂದಿ ಬರ್ತಾರೆ. LGBTQ ಸಮುದಾಯದ ಪ್ರವಾಸಿಗರಿಗೆ ಇಲ್ಲಿ ಯಾವುದೇ ನಿರ್ಬಂಧವಿಲ್ಲ. ಹೆಮ್ಮೆಯ ಮಾಸವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲು ದೆಹಲಿಗೆ ಹೋಗ್ಬಹುದು. ಇಲ್ಲಿ ನೀವು ಒಂದಿಷ್ಟು ಸುಂದರ ಪ್ರದೇಶಗಳನ್ನು ಕಣ್ತುಂಬಿಕೊಳ್ಳಬಹುದು. 

Different Law : ಸಲಿಂಗಕಾಮಿಗಳಿಗೆ ಇಲ್ಲಿ ಮರಣದಂಡನೆ ಶಿಕ್ಷೆ!

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ಕೂಡ LGBTQ ಸಮುದಾಯದ ಜನರಿಗೆ ಯಾವುದೇ ತೊಂದರೆ ನೀಡೋದಿಲ್ಲ. 2008 ರಿಂದ ಬೆಂಗಳೂರಿನಲ್ಲೂ ಪ್ರೈಡ್ ಮಂತ್ ಆಚರಣೆ ನಡೆಯುತ್ತಿದೆ. ಇಲ್ಲಿ ಪ್ರತಿ ವರ್ಷ ಹೆಮ್ಮೆಯ ಮಾಸವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಬೆಂಗಳೂರು ಕ್ವೀರ್ ಫಿಲ್ಮ್ ಫೆಸ್ಟಿವಲ್ ಮತ್ತು ಮಲ್ಟಿ-ಆರ್ಟ್ಸ್ ಜೆಂಡರ್ ಬೆಂಡರ್ ಫೆಸ್ಟಿವಲ್ ಅನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ. ರಾತ್ರಿಜೀವನವನ್ನು ಆನಂದಿಸಲು LGBTQ ಪ್ರವಾಸಿಗರು ಆಗಮಿಸುವ ನಗರ ಇದಾಗಿದೆ.

ಮುಂಬೈ : ಮಯಾನಗರಿ ಮುಂಬೈ ಕೂಡ LGBTQ ಸಮುದಾಯಕ್ಕೆ ಒಳ್ಳೆಯ ಪ್ರವಾಸಿ ತಾಣವಾಗಿದೆ. LGBTQ ಸಮುದಾಯದವರು ಇಲ್ಲಿ ಆರಾಮವಾಗಿ ಸುತ್ತಾಡಬಹುದಾಗಿದೆ. LGBTQ ಸಮುದಾಯಕ್ಕೆ ಸಂಬಂಧಿಸಿದ ಅನೇಕ ಸಿನಿಮಾಗಳು ಇಲ್ಲಿಂದಲೇ ಶುರುವಾಗಿವೆ.
 

Follow Us:
Download App:
  • android
  • ios