ನಾಟು ನಾಟು... ಹಾಡಿಗೆ ಕುಣಿದ ಕೊರಿಯನ್ನರಿಗೆ ಪ್ರಧಾನಿ ಮೋದಿ ಫಿದಾ

ದಕ್ಷಿಣ ಕೊರಿಯನ್ನರು ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋ ವೈರಲ್ ಆಗಿದ್ದು ಪ್ರಧಾನಿ ಮೋದಿ ಫಿದಾ ಆಗಿದ್ದಾರೆ. 

PM Narendra Modi reacts to South Korean embassy staff dancing with Naatu Naatu song sgk

ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಆರ್ ಆರ್ ಆರ್ ಸದ್ಯ ಆಸ್ಕರ್ ಅಂಗಳದಲ್ಲಿದೆ. ನಾಟು ನಾಟು... ಹಾಡು ವಿಶ್ವದ ಅಭಿಮಾನಿಗಳ ಗಮನ ಸೆಳೆದಿದೆ. ಅಭಿಮಾನಿಗಳು ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸುತ್ತಿದ್ದಾರೆ. ಆಸ್ಕರ್‌ಗೆ ನಾಮನಿರ್ದೇಶನಗೊಂಡ ಬಳಿಕ ನಾಟು ನಾಟು ಹಾಡಿನ ಖ್ಯಾತಿ ಮತ್ತಷ್ಟು ಹೆಚ್ಚಾಗಿದೆ. ಅನೇಕರು ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ. ಇದೀಗ ದಕ್ಷಿಣ ಕೊರಿಯಾದ ರಾಯಭಾರಿ ಕಚೇರಿ ಸಿಬ್ಬಂದಿ ಕೂಡ ಅದೇ ಪಟ್ಟಿಗೆ ಸೇರಿದ್ದಾರೆ. ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿರುವ ಕೊರಿಯನ್ ರಾಯಭಾರಿ ಸಿಬ್ಬಂದಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಶೇಷವೆಂದರೆ ಕೊರಿಯ ರಾಯಭಾರಿ ಚಾಂಗ್ ಜೆ ಬೊಕ್ ಸಹ ತಮ್ಮ ಕಚೇರಿಯ ಅಧಿಕಾರಿಗಳೊಟ್ಟಿಗೆ ನಾಟು-ನಾಟು ಹಾಡಿಗೆ ಸ್ಟೆಪ್ ಹಾಕಿದ್ದಾರೆ.

ರಾಯಭಾರ ಕಚೇರಿಯ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಡಾನ್ಸ್ ವಿಡಿಯೋ ಶೇರ್ ಮಾಡಲಾಗಿದೆ. 'ನಾಟು ನಾಟು... ಆರ್ ಆರ್ ಆರ್.. ಡಾನ್ಸ್. ಭಾರತದಲ್ಲಿನ ಕೊರಿಯನ್ ರಾಯಭಾರ ಕಚೇರಿ. ನಾಟು ಗೊತ್ತಾ?  ಕೊರಿಯನ್ ರಾಯಭಾರ ಕಚೇರಿಯ ನಾಟು ನಾಟು ನೃತ್ಯ ಕವರ್ ಅನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ' ಎಂದು ಹೇಳಿದ್ದಾರೆ. 

ಈ ವಿಡಿಯೋಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ವಿಶೇಷ ಎಂದರೆ ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರತಿಕ್ರಿಯೆ ಬೇಷ್ ಎಂದಿದ್ದಾರೆ. ವಿಡಿಯೋ ರಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಡಾನ್ಸ್ ಮೆಚ್ಚಿಕೊಂಡು, 'ಲವ್ಲಿ ಮತ್ತು ತಂಡದ ಅದ್ಭುತ ಪ್ರಯತ್ನ' ಎಂದು ಹೇಳಿದ್ದಾರೆ. ಈ ಪೋಸ್ಟ್ ಶೇರ್ ಒಂದು ಗಂಟೆಯೊಳಗೆ ಸುಮಾರು 3.2 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಸಿಕ್ಕಾಪಟ್ಟೆ ಶೇರ್ ಆಗಿದೆ. ಜನರು ಕೂಡ ವಿವಿಧ ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ. 

RRR: ಇನ್ನೂ ನಿಂತಿಲ್ಲ ಪ್ರಶಸ್ತಿಗಳ ಬೇಟೆ; ಆಸ್ಕರ್‌ಗೂ ಮೊದಲೇ ರಾಜಮೌಳಿ ಚಿತ್ರಕ್ಕೆ ಮತ್ತೊಂದು ಅವಾರ್ಡ್

ಇತ್ತೀಚೆಗಷ್ಟೆ ಪಾಕಿಸ್ತಾನದ ನಟಿ ಹನಿಯಾ ಆಮಿರ್, ಪಾಕಿಸ್ತಾನದ ವಿವಾಹವೊಂದರಲ್ಲಿ ನಾಟು-ನಾಟು ಹಾಡಿಗೆ ಸಖತ್ ಹೆಜ್ಜೆ ಹಾಕಿ ಗಮನ ಸೆಳೆದಿದ್ದರು. ಅವರ ನೃತ್ಯದ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು.

ದೊಡ್ಡ ನಿರ್ದೇಶಕ ಹಾಗಂದಾಗ ಹೃದಯ ಛಿದ್ರವಾಗಿತ್ತು; ರಾಜಮೌಳಿ ಹೇಳಿದ್ದನ್ನು ಬಹಿರಂಗ ಪಡಿಸಿದ ನಟಿ ಮಮತಾ

ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡು ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಗೋಲ್ಡನ್ ಗ್ಲೋಬ್ಸ್, ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಸದ್ಯ ನಾಟು ನಾಟು ಪ್ರತಿಷ್ಠಿತ ಅಕಾಡೆಮಿ ಅವಾರ್ಡ್ ನ ಅಂತಿಮ ರೇಸ್ ನಲ್ಲಿದೆ. ಆರ್ ಆರ್ ಆರ್ ತಂಡ ಆಸ್ಕರ್ ಗೆದ್ದು ಭಾರತೀಯರನ್ನು ಹೆಮ್ಮೆ ಪಡಿಸುತ್ತಾರಾ ಕಾದು ನೋಡಬೇಕಿದೆ. 95ನೇ ಅಕಾಡೆಮಿ ಅವಾರ್ಡ್​ ಕಾರ್ಯಕ್ರಮ ಮಾರ್ಚ್​ 12ರಂದು ಲಾಸ್ ಏಂಜಲೀಸ್​ನಲ್ಲಿ ನಡೆಯಲಿದೆ.  
 

Latest Videos
Follow Us:
Download App:
  • android
  • ios