Asianet Suvarna News Asianet Suvarna News

Different Law : ಸಲಿಂಗಕಾಮಿಗಳಿಗೆ ಇಲ್ಲಿ ಮರಣದಂಡನೆ ಶಿಕ್ಷೆ!

ಮೊದಲು ತುಂಬಾ ಅಪರೂಪವಾಗಿದ್ದು, ಈಗ ಸಾಮಾನ್ಯ ಎನ್ನುವಂತಾಗಿದೆ. ಸಲಿಂಗಕಾಮಿಗಳಿಗೆ ಅನುಕೂಲವಾಗುವಂತಹ ಕಾನೂನು ಅನೇಕ ದೇಶದಲ್ಲಿ ಜಾರಿಯಲ್ಲಿದೆ. ಜೂನ್ ತಿಂಗಳನ್ನು ಹಬ್ಬಂದತೆ ಆಚರಿಸುವ ಎಲ್ ಜಿಬಿಟಿಗಳಿಗೆ ಕೆಲವೊಂದು ಕಡೆ ಸ್ವಚ್ಛಂದವಾಗಿ ಓಡಾಡುವ ಅಧಿಕಾರವಿಲ್ಲ.  
 

Why Are Gays And Lesbians Given Death Sentence In These Countries
Author
First Published Jun 2, 2023, 2:44 PM IST

ಪ್ರಪಂಚದಾದ್ಯಂತ ಅನೇಕ ಕಾನೂನು, ಆಚರಣೆಗಳನ್ನು ಕಾಣಬಹುದು. ಹಳ್ಳಿಯಿಂದ ಹಳ್ಳಿಗೆ ದೇಶದಿಂದ ದೇಶಕ್ಕೆ ಇವುಗಳ ಬದಲಾವಣೆ ಸರ್ವೇ ಸಾಮಾನ್ಯ. ಹಾಗೇ ಎಲ್ಲ ಜಾತಿ ಸಮುದಾಯದವರಿಗೂ ಕೂಡ ಅವರದೇ ಆದ ಹಕ್ಕುಗಳು, ಆಚರಣೆಗಳು, ಹಬ್ಬಗಳು ಇರುತ್ತವೆ.

ಅನೇಕ ಸಮುದಾಯಗಳ ಪೈಕಿ ಎಲ್ ಜಿ ಬಿ ಟಿ (LGBT) ಸಮುದಾಯ ಕೂಡ ಒಂದು. ಲೆಸ್ಬಿಯನ್, ಗೇ, ಬೈಸೆಕ್ಯುಲರ್ ಮತ್ತು ಟ್ರಾನ್ಸ್ ಜೆಂಡರ್ ಗಳನ್ನು ಸೇರಿಸಿದ ಎಲ್ ಜಿ ಬಿ ಟಿ ಎಂಬ ಸಂಯುಕ್ತ ಹೆಸರನ್ನು ನಾಮಕರಣ ಮಾಡಲಾಗಿದೆ. ಈ ಸಲಿಂಗಕಾಮಿ (Homosexual) ಮತ್ತು ತೃತೀಯ ಲಿಂಗಿಗಳಿಗೆ ಜೂನ್ ತಿಂಗಳು ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಈ ತಿಂಗಳನ್ನು ಅವರು ಪ್ರೈಡ್ ಮಂಥ್ ಆಗಿ ಆಚರಿಸುತ್ತಾರೆ. ಈ ಪ್ರೈಡ್ (Pride) ತಿಂಗಳಿನಲ್ಲಿ ಎಲ್ ಜಿ ಬಿ ಟಿ ಸಮುದಾಯದವರು ಪ್ರಪಂಚದಾದ್ಯಂತ ಮೆರವಣಿಗೆಗಳು, ಹಬ್ಬಗಳು, ಪಿಕ್ನಿಕ್, ಪಾರ್ಟಿ ಮುಂತಾದವುಗಳನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇದನ್ನು ಗೇ ಪ್ರೈಡ್ ಎಂದು ಕೂಡ ಕರೆಯಲಾಗುತ್ತದೆ. ಅಮೇರಿಕದಲ್ಲಿ ಈ ಪ್ರೈಡ್ ತಿಂಗಳಿನಲ್ಲಿ ಕಾರ್ನಿವಾಲ್ ನಡೆಯುತ್ತದೆ. ರಸ್ತೆಗಳಲ್ಲಿ ಪರೇಡ್ ಗಳು ಕೂಡ ನಡೆಯುತ್ತವೆ. 

ಸಲಿಂಗಕಾಮಿಗಳು ಸಾಮಾನ್ಯವಾಗಿ ಎಲ್ಲ ದೇಶಗಳಲ್ಲಿ ಕಂಡುಬಂದರೂ  ಕೆಲವೊಂದು ದೇಶದ ಸರಕಾರ ಎಲ್ ಜಿ ಬಿ ಟಿ ಸಮುದಾಯದವರಿಗೆ ಸ್ಥಾನಮಾನ ಅಥವಾ ಅವರ ಹಕ್ಕನ್ನು ನೀಡಿಲ್ಲ. ಹಾಗೊಮ್ಮೆ ಆ ದೇಶದ ಜನರು ಸಲಿಂಗಕಾಮಿ ಅಥವಾ ತೃತೀಯ ಲಿಂಗಿಗಳ ಜೊತೆ ಇರಲು ಬಯಸಿದರೂ ಕೂಡ ಅವರಿಗೆ ಮರಣದಂಡನೆಯ ಶಿಕ್ಷೆ ವಿಧಿಸಲಾಗುತ್ತದೆ. ಅಂತಹ ದೇಶಗಳು ಯಾವುದು ಎಂಬುದನ್ನು ಅಂತರಾಷ್ಟ್ರೀಯ ಲೆಸ್ಬಿಯನ್, ಗೇ, ಬೈಸೆಕ್ಯುಲರ್, ಟ್ರಾನ್ಸ್ ಜೆಂಡರ್ ಮತ್ತು ಇಂಟರ್ ಸೆಕ್ಸ್ ಅಸೋಸಿಯೇಶನ್ ತನ್ನ ವರದಿಯಲ್ಲಿ ತಿಳಿಸಿದೆ.

ಹನಿಮೂನ್ ಸ್ವರ್ಗದಲ್ಲೇ ಹೈಯೆಸ್ಟ್ ಡಿವೋರ್ಸ್, ಮಾಲ್ಡೀವ್ಸ್‌ನಲ್ಲಿ ಯಾಕೆ ಹೀಗಾಗ್ತಿದೆ?

ಈ ದೇಶದಲ್ಲಿ ಸಲಿಂಗಕಾಮ ಕಾನೂನು ಬಾಹಿರ : ಎಲ್ ಜಿ ಬಿ ಟಿ ಅಸೋಸಿಯೇಶನ್ ವರದಿಯ ಪ್ರಕಾರ, ಪಾಕಿಸ್ತಾನ, ಅಫಘಾನಿಸ್ತಾನ, ಅರಬ್ ರಾಷ್ಟ್ರ, ಕತಾರ್ ಮತ್ತು ಇರಾನ್ ಮುಂತಾದ ದೇಶಗಳಲ್ಲಿ ಸಲಿಂಗಕಾಮ ಕಾನೂನುಬಾಹಿರವಾಗಿದೆ. ಹಾಗೊಮ್ಮೆ ಯಾರಾದರೂ ಕಾನೂನು ಮೀರಿ ಸಲಿಂಗಕಾಮಿ ಸಂಬಂಧವನ್ನು ನಡೆಸಿದರೆ, ಅವರಿಗೆ ಜೀವಾವಧಿ ಅಥವಾ ಮರಣದಂಡನೆಯ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಹಾಗಾಗಿಯೇ ಈ ದೇಶಗಳಲ್ಲಿ ಎಲ್ ಜಿ ಬಿ ಟಿ ಸಮುದಾಯದವರು ತಮ್ಮ ಹಕ್ಕುಗಳಿಗಾಗಿ ಬಹಳ ಹಿಂದಿನಿಂದಲೂ ಹೋರಾಟ ನಡೆಸುತ್ತಲೇ ಬಂದಿದ್ದಾರೆ.

ಸಲಿಂಗಕಾಮಿಗಳಿಗೇಕೆ ಶಿಕ್ಷೆ? : ಈಗ ಸಮಯ ಬದಲಾಗಿದೆ. ಪ್ರಪಂಚ ಮುಂದುವರೆದಿದೆಯಾದರೂ  ಕೆಲವು ಕಡೆ ಸಲಿಂಗಕಾಮಿ ವಿವಾಹ ಅಥವಾ ಸಂಬಂಧ ಕಾನೂನುಬಾಹಿರವೇ ಆಗಿದೆ. ಸಲಿಂಗಕಾಮಿಗಳು ವಿವಾಹವಾಗುವುದು ಸಾಂಪ್ರದಾಯಿಕವಾಗಿ ಸರಿಯಲ್ಲ ಎಂದು ಕೆಲವು ದೇಶಗಳು ಹೇಳುತ್ತವೆ ಹಾಗೂ ಇದನ್ನು ಅಪರಾಧ ಎಂದು ಗೇ ಮತ್ತು ಲೆಸ್ಬಿಯನ್ ಗಳನ್ನು ಗಲ್ಲಿಗೇರಿಸಲಾಗುತ್ತದೆ. ಅಂತಹ ಕೆಲವು ದೇಶಗಳು ಹೀಗಿವೆ.

ಜಸ್ಟ್‌ 1 ಲಕ್ಷ ಇದ್ರೆ ಸಾಕು ನೀವು ಜಗತ್ತಿನ ಈ ದೇಶಗಳಿಗೆ ಟ್ರಿಪ್ ಹೋಗ್ಬೋದು

ಇರಾನ್ : ಇರಾನ್ ದೇಶದಲ್ಲಿ ಟ್ರಾನ್ಸಜೆಂಡರ್ ಕುರಿತು ತೀವ್ರ ವಿರೋಧ ಇಲ್ಲದೇ ಇದ್ದರೂ ಕೂಡ ಈ ಸಮುದಾಯದವರಿಗೆ ಸಾಮಾಜಿಕ ಮತ್ತು ಕಾನೂನು ಹಕ್ಕುಗಳು ವಿಚಾರವಾಗಿ ಅನೇಕ ರೀತಿಯ ಬೇಧಭಾವಗಳನ್ನು ತೋರಲಾಗುತ್ತದೆ. ಇರಾನ್ ನಲ್ಲಿ ಗೇ ಮತ್ತು ಲೆಸ್ಬಿಯನ್ ಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗುತ್ತದೆ. ಏಕೆಂದರೆ ಇಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗದ ಟ್ರಾನ್ಸಜೆಂಡರ್ ವ್ಯಕ್ತಿಗಳಿಗೆ ಯಾವುದೇ ರೀತಿಯಲ್ಲಿ ಕಾನೂನು ಮಾನ್ಯತೆ ಇಲ್ಲ.

ಉಗಾಂಡಾ : ಆಫ್ರಿಕಾದ ಉಗಾಂಡ ದೇಶವು ಕೂಡ ಟ್ರಾನ್ಸಜೆಂಡರ್ ಗೆ ಸಂಬಂಧಿಸಿದಂತೆ ಅತ್ಯಂತ ಕಠಿಣ ಕಾನೂನನ್ನು ಜಾರಿಗೊಳಿಸಿದೆ. ಈ ದೇಶದಲ್ಲಿ ಸಲಿಂಗಕಾಮಿಗಳು ಜೊತೆಯಲ್ಲಿ ಕಾಣಿಸಿಕೊಳ್ಳುವಂತಿಲ್ಲ ಹಾಗೂ ಒಟ್ಟಿಗೆ ಇರಲು ಸಾಧ್ಯವಿಲ್ಲ. ಹಾಗೊಮ್ಮೆ ಒಬ್ಬ ವ್ಯಕ್ತಿ ಸಲಿಂಗಕಾಮದಲ್ಲಿ ತೊಡಗಿದರೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಯಂತಹ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತದೆ.
 

Follow Us:
Download App:
  • android
  • ios