ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳ ನಿಗೂಢ ಸಾವಿನ ಸರಣಿ ಮುಂದುವರೆದಿದೆ. ಲಿಂಡರ್‌ ಸ್ಕೂಲ್‌ ಆಫ್‌ ಬಿಜಿ಼ನೆಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಶ್ರೇಯಸ್‌ ರೆಡ್ಡಿ ಬೆನಿಗೇರಿ ನಿಗೂಢವಾಗಿ ಸಾವನ್ನಪ್ಪಿದ್ದಾನೆ.

ನ್ಯೂಯಾರ್ಕ್‌ (ಫೆ.3): ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳ ನಿಗೂಢ ಸಾವಿನ ಸರಣಿ ಮುಂದುವರೆದಿದೆ. ಒಹಾಯೋ ರಾಜ್ಯದಲ್ಲಿರುವ ಸಿನ್ಸಿನಾಟಿ ನಗರದ ಲಿಂಡರ್‌ ಸ್ಕೂಲ್‌ ಆಫ್‌ ಬಿಸಿನೆಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಶ್ರೇಯಸ್‌ ರೆಡ್ಡಿ ಬೆನಿಗೇರಿ ನಿಗೂಢವಾಗಿ ಸಾವನ್ನಪ್ಪಿದ್ದಾನೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ನ್ಯೂಯಾರ್ಕ್‌ನಲ್ಲಿರುವ ಭಾರತೀಯ ಕಾನ್ಸುಲೇಟ್‌, ‘ಭಾರತೀಯ ವಿದ್ಯಾರ್ಥಿ ಶ್ರೀನಿವಾಸ್‌ ರೆಡ್ಡಿ ಅವರ ಸಾವಿನಲ್ಲಿ ಯಾವುದೇ ಶಂಕಾಸ್ಪದ ನಡೆ ಕಂಡುಬಂದಿಲ್ಲ. ಈ ಕುರಿತು ಪೊಲೀಸರು ತನಿಖೆ ಪ್ರಗತಿಯಲ್ಲಿದೆ. ಅವರ ಸಾವಿನ ಕುರಿತು ಕುಟುಂಬಕ್ಕೆ ತಿಳಿಸಲಾಗಿದ್ದು, ಭಾರತದಲ್ಲಿರುವ ವಿದ್ಯಾರ್ಥಿಯ ತಂದೆ ಶೀಘ್ರದಲ್ಲೇ ಆಗಮಿಸುವ ನಿರೀಕ್ಷೆಯಿದೆ’ ಎಂದು ತಿಳಿಸಿದ್ದಾರೆ. ಇದಕ್ಕೂ ಮೊದಲು ತಿಂಗಳ ಅವಧಿಯಲ್ಲಿ ಭಾರತೀಯ ಮೂಲದ ನೀಲ್‌ ಆಚಾರ್ಯ, ವಿವೇಕ್‌ ಸೈನಿ ಮತ್ತು ಅಕುಲ್‌ ಬಿ ಧವನ್‌ ಎಂಬ ವಿದ್ಯಾರ್ಥಿಗಳು ಅಮೆರಿಕದಲ್ಲಿ ಸಾವನ್ನಪ್ಪಿದ್ದರು.

Breaking: ಬಿಜೆಪಿಯ ಭೀಷ್ಮ ಎಲ್‌ ಕೆ ಅಡ್ವಾಣಿಗೆ ಭಾರತರತ್ನ ಘೋಷಣೆ

US ನಲ್ಲಿ ಸುಮಾರು 300,000 ಭಾರತೀಯ ವಿದ್ಯಾರ್ಥಿಗಳಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ, 200,000 ವಿದ್ಯಾರ್ಥಿಗಳಿಗೆ US ವೀಸಾ ನೀಡಲಾಗಿದೆ, ಕೋವಿಡ್ ನಂತರ ಭಾರಿ ಒಳಹರಿವು ಆಗಿದೆ. ಮಾನಸಿಕ ಒತ್ತಡ, ಒಂಟಿತನ ಮತ್ತು ಮಾದಕ ವ್ಯಸನಕ್ಕೆ ಒಡ್ಡಿಕೊಳ್ಳುವುದು ಅನೇಕ ಸಂದರ್ಭಗಳಲ್ಲಿ ಮಾರಕವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಲಾಡೆನ್‌ ಪಾಕ್‌ನಲ್ಲಿರುವ ಮಾಹಿತಿ ಮೊದಲೇ ಸಿಕ್ಕಿತ್ತು: ಪಾಕ್‌ ಮಾಜಿ ಪ್ರಧಾನಿ ಹೇಳಿಕೆ
ಇಸ್ಲಾಮಾಬಾದ್‌: ಅಮೆರಿಕ ಯೋಧರಿಂದ 2011ರಲ್ಲಿ ಪಾಕ್‌ನ ಅಬೋಟಾಬಾದ್‌ನಲ್ಲಿ ಹತನಾದ ಕುಖ್ಯಾತ ಉಗ್ರ ಒಸಾಮಾ ಬುನ್‌ ಲಾಡೆನ್‌, ಪಾಕಿಸ್ತಾನದಲ್ಲಿ ಅವಿತಿದ್ದ ಮಾಹಿತಿಯನ್ನು ಅಮೆರಿಕ ಮೊದಲೇ ಪಾಕಿಸ್ತಾನಕ್ಕೆ ನೀಡಿತ್ತು ಎಂದು ಪಾಕಿಸ್ತಾನ ಮಾಜಿ ಪ್ರಧಾನಿ ಯೂಸುಫ್‌ ರಾಜಾ ಗಿಲಾನಿ ಹೇಳಿದ್ದಾರೆ.

ಸಾರ್ವಜನಿಕ ಆಸ್ತಿಗೆ ಹಾನಿ ಕೇಸಲ್ಲಿ ದಂಡ ಕಟ್ಟಿದರೆ ಮಾತ್ರ ಜಾಮೀನು

ಶುಕ್ರವಾರ ಮಾತನಾಡಿದ ಅವರು, 2008ರಲ್ಲಿ ಪ್ರಧಾನಿಯಾಗಿದ್ದ ವೇಳೆ ಮುಂಬೈ ದಾಳಿ ನಡೆದಿತ್ತು. ಈ ವೇಳೆ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಅಂದಿನ ವಿದೇಶಾಂಗ ಸಚಿವೆ ಕಾಂಡೋಲಿಸಾ ರೈಸ್‌, ಪಾಕಿಸ್ತಾನಕ್ಕೂ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಲಾಡೆನ್‌ ಪಾಕಿಸ್ತಾನದಲ್ಲಿ ಅವಿತಿದ್ದಾನೆ ಎಂದು ಹೇಳಿದ್ದರು. ಆದರೆ ಈ ಹೇಳಿಕೆಯನ್ನು ನಾನು ತಿರಸ್ಕರಿಸಿದ್ದೆ’ ಎಂದರು.