Asianet Suvarna News Asianet Suvarna News

ಸ್ವಂತ ವಿಮಾನ ತಯಾರಿಸಿದ ಕೇರಳಿಗ: ಕುಟುಂಬದೊಂದಿಗೆ ಯುರೋಪ್ ಟ್ರಿಪ್

ಕೇರಳದ ವ್ಯಕ್ತಿಯೋರ್ವ ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ವಿಮಾನವೊಂದನ್ನು ತಯಾರಿಸಿದ್ದು, ಈಗ ಅದರಲ್ಲೇ ತನ್ನ ಕುಟುಂಬದೊಂದಿಗೆ ಯುರೋಪ್ ಪ್ರವಾಸ ಹೊರಟಿದ್ದಾರೆ. ಇವರ ಸ್ಟೋರಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

Kerala man built private plan Travels Europe With Family akb
Author
Bangalore, First Published Jul 28, 2022, 3:50 PM IST

ತಿರುವನಂತಪುರಂ: ಕೇರಳದ ವ್ಯಕ್ತಿಯೋರ್ವ ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ವಿಮಾನವೊಂದನ್ನು ತಯಾರಿಸಿದ್ದು, ಈಗ ಅದರಲ್ಲೇ ತನ್ನ ಕುಟುಂಬದೊಂದಿಗೆ ಯುರೋಪ್ ಪ್ರವಾಸ ಹೊರಟಿದ್ದಾರೆ. ಇವರ ಸ್ಟೋರಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಕೋವಿಡ್‌ ಸಮಯದಲ್ಲಿ ಇಡೀ ಜಗತ್ತೇ ಸ್ತಬ್ಧವಾಗಿತ್ತು. ಒಬ್ಬೊಬ್ಬರು ಒಂದೊಂದು ಗೀಳಿಗೆ ಒಳಗಾಗಿದ್ದರು. ಕೆಲವರು ಕೆಟ್ಟ ಚಟಗಳನ್ನು ಮೈಗೂಡಿಸಿಕೊಂಡರೆ ಮತ್ತೆ ಕೆಲವರು ಒಳ್ಳೆ ಹವ್ಯಾಸಗಳತ್ತ ತಮ್ಮನ್ನು ವಾಲಿಸಿಕೊಂಡರು. ಹಾಗೆಯೇ ಈಗ ಕೇರಳದ ವ್ಯಕ್ತಿಯೊಬ್ಬರು ಕೋವಿಡ್‌ ಸಮಯದಲ್ಲಿ ವ್ಯರ್ಥವಾಗಿ ಕಳೆಯಬೇಕಾಗಿದ್ದ ತಮ್ಮ ಸಮಯವನ್ನು ಒಳ್ಳೆಯ ಕಾರ್ಯದಲ್ಲಿ ವಿನಿಯೋಗಿಸಿಕೊಂಡಿದ್ದು, ಈ ಒಳ್ಳೆಯ ಕಾರ್ಯದ ಪರಿಣಾಮ ಅವರು ಯುರೋಪ್ ಸುತ್ತುವ ಅವಕಾಶ ಬಂದಿದೆ. 

ಕೇರಳ ಮೂಲದ ಅಶೋಕ್ ಅಲಿಸೆರಿಲ್ ಥಾಮರಾಕ್ಷನ್ ಎಂಬುವವರೇ ಹೀಗೆ ನಾಲ್ಕು ಸೀಟಿನ ವಿಮಾನ ತಯಾರಿಸಿದ ವ್ಯಕ್ತಿ. ಕೇರಳದ ಶಾಸಕ ವಿ ಥಾಮರಾಕ್ಷನ್ ಅವರ ಪುತ್ರನಾಗಿರುವ ಅಶೋಕ್ ಅಲಿಸೆರಿಲ್ ಅವರು ಪಾಲಕ್ಕಾಡ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಟೆಕ್ ಮುಗಿಸಿದ ನಂತರ ಸ್ನಾತಕೋತ್ತರ ಪದವಿಗಾಗಿ 2006 ರಲ್ಲಿ ಯುಕೆಗೆ ತೆರಳಿದ್ದರು. ಅಲ್ಲೇ ಕುಟುಂಬದೊಂದಿಗೆ ಸೆಟ್ಲ್‌ ಆಗಿರುವ ಅವರಿಗೆ ಕೋವಿಡ್‌ ಸಮಯದಲ್ಲಿ ಖಾಸಗಿ ವಿಮಾನವನ್ನು ತಯಾರಿಸುವ ಅಲೋಚನೆ ಬಂದಿದ್ದು, ಅದರಂತೆ ಕಾರ್ಯರೂಪಕ್ಕೆ ಇಳಿದ ಅವರು ಅದಕ್ಕಾಗಿ 1.4 ಕೋಟಿ ರೂಪಾಯಿ ಹಾಗೂ ಸುಮಾರು 1500 ಗಂಟೆಗಳ ಸಮಯವನ್ನು ವೆಚ್ಚ ಮಾಡಿದ್ದಾರೆ. 

ದಾಲ್‌ ಸರೋವರದಲ್ಲಿ ತೇಲಾಡುವ ಪೋಸ್ಟ್‌ ಆಫೀಸ್‌

ಈ ಬಗ್ಗೆ ದಿ ಸನ್‌ ಜೊತೆ ಮಾತನಾಡಿದ ಅಶೋಕ್ ತಮ್ಮ ಅನುಭವವನ್ನು ವಿವರಿಸಿದ್ದು, ಈ ವಿಮಾನವೂ ನಮಗೀಗ ಮಕ್ಕಳು ಹೊಸ ಆಟಿಕೆ ಹೊಂದಿರುವಂತೆ ಹೆಚ್ಚು ರೋಮಾಂಚನಕಾರಿಯಾಗಿದೆ. ಇದನ್ನು ನಿರ್ಮಿಸಲು ನಾವು ಮೊದಲ ಲಾಕ್‌ಡೌನ್ ಸಮಯದಿಂದಲೂ ಹಣವನ್ನು ಉಳಿಸಲು ಪ್ರಾರಂಭಿಸಿದ್ದೆವು. ನಾವು ನಮ್ಮದೇ ಆದ ಸ್ವಂತ ವಿಮಾನವನ್ನು ಹೊಂದಬೇಕು ಎಂಬ ಬಗ್ಗೆ ಸದಾ ಯೋಚಿಸುತ್ತಿದ್ದೆವು. ಹೀಗಾಗಿ ಮೊದಲ ಕೆಲವು ತಿಂಗಳುಗಳಲ್ಲಿ ನಾವು ಸಾಕಷ್ಟು ಹಣವನ್ನು ಉಳಿಸಿ ಈ ಯೋಜನೆಗೆ ಹಾಕಿದೆವು ಎಂದು ಅವರು ಹೇಳಿದ್ದಾರೆ.

ಈಗ ಫೋರ್ಡ್‌ನಲ್ಲಿ ಕೆಲಸ ಮಾಡುತ್ತಿರುವ ಅಶೋಕ್, ಆರಂಭದಲ್ಲಿ ಪೈಲಟ್ ಪರವಾನಗಿ ಪಡೆದ ನಂತರ ಪ್ರಯಾಣಕ್ಕಾಗಿ ಎರಡು ಆಸನಗಳ ಸಣ್ಣ ವಿಮಾನವನ್ನು ಬಾಡಿಗೆಗೆ ಪಡೆಯುತ್ತಿದ್ದರಂತೆ. ಆದಾಗ್ಯೂ, ಅವರ ಕುಟುಂಬವನ್ನು ನೋಡಿದಾಗ, ಅವರು ತಮಗೆ ತಮ್ಮದೇ ಆದ  ಖಾಸಗಿ ವಿಮಾನದ ಅಗತ್ಯವಿದೆ ಎಂಬುದರ ಅರಿವಾಗಿದೆ. ಇದಕ್ಕಾಗಿ ಕುಟುಂಬವು ಹೇಗೆ ಹಣವನ್ನು ಉಳಿಸಲು ಪ್ರಾರಂಭಿಸಿತು ಮತ್ತು ಮೊದಲ ಕೆಲವು ತಿಂಗಳುಗಳಲ್ಲಿ ಅವರು ಉತ್ತಮ ಮೊತ್ತವನ್ನು ಉಳಿಸುವಲ್ಲಿ ಯಶಸ್ವಿಯಾದರು ಎಂಬುದನ್ನು ಅವರು ವಿವರಿಸಿದರು.

ಬೆಂಗಳೂರಿನಿಂದ ಒನ್‌ ಡೇ ಟ್ರಿಪ್‌ ಹೋಗೋಕೆ ಬೆಸ್ಟ್‌ ಪ್ಲೇಸ್‌ಗಳಿವು

ಅಲ್ಲದೇ ಅವರು ಈ ವಿಮಾನದಲ್ಲಿ ಅನೇಕ ಸ್ಥಳಗಳಿಗೆ ಪ್ರಯಾಣಿಸಿದ್ದಾರೆ. ಜರ್ಮನಿ, ಆಸ್ಟ್ರಿಯಾ ಮತ್ತು ಜೆಕ್ ರಿಪಬ್ಲಿಕ್ ಸೇರಿದಂತೆ ಅನೇಕ ಯುರೋಪಿಯನ್ ದೇಶಗಳಿಗೆ ಇವರು ತಮ್ಮ ಸ್ನೇಹಿತರೊಂದಿಗೆ ಪ್ರವಾಸ ಕೈಗೊಂಡಿದ್ದಾರೆ. ಅಲ್ಲದೇ ಈ ಇಡೀ ಕುಟುಂಬವು ವಿಹಾರಕ್ಕೆ ಕೇರಳದಲ್ಲಿರುವ ತಮ್ಮ ಮನೆಗೆ ಮರಳಲು ಬಯಸುತ್ತಿರುವ ಕಾರಣ ಭಾರತೀಯ ಕಾನೂನುಗಳು ಸ್ವ ನಿರ್ಮಿತ ವಿಮಾನಗಳನ್ನು ಸಹ ಅನುಮತಿಸುತ್ತವೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ. 

ಅಲ್ಲದೇ ಈ ನಿರ್ಧಾರವು ಅವರ ಕುಟುಂಬಕ್ಕೆ ಸಾಕಷ್ಟು ಉತ್ಸಾಹ ತಂದಿದೆ ಎಂದು ಅಶೋಕ್ ಪುತ್ರಿ ಅಭಿಲಾಷಾ ಹೇಳಿದರು. ನಾವು ಸಾಕಷ್ಟು ಭಾರಿ ವಿಮಾನದಲ್ಲಿ ಪ್ರಯಾಣಿಸಿದ್ದೆವು ಆದರೆ ನಮ್ಮ ತಂದೆಯೇ ಪೈಲಟ್ ಆಗಿರುವ ನಮ್ಮದೇ ವಿಮಾನದಲ್ಲಿ ಪ್ರಯಾಣಿಸುತ್ತಿರುವುದು ಇದೇ ಮೊದಲು ಎಂದು ಹೇಳಿದರು. ಅಲ್ಲದೇ ಈ ಕುಟುಂಬ ತಮ್ಮ ಮೊದಲ ಕುಟುಂಬ ಪ್ರವಾಸಕ್ಕೆಂದು ನ್ಯೂಕ್ವೇಗೆ ಈ ವಿಮಾನದಲ್ಲಿ ತೆರಳಲಿದೆ. 
 

Follow Us:
Download App:
  • android
  • ios