ಜನರಲ್ ಕೋಚ್ ಪ್ರಯಾಣಿಕರ ಪ್ರಯಾಣ ಆರಾಮದಾಯಕಗೊಳಿಸಿದ ಭಾರತೀಯ ರೈಲ್ವೆ
ರೈಲು ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಖುಷಿ ಸುದ್ದಿಯನ್ನು ನೀಡಿದೆ. ಈ ತಿಂಗಳ ಅಂತ್ಯಕ್ಕೆ ಒಂದಿಷ್ಟು ಹೊಸ ಕೋಚ್ ಅಳವಡಿಕೆ ಕೆಲಸ ಪೂರ್ಣಗೊಳ್ಳಲಿದೆ. ಪ್ರಯಾಣಿಕರ ಅನುಕೂಲಕ್ಕೆ ಹೊಸ ಯೋಜನೆಗಳನ್ನು ಇಲಾಖೆ ಜಾರಿಗೆ ತರ್ತಿದೆ.
ಭಾರತೀಯರ ಸಾರಿಗೆ ಜೀವಾಳ ರೈಲು. ಪ್ರತಿ ದಿನ ಲಕ್ಷಾಂತರ ಮಂದಿ ಈ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಾರೆ. ಆರಾಮದಾಯಕ ಪ್ರಯಾಣ ಇದಾಗಿದ್ದರೂ ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ಟಿಕೆಟ್ ಸಿಗೋದು ಕಷ್ಟ. ಇದ್ರಿಂದ ಅನೇಕ ಪ್ರಯಾಣಿಕರು ಅನಾನುಕೂಲತೆ ಎದುರಿಸಿದ್ದಾರೆ. ಅಂತವರಿಗೆ ರೈಲ್ವೆ ಇಲಾಖೆ (Railway Department) ಖುಷಿ ಸುದ್ದಿಯೊಂದನ್ನು ನೀಡಿದೆ. ರೈಲು ಪ್ರಯಾಣಿಕರ ತೊಂದರೆಯನ್ನು ಗಮನಿಸಿರುವ ರೈಲ್ವೆ ಇಲಾಖೆ, ಅವರ ಪ್ರಯಾಣವನ್ನು ಇನ್ನಷ್ಟು ಸುಲಭಗೊಳಿಸಲು ಪ್ರಯಾಣಿಕರಿಗೆ ವಿಶೇಷ ವ್ಯವಸ್ಥೆ ಮಾಡಿದೆ. ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಪ್ರಯಾಣ ಸೌಲಭ್ಯವನ್ನು ಒದಗಿಸಲು 370 ರೈಲುಗಳಲ್ಲಿ 1000 ಹೊಸ ಜನರಲ್ ಕೋಚ್‌ಗಳನ್ನು ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ. ನವೆಂಬರ್ ಅಂತ್ಯದೊಳಗೆ ರೈಲ್ವೆ ಮಂಡಳಿ ಕೋಚ್ ಗಳನ್ನು ಸೇರಿಸುವ ಕೆಲಸವನ್ನು ಪೂರ್ಣಗೊಳಿಸಲಿದೆ. ಈಗಾಗಲೇ ಹಲವು ರೈಲುಗಳಲ್ಲಿ 583 ಜನರಲ್ ಬೋಗಿ (General Coach)ಗಳನ್ನು ಅಳವಡಿಸಲಾಗಿದೆ ಎಂದು ರೈಲ್ವೆ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಉಳಿದ ಬೋಗಿಗಳನ್ನು ಸಂಪರ್ಕಿಸುವ ಪ್ರಕ್ರಿಯೆಯು ದೇಶಾದ್ಯಂತ ಎಲ್ಲಾ ರೈಲ್ವೆ ವಲಯಗಳು ಮತ್ತು ವಿಭಾಗಗಳಲ್ಲಿ ನಡೆಯುತ್ತಿದೆ. ಈ ತಿಂಗಳ ಅಂತ್ಯದೊಳಗೆ ಕೆಲಸ ಪೂರ್ಣಗೊಳ್ಳಲಿದೆ ಎಂದು ರೈಲ್ವೆ ಮಂಡಳಿ ಹಿಡಿಯ ಅಧಿಕಾರಿಗಳು ತಿಳಿಸಿದ್ದಾರೆ. ಹಬ್ಬ, ವರ್ಷಾಂತ್ಯ ಬರ್ತಿದ್ದಂತೆ ಊರಿಗೆ ಹೋಗುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತದೆ. ಎಷ್ಟೇ ಹೆಚ್ಚುವರಿ ಟ್ರೈನ್ ಬಿಟ್ರೂ ಪ್ರಯಾಣಿಕರೆಲ್ಲ ಆರಾಮವಾಗಿ ಊರು ತಲುಪಲು ಸಾಧ್ಯವಾಗ್ತಿಲ್ಲ. 2025ರ ಹೋಳಿಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಮಂಡಳಿ ಈ ಕೆಲಸ ಮಾಡ್ತಿದೆ. ಮುಂದಿನ ವರ್ಷ ಹೋಳಿ ಸಮಯದಲ್ಲಿ ಜನಸಂದಣಿ ತಪ್ಪಿಸುವುದು ರೈಲು ಮಂಡಳಿಯ ಗುರಿಯಾಗಿದೆ.
ಪಿರಿಯಡ್ಸ್ ಟೈಂನಲ್ಲಿ ನಾಗಾ ಸಾಧುಗಳು ಏನು ಮಾಡ್ತಾರೆ?
ರೈಲ್ವೇ ಮಂಡಳಿಯ ಪ್ರಕಾರ, ಮುಂದಿನ ಎರಡು ವರ್ಷಗಳಲ್ಲಿ 10,000 ನಾನ್-ಎಸಿ ಕೋಚ್‌ಗಳನ್ನು ಸೇರಿಸುವ ಯೋಜನೆ ನಡೆಯುತ್ತಿದೆ. ಒಂದ್ವೇಳೆ ಈ ಕೆಲಸ ಪೂರ್ಣವಾದ್ರೆ ಎಂಟು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರತಿದಿನ ಪ್ರಯಾಣಿಸಲು ಸಾಧ್ಯವಾಗುತ್ತದೆ. ಈ ಎಲ್ಲಾ 10,000 ಕೋಚ್‌ಗಳು ಎಲ್ ಹೆಚ್ ಬಿ ವರ್ಗವಾಗಿದ್ದು, ಇದು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಪ್ರಯಾಣಿಕರ ಸೌಕರ್ಯಗಳನ್ನು ಖಾತ್ರಿಗೊಳಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಕ್ಕಳೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತೀರಾ? ಈ ನಿಯಮಗಳನ್ನು ಪಾಲಿಸಿ!
ಪ್ರತಿ ದಿನ ರೈಲ್ವೆ ಮಂಡಳಿ ಪ್ರಯಾಣಿಕರ ಅನುಕೂಲಕ್ಕೆ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರ್ತಿದೆ. ಇತ್ತೀಚೆಗೆ ಹಿರಿಯ ನಾಗರಿಕ ಪ್ರಯಾಣಿಕರಿಗೆ ಕೆಲವು ಹೊಸ ಮತ್ತು ಆಕರ್ಷಕ ಸೌಲಭ್ಯಗಳನ್ನು ಘೋಷಿಸಿದೆ. 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಮತ್ತು 58 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಈ ಹೊಸ ಯೋಜನೆಯ ಲಾಭವನ್ನು ಪಡೆಯಲಿದ್ದಾರೆ. ಈ ಯೋಜನೆಯಡಿ ಬರುವ ಹಿರಿಯ ನಾಗರಿಕರಿಗೆ ಲೋವರ್ ಬರ್ತ್ ಮೀಸಲಾತಿಗೆ ಆದ್ಯತೆ ನೀಡಲಾಗುತ್ತಿದೆ. ರೈಲಿನಲ್ಲಿ ವೈದ್ಯಕೀಯ ಸೌಲಭ್ಯ, ತುರ್ತು ವೈದ್ಯಕೀಯ ನೆರವು ನೀಡಲಾಗುವುದು. ಆಹಾರ ಸೇವಾ ಸೌಲಭ್ಯದಡಿ, ಪ್ರಯಾಣಿಕರು ಕುಳಿತಲ್ಲಿಯೇ ಆಹಾರವನ್ನು ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ದೊಡ್ಡ ಮತ್ತು ಅನುಕೂಲಕರ ಶೌಚಾಲಯಕ್ಕೆ ಮಹತ್ವ ನೀಡಲಾಗಿದೆ. ಪ್ರತಿ ಸೀಟಿನ ಬಳಿ ಮೊಬೈಲ್ ಚಾರ್ಜಿಂಗ್ ಪಾಯಿಂಟ್ ನೀಡಲು ಗಮನ ಹರಿಸಲಾಗುತ್ತಿದೆ. ಹಿರಿಯ ನಾಗರಿಕ ಪ್ರಯಾಣಿಕರಿಗೆ ನೆರವಾಗಲು ನಿಲ್ದಾಣದಲ್ಲಿ ವಿಶೇಷ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಅವರು ಪ್ರಯಾಣಿಕರ ಲಗೇಜ್ ಎತ್ತಿ, ಇಳಿಸುವಲ್ಲಿ ಸಹಾಯ ಮಾಡಲಿದ್ದಾರೆ.