Travel Guide: ಒಂದು ದಿನ ರಜೆ ಹಾಕಿ ನಾಲ್ಕು ದಿನ ಸುತ್ತಾಡ್ಬೇಕಂದ್ರೆ ಈ ರೀತಿ ಪ್ಲಾನ್ ಮಾಡಿ

ಲಾಂಗ್ ವೀಕೆಂಡ್ ಸಿಕ್ಕಿದ್ರೆ ಜನರಿಗೆ ಹಬ್ಬ. ಅಲ್ಲಿ ಇಲ್ಲಿ ಅಂತಾ ರಜೆಯ ಪ್ಲಾನ್ ಆಗಿರುತ್ತೆ. ಇನ್ನು ಆ ಬಗ್ಗೆ ಯೋಜನೆ ಮಾಡಿಲ್ಲ ಅನ್ನೋರು ಈಗ್ಲೇ ಟ್ರಿಪ್ ಪ್ಲಾನ್ ಮಾಡಿ. ನಾಳೆಯೇ ಬ್ಯಾಗ್ ಹಿಡಿದು ಪ್ರವಾಸಕ್ಕೆ ಹೋಗ್ಬಹುದು.
 

January 26 Long Weekend Traveling Plan

ಕೆಲಸದ ಒತ್ತಡಕ್ಕೆ ಸ್ವಲ್ಪ ರಿಲ್ಯಾಕ್ಸ್ ನೀಡೋದು ಅವಶ್ಯಕ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಕೆಲವರು ರಜಾ ದಿನಗಳಲ್ಲಿ ಮನೆಯಲ್ಲಿಯೇ ಇದ್ರೆ ಮತ್ತೆ ಕೆಲವರು ಪ್ರವಾಸಕ್ಕೆ ಹೋಗ್ತಾರೆ. ಒಂದು ದಿನ ರಜೆ ಸಿಕ್ಕರೂ ಸಾಕು, ಬ್ಯಾಗ್ ಹಿಡಿದು ಸುತ್ತಾಡೋಕೆ ಹೋಗೋರು ಸಾಕಷ್ಟು ಮಂದಿಯಿದ್ದಾರೆ. ಪ್ರವಾಸ (Trip) ಇಷ್ಟ, ಬೇರೆ ಬೇರೆ ಊರುಗಳನ್ನು ನೋಡ್ಬೇಕು ಎನ್ನುವವರಿಗೆ ಈಗ ಒಳ್ಳೆ ಸಮಯವಿದೆ. ಕೇವಲ ಒಂದೇ ಒಂದು ದಿನ ರಜೆ ಪಡೆದು ನೀವು ನಾಲ್ಕು ದಿನ ಪ್ರವಾಸ ಮಾಡಿಬರಬಹುದು. ಯಸ್, ಜನವರಿ (January) 26ರಿಂದ ಅಂದ್ರೆ ನಾಳೆಯಿಂದ ನೀವು ಭಾನುವಾರದವರೆಗೆ ಸುತ್ತಾಡಲು ಅವಕಾಶವಿದೆ. ಜನವರಿ 26 ಅಂದ್ರೆ ಗಣರಾಜ್ಯೋತ್ಸ (Republic Day) ವದ ದಿನ ಎಲ್ಲ ಶಾಲಾ- ಕಾಲೇಜು ಸೇರಿದಂತೆ ಕಚೇರಿಗಳಿಗೆ ರಜೆಯಿರುತ್ತದೆ. ಜನವರಿ 27 ಶುಕ್ರವಾರ. ಆ ದಿನವೊಂದು ನೀವು ಕೆಲಸಕ್ಕೆ ರಜೆ ಹಾಕಿದ್ರೆ ಸಾಕು. ಶನಿವಾರ ಹಾಗೂ ಭಾನುವಾರ ವೀಕೆಂಡ್ (Weekend) ಕಾರಣ ಕಚೇರಿಗಳು ರಜೆ ಇರುತ್ವೆ. ಒಟ್ಟೂ ನಾಲ್ಕು ದಿನ ರಜೆ (Vacation) ಸಿಗೋದ್ರಿಂದ ನೀನು ನಿಮ್ಮಿಷ್ಟದ ಪ್ರದೇಶವನ್ನು ಸುತ್ತಿಕೊಂಡು ಬರಬಹುದು. 

ಟ್ರಿಪ್ ಪ್ಲಾನ್ ಮಾಡಲು ಈಗ್ಲೂ ತಡವಾಗ್ಲಿಲ್ಲ. ಈಗ್ಲೂ ನೀವು ಕರ್ನಾಟಕದ ಪ್ರವಾಸಿ ತಾಣವನ್ನು ಮಾತ್ರವಲ್ಲದೆ ದಕ್ಷಿಣ ಭಾರತದ (South India ) ಪ್ರವಾಸಿ ತಾಣ ಅಥವಾ ಉತ್ತರ ಭಾರತದ ಪ್ರವಾಸಕ್ಕೆ ಆರಾಮವಾಗಿ ಹೋಗಿ ಬರಬಹುದು.ನೀವು ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ವಾಸವಾಗಿದ್ರೂ ಬೆಂಗಳೂರಿನ ಕೆಲ ಪ್ರದೇಶಗಳನ್ನು ನೋಡಿರೋದಿಲ್ಲ. ನಾಲ್ಕು ದಿನ ಸುತ್ತಾಟ ಸಾಧ್ಯವಿಲ್ಲ, ಒಂದು ದಿನಕ್ಕೆ ಪ್ಲಾನ್ ಮಾಡ್ತೇವೆ ಎನ್ನುವವರಿಗೆ ಬೆಂಗಳೂರು ಹಾಗೂ ಸುತ್ತಮುತ್ತಲೇ ಸಾಕಷ್ಟು ಪ್ರವಾಸಿ ತಾಣಗಳಿವೆ. 

IRCTC tour package : ಅಂಡಮಾನ್ ಟ್ರಾವೆಲ್ ಪ್ಲ್ಯಾನ್ ಮಾಡಿದ್ದರೆ ಈ ಮಾಹಿತಿ ನಿಮಗಾಗಿ

ಬನ್ನೇರುಗಟ್ಟ ನ್ಯಾಷನಲ್ ಪಾರ್ಕ್, ಬೆಂಗಳೂರು ಅರಮನೆ, ಲಾಲ್ ಬಾಗ್, ಕಬ್ಬನ್ ಪಾರ್ಕ್,ಇಸ್ಕಾನ್ ಟೆಂಪಲ್, ನಂದಿ ಬೆಟ್ಟ, ವಾಟರ್ ಪಾರ್ಕ್, ಫಿಲ್ಮಂ ಸಿಟಿ, ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ, ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, ಆರ್ಟ್ ಆಫ್ ಲೀವಿಂಗ್, ಜವಾಹರ್ ಲಾಲ್ ನೆಹರು ಪ್ಲಾನಿಟೋರಿಯಂ, ವಿಶ್ವೇಶ್ವರಯ್ಯ ಮ್ಯೂಸಿಯಂ, ಶಿವಾ ಟೆಂಪಲ್, ಹಲಸೂರು ಲೇಕ್, ಚುಂಚಿ ಪಾಲ್ಸ್, ಮುತ್ಯಾಲ ಮಡುವು, ಬಸವನಗುಡಿ, ವೆಂಕಟಪ್ಪ ಆರ್ಟ್ ಗ್ಯಾಲರಿ, ಹಲಸೂರು ಸೋಮೇಶ್ವರ ದೇವಸ್ಥಾನ, ಸಿದ್ಧರ ಬೆಟ್ಟ, ಬಿಳಿಕಲ್ ರಂಗಸ್ವಾಮಿ ಬೆಟ್ಟ, ಅವಲಬೆಟ್ಟ, ದೇವರಾಯನ ದುರ್ಗ ಹೀಗೆ ಬೆಂಗಳೂರಿನಲ್ಲಿಯೇ ಸಾಕಷ್ಟು ಪ್ರದೇಶಗಳಿದ್ದು, ನೀವು ಒಂದೊಂದು ದಿನ ಒಂದೊಂದು ಪ್ರದೇಶವನ್ನು ನೋಡಿ ಬರಬಹುದು.

ಇನ್ನು ಕರ್ನಾಟಕ ಸುತ್ತುವ ಪ್ಲಾನ್ ನಲ್ಲಿದ್ದರೆ, ಕೊಡಗು, ಬದಾಮಿ, ಹಂಪಿ, ಮೈಸೂರು, ಉಡುಪಿ, ಗೋಕರ್ಣ,ಜೋಗ್ ಫಾಲ್ಸ್, ಚಿಕ್ಕಮಗಳೂರು, ಮುರ್ಡೇಶ್ವರ, ದಾಂಡೇಲಿ,ಕಬಿನಿ, ಕೆಮ್ಮಣ್ಣು ಗುಂಡಿ, ಶ್ರವಣ ಬೆಳಗೋಳ, ತೀರ್ಥಹಳ್ಳಿ, ಕುದುರೆಮುಖ, ಪಟ್ಟದಕಲ್, ಹಳೆಬೀಡು, ಬಿಜಾಪುರ,ಶ್ರೀರಂಗಪಟ್ಟಣ, ಹೊನ್ನೆಮುರುಡು,ಧರ್ಮಸ್ಥಳ, ಯಾಣ, ಕುಂದಾಪುರ, ಶೃಂಗೇರಿ ಹೀಗೆ ನೀವು ಕರ್ನಾಟಕದ ನಾನಾ ಪ್ರದೇಶಗಳನ್ನು ಪ್ಲಾನ್ ಮಾಡಬಹುದು. ಟ್ರೈನ್, ಕಾರ್ ಇಲ್ಲವೆ ಬಸ್ ನಲ್ಲಿ ಸುಲಭವಾಗಿ ಪ್ರಯಾಣ ಮಾಡುವ ಪ್ರದೇಶಗಳಿವು.

ಈ ಬುಡಕಟ್ಟು ಮಹಿಳೆಯರನ್ನು ಮದ್ವೆಯಾಗಲು ತುದಿಗಾಲಲ್ಲಿ ನಿಂತಿರ್ತಾರಂತೆ ಜನ!

ಕರ್ನಾಟಕದ ಹೊರಗೆ ಸುತ್ತಿ ಬರ್ತೇವೆ ಎನ್ನುವವರು ಕೇರಳ, ಗೋವಾ, ಊಟಿ, ದೆಹಲಿ, ಮುಂಬೈ ಹೀಗೆ ಅನೇಕ ಪ್ರದೇಶ ಸುತ್ತಬಹುದು.ಗುಡ್ಡಗಾಡು ಪ್ರದೇಶ ಓಕೆ ಎನ್ನುವವರು ಡೆಹ್ರಾಡೂನ್, ಮಸ್ಸೂರಿ, ಹರಿದ್ವಾರ ಮತ್ತು ಋಷಿಕೇಶದಂತಹ ಅನೇಕ ಪ್ರದೇಶಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.ಇನ್ನು ಮರುಭೂಮಿ ಪ್ರದೇಶಗಳಿಗೆ ಭೇಟಿ ನೀಡೋದು ಇಷ್ಟ ಎನ್ನುವವರು ಜೈಪುರ, ಉದಯಪುರ, ಜೈಸಲ್ಮೇರ್, ಬಿಕಾನೇರ್ ಇತ್ಯಾದಿಗಳಿಗೆ ಭೇಟಿ ನೀಡಬಹುದು.   

Latest Videos
Follow Us:
Download App:
  • android
  • ios