ಟಿಕೆಟ್ ವಿಷ್ಯದಲ್ಲಿ ಈ ತಪ್ಪು ಮಾಡಿದ್ರೆ ದಂಡ ವಿಧಿಸುತ್ತೆ ರೈಲ್ವೆ
ರೈಲಿನಲ್ಲಿ ನಾವೆಲ್ಲ ಪ್ರಯಾಣ ಬೆಳೆಸ್ತೇವೆ. ಆದ್ರೆ ಎಷ್ಟೋ ನಿಯಮ ನಮಗೆ ತಿಳಿದಿರೋದಿಲ್ಲ. ಇನ್ನು ಮೊದಲ ಬಾರಿ ಪ್ರಯಾಣ ಬೆಳೆಸುವವರು ಮತ್ತಷ್ಟು ತಪ್ಪು ಮಾಡ್ತಾರೆ. ಅದಕ್ಕೆ ರೈಲ್ವೆ ಇಲಾಖೆ ದಂಡ ವಿಧಿಸುತ್ತೆ.
ರೈಲು, ಭಾರತದಲ್ಲಿ ಮಧ್ಯಮ ವರ್ಗದವರ ಜೀವಾಳ. ಸಂಚಾರ ಸುಗಮ ಎನ್ನುವುದು ಒಂದಾದ್ರೆ ಕಡಿಮೆ ಖರ್ಚಿನಲ್ಲಿ ದೂರದ ಪ್ರಯಾಣ ಬೆಳೆಸಲು ಇದು ಅನುಕೂಲಕರ. ಇದೇ ಕಾರಣಕ್ಕೆ ಭಾರತದಲ್ಲಿ ಲಕ್ಷಾಂತರ ರೈಲು ನಿತ್ಯ ಮೂಲೆ ಮೂಲೆಯನ್ನು ತಲುಪುತ್ತದೆ. ಕೋಟ್ಯಾಂತರ ಮಂದಿ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಾರೆ. ರೈಲ್ವೆ ಇಲಾಖೆ ಪ್ರಯಾಣಿಕರ ಸುರಕ್ಷತೆ ಜೊತೆ ಅವರು ಆರಾಮವಾಗಿ ಪ್ರಯಾಣ ಬೆಳೆಸಲು ಯೋಗ್ಯವಾಗಿರುವ ಎಲ್ಲ ವ್ಯವಸ್ಥೆಯನ್ನು ಕಲ್ಪಿಸುತ್ತದೆ. ರೈಲ್ವೆ ಇಲಾಖೆ ರೈಲು ಸಂಚಾರವನ್ನು ಸುಗಮಗೊಳಿಸಬೇಕೆಂದ್ರೆ ಕೆಲ ನಿಯಮಗಳನ್ನು ರೂಪಿಸಬೇಕು. ಅದನ್ನು ಪ್ರಯಾಣಿಕರು ಪಾಲಿಸಬೇಕಾಗುತ್ತದೆ. ಅದ್ರಲ್ಲಿ ಟಿಕೆಟ್ ವ್ಯವಸ್ಥೆ ಕೂಡ ಒಂದು. ಪ್ರಯಾಣಿಕರಿಗೆ ಟಿಕೆಟ್ ಸೂಕ್ತ ಸಮಯದಲ್ಲಿ ಸಿಗ್ಲಿ ಎನ್ನುವ ಕಾರಣಕ್ಕೆ ಆನ್ಲೈನ್ ವ್ಯವಸ್ಥೆ ಕೂಡ ರೈಲ್ವೆ ಇಲಾಖೆ ಮಾಡಿದೆ. ಅದ್ರ ಜೊತೆಗೆ ಟಿಕೆಟ್ ಖರೀದಿ ಮಾಡದೆ ಪ್ರಯಾಣ ಬೆಳೆಸುವುದು ಅಪರಾಧ ಎಂಬುದನ್ನು ಅಧಿಕೃತವಾಗಿ ಘೋಷಿಸಿದೆ. ಒಂದ್ವೇಳೆ ಟಿಕೆಟ್ ಇಲ್ಲದೆ ಪ್ರಯಾಣ ಬೆಳೆಸುವ ಪ್ರಯಾಣಿಕರನ್ನು ಬಂಧಿಸಿ ಅವರಿಗೆ ದಂಡ ಮತ್ತು ಶಿಕ್ಷೆ ವಿಧಿಸುವ ಕೆಲಸವನ್ನು ರೈಲ್ವೆ ಇಲಾಖೆ ಮಾಡುತ್ತದೆ. ಇಲಾಖೆ ಇದನ್ನು ಕಟ್ಟುನಿಟ್ಟುಗೊಳಿಸದೇ ಹೋದ್ರೆ ಟಿಕೆಟ್ ಇಲ್ಲದೆ ಪ್ರಯಾಣ ಬೆಳೆಸುವವರ ಸಂಖ್ಯೆ ಎಲ್ಲೆ ಮೀರುತ್ತದೆ.
ಭಾರತ (India) ದಲ್ಲಿ ಕೆಲ ಪ್ರಯಾಣಿಕರು ಟಿಕೆಟ್ (Ticket) ಪಡೆಯುವ ವೇಳೆ ತಿಳಿಯದೆ ತಪ್ಪು ಮಾಡ್ತಾರೆ. ಮತ್ತೆ ಕೆಲವರು ತಿಳಿದೂ ತಪ್ಪು ಮಾಡ್ತಾರೆ. ಆ ಸಮಯದಲ್ಲಿ ರೈಲ್ವೆ ಇಲಾಖೆ ಅವರಿಗೆ ದಂಡ ವಿಧಿಸುತ್ತದೆ. ಇತ್ತೀಚಿನ ವರದಿ ಪ್ರಕಾರ, ರೈಲ್ವೆ (Railway) ಟಿಕೆಟ್ ಕಾಯ್ದಿರಿಸಿದ ಭೋಗಿಯಲ್ಲಿ ಬೇರೆ ಟಿಕೆಟ್ ಪಡೆದು ಸಂಚಾರ ಮಾಡುವ ಹಾಗೂ ರೈಲ್ವೆ ಫ್ಲಾಟ್ ಫಾರ್ಮ್ ನಲ್ಲಿ ಟಿಕೆಟ್ ಇಲ್ಲದೆ ಸಂಚರಿಸುವ ಪ್ರಯಾಣಿಕರಿಂದ ಭಾರೀ ಮೊತ್ತದ ದಂಡ ವಸೂಲಿ ಮಾಡಿದೆ. 2023 -2024ನೇ ಸಾಲಿನಲ್ಲಿ ರೈಲ್ವೆ ಇಲಾಖೆ 130.10 ಕೋಟಿ ರೂಪಾಯಿ ದಂಡ ಸಂಗ್ರಹಿಸಿದೆ.
Ancient Roman Site: ಪ್ರಾಚೀನ ಸ್ನಾನಗೃಹಕ್ಕೆ ಸಾವಿರ ವರ್ಷಗಳ ಬಳಿಕ ಪುನಃ ನೀರು!
ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುವುದು ಬರೀ ತಪ್ಪಲ್ಲ. ಅದು ಕಾನೂನು ಅಪರಾಧ. ಇದಲ್ಲದೆ ರೈಲ್ವೆ ನಿಲ್ದಾಣ ಫ್ಲಾಟ್ಫಾರ್ಮ್ ನಲ್ಲಿ ಕೂಡ ಟಿಕೆಟ್ ಇಲ್ಲದೆ ಸಂಚರಿಸುವಂತಿಲ್ಲ. ಈ ವಿಷ್ಯ ಕೆಲವರಿಗೆ ತಿಳಿದಿದ್ರೆ ಮತ್ತೆ ಕೆಲವರಿಗೆ ತಿಳಿದಿಲ್ಲ.
ಟಿಕೆಟ್ ಇಲ್ಲದೆ ಪ್ರಯಾಣಿಸಿದ್ರೆ ಎಷ್ಟು ದಂಡ : ಕೆಲವು ಬಾರಿ ವೇಟಿಂಗ್ ಲೀಸ್ಟ್ ದೊಡ್ಡದಿರುತ್ತದೆ. ಆದ್ರೆ ರೈಲಿನಲ್ಲಿ ಪ್ರಯಾಣ ಬೆಳೆಸೋದು ಅನಿವಾರ್ಯವಾಗಿರುತ್ತದೆ. ಇಂಥ ಸಮಯದಲ್ಲಿ ಜನರು ಟಿಕೆಟ್ ಇಲ್ಲದೆ ರೈಲು ಹತ್ತುತ್ತಾರೆ. ನೀವೂ ಹೀಗೆ ಮಾಡಿದ್ರೆ ಟಿಟಿಇ ನಿಮಗೆ ದಂಡ ವಿಧಿಸುತ್ತಾರೆ. ಆರು ತಿಂಗಳ ಜೈಲು ಅಥವಾ ಗರಿಷ್ಠ 1,000 ರೂಪಾಯಿವರೆಗೆ ದಂಡ ವಿಧಿಸಬಹುದು. ದಂಡದ ಕನಿಷ್ಠ ಮೊತ್ತ 250 ರೂಪಾಯಿ ಆಗಿದೆ. ಇದ್ರ ಜೊತೆ ನೀವು ಪ್ರಯಾಣದ ಟಿಕೆಟ್ ದರವನ್ನು ಪಾವತಿಸಬೇಕು.
Hodophobia: ವಿಮಾನದ ಹೆಸರು ಕೇಳ್ತಿದ್ದಂತೆ ಶುರುವಾಗೋ ಭಯ ಒಂದು ಖಾಯಿಲೆ!
ಫ್ಲಾಟ್ಫಾರ್ಮ್ ಟಿಕೆಟ್ ಪಡೆಯದೆ ಹೋದಲ್ಲಿ ದಂಡ: ರೈಲ್ವೆ ಫ್ಲಾಟ್ಫಾರ್ಮ್ ನಲ್ಲಿ ಸುತ್ತಾಡಲೂ ಟಿಕೆಟ್ ಪಡೆಯಬೇಕು. ಸಂಬಂಧಿಕರು ಅಥವಾ ಸ್ನೇಹಿತರಿಗೆ ವಿದಾಯ ಹೇಳಲು ಅಥವಾ ಸ್ವಾಗತಿಸಲು ಜನರು ರೈಲ್ವೆ ನಿಲ್ದಾಣಕ್ಕೆ ಹೋಗುತ್ತಾರೆ. ಅಲ್ಲಿ ಫ್ಲಾಟ್ಫಾರ್ಮ್ ಟಿಕೆಟ್ ಖರೀದಿ ಮರೆಯುತ್ತಾರೆ. ಹೀಗಾದಲ್ಲಿ ನೀವು 10 ರೂಪಾಯಿ ಟಿಕೆಟಿಗೆ ದಂಡವಾಗಿ 250 ರೂಪಾಯಿ ಪಾವತಿಸಬೇಕಾಗುತ್ತದೆ. ಈ ಫ್ಲಾಟ್ಫಾರ್ಮ್ ಟಿಕೆಟ್ ಎರಡು ಗಂಟೆಗಿಂತ ಹೆಚ್ಚು ಕಾಲ ಮಾನ್ಯವಾಗುತ್ತದೆ. ಅಂದ್ರೆ ನೀವು 10 ರೂಪಾಯಿ ನೀಡಿ ಟಿಕೆಟ್ ಖರೀದಿ ಮಾಡಿ 2 ಗಂಟೆಗಿಂತ ಹೆಚ್ಚು ಸಮಯ ಇರಬಹುದು.