ಎಸಿ ರೈಲಿನಲ್ಲಿ ಕೊಳಕು ಬೆಡ್ ಶೀಟ್ ಸಿಕ್ಕಿದ್ಯಾ? ಟೆನ್ಷನ್ ಬೇಡ.. ಹೀಗೆ ಬದಲಾಯಿಸಿ
ರೈಲ್ವೆ ಇಲಾಖೆ ಅನೇಕ ಸೌಲಭ್ಯಗಳನ್ನು ಪ್ರಯಾಣಿಕರಿಗೆ ಒದಗಿಸುತ್ತದೆ. ನಿಮ್ಮ ಸಮಸ್ಯೆಗೆ ತಕ್ಷಣ ಸ್ಪಂದಿಸುತ್ತದೆ. ಆದ್ರೆ ಪ್ರಯಾಣಿಕರಿಗೆ ಕೆಲ ಸೌಲಭ್ಯದ ಬಗ್ಗೆ ಮಾಹಿತಿ ಇಲ್ಲ. ಬೆಡ್ ಶೀಟ್ ಬದಲಿಸುವ ಬಗ್ಗೆ ನಾವು ಮಾಹಿತಿ ನೀಡ್ತೇವೆ.
ಎಸಿ ವಾಹನದಲ್ಲಿ ಪ್ರಯಾಣ ಬೆಳೆಸುವಾಗ ಚಳಿಯಾಗೋದು ಸಾಮಾನ್ಯ. ಇದೇ ಕಾರಣಕ್ಕೆ ಸಾರ್ವಜನಿಕ ವಾಹನದಲ್ಲಿ ಬೆಡ್ ಶೀಟ್ ವ್ಯವಸ್ಥೆ ಇರುತ್ತದೆ. ನೀವು ಎಸಿ ಬಸ್ ನಲ್ಲಿ ಪ್ರಯಾಣ ಬೆಳೆಸುತ್ತಿದ್ದರೆ ಅಥವಾ ಎಸಿ ರೈಲಿನಲ್ಲಿ ಪ್ರಯಾಣ ಕೈಗೊಂಡಿದ್ದರೆ ನಿಮಗೆ ಬೆಡ್ ಶೀಟ್ ವ್ಯವಸ್ಥೆ ಮಾಡಲಾಗುತ್ತದೆ. ಸಾರ್ವಜನಿಕ ವಾಹನದಲ್ಲಿ ಬೆಡ್ ಶೀಟ್ ಬಳಸುವಾಗ ನಾವು ಮತ್ತಷ್ಟು ಎಚ್ಚರಿಗೆ ವಹಿಸುತ್ತೇವೆ. ಪ್ರತಿ ಬಾರಿ ಮನೆಯಿಂದ ಬೆಡ್ ಶೀಟ್ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಮನೆಯಲ್ಲಿ ವಾರಕ್ಕೊಮ್ಮೆ ಕ್ಲೀನ್ ಮಾಡುವ ನಾವು, ಹೊರಗೆ ಹೋದಾಗ ಬೇರೆಯವರು ಬಳಸಿದ ಬೆಡ್ ಶೀಟ್ ಬಳಸಲು ಅನುಮಾನಿಸ್ತೇವೆ. ಆದ್ರೆ ರೈಲಿನಲ್ಲಿ ನಿಮಗೆ ಸ್ವಚ್ಛವಾದ ಬೆಡ್ ಶೀಟ್ ಲಭ್ಯವಿದೆ. ಕೆಲ ಬಾರಿ ರೈಲಿನ ಎಸಿ ಕೋಚ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕೊಳಕಾದ ಬೆಡ್ ಶೀಟ್ ಸಿಗುತ್ತದೆ. ಒದ್ದೆಯಾದ ಬೆಡ್ ಶೀಟ್ ಸಿಗೋ ಸಾಧ್ಯತೆಯೂ ಇದೆ.
ಬೆಡ್ ಶೀಟ (Bed Sheet ) ನ್ನು ಪ್ಯಾಕ್ ಮಾಡಿ ನಮಗೆ ನೀಡೋದ್ರಿಂದ ಆರಂಭದಲ್ಲಿ ಸಮಸ್ಯೆ ಗೊತ್ತಾಗೋದಿಲ್ಲ. ರೈಲಿ (Rail) ನ ಒಳಗೆ ಹೋಗಿ ಬೆಡ್ ಶೀಟ್ ತೆಗೆದಾಗ್ಲೇ ಅದರ ಸಮಸ್ಯೆ ಗೊತ್ತಾಗುತ್ತದೆ. ಒದ್ದೆಯಾದ ಅಥವಾ ಕೊಳೆಯಾದ ಬೆಡ್ ಶೀಟ್ ಹೊದ್ದು ಮಲಗಲು ಸಾಧ್ಯವಿಲ್ಲ. ಅದನ್ನು ಹೇಗೆ ಬದಲಿಸೋದು ಎಂಬುದು ಅನೇಕರಿಗೆ ತಿಳಿದಿಲ್ಲ. ಕೆಲವರು ಈ ಬಗ್ಗೆ ಕೋಚ್ ಅಟೆಂಡರ್ (Attendant) ಗೆ ದೂರು ನೀಡ್ತಾರೆ. ಆದ್ರೆ ಆ ವ್ಯಕ್ತಿ, ರೈಲಿನಲ್ಲಿ ಹೆಚ್ಚುವರಿ ಬೆಡ್ ಶೀಟ್ ಇಲ್ಲ ಎನ್ನುವ ಕಾರಣ ಹೇಳಿ ಅಥವಾ ಮತ್ತೇನೋ ಕಾರಣ ಹೇಳಿ ಬೆಡ್ ಶೀಟ್ ನೀಡೋದಿಲ್ಲ. ದೀರ್ಘ ಪ್ರಯಾಣದ ಸಮಯದಲ್ಲಿ ಈ ಸಮಸ್ಯೆ ಎದುರಾದ್ರೆ ಪ್ರಯಾಣ ಕಷ್ಟಕರವಾಗಿರುತ್ತದೆ. ಈ ಸಮಯದಲ್ಲಿ ನೀವು ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಿಮ್ಮ ಮುಂದೆ ಕೆಲ ಆಯ್ಕೆಗಳಿವೆ.
ಕಪ್ಪು ಬಣ್ಣದ ಸೂಟ್ ಕೇಸ್ ಪ್ರವಾಸಕ್ಕೆ ಸೂಕ್ತವಲ್ಲ; ಇದ್ರಲ್ಲೇನಿದೆ ಅಂತದ್ದು..?
ನೀವು ಮೊದಲು ಕೋಚ್ ಅಟೆಂಡರ್ ಗೆ ಮನವಿ ಮಾಡಬೇಕು. ಒಂದ್ವೇಳೆ ಅವರಿಂದ ಪರಿಹಾರ ಸಿಕ್ಕಿಲ್ಲ ಎಂದಾದ್ರೆ ನೀವು ರೈಲ್ವೆ ಸಹಾಯವಾಣಿ 139 ಗೆ ಕರೆ ಮಾಡಬೇಕು. ನೀವು ನಿಮ್ಮ ದೂರನ್ನು ಲಿಖಿತವಾಗಿ ನೀಡುವ ಅಗತ್ಯ ಇಲ್ಲಿಲ್ಲ. ಫೋನ್ ನಲ್ಲಿಯೇ ಸಮಸ್ಯೆ ಹೇಳಬೇಕು. ಸಹಾಯವಾಣಿ ಸಿಬ್ಬಂದಿ ಪಿಎನ್ ಆರ್ ಕೇಳುತ್ತಾರೆ. ನಿಮಗೆ ಪಿಎನ್ ಆರ್ ಗೊತ್ತಿಲ್ಲವೆಂದ್ರೆ ನೀವು ರೈಲಿನ ನಂಬರ್ ಹೇಳಿದ್ರೆ ಸಾಕಾಗುತ್ತದೆ. ನೀವು ರೈಲ್ವೆ ಸಹಾಯ ವಾಣಿ ಅಪ್ಲಿಕೇಷನ್ ನಲ್ಲೂ ನಿಮ್ಮ ದೂರನ್ನು ದಾಖಲಿಸಬಹುದು.
ಸೂರ್ಯೋದಕ್ಕೂ ಮುನ್ನ ಎದ್ದು ಈ ಜನ ಪೂರ್ತಿ ಗ್ರಾಮ ಸುತ್ತುತ್ತಾರೆ; ಯಾಕೆ ಗೊತ್ತಾ?
ಪ್ರಯಾಣಿಕರ ಸುರಕ್ಷತೆ,ಅನುಕೂಲವೇ ರೈಲ್ವೆ ಇಲಾಖೆಯ ಮುಖ್ಯ ಉದ್ದೇಶವಾಗಿದೆ. ಹಾಗಾಗಿ ರೈಲ್ವೆ ಸಿಬ್ಬಂದಿ ತಕ್ಷಣ ಇದಕ್ಕೆ ಸ್ಪಂದಿಸುತ್ತಾರೆ. ನಿಮ್ಮ ದೂರನ್ನು ಸಂಬಂಧಪಟ್ಟ ವಲಯ ಮತ್ತು ವಿಭಾಗಕ್ಕೆ ಕಳುಹಿಸಲಾಗುತ್ತದೆ. ರೈಲಿನಲ್ಲಿಯೇ ಹೆಚ್ಚುವರಿ ಬೆಡ್ ಶೀಟ್ ಇದ್ದಲ್ಲಿ ತಕ್ಷಣ ನಿಮಗೆ ಇದನ್ನು ಒದಗಿಸಲಾಗುತ್ತದೆ. ಇಲ್ಲವೆಂದ್ರೆ ತಕ್ಷಣ ಕ್ರಮಕೈಗೊಳ್ಳಲಾಗುತ್ತದೆ.
ಯಾವುದೇ ದೂರನ್ನು ಎರಡು ಗಂಟೆಯೊಳಗೆ ಬಗೆಹರಿಸಬೇಕು. ಇಲ್ಲವೆಂದ್ರೆ ನಿಮ್ಮ ದೂರು ರೈಲ್ವೆ ಸಚಿವಾಲಯವನ್ನು ತಲುಪುತ್ತದೆ. ವಿಳಂಬ ಮಾಡಿದ ಅಧಿಕಾರಿಗಳನ್ನು ಪ್ರಶ್ನಿಸಲಾಗುತ್ತದೆ. ಆದಷ್ಟು ಬೇಗ ಪರಿಹಾರ ಮಾಡುವಂತೆ ಸೂಚನೆ ನೀಡಲಾಗುತ್ತದೆ. ದೂರು, ರೈಲ್ವೆ ಸಚಿವಾಲಯಕ್ಕೆ ಹೋಗದಂತೆ ಅಧಿಕಾರಿಗಳು ಕ್ರಮಕೈಗೊಳ್ಳುತ್ತಾರೆ. ಆದಷ್ಟು ಬೇಗ ಬಗೆಹರಿಸಲು ಪ್ರಯತ್ನಿಸುತ್ತಾರೆ. ರೈಲು ಪ್ರಯಾಣಿಕರು ಯಾವುದೇ ತೊಂದರೆ ಅನುಭವಿಸದಂತೆ ಕ್ರಮಕೈಗೊಳ್ಳುತ್ತಾರೆ.
ಇನ್ಮುಂದೆ ರೈಲು ಪ್ರಯಾಣದ ವೇಳೆ ಸಮಸ್ಯೆ ಆದ್ರೆ ಟೆನ್ಷನ್ ಬೇಡ. ಕೊಳೆಯಾದ, ಒದ್ದೆಯಾದ ಬೆಡ್ ಶೀಟುಗಳನ್ನು ಆರಾಮವಾಗಿ ಬದಲಿಸಿ, ನಿದ್ರೆ ಮಾಡಿ. ನಿಮ್ಮ ಪ್ರಯಾಣವನ್ನು ಸುಖಕರಗೊಳಿಸಿ.