ಮಾನ್ಸೂನ್ ಆರಂಭವಾಗೋ ಮೊದ್ಲು ಪಶ್ಚಿಮ ಘಟ್ಟದ ಈ ಸುಂದರ ತಾಣಗಳನ್ನೊಮ್ಮೆ ನೋಡಿ…
ನಿಮಗೂ ಪಶ್ಚಿಮ ಘಟ್ಟಗಳ ಸೌಂದರ್ಯ ನೋಡೋದು ಅಂದ್ರೆ ತುಂಬಾ ಇಷ್ಟಾನಾ? ಆದ್ರೆ ಮಳೆಗಾಲದಲ್ಲಿ ಹೋದ್ರೆ ಮಾತ್ರ ಚೆಂದ ಅಂತಾ ಹೆಚ್ಚಿನವರು ಹೇಳಿರೋದನ್ನು ಕೇಳಿ, ನೀವು ಸಹ ಅಲ್ಲಿಗೆ ಹೋಗದೇ ಸುಮ್ಮನೆ ಕುಳಿತಿದ್ದೀರಾ? ಬೇಡ… ಈವಾಗ್ಲೇ ಪ್ಲ್ಯಾನ್ ಮಾಡಿ. ಈ ಮಳೆಗಾಲ ಆರಂಭವಾಗುವ ಮುನ್ನ ನೀವು ಇವುಗಳಲ್ಲಿ ಒಂದು ತಾಣಕ್ಕಾದರೂ ಹೋಗ್ ಬನ್ನಿ.
ಇದನ್ನು ಒಪ್ಪಿಕೊಳ್ಳಲು ಕಷ್ಟವಾಗಬಹುದು ಆದರೆ ಮಳೆ ಬರುತ್ತೆ (rainy season) ಅನ್ನೋ ಸೂಚನೆ ಸಿಕ್ಕ ಕೂಡಲೇ ರಜಾದಿನಗಳ ಯೋಜನೆಗಳನ್ನು ರದ್ದುಗೊಳಿಸುವ ಹಲವಾರು ಪ್ರಯಾಣಿಕರು ನಮ್ಮಲ್ಲಿದ್ದಾರೆ. ಮಾನ್ಸೂನ್ ಪ್ರಯಾಣವು ಎಲ್ಲರಿಗೂ ಇಷ್ಟವಾಗೋದಿಲ್ಲ. ಪಶ್ಚಿಮ ಘಟ್ಟಗಳು (western ghats) ದೀರ್ಘಕಾಲದವರೆಗೆ ಸಾಕಷ್ಟು ಮಳೆಯನ್ನು ಪಡೆಯುತ್ತದೆ. ಮಳೆಯ ಕಾರಣದಿಂದಾಗಿ ನೀವು ಈ ಪ್ರದೇಶವನ್ನು ನೋಡದೇ ಇದ್ದರೆ, ಮಳೆ ಬರುವ ಮೊದಲು ಪಶ್ಚಿಮ ಘಟ್ಟಗಳ ರಜಾದಿನವನ್ನು ಪ್ಲ್ಯಾನ್ ಮಾಡಿ.
ನೀವು ನೋಡಬಹುದಾದ ಪಶ್ಚಿಮ ಘಟ್ಟಗಳ ಕೆಲವು ಸುಂದರ ತಾಣಗಳು ಇಲ್ಲಿವೆ. ಈ ತಾಣಗಳಿಗೆ ನೀವು ಖಂಡಿತವಾಗಿಯೂ ಈ ಬಾರಿ ಸಮ್ಮರ್ ವೆಕೇಶನ್ ಗೆ (summer vacation) ಟೂರ್ ಪ್ಲ್ಯಾನ್ ಮಾಡಬಹುದು., ಏಕೆಂದರೆ ಮಳೆ ಬಹಳ ದೂರದಲ್ಲಿದೆ ಮತ್ತು ವರ್ಷದ ಈ ಸಮಯದಲ್ಲಿ ಪ್ರಕೃತಿಯು ತುಂಬಾ ಅದ್ಭುತವಾಗಿರುತ್ತೆ. ಹಾಗಿದ್ರೆ ಈವಾಗ್ಲೆ ಪ್ಲ್ಯಾನ್ ಮಾಡ್ತೀರಿ ಅಲ್ವಾ?
ಆಗುಂಬೆ, ಕರ್ನಾಟಕ (Agumbe Karnataka)
ಆಗುಂಬೆಯನ್ನು ದಕ್ಷಿಣ ಭಾರತದ ಚಿರಾಪುಂಜಿ ಎಂದೂ ಕರೆಯುತ್ತಾರೆ. ಆದರೆ ಚಿಂತಿಸಬೇಡಿ, ಮಾನ್ಸೂನ್ ಈಗ ಬಹಳ ದೂರದಲ್ಲಿದೆ. ನೀವು ಇಲ್ಲಿ ಅರಣ್ಯವನ್ನು ಅನ್ವೇಷಿಸಬಹುದು ಮತ್ತು ಈ ಪ್ರದೇಶದ ಹಳ್ಳಿಗಳ ಸೌಂದರ್ಯದಲ್ಲಿ ಕಳೆದು ಹೋಗಬಹುದು. ಆಗುಂಬೆಯಲ್ಲಿದ್ದಾಗ ಪ್ರಕೃತಿ ಮತ್ತು ಸಾಂಸ್ಕೃತಿಕ ಅನುಭವಗಳನ್ನು ನೀವು ಪಡೆಯಬಹುದು. ಇದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿದೆ.
ವಟ್ಟಕನಾಲ್, ತಮಿಳುನಾಡು (Vattakanal, Tamilnadu)
ವಟ್ಟಕನಾಲ್ ಗ್ರಾಮವು ಕೊಡೈಕೆನಾಲ್ ನಲ್ಲಿದೆ. ಇದು ಈ ಪ್ರದೇಶದಲ್ಲಿ ನೀವು ಕಾಣುವ ಅತ್ಯಂತ ರಮಣೀಯ ಸ್ಥಳಗಳಲ್ಲಿ ಒಂದಾಗಿದೆ. ಈ ಸ್ಥಳದ ಹಸಿರು ಮನಸ್ಸಿಗೆ ಮುದ ನೀಡುತ್ತದೆ, ಜೊತೆಗೆ ನೆಮ್ಮದಿಯನ್ನು ಸಹ ನೀಡುತ್ತೆ.. ನೀವು ಪ್ರಯತ್ನಿಸಬಹುದಾದ ಸುಂದರವಾದ ಹೋಮ್ ಸ್ಟೇಗಳಿವೆ.
ಪೊನ್ಮುಡಿ, ಕೇರಳ (Punmudi, Kerala)
ಪೊನ್ಮುಡಿ ತಿರುವನಂತಪುರಂನಲ್ಲಿದೆ ಮತ್ತು ಇಲ್ಲಿನ ಗಿರಿಧಾಮವು ಅಷ್ಟೇ ಸುಂದರವಾಗಿದೆ. ಪ್ರಕೃತಿಯನ್ನು ಸಂಪೂರ್ಣವಾಗಿ ಎಂಜಾಯ್ ಮಾಡಲು ನೀವು ಇಲ್ಲಿಗೆ ಬನ್ನಿ ಮತ್ತು ಇಲ್ಲಿ ವಾಸಿಸುವ ಪಕ್ಷಿಗಳು ಮತ್ತು ಚಿಟ್ಟೆಗಳನ್ನು ನೋಡುತ್ತಾ ಎಂಜಾಯ್ ಮಾಡಿ. ಬೆಟ್ಟಗಳು ಮತ್ತು ಜಲಪಾತಗಳು ಇಲ್ಲಿ ನಿಮಗೆ ಅದ್ಭುತ ಅನುಭವ ನೀಡುತ್ತೆ.
ಪೊಲ್ಲಾಚಿ, ತಮಿಳುನಾಡು (Pollachi, Tamilnadu)
ಪೊಲ್ಲಾಚಿಯಲ್ಲಿರುವಾಗ ಅಣ್ಣಾಮಲೈ ಬೆಟ್ಟಗಳು ಮತ್ತು ಸುಂದರವಾದ ಚಹಾ ತೋಟಗಳ ಆನಂದ ಪಡೆಯಿರಿ. ಇದು ಕೊಯಮತ್ತೂರು ಜಿಲ್ಲೆಯಲ್ಲಿದೆ ಮತ್ತು ನೀವು ಕಿಕ್ಕಿರಿದ ಊಟಿ ಮತ್ತು ಕೊಡೈಕೆನಾಲ್ ಇಷ್ಟಪಡದೇ ಇದ್ದರೆ, ಪೊಲ್ಲಾಚಿ ನಿಮಗೆ ಉತ್ತಮ ಆಯ್ಕೆಯಾಗಿದೆ.
ಚೋರ್ಲಾ ಘಾಟ್ಸ್, ಗೋವಾ (Chorla Ghats, Goa)
ಚೋರ್ಲಾ ಘಟ್ಟಗಳು ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ ಭೇಟಿಯಾಗುವ ಸ್ಥಳವಾಗಿದೆ. ಇದು ಗೋವಾದ ಪಶ್ಚಿಮ ಘಟ್ಟಗಳ ಒಂದು ಭಾಗವಾಗಿದೆ. ಸಾಮಾನ್ಯವಾಗಿ ಗೋವಾ ಎಂದರೆ, ಬೀಚ್, ಮರಳು ಮಾತ್ರ ಎಂದು ನೀವು ಭಾವಿಸಿದರೆ, ನೀವು ಒಮ್ಮೆ ಚೋರ್ಲಾ ಘಾಟ್ ನೋಡಿ. ಇದು ಅತ್ಯಂತ ಸುಂದರ ಪ್ರದೇಶವಾಗಿದೆ.