Food Habits in World: ಹಸುವಿನ ರಕ್ತ, ಕೊಳೆತ ಶಾರ್ಕ್ ಮಾಂಸ… ಅಬ್ಬಬ್ಬಾ, ಏನೆಲ್ಲ ತಿಂತಾರೆ ಗೊತ್ತಾ
ವಿಶ್ವದ ಬೇರೆ ಬೇರೆ ಪ್ರಾಂತ್ಯಗಳಲ್ಲಿ ವಿಭಿನ್ನ ರೀತಿಯ ಆಹಾರಶೈಲಿಗಳಿವೆ. ಕೀನ್ಯಾದಲ್ಲಿ ಹಸುವಿನ ರಕ್ತ ಕುಡಿದರೆ, ಗ್ರೀನ್ ಲ್ಯಾಂಡ್ ನಲ್ಲಿ ಕೊಳೆತ ಶಾರ್ಕ್ ತಿನ್ನುತ್ತಾರೆ! ಇದೇನಿದು ವಿಚಿತ್ರ ಎನ್ನಬಹುದು. ಪ್ರಪಂಚದ ಕೆಲವು ವಿಚತ್ರ ಆಹಾರ ಪದ್ಧತಿಗಳನ್ನು ತಿಳಿದುಕೊಳ್ಳಿ.
ಪ್ರವಾಸ ಮಾಡುವುದೆಂದರೆ ವಿಭಿನ್ನ ಸಂಸ್ಕೃತಿಗಳನ್ನು ಪರಿಚಯ ಮಾಡಿಕೊಳ್ಳುವುದು. ವಿವಿಧ ಸಂಸ್ಕೃತಿಗಳನ್ನು ಅರಿಯುವುದು ಭಾರೀ ಮುದ ನೋಡುವ ಸಂಗತಿ. ಪ್ರತಿಯೊಬ್ಬ ಪ್ರವಾಸಿಗನಿಗೂ ಇದರ ಅರಿವಿರುತ್ತದೆ. ಹಾಗೆಯೇ ಅಲ್ಲಿನ ಆಹಾರ-ವಿಹಾರಗಳು ಸಹ ವಿಚಿತ್ರವೆನಿಸುತ್ತವೆ. ಕೆಲ ಪ್ರವಾಸಿಗರು ಹೋದಲ್ಲೆಲ್ಲ ಅಲ್ಲಿನ ಸ್ಥಳೀಯ ಆಹಾರದ ರುಚಿ ನೋಡುವ ಹಂಬಲ ಹೊಂದಿರುತ್ತಾರೆ. ಎಲ್ಲಿ ಹೋದರೂ ತಮ್ಮದೇ ಆಹಾರ ಪದ್ಧತಿಗೆ ಕಟ್ಟುಬೀಳದೆ ವಿಶ್ವದ ಆಹಾರ ವೈವಿಧ್ಯತೆಯ ಅಗಾಧತೆಯನ್ನು ಅರಿಯಲು ಯತ್ನಿಸುತ್ತಾರೆ. ಪ್ರವಾಸೋದ್ಯಮದ ಬಹುಮುಖ್ಯ ಅಂಶದಲ್ಲಿ ಆಹಾರ ಕೂಡ ಒಂದು. ನೀವೂ ಸಹ ಪ್ರವಾಸಿಗರಾಗಿದ್ದರೆ ಪ್ರಪಂಚದ ವಿವಿಧ ದೇಶಗಳಲ್ಲಿ ಅಳವಡಿಸಿಕೊಂಡಿರುವ ವಿಚಿತ್ರ ಆಹಾರ ಪದ್ಧತಿಗಳು ನಿಮಗೆ ತಿಳಿದಿರಲಿ. ಈ ದೇಶಗಳಿಗೆ ಹೋದಾಗ ಧೈರ್ಯವಿದ್ದರೆ ಇವುಗಳನ್ನು ಆನಂದಿಸಿ, ಇಲ್ಲವಾದಲ್ಲಿ ದೂರ ನಿಂತಾದರೂ ನೋಡಿಕೊಂಡು ಬನ್ನಿ. ಏಕೆಂದರೆ, ಈ ಆಹಾರಗಳು ಅಲ್ಲಿನ ಸಾಂಪ್ರದಾಯಿಕತೆಯೊಂದಿಗೆ ಸಂಬಂಧ ಹೊಂದಿವೆ.
• ಗ್ರೀನ್ ಲ್ಯಾಂಡ್- ಐಸ್ ಲ್ಯಾಂಡ್ (Greenland-Iceland): ಕೊಳೆತ ಆಹಾರ (Rotten Food)!
ಕೊಳೆತ ಮಾಂಸವನ್ನು ಅಗೆದು (Dig) ಆಯ್ದು ತಿನ್ನುವುದು ಈ ಪ್ರದೇಶಗಳಲ್ಲಿ ಸಾಮಾನ್ಯ. ಅತಿ ಖ್ಯಾತಿ ಹೊಂದಿರುವ ಆಹಾರವೆಂದರೆ ಹುದುಗು ಬರಿಸಿದ ಗ್ರೀನ್ ಲ್ಯಾಂಡ್ ಶಾರ್ಕ್ ಮಾಂಸ. ನೆಲದ ಅಡಿಯಲ್ಲಿ ಹನ್ನೆರಡು ವಾರಗಳ ಕಾಲ ಇಟ್ಟು ಬಳಿಕ ಬೇಯಿಸುತ್ತಾರೆ.
• ತಾಂಜಾನಿಯಾ-ಕೀನ್ಯಾ (Tanjania-Keenya): ಪ್ರಾಣಿಗಳ ರಕ್ತ (Animal Blood)
ದಕ್ಷಿಣ ಕೀನ್ಯಾ ಮತ್ತು ಉತ್ತರ ತಾಂಜಾನಿಯಾ ಪ್ರದೇಶಗಳಲ್ಲಿ ಪ್ರಾಣಿಗಳ ರಕ್ತವನ್ನು ಸಮಾರಂಭಗಳಲ್ಲಿ (Functions) ಸೇವಿಸುತ್ತಾರೆ. ಮಕ್ಕಳು ಹುಟ್ಟಿದಾಗ, ಮದುವೆ (Marriage) ಸಮಾರಂಭಗಳಲ್ಲಿ ಪ್ರಾಣಿಗಳ ರಕ್ತ ಕುಡಿಯುತ್ತಾರೆ. ಪ್ರಮುಖವಾಗಿ ಹಸುವಿನ ರಕ್ತ ಸಾಮಾನ್ಯ. ಮಸಾಯಿ ಪ್ರದೇಶದಲ್ಲಿ ಹಸುವಿನ (Cow) ರಕ್ತವನ್ನು ಕೇವಲ ಸಮಾರಂಭಗಳಲ್ಲಿ ಸೇವಿಸುತ್ತಾರೆ. ಬಿದಿರಿನಿಂದ ಮಾಡಿದ ಕೊಳವೆಯನ್ನು ಹಸುವಿನ ಜುಗುಲಾರ್ ರಕ್ತನಾಳಕ್ಕೆ ಚುಚ್ಚಿ ಅಲ್ಲಿಂದ ರಕ್ತವನ್ನು ಎಳೆಯಲಾಗುತ್ತದೆ.
• ಚೀನಾ (China): ಸಾವಿರ ವರ್ಷಗಳ ಮೊಟ್ಟೆ (Egg)
ಸಾವಿರಾರು ವರ್ಷಗಳ ಹಿಂದಿನ ಮೊಟ್ಟೆ ಸೇವಿಸುವ ಪದ್ಧತಿ ಚೀನಾದಲ್ಲಿದೆ. ಇದು ವಿಷಕಾರಿ ಎನಿಸಬಹುದು, ಆದರೆ, ಚೀನಾದವರು ಇದನ್ನು ಇಷ್ಟಪಡುತ್ತಾರೆ. ಕೆಲವು ಪ್ರಾಂತ್ಯಗಳಲ್ಲಿ ಇದರ ಮಾರಾಟ ಭಾರೀ ಮಟ್ಟದಲ್ಲಿ ನಡೆಯುತ್ತದೆ. ಮೊಟ್ಟೆ ಬೇಗ ಬೇಯಲೆಂದು ಕಾಪರ್ ಸಲ್ಫೇಟ್ ಬಳಕೆ ಮಾಡುತ್ತಾರೆ.
• ಕೊರಿಯಾ-ಇಲಿಯ ವೈನ್ (Korea: Mice Wine)
ವೈನ್ ನಲ್ಲಿ ಸತ್ತ ಇಲಿಮರಿಗಳನ್ನು ಹಾಕಿ ಸುಮಾರು 12-14 ತಿಂಗಳ ಕಾಲ ಇರಿಸಲಾಗುತ್ತದೆ. ಬಳಿಕ, ಬಳಕೆ ಮಾಡಲಾಗುತ್ತದೆ. ಇಲಿಮರಿಗಳ ಕೂದಲನ್ನು ತೆಗೆದು ವೈನಿನಲ್ಲಿ ಇರಿಸಲಾಗುತ್ತದೆ. ಕೊರಿಯಾದ ಪ್ರಮುಖ ರೆಸ್ಟೋರೆಂಟ್ ಗಳಲ್ಲಿ ವೈನ್ ಜತೆ ಇಲಿಮರಿಗಳಿರುವ ಗಾಜಿನ ಜಾಡಿಗಳನ್ನು ಸಾಮಾನ್ಯವಾಗಿ ನೋಡಬಹುದು.
ಇದನ್ನೂ ಓದಿ: Weird News: ವಿಶ್ವದೆಲ್ಲೆಡೆ ಇರೋ ಚಿತ್ರ, ವಿಚಿತ್ರ ಲೈಂಗಿಕ ಅಭ್ಯಾಸಗಳಿವು!
• ಜಪಾನ್: ಪಫರ್ ಮೀನು (Japan-Pufferfish)
ಇದು ಸಿಕ್ಕಾಪಟ್ಟೆ ದುಬಾರಿ ಆಹಾರ. ಜಪಾನಿನ ಶ್ರೀಮಂತರು ಈ ಮೀನುಗಳಿಗಾಗಿ ನಡೆಯುವ ಹರಾಜಿನಲ್ಲಿ ಪಾಲ್ಗೊಂಡು ಲಕ್ಷಾಂತರ ರೂಪಾಯಿ ಬಿಡ್ ಮಾಡುತ್ತಾರೆ. ಇದು ಎಷ್ಟು ದುಬಾರಿಯೋ ಅಷ್ಟೇ ಅಪಾಯಕಾರಿ ಕೂಡ ಹೌದು. ಸೂಕ್ತ ವಿಧಾನದಲ್ಲೇ ಈ ಮೀನಿನ ಆಹಾರ ಸಿದ್ಧಪಡಿಸಬೇಕು, ಇಲ್ಲವಾದಲ್ಲಿ ಇದು ತೀವ್ರ ವಿಷಕಾರಿ (Toxic)ಯಾಗಿದ್ದು, ತಿಂದವರು ಸತ್ತೇ ಹೋಗುತ್ತಾರೆ. ಅಪಾಯಕಾರಿ ಮೀನಾಗಿದ್ದರೂ ಇದು ಜಪಾನೀಯರ ಫೆವರಿಟ್ ಆಹಾರವಾಗಿದೆ.
ಇದನ್ನೂ ಓದಿ: Weird News: ಪುರುಷರ ಪ್ರವೇಶ ನಿಷಿದ್ಧವಿರುವ ಗ್ರಾಮದಲ್ಲಿ ಮದುವೆಯಾಗದೇ ಗರ್ಭಿಣಿಯಾಗ್ತಾರೆ ಹುಡುಗೀರು
• ಇಷ್ಟೇ ಅಲ್ಲ, ಪ್ರಪಂಚದ ವಿವಿಧ ಪ್ರಾಂತ್ಯಗಳಲ್ಲಿ ಆಹಾರಕ್ಕೆ ಸಂಬಂಧಿಸಿ ವಿಚಿತ್ರ ಪದ್ಧತಿಗಳಿವೆ. ಊಟವಾದ ಬಳಿಕ ತೇಗು ಸಾಮಾನ್ಯವಾಗಿ ಬರುತ್ತದೆ. ಆದರೂ ದೊಡ್ಡದಾಗಿ ತೇಗಲು ಮುಜುಗರ ಪಡುತ್ತೇವೆ. ಆದರೆ, ಈಜಿಪ್ಟಿನಲ್ಲಿ ತೇಗುವುದು ಉತ್ತಮ ಅಭ್ಯಾಸ. ಇದು ಊಟ ನೀಡಿದವರ ಬಗ್ಗೆ ತೋರಿಸುವ ಮೆಚ್ಚುಗೆ ಎಂದು ಭಾವಿಸಲಾಗುತ್ತದೆ.
• ಊಟದ ಪ್ಲೇಟ್ ಖಾಲಿ ಮಾಡುವುದು ಉತ್ತಮ ಅಭ್ಯಾಸ. ಆದರೆ, ಚೀನಾದಲ್ಲಿ ಹಾಗಲ್ಲ. ಪ್ಲೇಟ್ ಖಾಲಿ ಮಾಡಿದರೆ ನಿಮಗೆ ಇನ್ನೂ ಹಸಿವಿದೆ ಎಂದು ಭಾವಿಸಲಾಗುತ್ತದೆ.
• ಕಜಾಕಿಸ್ತಾನದಲ್ಲಿ ನಿಮಗೇನಾದರೂ ಲೋಟದ ಪೂರ್ತಿ ಟೀ ನೀಡಿದರೆ ನೀವು ಅಲ್ಲಿಂದ ಹೊರಡಬೇಕು ಎನ್ನುವ ಸೂಚನೆ ನೀಡಿದಂತೆ. ಅರ್ಧ ಕಪ್ ನೀಡಿದರೆ ಉತ್ತಮ ಸಂಕೇತ!