Asianet Suvarna News Asianet Suvarna News

Barwaan Kala Bihar: ಬ್ರಹ್ಮಚಾರಿಗಳಿಂದ ತುಂಬಿ ಹೋಗಿದೆ ಈ ಹಳ್ಳಿ, ಇರೋದೆಲ್ಲಿ?

ಮದುವೆ ವಯಸ್ಸಿಗೆ ಬರ್ತಿದಂತೆ ತಂದೆ – ತಾಯಿ ಮಕ್ಕಳಿಗೆ ಸಂಗಾತಿ ಹುಡುಕುವ ಪ್ರಯತ್ನ ನಡೆಸ್ತಾರೆ. ಆದ್ರೆ ಈ ಗ್ರಾಮದಲ್ಲಿ ಎಷ್ಟೇ ಹುಡುಕಾಟ ನಡೆಸಿದ್ರೂ ಹುಡುಗಿ ಸಿಗೋದಿಲ್ಲ. ಹಾಗಾಗಿ ಗ್ರಾಮದ ಬಹುತೇಕ ಮಂದಿ ಇನ್ನೂ ಬ್ರಹ್ಮಚಾರಿಯಾಗೇ ಉಳಿದಿದ್ದಾರೆ.
 

India Village Of Bachelor In Bihar
Author
First Published Mar 20, 2023, 3:58 PM IST

ಈಗಿನ ದಿನಗಳಲ್ಲಿ ಒಳ್ಳೆ ಸಂಬಳದಲ್ಲಿರುವ ವ್ಯಕ್ತಿಗೆ ಮದುವೆಯಾಗೋದೆ ಕಷ್ಟವಾಗಿದೆ. ಗಂಡು ಮಕ್ಕಳಿಗೆ ಹೋಲಿಕೆ ಮಾಡಿದ್ರೆ ಹೆಣ್ಣುಮಕ್ಕಳ ಸಂಖ್ಯೆ ತುಂಬಾ ಕಡಿಮೆಯಿದೆ. ಅಲ್ಲದೆ ವಿದ್ಯಾವಂತ ಹೆಣ್ಮಕ್ಕಳು ಒಳ್ಳೆ ನೌಕರಿಯಲ್ಲಿದ್ದು, ದೊಡ್ಡ ಸಂಬಳ ಪಡೆಯುತ್ತಿದ್ದಾರೆ. ಹಳ್ಳಿಗಳಲ್ಲಿ ಕೆಲಸ ಮಾಡಲು ಕೆಲ ಹುಡುಗಿಯರು ಒಪ್ಪುತ್ತಿಲ್ಲ. ಇನ್ನೂ ಅನೇಕ ಕಾರಣಕ್ಕೆ ಯುವಕರಿಗೆ ಮದುವೆಯಾಗೋದು ಕಷ್ಟವಾಗಿದೆ. ಅದ್ರಲ್ಲೂ ಹಳ್ಳಿಯಲ್ಲಿರುವ ಹುಡುಗರಿಗೆ ಮದುವೆ ಅಂದ್ರೆ ಅದು ಅಪರೂಪ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಭಾರತ (India) ದ ಅದೆಷ್ಟೂ ಹಳ್ಳಿಗಳಲ್ಲಿ ಇನ್ನೂ ಮದುವೆ (Marriage) ಯಾಗದ ಅನೇಕ ಹುಡುಗರಿದ್ದಾರೆ. ವರ್ಷಕ್ಕೆ ಒಂದೋ ಎರಡೋ ಮದುವೆ ನಡೆಯುತ್ತಿರುತ್ತದೆ. ಆದ್ರೆ ಅಲ್ಲೊಂದು ಹಳ್ಳಿಯಲ್ಲಿ ಮದುವೆ ನಡೆಯದೆ ಅದೆಷ್ಟೋ ವರ್ಷವಾಗಿದೆ. ಆ ಹಳ್ಳಿ (village) ಯಾವುದು, ಅಲ್ಲಿ ಮದುವೆ ನಡೆಯದೆ ಇರಲು ಕಾರಣವೇನು ಎಂಬುದನ್ನು ನಾವಿಂದು ನಿಮಗೆ ಹೇಳ್ತೇವೆ.

ಕರ್ನಾಟಕದ ಏಳು ಅದ್ಭುತಗಳ ಪಟ್ಟಿಯಲ್ಲಿ ಶ್ರವಣಬೆಳಗೊಳದ ಗೊಮ್ಮಟೇಶ್ವರ...

ಇದು ಬ್ರಹ್ಮಚಾರಿಗಳ ಹಳ್ಳಿ : ಪಾಟ್ನಾದಿಂದ 300 ಕಿಲೋಮೀಟರ್ ದೂರದಲ್ಲಿರುವ, ಕೈಮೂರ್ ಜಿಲ್ಲೆಯ ತೆಹಸಿಲ್ ಅಧೌರಾದ ಬರ್ವಾನ್ ಕಾಲಾ ಗ್ರಾಮ. ಇದನ್ನು ಬ್ರಹ್ಮಚಾರಿಗಳ ಊರು ಎಂದೇ ಕರೆಯಲಾಗುತ್ತದೆ. ಇಲ್ಲಿ ಮಂಗಳ ವಾದ್ಯ ಮೊಳಗಿ ಎಷ್ಟೋ ವರ್ಷ ಕಳೆದಿದೆ. ಇಲ್ಲಿನ ಹುಡುಗರು ಬ್ರಹ್ಮಚರ್ಯ ಪಾಲಿಸಬೇಕೆಂಬ ನಿಯಮವೇನೂ ಇಲ್ಲ. ಹಾಗೆ ಅವರು ಬ್ರಹ್ಮಚಾರಿಯಾಗ್ಬೇಕೆಂದು ನಿರ್ಧರಿಸಿಲ್ಲ. ಈ ಹಳ್ಳಿಯ ಹುಡುಗರು ಮದುವೆಯಾಗಲು ಇಷ್ಟಪಡ್ತಿದ್ದಾರೆ. ಆದ್ರೆ ಮದುವೆಯಾಗೋಕೆ ಹೆಣ್ಮಕ್ಕಳು ಸಿಗ್ತಿಲ್ಲ. ಇಲ್ಲಿ ಸುಮಾರು 121 ಪುರುಷರಿಗೆ ಇನ್ನೂ ಮದುವೆಯಾಗಿಲ್ಲ. 

2017ರಲ್ಲಿ ನಡೆದಿತ್ತು ಮದುವೆ : ಈ ಊರಿನ ಹುಡುಗನನ್ನು ಮದುವೆಯಾಗಲು ಸುತ್ತಮುತ್ತಲ ಊರಿನ ಹುಡುಗಿಯರು ಹಿಂದೇಟು ಹಾಕ್ತಾರೆ. ಸುಮಾರು 50 ವರ್ಷಗಳಿಂದ ಯಾವುದೇ ಮದುವೆ ನಡೆದಿರಲಿಲ್ಲವಂತೆ. ಆದ್ರೆ 2017ರಲ್ಲಿ ಇಲ್ಲಿ ಮದುವೆ ನಡೆದಿತ್ತು ಎನ್ನಲಾಗಿದೆ. ಮದುವೆಯಾಗೋದು ಸುಲಭವಲ್ಲ. ಹುಡುಗ ಮದುವೆಗೆ ಮುನ್ನವೇ ಗ್ರಾಮವನ್ನು ತೊರೆಯಬೇಕು. ಯಾವುದಾದ್ರೂ ಗೆಸ್ಟ್ ಹೌಸಿನಲ್ಲಿ ಉಳಿದುಕೊಳ್ಳಬೇಕು. ಯಾಕೆಂದ್ರೆ ಈ ಗ್ರಾಮದಲ್ಲಿ ಮದುವೆಗೆ ಅವಶ್ಯವಿರುವ ಸೌಲಭ್ಯವಿಲ್ಲ. 2017ರ  ನಂತ್ರ ಯಾವುದೇ ಮದುವೆ ಇಲ್ಲಿ ನಡೆದಿಲ್ಲ. ಬಹಳ ವರ್ಷಗಳ ನಂತರ ಅಲ್ಲಿ ಮೊದಲ ಮದುವೆ ನಡೆದ ಕಾರಣ ವರನ ಸ್ವಾಗತವು ಹೀರೋಗಿಂತ ಕಡಿಮೆಯಿರಲಿಲ್ಲ. ಗ್ರಾಮಸ್ಥರು ಗುಡ್ಡ-ಕಾಡು ಕಡಿದು 6 ಕಿ.ಮೀ ರಸ್ತೆ ಮಾಡಿ, ಮದುವೆಗೆ ತಯಾರಿ ನಡೆಸಿದ್ದರು.  

ಮಾನ್ಸೂನ್ ಆರಂಭವಾಗೋ ಮೊದ್ಲು ಪಶ್ಚಿಮ ಘಟ್ಟದ ಈ ಸುಂದರ ತಾಣಗಳನ್ನೊಮ್ಮೆ ನೋಡಿ…

ಹುಡುಗರ ಮದುವೆ ಯಾಕೆ ಆಗಲ್ಲ ಗೊತ್ತಾ? : ಈ ಹಳ್ಳಿಯ ಹುಡುಗರು ಮದುವೆಯಾಗದೆ ಇರೋದಕ್ಕೆ ಅನೇಕ ಕಾರಣವಿದೆ. ಈ ಗ್ರಾಮವನ್ನು ಬಿಹಾರದ ಹಿಂದುಳಿದ ಹಾಗೂ ಅವಿವಾಹಿತ ಗ್ರಾಮವೆಂದು ಪರಿಗಣಿಸಲಾಗಿದೆ. ದೇಶ ಇಷ್ಟು ಮುಂದುವರೆದ್ರೂ ಇಲ್ಲಿ ಮಾತ್ರ ಸರಿಯಾದ ಮೂಲಸೌಕರ್ಯವಿಲ್ಲ. ಈ ಗ್ರಾಮದಲ್ಲಿ ಸರಿಯಾದ ರಸ್ತೆ ವ್ಯವಸ್ಥೆಯಿಲ್ಲ. ಗ್ರಾಮಕ್ಕೆ ಬರಲು 2 ಕಿ.ಮೀ ನಡೆಯಬೇಕು.ಹಾಗಾಗಿ ಇಲ್ಲಿಗೆ ಹೋಗಲು ಹರಸಾಹಸ ಮಾಡ್ಬೇಕು. ಸರಿಯಾಗಿ ಶಾಲೆಯಿಲ್ಲ, ಶಿಕ್ಷಣ ವ್ಯವಸ್ಥೆ ಸರಿಯಾಗಿಲ್ಲ. ಇಲ್ಲಿನ ಜನರ ಆರ್ಥಿಕ ಸ್ಥಿತಿ ತುಂಬಾ ಕೆಳಮಟ್ಟದಲ್ಲಿದೆ. ಇಲ್ಲಿ ಕುಡಿಯುವ ನೀರಿಗೂ ಸರಿಯಾದ ವ್ಯವಸ್ಥೆಯಿಲ್ಲ. ನೀರು ತುಂಬಿಸಿಕೊಳ್ಳಲು ಇಲ್ಲಿನ ಜನರು 1.5 ಕಿಲೋಮೀಟರ್ ನಡೆಯಬೇಕಾಗಿದೆ. ಹಳ್ಳಿಯಿಂದ ಪೊಲೀಸ್ ಸ್ಟೇಷನ್ 45 ಕಿಲೋಮೀಟರ್ ದೂರದಲ್ಲಿದೆ. ಈ ಎಲ್ಲ ಕಾರಣಗಳಿಂದಾಗಿ ಇಲ್ಲಿನ ಹುಡುಗರಿಗೆ ಮದುವೆಯಾಗ್ತಿಲ್ಲ.

ಸರ್ಕಾರದ ಜವಾಬ್ದಾರಿ : ಇಂಥ ಹಿಂದುಳಿದ ಗ್ರಾಮವನ್ನು ಪತ್ತೆ ಮಾಡಿ, ಅವರಿಗೆ ಮೂಲಭೂತ ಸೌಲಭ್ಯ ನೀಡುವುದು ಸರ್ಕಾರದ ಜವಾಬ್ದಾರಿ. ಆದ್ರೆ ಬಿಹಾರ ಸರ್ಕಾರ ಇದನ್ನು ಮರೆತಂತಿದೆ. ಅದು ಜನರನ್ನು ಜಾಗೃತಿಗೊಳಿಸುವ, ಮೂಲ ಸೌಲಭ್ಯ ನೀಡುವ ಯಾವುದೇ ಕೆಲಸವನ್ನು ಮಾಡ್ತಿಲ್ಲ.  

Follow Us:
Download App:
  • android
  • ios