ಜಗತ್ತಿನ ಖ್ಯಾತ ಪ್ಯಾರಿಸ್‌ನ ಐಫೆಲ್‌ ಟವರ್‌ಗೆ ಭೇಟಿ ನೀಡುವ ಭಾರತೀಯರಿಗೆ ಸಿಹಿ ಸುದ್ದಿ ಸಿಕ್ಕಿದೆ. ಇನ್ನು ಮುಂದೆ ಐಫೆಲ್‌ ಟವರ್‌ ಟಿಕೆಟ್ ಖರೀದಿ ಮಾಡುವಾಗ ಯುಪಿಐ ಪಾವತಿ ಮೂಲಕ ಟಿಕೆಟ್ ಖರೀದಿಸಬಹುದಾಗಿದೆ.

ಮುಂಬೈ (ಫೆ.3): ಜಗತ್ತಿನ ಖ್ಯಾತ ಪ್ಯಾರಿಸ್‌ನ ಐಫೆಲ್‌ ಟವರ್‌ಗೆ ಭೇಟಿ ನೀಡುವ ಭಾರತೀಯರಿಗೆ ಸಿಹಿ ಸುದ್ದಿ ಸಿಕ್ಕಿದೆ. ಇನ್ನು ಮುಂದೆ ಐಫೆಲ್‌ ಟವರ್‌ ಟಿಕೆಟ್ ಖರೀದಿ ಮಾಡುವಾಗ ಯುಪಿಐ ಪಾವತಿ ಮೂಲಕ ಟಿಕೆಟ್ ಖರೀದಿಸಬಹುದಾಗಿದೆ.

ಅಮೆರಿಕದಲ್ಲಿ ಮತ್ತೋರ್ವ ಭಾರತೀಯ ವಿದ್ಯಾರ್ಥಿ ನಿಗೂಢ ಸಾವು, ತಿಂಗಳಲ್ಲಿ ನಡೆದ 4ನೇ ಘಟನೆ

ಭಾರತದ ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಹಾಗೂ ಫ್ರಾನ್ಸ್‌ನ ಲೈರಾ ಕಂಪನಿ ಒಪ್ಪಂದ ಮಾಡಿಕೊಂಡಿದ್ದು, ಇದರಿಂದಾಗಿ ಭಾರತೀಯರು ಟಿಕೆಟ್‌ ಖರೀದಿ ಮಾಡುವಾಗ ತಮ್ಮ ಯುಪಿಐ ಐಡಿ ಅಥವ ಕ್ಯೂಆರ್‌ ಕೋಡ್‌ ಸ್ಯಾನ್‌ ಮಾಡುವ ಮೂಲಕ ಬುಕ್‌ ಮಾಡಬಹುದಾಗಿದೆ ಎಂದು ಎನ್‌ಪಿಸಿಐ ತಿಳಿಸಿದೆ.

ಶೀಘ್ರದಲ್ಲೇ ವಾಹನ ಚಾಲಕರಿಗೆ ಹೈವೇ ಬಳಿ ವಿಶ್ರಾಂತಿ ಕೊಠಡಿ ನಿರ್ಮಾಣ, ಕೇಂದ್ರದಿಂದ ಘೋಷಣೆ

ಬುಕಿಂಗ್‌ ಹೇಗೆ?: ಐಫೆಲ್‌ ಟವರ್‌ ವೆಬ್‌ಸೈಟ್‌ನಲ್ಲಿ ಭೇಟಿಯ ಟಿಕೆಟ್‌ ಬುಕ್‌ ಮಾಡುವ ವೇಳೆ ದಾಖಲೆಗಳನ್ನು ಸಲ್ಲಿಸಿದ ಬಳಿಕ ಪಾವತಿ ಪುಟ ತೆರೆದುಕೊಳ್ಳುತ್ತಿದೆ. ಈ ವೇಳೆ ಯುಪಿಐ ಆಯ್ಕೆ ಮಾಡಿಕೊಂಡರೆ, ಅದರಲ್ಲಿ ಯುಪಿಐ ಐಡಿ ಅಥವಾ ಕ್ಯೂಆರ್‌ ಕೋಡ್‌ ಆಯ್ಕೆ ಇರುತ್ತದೆ. ಈ ವೇಳೆ ಯಾವುದಾದರನ್ನು ಆಯ್ಕೆ ಮಾಡಿಕೊಂಡು ಪಾವತಿ ಮಾಡಬಹುದಾಗಿದೆ.