Asianet Suvarna News Asianet Suvarna News

ಇಂಡಿಗೋ ಔಟೇಜ್‌: ವೆಬ್‌ಸೈಟ್‌ ಡೌನ್‌, ಟಿಕೆಟ್‌ ಬುಕ್‌ ಮಾಡಲಾಗದೆ ಪ್ರಯಾಣಿಕರ ಪರದಾಟ

ಇಂಡಿಗೋ ಏರ್‌ಲೈನ್ಸ್ ಶನಿವಾರ ಮಧ್ಯಾಹ್ನದಿಂದ ತಾಂತ್ರಿಕ ದೋಷವನ್ನು ಎದುರಿಸುತ್ತಿದ್ದು, ಇದರಿಂದಾಗಿ ವಿಮಾನಗಳು ವಿಳಂಬವಾಗಿವೆ ಮತ್ತು ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಔಟೇಜ್‌ನಿಂದಾಗಿ ಏರ್‌ಲೈನ್‌ನ ವೆಬ್‌ಸೈಟ್ ಮತ್ತು ಬುಕಿಂಗ್ ವ್ಯವಸ್ಥೆಗಳು ಸ್ಥಗಿತಗೊಂಡಿವೆ.

IndiGo Airlines suffers outage Website and booking system affected san
Author
First Published Oct 5, 2024, 3:01 PM IST | Last Updated Oct 5, 2024, 3:02 PM IST

ನವದೆಹಲಿ (ಅ.5): ಇಂಡಿಗೋ ಏರ್‌ಲೈನ್ ಶನಿವಾರ ಮಧ್ಯಾಹ್ನ 12:30 ರಿಂದ ಸಿಸ್ಟಮ್ ಔಟೇಜ್‌ಅನ್ನು ಎದುರಿಸುತ್ತಿದೆ. ಇದು ವಿಮಾನ ಸಂಚಾರ ಮತ್ತು ವಿಮಾನ ನಿಲ್ದಾಣಗಳಾದ್ಯಂತ ಆನ್‌ ಗ್ರೌಂಡ್‌ ಸೇವೆಗಳ ಮೇಲೆ ಪರಿಣಾಮ ಬೀರಿದೆ. ತಾಂತ್ರಿಕ ದೋಷದಿಂದ ಪ್ರಯಾಣಿಕರಿಗೆ ವಿಮಾನ ಪ್ರಯಾಣ ಮಾಡಲು,  ಟಿಕೆಟ್ ಕಾಯ್ದಿರಿಸಲು ಕಷ್ಟವಾಗುತ್ತಿದೆ. ಇನ್ನೂ ಹೆಚ್ಚಿನವರು ವಿಮಾನ ನಿಲ್ದಾಣಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಭಾರತೀಯ ವಿಮಾನಯಾನ ಸಂಸ್ಥೆ ಇಂಡಿಗೋ ಶನಿವಾರ ಭಾರೀ ಔಟೇಜ್‌ಅನ್ನು ಎದುರಿಸಿರುವ ಬಗ್ಗೆ ಎಕ್ಸ್‌ ಹ್ಯಾಂಡಲ್‌ನಲ್ಲಿ ಪೋಸ್ಟ್‌ ಮಾಡಿದೆ. ನಮ್ಮ ಇಡೀ ನೆಟ್‌ವರ್ಕ್‌ "ತಾತ್ಕಾಲಿಕ ಸಿಸ್ಟಮ್ ನಿಧಾನಗತಿಯನ್ನು ಅನುಭವಿಸುತ್ತಿದೆ" ಎಂದು ವರದಿ ಮಾಡಿದೆ. ಅದರ "ವೆಬ್‌ಸೈಟ್ ಮತ್ತು ಬುಕಿಂಗ್ ವ್ಯವಸ್ಥೆ" ಮೇಲೆ ಪರಿಣಾಮ ಬೀರಿದೆ ಎಂದು ಅದು ಹೇಳಿದೆ. "ನಾವು ಪ್ರಸ್ತುತ ನಮ್ಮ ನೆಟ್‌ವರ್ಕ್‌ನಾದ್ಯಂತ ತಾತ್ಕಾಲಿಕ ಸಿಸ್ಟಮ್ ನಿಧಾನಗತಿಯನ್ನು ಅನುಭವಿಸುತ್ತಿದ್ದೇವೆ, ಇದು ನಮ್ಮ ವೆಬ್‌ಸೈಟ್ ಮತ್ತು ಬುಕಿಂಗ್ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ" ಎಂದು ಏರ್‌ಲೈನ್ ಹೇಳಿಕೆಯಲ್ಲಿ ತಿಳಿಸಿದೆ.

ಚೆಕ್ ಇನ್ ಮಾಡುವಾಗ ಸಮಸ್ಯೆ ಉಂಟಾಗುತ್ತಿತ್ತು. ಇದು ದೀರ್ಘ ಕಾಲ ಪ್ರಯಾಣಿಕರು ಕ್ಯೂನಲ್ಲಿ ಕಾಯುವ ಸ್ಥಿತಿಗೆ  ಕಾರಣವಾಗಬಹುದು ಎಂದು ಹೇಳಿದೆ. ಇದರ ಪರಿಣಾಮವಾಗಿ, ನಿಧಾನಗತಿಯ ಚೆಕ್-ಇನ್‌ಗಳು ಮತ್ತು ವಿಮಾನ ನಿಲ್ದಾಣದಲ್ಲಿ ದೀರ್ಘ ಸರತಿ ಸಾಲುಗಳನ್ನು ಒಳಗೊಂಡಂತೆ ಗ್ರಾಹಕರು ಹೆಚ್ಚಿನ ಕಾಯುವ ಸಮಯವನ್ನು ಎದುರಿಸಬಹುದು ಎಂದಿದೆ. ಸೇವೆಗಳನ್ನು ಸಂಪೂರ್ಣವಾಗಿ ತ್ವರಿತವಾಗಿ ಮರುಸ್ಥಾಪಿಸಲು ಇದು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದೆ.

"ನಮ್ಮ ವಿಮಾನ ನಿಲ್ದಾಣದ ತಂಡವು ಎಲ್ಲರಿಗೂ ಸಹಾಯ ಮಾಡಲು ಮತ್ತು ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಲಭ್ಯವಿದೆ ಮತ್ತು ಸಂಪೂರ್ಣವಾಗಿ ಸಮರ್ಪಿತವಾಗಿದೆ. ಸಾಧ್ಯವಾದಷ್ಟು ಬೇಗ ಸ್ಥಿರತೆ ಮತ್ತು ಸಹಜತೆಯನ್ನು ಪುನಃಸ್ಥಾಪಿಸಲು ನಾವು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇವೆ" ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ವಿಮಾನ ಹಾರಿಸಲು ನಿರಾಕರಿಸಿದ ಇಂಡಿಗೋ ಪೈಲಟ್: ಪುಣೆ ಬೆಂಗಳೂರು ಫ್ಲೈಟ್ 5 ಗಂಟೆ ವಿಳಂಬ

ಹಲವಾರು ಪ್ರಯಾಣಿಕರು ತಮ್ಮ ಕಷ್ಟಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವನ್ನು (ಡಿಜಿಸಿಎ) ಈ ಬಗ್ಗೆ ಗಮನ ನೀಡುವಂತೆ ಒತ್ತಾಯಿಸಿದ್ದಾರೆ.

ವಿಮಾನ ಲೇಟ್ : ಸಿಟ್ಟಿಗೆದ್ದ ಜನ ಬೈದಾಡಿದ್ರೂ ತಾಳ್ಮೆ ವಹಿಸಿದ ಗಗನಸಖಿಗೆ ವ್ಯಾಪಕ ಶ್ಲಾಘನೆ

Latest Videos
Follow Us:
Download App:
  • android
  • ios