Asianet Suvarna News Asianet Suvarna News

ಚಿಕ್ಕ ಸ್ಕರ್ಟ್ ಹಾಕ್ಕೊಂಡ್ರೆ ತೊಡೆ ಮುಚ್ಕೋಬೇಕು, ಹುಡುಗೀರು ನಗುವಾಗ ಬಾಯಿ ಮುಚ್ಕೋಬೇಕಿಲ್ಲಿ!

ವಿಶ್ವದಲ್ಲಿರುವ ದೇಶಗಳು ನಮ್ಮದೆ ನಿಯಮ, ಕಾನೂನು, ಸಂಪ್ರದಾಯ ಪಾಲನೆ ಮಾಡ್ತಿವೆ. ಕೆಲ ದೇಶಗಳು ಮೂಢನಂಬಿಕೆಯನ್ನು ಇನ್ನೂ ನಂಬುತ್ತಿದ್ದರೆ ಮತ್ತೆ ಕೆಲ ದೇಶಗಳಲ್ಲಿ ವಿಚಿತ್ರ ಕಾನೂನು ಜಾರಿಯಲ್ಲಿದೆ. ದಕ್ಷಿಣ ಕೋರಿಯಾದಲ್ಲಿರುವ ಕೆಲ ಪದ್ಧತಿ ಹಾಗೂ ನಿಯಮಗಳು ಅಚ್ಚರಿ ಹುಟ್ಟಿಸುತ್ತವೆ.
 

Know The Strange Rules In South Korea
Author
First Published Feb 28, 2023, 1:10 PM IST

ಉತ್ತರ ಕೋರಿಯಾ ಬಗ್ಗೆ ಸಾಕಷ್ಟು ಚಿತ್ರವಿಚಿತ್ರ ಸುದ್ದಿಗಳನ್ನು ನಾವು ಕೇಳ್ತಿರುತ್ತೇವೆ. ಅದ್ರ ನೆರೆ ರಾಷ್ಟ್ರ ದಕ್ಷಿಣ ಕೋರಿಯಾ ಕೂಡ ಇದ್ರಲ್ಲಿ ಹಿಂದೆ ಬಿದ್ದಿಲ್ಲ. ದಕ್ಷಿಣ ಕೋರಿಯಾ ವಿಚಿತ್ರ ದೇಶಗಳಲ್ಲಿ ಒಂದು. ಇಲ್ಲಿ ಜಾರಿಯಲ್ಲಿರುವ ಕೆಲ ನಿಯಮ, ಸಂಪ್ರದಾಯಗಳು ಹುಬ್ಬೇರಿಸುವಂತೆ ಮಾಡುತ್ತವೆ. ಈಗ್ಲೂ ಇಲ್ಲಿನ ಜನರು ಮೂಢನಂಬಿಕೆಯ ಜೊತೆಗೆ ಅನೇಕ ಪೂಜೆಗಳನ್ನು ಮಾಡ್ತಾರೆ. ಈ ದೇಶದ ಇನ್ನೊಂದು ವಿಶೇಷವೆಂದರೆ ಅವರು ಕೆಂಪು ಶಾಯಿ ಬಳಸುವುದಿಲ್ಲ. ಇಲ್ಲಿ ಅನೇಕ ಆಸಕ್ತಿದಾಯಕ ಸಂಗತಿಗಳಿವೆ. ನಾವಿಂದು ದಕ್ಷಿಣ ಕೋರಿಯಾದ ನೀವು ತಿಳಿಯದ ಕೆಲ ಸಂಗತಿಯನ್ನು ಹೇಳ್ತೇವೆ.

ದಕ್ಷಿಣ ಕೋರಿಯಾ (Korea) ದಲ್ಲಿದೆ ವಿಚಿತ್ರ ನಿಯಮ : 
ಈ ಸಂಖ್ಯೆ ಅಶುಭ :
ದಕ್ಷಿಣ ಕೊರಿಯಾ ಜನರು ಸಂಖ್ಯೆ ನಾಲ್ಕನ್ನು ಅಶುಭವೆಂದು ನಂಬುತ್ತಾರೆ. ಅವರಿಗೆ ನಾಲ್ಕರ ಮೇಲೆ ಭಯ (Fear) ವಿದೆ. ಯಾರೂ ನಾಲ್ಕನ್ನು ಉಚ್ಛರಿಸೋದಿಲ್ಲ. ದಕ್ಷಿಣ ಕೊರಿಯಾದ ಆಸ್ಪತ್ರೆ (Hospital), ಶಾಲೆ, ಕಚೇರಿ ಹೀಗೆ ಯಾವುದೇ ಕಟ್ಟಡದಲ್ಲೂ ನಾಲ್ಕನೇ ಮಹಡಿ ಇರೋದಿಲ್ಲ. 

ನಾಟು ನಾಟು... ಹಾಡಿಗೆ ಕುಣಿದ ಕೊರಿಯನ್ನರಿಗೆ ಪ್ರಧಾನಿ ಮೋದಿ ಫಿದಾ

ಹುಟ್ಟಿದ ತಕ್ಷಣ ಮಗುವಿಗಾಗುತ್ತೆ ಒಂದು ವರ್ಷ : ದಕ್ಷಿಣ ಕೊರಿಯಾದಲ್ಲಿ ಮಗು ಹುಟ್ಟಿದ ತಕ್ಷಣ ಅದರ ವಯಸ್ಸನ್ನು ಒಂದು ವರ್ಷವೆಂದು ನಂಬಲಾಗುತ್ತದೆ. ಇಲ್ಲಿ ಕಾನೂನು ಹೀಗಿದೆ. ಇಲ್ಲಿ ಪ್ರತಿಯೊಬ್ಬ ಮನುಷ್ಯನು ತನ್ನ ನೈಜ ವಯಸ್ಸಿಗಿಂತ ಒಂದು ವರ್ಷ ದೊಡ್ಡವನಾಗಿರುತ್ತಾನೆ.  ದಕ್ಷಿಣ ಕೊರಿಯಾದ ಸಂಪ್ರದಾಯದ ಪ್ರಕಾರ, ಅದೇ ಉಪನಾಮ ಹೊಂದಿರುವ ಜನರು ಮದುವೆಯಾಗಲು ಸಾಧ್ಯವಿಲ್ಲ, ಒಂದೇ ರೀತಿಯ ಉಪನಾಮಗಳನ್ನು ಹೊಂದಿರುವವರು ಮದುವೆಯಾದರೆ, ರಕ್ತವು ಅಶುದ್ಧವಾಗುತ್ತದೆ ಎಂದು ನಂಬುತ್ತಾರೆ.

ಕೆಂಪು ಶಾಯಿಯೆಂದ್ರೆ ಅದು ರಕ್ತ : ಇಲ್ಲಿನ ಜನರು ಕೆಂಪು ಶಾಯಿ ಬಳಸಲು ಹೆದರುತ್ತಾರೆ. ದಕ್ಷಿಣ ಕೊರಿಯಾದ ಜನರಲ್ಲಿ ಕೆಂಪು ಬಣ್ಣವು ರಕ್ತದ ಬಣ್ಣವಾಗಿದೆ. 

ಒಂದೇ ಸರ್ ನೇಮ್ ಇರೋರು ಮದುವೆ ಆಗುವಂತಿಲ್ಲ :  ದಕ್ಷಿಣ ಕೊರಿಯಾದ ಸಂಪ್ರದಾಯದ ಪ್ರಕಾರ, ಒಂದೇ ಸರ್ ನೇಮ್ ಹೊಂದಿರುವ ಜನರು ಮದುವೆಯಾಗಲು ಸಾಧ್ಯವಿಲ್ಲ. ಇಂಥವರು ಮದುವೆಯಾದ್ರೆ ರಕ್ತ ಅಶುದ್ಧವಾಗುತ್ತದೆ ಎಂದು ಇಲ್ಲಿ ನಂಬಲಾಗಿದೆ. 

ಪ್ರತಿ ತಿಂಗಳ 14 ನೇ ದಿನಕ್ಕೆ ವಿಶೇಷ ಮಹತ್ವ : ಇಲ್ಲಿ ಪ್ರತಿ ತಿಂಗಳ 14 ನೇ ದಿನವು ರೊಮ್ಯಾಂಟಿಕ್ ದಿನವಾಗಿದೆ. ಕೆಲ ತಿಂಗಳ 14ನೇ ದಿನಾಂಕದಂದು ವಿಶೇಷ ಪದ್ಧತಿಗಳನ್ನು ಆಚರಿಸಲಾಗುತ್ತದೆ. ಮಾರ್ಚ್ 14 ರಂದು, ಹುಡುಗರು ಹುಡುಗಿಯರು ಅಥವಾ ಹೆಂಡತಿಗೆ ಉಡುಗೊರೆ ನೀಡ್ಬೇಕು. 

Paternity Leave : ಮಕ್ಕಳನ್ನು ಪಡೆದ್ರೆ ಈ ದೇಶ ನೀಡುತ್ತೆ ಅತಿ ಹೆಚ್ಚು ರಜೆ

ಪುರುಷರ ಸೌಂದರ್ಯಕ್ಕೆ ಮಹತ್ವ : ದಕ್ಷಿಣ ಕೋರಿಯಾದಲ್ಲಿ ಪುರುಷರು ತಮ್ಮ ಸೌಂದರ್ಯಕ್ಕೆ ಹೆಚ್ಚು ಬೆಲೆ ನೀಡ್ತಾರೆ. ಹಾಗಾಗಿಯೇ ಇಲ್ಲಿನ ಪುರುಷರು ಮೇಕಪ್‌ಗಾಗಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಬಿಬಿ ಕ್ರೀಮ್ ಫೌಂಡೇಶನ್ ಅವರ ನೆಚ್ಚಿನ ಸೌಂದರ್ಯ ಉತ್ಪನ್ನವಾಗಿದೆ.  

ಚಿಕ್ಕ ಸರ್ಟ್ – ಕಂಬಳಿ ಖಾಯಂ : ಇಲ್ಲಿನ ಹುಡುಗಿಯರು ಕುಳಿತುಕೊಳ್ಳುವಾಗ ತೊಡೆ ಮೇಲೆ ಕಂಬಳಿ ಹಾಕಿಕೊಳ್ತಾರೆ. ಇದಕ್ಕೆ ಕಾರಣ ಚಳಿಯಲ್ಲ. ಅವರು ಹಾಕುವ ಚಿಕ್ಕ ಸ್ಕರ್ಟ್. ದಕ್ಷಿಣ ಕೋರಿಯಾ ಹುಡುಗಿಯರ ಚಿಕ್ಕ ಸ್ಕರ್ಟ್ ಪ್ರಸಿದ್ಧಿ ಪಡೆದಿದೆ.  

ಮುಖ ಮುಚ್ಚಿ ನಗ್ಬೇಕು : ಕೊರಿಯನ್ ಹುಡುಗಿಯರು ನಗುವಾಗ ತಮ್ಮ ಮುಖವನ್ನು ಮುಚ್ಚಿಕೊಳ್ಳಬೇಕು. ಕೊರಿಯಾದ ಇತಿಹಾಸದ ಪ್ರಕಾರ, ಹುಡುಗಿಯರು ನಗುವುದು ಒಳ್ಳೆಯದಲ್ಲ, ಆದ್ದರಿಂದ ಹುಡುಗಿಯರು ಅಲ್ಲಿ ನಗುವಾಗ ಬಾಯಿ ಮುಚ್ಚಿಕೊಳ್ಳಬೇಕು. 

ಮಳೆಯಲ್ಲೂ ಕೆಲಸ : ದಕ್ಷಿಣ ಕೋರಿಯಾದಲ್ಲಿ ಎಷ್ಟೇ ಮಳೆ ಬಂದ್ರೂ ಜನರು ಮನೆಯಲ್ಲಿ ಕುಳಿತುಕೊಳ್ಳುವಂತಿಲ್ಲ. ಅವರು ಕೊಡೆ ಹಿಡಿದು ಕೆಲಸ ಮಾಡ್ಬೇಕು. ಹುಡುಗಿಯರ ತಲೆ ಒದ್ದೆಯಾದ್ರೆ ಶಿಕ್ಷೆಯಾಗುತ್ತದೆ.
 

Follow Us:
Download App:
  • android
  • ios