Asianet Suvarna News Asianet Suvarna News

ನಿಸರ್ಗ ಪ್ರಿಯರ ಸ್ವರ್ಗ ಬೋರ್ನಿಯೊ!

ಏಷ್ಯಾದ ಅತಿದೊಡ್ಡ ದ್ವೀಪಗಳಲ್ಲಿ ಬೋರ್ನಿಯೊ ಕೂಡ ಒಂದು. ವಿಶ್ವದಲ್ಲೇ ಮೂರನೇ ಅತಿದೊಡ್ಡ ದ್ವೀಪ ಎಂಬ ಹೆಗ್ಗಳಿಕೆ ಇದರದ್ದು. ಈ ದ್ವೀಪದ ವಿಶೇಷ ಏನೆಂದರೆ ಮಲೆಷ್ಯಾ, ಇಂಡೋನೇಷ್ಯಾ ಮತ್ತು ಬ್ರೂನಿಯ ಗಡಿಯಲ್ಲಿದ್ದು, ಈ ಮೂರೂ ದೇಶಗಳೊಂದಿಗೆ ಹೊಂದಿಕೊಂಡಿದೆ.

Know more about germany borneo vcs
Author
Bangalore, First Published Nov 15, 2020, 10:39 AM IST

ಬೊರ್ನಿಯೊ ಒಂದು ಅಚ್ಚರಿಯ ಜಗತ್ತು. ನೈಸರ್ಗಿಕ ಸ್ವರ್ಗ ಎಂದೇ ಬಣ್ಣಿಸಲಾಗುತ್ತದೆ. ದ್ವೀಪ ಅಂದಮೇಲೆ ಅದೊಂದು ಸ್ವರ್ಗವೇ ಬಿಡಿ ಎಂದು ನಿರ್ಲಕ್ಷಿಸುವ ದ್ವೀಪ ಇದಲ್ಲ. ಪ್ರವಾಸಿಗರಿಗಂತೂ ಅಚ್ಚುಮೆಚ್ಚು. ಇಲ್ಲಿನ ಮಳೆಕಾಡುಗಳು ವೀಕ್ಷಿಸಲಿಕ್ಕಾಗಿಯೇ ಸಾಃಸ್ರಾರು ಮಂದಿ ಪ್ರತಿ ವರ್ಷ ಭೇಟಿ ನೀಡುತ್ತಾರೆ. ಕೌಲಾಲಂಪುರದಿಂದ ಬೊರ್ನಿಯೊಗೆ ಅಗ್ಗದ ದರದಲ್ಲೇ ವಿಮಾನ ಸೌಲಭ್ಯವು ಇದೆ. ಹಿಗಾಗಿ ಇದು ವಿಶ್ವ ಪ್ರವಾಸಿತಾಣವಾಗಿ ಗುರುತಿಸಿಕೊಂಡಿದೆ.

ಈ ದ್ವೀಪದಲ್ಲಿ ನೇಲೆಸಿರುವ ಒರಾಂಗುಟನ್ನರ ಸಂಸ್ಕ್ರತಿ ಇಂದು ಅಳಿವಿನಂಚಿನಲ್ಲಿದೆ. ಇಲ್ಲಿನ ಆಡಳಿತ ಇದಕ್ಕೆ ಸಾಕಷ್ಟುಕ್ರಮ ತೆಗೆದುಕೊಂಡಿದೆಯಾದರೂ ಸಹಜವಾಗಿ ತಂತ್ರಜ್ಞಾನ ಅವರನ್ನು ಸುತ್ತುಕೊಂಡಿದೆ. ಅವರ ಆಚರಣೆಗಳು ನಿಧಾನವಾಗಿ ಮಾಯವಾಗುತ್ತಿದೆ.

ವಿಜ್ಞಾನ ಬರವಣಿಗೆ;  ಕೊಳ್ಳೇಗಾಲ ಶರ್ಮ, ಶ್ರೀನಿಧಿಗೆ ಅಂತಾರಾಷ್ಟ್ರೀಯ ಸ್ಥಾನ 

ಸಮುದ್ರಾಹಾರ ಫೇಮಸ್‌

ಹೌದು ಬೋರ್ನಿಯೊದಲ್ಲಿ ಸಮುದ್ರಾಹಾರ ಪ್ರವಾಸಿಗರ ಅಚ್ಚುಮೆಚ್ಚು. ಅಗ್ಗದ ದರದಲ್ಲಿಯೇ ಮಾಂಸಾಹಾರ ಲಭ್ಯ. ಅದರಲ್ಲೂ ಮೀನು ಆಹಾರಗಳಿಗೆ ಸಾಕಷ್ಟುಬೇಡಿಕೆ. ಶಾಪಿಂಗ್‌ ಕೂಡ ಬೊರ್ನಿಯೊದ ಮತ್ತೊಂದು ಆಕರ್ಷಣೆ.

4 ಎಸೆತದಲ್ಲಿ 4 ವಿಕೆಟ್: ಮಾಜಿ ಕರ್ನಾಟಕ ಆಟಗಾರ್ತಿ ಅನುರಾಧ ಜರ್ಮನಿ ನಾಯಕಿಯಾಗಿ ವಿಶ್ವದಾಖಲೆ..! 

ದ್ವೀಪದಲ್ಲಿದೆ ಎರಡು ರಾಜ್ಯ

ಮಲೇಷಿಯಾದ ಬೊರ್ನಿಯೊ ಎರಡು ರಾಜ್ಯಗಳನ್ನು ಹೊಂದಿದೆ. ಅವು ಸರವಾಕ್‌ ಮತ್ತು ಸಬಾ. ಸರವಾಕ್‌ನ ರಾಜಧಾನಿ ಕುಚಿಂಗ್‌. ಈ ನಗರ ಅನೇಕ ವರ್ಷಗಳ ಕಾಲ ಏಷ್ಯಾದ ಸ್ವಚ್ಛ ನಗರವಾಗಿ ಗುರುತಿಸಿಕೊಂಡಿತ್ತು.

Follow Us:
Download App:
  • android
  • ios