Asianet Suvarna News Asianet Suvarna News

Monsoon Travel: ಜೂನ್ ತಿಂಗಳಿನಲ್ಲಿ ಹೋಗಬಹುದಾದ ಸುಂದರ ತಾಣಗಳಿವು

ಜೂನ್ ತಿಂಗಳು ಶುರುವಾಗ್ತಿದ್ದಂತೆ ಮಳೆಗಾಲ ಶುರುವಾಗುತ್ತೆ. ಕೆಲ ಕಡೆ ಬಿಸಿಲಿದ್ರೆ ಮತ್ತೆ ಕೆಲವಡೆ ಮಳೆ ಹನಿ, ಭೂಮಿಯನ್ನು ತಂಪುಗೊಳಿಸಿರುತ್ತೆ. ಈ ಸಮಯದಲ್ಲಿ ಪ್ರವಾಸಕ್ಕೆ ಹೋಗುವ ಪ್ಲಾನ್ ಇದ್ರೆ ಇಲ್ಲೆಲ್ಲ ಓಡಾಡ್ಬಹುದು. 
 

Holiday Destinations In June
Author
First Published Jun 3, 2023, 4:06 PM IST

ದೊಡ್ಡವರಿಗೆ ಕೆಲಸದ ನಡುವೆ ಸಣ್ಣ ವಿಶ್ರಾಂತಿ ನೀಡುವ ಪ್ರವಾಸ ಮಕ್ಕಳಿಗೆ ಹೆಚ್ಚಿನ ಖುಷಿ ಮತ್ತು ಹೊಸ ಅನುಭವವನ್ನು ನೀಡುತ್ತದೆ. ಅದರಲ್ಲೂ ಜೂನ್ ತಿಂಗಳಿನಲ್ಲಿ ಪ್ರವಾಸಕ್ಕೆ ಹೋಗುವ ಖುಷಿ ವಿಭಿನ್ನವಾಗಿರುತ್ತದೆ. ಸಣ್ಣ ಸಣ್ಣ ಮಳೆಯಿಂದ ಭೂಮಿ ಕೊಂಚ ಹಸಿರಾಗಿರುವ ಈ ಸಮಯದಲ್ಲಿ ಹೊರಗಿನ ಪರಿಸರ ನೋಡಲು ಬಹಳ ಸುಂದರವಾಗಿರುತ್ತದೆ. ಹಾಗೊಮ್ಮೆ ಬಿಸಿಲಿನ ವಾತಾವರಣವಿದ್ದರೂ ಕೂಡ ಪರ್ವತ ಪ್ರದೇಶಗಳಿಗಾಗಲೀ ಅಥವಾ ಕಡಿಮೆ ತಾಪಮಾನವಿರುವ ಪ್ರವಾಸಿತಾಣಗಳಿಗೆ ಭೇಟಿ ನೀಡಬಹುದು. 

ಜೂನ್ (June) ತಿಂಗಳಿನಲ್ಲಿ ಪರ್ವತ ಪ್ರದೇಶಗಳಿಗೆ ಹೋಗುವುದು ಸೂಕ್ತ. ಏಕೆಂದರೆ ಅಲ್ಲಿನ ವಾತಾವರಣ (Weather) ಹೆಚ್ಚು ತಂಪಾಗಿರುತ್ತದೆ. ಹಾಗಾಗಿ ಡಾರ್ಜಲಿಂಗ್, ಇಂದೋರ್, ಮೌಂಟ್ ಅಬು, ಹಿಮಾಚಲ ಪ್ರದೇಶದ ಗಿರಿಧಾಮಗಳಿಗೆ ಕುಟುಂಬ ಅಥವಾ ಗೆಳೆಯರ ಜೊತೆ ಜೂನ್ ನಲ್ಲಿ ಪ್ರವಾಸಕ್ಕೆ ಹೋಗಬಹುದು.

Foreign Trip ಮಾಡಬೇಕಾ? ರೈಲಲ್ಲೇ ಭೇಟಿ ನೀಡಬಹುದು ಈ ದೇಶಗಳಿಗೆ!

ಜೂನ್ ನಲ್ಲಿ ಹೋಗ್ಬಹುದಾದ ಪ್ರವಾಸಿ ಸ್ಥಳ : 
ಜೂನ್-ಜುಲೈ ನಲ್ಲಿ ಡಾರ್ಜಿಲಿಂಗ್ (Darjeeling) ಪ್ರವಾಸ :
ಪಶ್ಚಿಮ ಬಂಗಾಳದ ಸುಂದರ ಪ್ರವಾಸಿ ತಾಣವಾದ ಡಾರ್ಜಿಲಿಂಗ್ ಗೆ ತೆರಳಲು ಜೂನ್ ಜುಲೈ ಸಮಯ ಸೂಕ್ತವಾಗಿದೆ. ಇಲ್ಲಿ  ಟೈಗರ್ ಹಿಲ್ಸ್, ಪೀಸ್ ಪೈಗೋಡ, ಭೌದ್ಧ ಯಾತ್ರಾ ಸ್ಥಳ, ಮಠ, ಬಟಾಸಿಯಾ ಲೂಪ್, ಗೋರ್ಖಾ ಯುದ್ಧ ಸ್ಮಾರಕ ಮುಂತಾದ ಪ್ರೇಕ್ಷಣೀಯ ಸ್ಥಳಗಳಿವೆ. ಡಾರ್ಜಿಲಿಂಗ್ ನಲ್ಲಿ ಪ್ರವಾಸಿಗರು ಟಾಯ್ ಟ್ರೇನ್ ನ ಮಜವನ್ನೂ ಅನುಭವುಸಬಹುದಾಗಿದೆ. ಕಡಿಮೆ ಖರ್ಚಿನಲ್ಲಿ ಡಾರ್ಜಿಲಿಂಗ್ ನಲ್ಲಿ ರಜೆಯ ಸಮಯವನ್ನು ಕಳೆಯಬಹುದು.
ಡಾರ್ಜಿಲಿಂಗ್ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಅಲ್ಲಿನ ರೋಪ್ ವೇನಲ್ಲಿ ಚಲಿಸಬೇಕು. ರೋಪ್ ವೇ ಮೂಲಕ ಡಾರ್ಜಿಲಿಂಗ್ ನ ಪ್ರಕೃತಿ ಸೌಂದರ್ಯವನ್ನು ಮತ್ತು ಸದಾ ಹಚ್ಚ ಹಸಿರಿನಿಂದ ಕಂಗೊಳಿಸುವ ಚಹಾ ತೋಟಗಳ ಸೌಂದರ್ಯವನ್ನು ಸವಿಯಬಹುದು. ಡಾರ್ಜಿಲಿಂಗ್ ನ ಇನ್ನೊಂದು ಪ್ರಮುಖ ಆಕರ್ಷಣೆ ನೈಂಟಿಂಗೇಲ್ ಉದ್ಯಾನವನವಾಗಿದೆ. ಈ ಉದ್ಯಾನವನದಿಂದಲೂ ಪರ್ವತಗಳ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ನೋಡ ಬನ್ನಿ, ಹಚ್ಚ ಹಸಿರ ಪರಿಸರ, ಮನಸಿಗೆ ಮುದ ನೀಡುವ ಗಿರಿಧಾಮ

ಇಂದೋರ್ ನ ವಾಟರ್ ಫಾಲ್ಸ್ : ಬೇಸಿಗೆಯಲ್ಲಿ ಇಂದೋರ್ ಗೆ ಪ್ರಯಾಣ (Travel) ಮಾಡಬಹುದು. ಇಂದೋರ್ ನಲ್ಲಿರುವ ಅನೇಕ ಜಲಪಾತದಿಂದ ವಿಪರೀತ ಸೆಕೆಯಿರುವಾಗಲೂ ಕೂಡ ಇಲ್ಲಿ ತಂಪಿನ ಅನುಭವವನ್ನು ಹೊಂದಬಹುದು. ಮೊಹದಿ ವಾಟರ್ ಫಾಲ್ಸ್ ಇಲ್ಲಿನ ಅತ್ಯಂತ ಪ್ರೇಕ್ಷಣೀಯ ಜಲಪಾತವಾಗಿದೆ. ಇದು ಜನಜಂಗುಳಿಯಿಂದ ದೂರವಿದ್ದು ವಿಶೇಷ ಅನುಭವವನ್ನು ನೀಡುತ್ತದೆ. ಇದರ ಹೊರತಾಗಿ ಪಾತಾಲಪಾನಿ ಫಾಲ್, ಬಾಮನಿಯಾ ಕುಂಡ ಫಾಲ್ ಮುಂತಾದ ಜಲಪಾತಗಳಿಗೂ ಕೂಡ ಭೇಟಿ ನೀಡಬಹುದು.

ಹಿಮಾಚಲ ಪ್ರದೇಶದ ಪರ್ವತಗಳು : ಜೂನ್ ತಿಂಗಳಿನಲ್ಲಿ ಹಿಮಾಚಲ ಪ್ರದೇಶದ ಗಿರಿಧಾಮಗಳಿಗೆ ಒಮ್ಮೆಯಾದರೂ ಪ್ರವಾಸ ಕೈಗೊಳ್ಳಬೇಕು. ಇಲ್ಲಿನ ಪ್ರಕೃತಿಯ ಸೊಬಗು ಮತ್ತು ತಣ್ಣನೆಯ ವಾತಾವರಣದಲ್ಲಿ ಪ್ರಯಾಣ ಮಾಡುವುದು ಅತ್ಯಂತ ರೋಮಾಂಚನವನ್ನುಂಟುಮಾಡುತ್ತದೆ.  ಹಿಮಾಚಲ ಪ್ರದೇಶದಲ್ಲಿ ಕಸೋಲ್, ಮನಾಲಿ, ಧರ್ಮಶಾಲಾ ಮುಂತಾದ ಗಿರಿಧಾಮಗಳು ದೇಶ ವಿದೇಶದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಹಿಮಾಚಲ ಪ್ರದೇಶವು ಟ್ರೆಕಿಂಗ್, ಕುದುರೆ ಸವಾರಿ ಮುಂತಾದ ಸಾಹಸ ಚಟುವಟಿಕೆಗಳಿಂದಲೂ ಜನರನ್ನು ತನ್ನೆಡೆ ಸೆಳೆಯುತ್ತದೆ.

ಮೌಂಟ್ ಅಬು : ಉತ್ತರ ಭಾರತದ ಪರ್ವತಗಳ ಹೊರತಾಗಿ ಬೇರೆ ಸ್ಥಳಗಳಿಗೆ ಭೇಟಿ ನೀಡಬೇಕೆಂದು ಬಯಸುವವರು ರಾಜಸ್ತಾನದ ಪರ್ವತ ಪ್ರದೇಶವಾದ ಮೌಂಟ್ ಅಬುಗೆ ಸುತ್ತಾಡಲು ತೆರಳಬಹುದು. ಮೌಂಟ್ ಅಬು ಗ್ರಾನೈಟ್ ನ ಶಿಖರವಾಗಿದ್ದು, ಇದರ ನಾಲ್ಕೂ ದಿಕ್ಕಿನಲ್ಲೂ ವನ್ಯಜೀವಿ ಅಭಯಾರಣ್ಯವನ್ನು ನೋಡಬಹುದು. ಮೌಂಟ್ ಅಬು ಪಟ್ಟಣ 1220 ಮೀಟರ್ ಗಳಷ್ಟು ಎತ್ತರದಲ್ಲಿದೆ. ಪರ್ವತದ ತುದಿಯಲ್ಲಿ ಗ್ರಾನೈಟ್ ಶಿಲೆಯ ಗುಹೆ ಇದೆ. ಶಿಖರದ ಮಧ್ಯದಲ್ಲಿ ದಿಲ್ ವಾರಾ ಎಂಬ ಸ್ಥಳದಲ್ಲಿ ಅಮೃತಶಿಲೆಯಿಂದ ನಿರ್ಮಿಸಲಾದ ಎರಡು ಪ್ರಸಿದ್ಧ ದೇವಾಲಯಗಳಿವೆ.
 

Follow Us:
Download App:
  • android
  • ios