Asianet Suvarna News Asianet Suvarna News

ಚಾಮರಾಜನಗರ: ಬಂಡೀಪುರ ಸಫಾರಿಗೆ ಹೋಗುವ ಪ್ರವಾಸಿಗರಿಗೆ ಗುಡ್ ನ್ಯೂಸ್...!

ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ 50 ರ ಸಂಭ್ರಮದಲ್ಲಿದೆ. ಈಗಾಗ್ಲೇ ವನ್ಯ ಸಂಪತ್ತು ವೃದ್ದಿಯ ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಹೊಸ ಯೋಜನೆ ರೂಪಿಸಿವೆ. ಆ ನಿಟ್ಟಿನಲ್ಲಿ ಇದೀಗ ಸಫಾರಿಗೆ ಹೋಗುವ ಪ್ರವಾಸಿಗರಿಗೆ ಇನ್ಶುರೆನ್ಸ್ ಮಾಡಿಸಲು ಒಂದೊಳ್ಳೆ ಹೆಜ್ಜೆ ಇಟ್ಟಿದೆ. 

Insurance for Tourists Going to Bandipur Safari grg
Author
First Published Aug 8, 2023, 10:45 PM IST

ವರದಿ- ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್,  ಚಾಮರಾಜನಗರ

ಚಾಮರಾಜನಗರ(ಆ.08):  ಬಂಡೀಪುರ ಅಂದ್ರೆ ಸಾಕು ಎಂತವರಿಗಾದ್ರು ಆ ಕಾಡಲ್ಲಿ ಸಫಾರಿ ಮಾಡ್ಬೇಕು ಅಂತ ಅನಿಸದೆ ಇರದು.ದೇಶ,ವಿದೇಶದಿಂದಲೂ ಪ್ರವಾಸಿಗರ ದಂಡೇ ಸಫಾರಿಗೆ ಆಗಮಿಸುತ್ತೆ.ಸಫಾರಿ ವೇಳೆ ಯಾವುದಾದ್ರೂ ಅವಘಡ ಸಂಭವಿಸಿದ್ರೆ ಪ್ರವಾಸಿಗರಿಗೆ ತೊಂದರೆಯಾಗುತ್ತೆ.ಅದಕ್ಕೋಸ್ಕರ ಸಫಾರಿಗೆ ಹೋಗುವ ಪ್ರವಾಸಿಗರಿಗೆ ಹೊಸದಾಗಿ ಇನ್ಶುರೆನ್ಸ್ ಮಾಡಿಸಲು ಚಿಂತನೆ ನಡೆಸಿದೆ.ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ..

ಹಚ್ಚ ಹಸಿರ ಕಾನನ, ಸ್ವಚ್ಛಂದವಾಗಿ ವಿಹರಿಸುತ್ತಿರುವ ವನ್ಯಜೀವಿಗಳು, ಕಿವಿಗಿಂಪು ನೀಡೋ ಪಕ್ಷಿಗಳ ನಿನಾದ.ಅಬ್ಬಾ ಬಂಡೀಪುರದಲ್ಲಿ ಸಫಾರಿ ಮಾಡಿದ್ರೆ ಸ್ವರ್ಗ ಅಂತ ಅನಿಸದೆ ಇರದು.ಹೌದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಸಫಾರಿ ನಡೆಸಲು ರಾಜ್ಯದಲ್ಲಷ್ಟೇ ಅಲ್ಲದೇ ದೇಶ,ವಿದೇಶದಿಂದಲೂ ಕೂಡ ಪ್ರವಾಸಿಗರು ಆಗಮಿಸ್ತಾರೆ.ಈ ಸಫಾರಿಗೆ ಹೋಗುವ ಪ್ರವಾಸಿಗರ ಸೇಪ್ಟಿ ಕೂಡ ಅರಣ್ಯ ಇಲಾಖೆಗೆ ಸೇರಿದೆ.ಈ ಹಿನ್ನಲೆ ಇನ್ಮುಂದೆ ಸಫಾರಿಗೆ ಹೋಗುವ ಪ್ರವಾಸಿಗರಿಗೆ ರಕ್ಷಣೆಯ ದೃಷ್ಟಿಯಿಂದ ಇದೀಗಾ ಅರಣ್ಯ ಅಧಿಕಾರಿಗಳು ಇನ್ಶುರೆನ್ಸ್ ಮಾಡಿಸುವ ಚಿಂತನೆ ನಡೆಸಿದ್ದಾರೆ.ಇದಕ್ಕೆ ಕಾರಣವೂ ಇದೆ ಅಧಿಕಾರಿಗಳು ಏನಂತಾರೆ ನೀವೆ ಕೇಳಿ.

ಎಸ್ಸೆಸ್ಸೆಲ್ಸಿ ಓದಿ 1 ಕೋಟಿ ರೂ. ಗಳಿಸಿದ ಚಾಮರಾಜನಗರ ಟೊಮೆಟೊ ಬೆಳೆಗಾರರು: ರೈತರಿಗೆ ಹೆಣ್ಣು ಕೊಡುವಂತೆ ಮನವಿ

ಇನ್ನೂ ಪ್ರವಾಸಿಗರು ದುಬಾರಿ ವೆಚ್ಚ ತೆತ್ತು ಸಫಾರಿಗೆ ಹೋಗ್ತಾರೆ.ಈ ವೇಳೆ ಕಾಡಿನಲ್ಲಿ ವನ್ಯ ಪ್ರಾಣಿಗಳ ದರ್ಶನ ಹಾಗೂ ಪ್ರಾಕೃತಿಕ ವನ್ಯ ಸಂಪತ್ತನ್ನು ಕಣ್ತುಂಬಿಕೊಳ್ತಾರೆ.ಇಂತಾ ವೇಳೆ ಕಾಡಾನೆ ಅಟ್ಟಿಸಿಕೊಂಡು ಬರೋದು ಅಥವಾ ಇನ್ನೀತರ ವನ್ಯ ಪ್ರಾಣಿಗಳು ಕೂಡ ಸಫಾರಿ ವಾಹನದ ಮೇಲೆ ದಾಳಿ ನಡೆಸಿದ ನಿದರ್ಶನ ಸಾಕಷ್ಟಿದೆ.ಈ ಹಿನ್ನಲೆ ಸಫಾರಿಗೆ ಹೋದ ವೇಳೆ ಪ್ರವಾಸಿಗರಿಗೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮ ವಹಿಸುವ ಜೊತೆಗೆ ಪ್ರವಾಸಿಗರ ಹಿತರಕ್ಷಣೆ ದೃಷ್ಟಿಯಿಂದ ಇನ್ಶುರೆನ್ಸ್ ಪ್ಲಾನ್ ನಲ್ಲಿದೆ.

ಒಟ್ನಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ 50 ರ ಸಂಭ್ರಮದಲ್ಲಿದೆ. ಈಗಾಗ್ಲೇ ವನ್ಯ ಸಂಪತ್ತು ವೃದ್ದಿಯ ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಹೊಸ ಯೋಜನೆ ರೂಪಿಸಿವೆ. ಆ ನಿಟ್ಟಿನಲ್ಲಿ ಇದೀಗ ಸಫಾರಿಗೆ ಹೋಗುವ ಪ್ರವಾಸಿಗರಿಗೆ ಇನ್ಶುರೆನ್ಸ್ ಮಾಡಿಸಲು ಒಂದೊಳ್ಳೆ ಹೆಜ್ಜೆ ಇಟ್ಟಿದೆ. ಇದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತಾ ಅಥವಾ ವನ್ಯಜೀವಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗುತ್ತಾ ಅನ್ನೋದ್ನ ಕಾದುನೋಡಬೇಕಾಗಿದೆ.

Follow Us:
Download App:
  • android
  • ios