16 ದೇಶ, 59 ದಿನ ಡ್ರೈವಿಂಗ್; ತಾಯಿ ಭೇಟಿಗೆ ಲಂಡನ್‌ನಿಂದ ಮುಂಬೈಗೆ ಕಾರಿನಲ್ಲಿ ಬಂದ ಮಗ!
ಸತತ 59 ದಿನ, ಬರೋಬ್ಬರಿ 18,300 ಕಿಲೋಮೀಟರ್, 16 ದೇಶಗಳನ್ನು ದಾಟಿ ಲಂಡನ್‌ನಿಂದ ಮುಂಬೈಗೆ ಕಾರಿನ ಮೂಲಕ ಆಗಮಿಸಿದ್ದಾರೆ. ತಾಯಿ ಭೇಟಿ ಮಾಡಲು ಮಗ ಮಾಡಿದ ಸಾಹಸಕ್ಕೆ ದಾಖಲೆ ನಿರ್ಮಾಣವಾಗಿದೆ.
ಮಂಬೈ(ಜೂ.24) ವಿದೇಶದಲ್ಲಿರುವ ಭಾರತೀಯರು ತವರಿಗೆ ವಿಮಾನದ ಮೂಲಕ ಮರಳುತ್ತಾರೆ. ಇದು ಸಾಮಾನ್ಯ. ಆದರೆ ಮುಂಬೈನಲ್ಲಿ ನೆಲೆಸಿರುವ ತನ್ನ ತಾಯಿಯನ್ನು ಭೇಟಿ ಮಾಡಲು ಲಂಡನ್‌ನಿಂದ ಮುಂಬೈಗೆ ಕಾರಿನ ಮೂಲಕ ಆಗಮಿಸಿದ ಘಟನೆ ನಡೆದಿದೆ. ಎಸ್‌ಯುವಿ ಕಾರನ್ನು ಲಂಡನ್‌ನಿಂದ ಆರಂಭಿಸಿ 16 ದೇಶಗಳನ್ನು ದಾಟಿಕೊಂಡು 18,300 ಕಿಲೋಮೀಟರ್ ಸಾಗಿ ಮುಂಬೈನ ಥಾಣೆಗೆ ಆಗಮಿಸಿದ್ದಾನೆ. ಲಂಡನ್‌ನಿಂದ ಮಂಬೈಗೆ ಆಗಮಿಸಿ ಈತ 59 ದಿನ ತೆಗೆದುಕೊಂಡಿದ್ದಾನೆ. ತಾಯಿ ಭೇಟಿಗೆ ಆಗಮಿಸಿದ ಈತ ಇದೀಗ ಹೊಸ ಮೈಲಿಗಲ್ಲು ನಿರ್ಮಿಸಿದ್ದಾನೆ.
ವಿರಾಜಿತ್ ಮುಂಗಾಲೆ ಮೂಲ ಮುಂಬೈ ಆಗಿದ್ದರೂ ಸದ್ಯ ಬ್ರಿಟಿಷ್ ಪ್ರಜೆಯಾಗಿದ್ದಾರೆ. ಆದರೆ ವಿರಾಜಿತ್ ತಾಯಿ ಹಾಗೂ ಕುಟುಂಬಸ್ಥರು ಮುಂಬೈನ ಥಾಣೆಯಲ್ಲಿ ನೆಲೆಸಿದೆ. ಲಂಡನ್‌ನಲ್ಲಿರುವ ವಿರಾಜಿತ್ ತಾಯಿ, ಕುಟುಂಬಸ್ಥರು ಹಾಗೂ ಆಪ್ತರ ಭೇಟಿಗೆ ಮುಂಬೈಗೆ ಮರಳುವುದು ಹೊಸದೇನಲ್ಲ. ಆದರೆ ಈ ಬಾರಿ ಕಾರು ಡ್ರೈವ್ ಮಾಡಿಕೊಂಡು ಬಂದು ಎಲ್ಲರ ಗಮನಸೆಳೆದಿದ್ದಾರೆ.
ಇದು ಭೂಮಿ ಮೇಲಿನ ಕೊನೆಯ ದೇಶ… ಇಲ್ಲಿ ಸೂರ್ಯ ಅಸ್ತಮಿಸೋದು ಕೇವಲ 40 ನಿಮಿಷ ಮಾತ್ರ!
ಎಪ್ರಿಲ್ 20ಕ್ಕೆ ಲಂಡನ್‌ನಿಂದ ಪ್ರಯಾಣ ಆರಂಭಿಸಿದ ವಿರಾಜಿತ್ ಜೂನ್ 17ರಂದು ಥಾಣೆಯಲ್ಲಿರುವ ಮನೆಗೆ ತಲುಪಿದ್ದಾರೆ. ಯುಕೆಯಿಂದ ಫ್ರಾನ್ಸ್, ಜರ್ಮನಿ, ಬೆಲ್ಜಿಯಂ ಪೊಲೆಂಡ್, ಲಿಥೌನಿಯಾ, ಲ್ಯಾಟ್ವಿಯಾ, ಎಸ್ಟೊನಿಯಾ, ರಷ್ಯಾ, ಉಝಬೆಕಿಸ್ತಾನ, ಕ್ರೈಗಿಸ್ತಾನ್, ಚೀನಾ, ಟಿಬೆಟ್, ನೇಪಾಳ ಮೂಲಕ ಭಾರತ ಪ್ರವೇಶಿಸಿದ್ದಾರೆ. ಬಳಿಕ ಮುಂಬೈ ತಲುಪಿದ್ದಾರೆ. ಲಂಡನ್‌ನಿಂದ ನೇಪಾಳದವರಗೆ ನೇಪಾಳಿ ಪ್ರಜೆ ರೋಶನ್ ಶ್ರೇಷ್ಠ ಕೂಡ ಇದೇ ಕಾರಿನಲ್ಲಿ ಆಗಮಿಸಿದ್ದಾರೆ.
ಲಂಡನ್‌ನಿಂದ ಭಾರತಕ್ಕೆ ಕಾರಿನ ಮೂಲಕ ಪ್ರಯಾಣ ಮಾಡಲು ನಿರ್ಧರಿಸಿದ ಮಂಗಾಲೆ, ಇದಕ್ಕೂ ಮೊದಲು ಈ ಸಾಹಸ ಮಾಡಿದ ಕೆಲವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಹೀಗಾಗಿ ಖುದ್ದಾಗಿ ಪ್ಲಾನ್ ಮಾಡಿದೆ. ಮಾರ್ಗಗಳ ಕುರಿತು ಪರಿಶೀಲನೆ ನಡೆಸಿ ಮಾರ್ಗ ಅಂತಿಮಗೊಳಿಸಿದ್ದೇನೆ. ಪತ್ನಿ ಜೊತೆ ಈ ಪ್ಲಾನ್ ಹೇಳಿಕೊಂಡಾಗ ನಕ್ಕು ಸುಮ್ಮನಾಗಿದ್ದಳು. ಆದರೆ ನನ್ನ ಸಿದ್ಧತೆ ನೋಡಿ ಪ್ಲಾನ್ ಗಂಭೀರವಾಗಿದೆ ಎಂದು ಅರ್ಥಮಾಡಿಕೊಂಡಳು. ಕೋವಿಡ್ ಮೊದಲು ಈ ರೀತಿ ರೋಡ್ ಟ್ರಿಪ್ ಪ್ಲಾನ್ ಮಾಡಿದ್ದೆ. ಆದರೆ ಸಾಧ್ಯವಾಗಲಿಲ್ಲ ಎಂದು ಮುಂಗಾಲೆ ಹೇಳಿದ್ದರೆ.
ಹಲವು ದೇಶ, ಪ್ರಕೃತಿಯ ಸುಂದರ ತಾಣಗಳು, ಹೊಸ ಜನ, ಹೊಸ ಪಟ್ಟಣ, ಕಡಿದಾದ ರಸ್ತೆಗಳನ್ನು ದಾಟಿ ಮನೆಗೆ ಮರಳಿದ್ದೇನೆ. ಸಂಪೂರ್ಣ ಪ್ರಯಾಣ ಅತ್ಯಂತ ಖುಷಿ ನೀಡಿದೆ. ಎಲ್ಲಾ ದೇಶಗಳಲ್ಲಿ ಪ್ರವೇಶ ಪ್ರಕ್ರಿಯೆಗಳು ಯಾವುದೇ ಅಡಚಣೆ ಇಲ್ಲದೆ ನಡೆಯಿತು ಎಂದು ಮಂಗಾಲೆ ಹೇಳಿದ್ದಾರೆ.
ಅತೀ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ದೇಶದ ಪಟ್ಟಿ ಬಿಡುಗಡೆ, ಭಾರತಕ್ಕೆ ಎಷ್ಟನೇ ಸ್ಥಾನ?