ಕೃಷ್ಣನ ದ್ವಾರಕೆಗೆ ಜನರನ್ನು ಕೊಂಡೊಯ್ಯಲಿದೆ ದೇಶದ ಮೊದಲ ಪ್ರವಾಸೀ ಜಲಾಂತರ್ಗಾಮಿ ನೌಕೆ!
ಜನರು ಭಾರತದೊಳಗಿನ ಪ್ರವಾಸಿ ತಾಣಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿರುವ ಸಮಯದಲ್ಲೇ ಗುಜರಾತ್ ಸರಕಾರ, ಮುಳುಗಿ ಹೋದ ಕೃಷ್ಣನ ದ್ವಾರಕೆಗೆ ಸಬ್‌ಮೆರೀನ್ ಪ್ರವಾಸೋದ್ಯಮ ಆರಂಭಿಸಲು ಹೊರಟಿದೆ.
ಸ್ಕೂಬಾ ಡೈವಿಂಗ್, ಸ್ನೋರ್ಕೆಲಿಂಗ್‌ಗಳೆಲ್ಲ ನೀರೊಳಗಿನ ಜಗತ್ತನ್ನು ನಮ್ಮೆದುರು ತೆರೆದಿಡುತ್ತವೆ. ಆದರೆ, ಸಮುದ್ರದ ತೀರಾ ಆಳಕ್ಕೆ ಇದರಲ್ಲಿ ಹೋಗಲು ಪ್ರವಾಸಿಗರಿಗೆ ಸಾಧ್ಯವಿಲ್ಲ. ಪ್ರವಾಸ ಎಂದರೆ ಆ್ಯಡ್ರಿನಲಿನ್ ರಶ್ ಕೊಡುವಂಥ ಇಂಥ ಚಟುವಟಿಕೆಗಳಿಗಾಗಿ ನಾವು ಹುಡುಕುತ್ತೇವೆ. ಇದೀಗ ಗುಜರಾತ್ ಸರ್ಕಾರ ರೂಪಿಸಿರುವ ಯೋಜನೆ ಕೇಳಿದರೇ ಮೈ ಜುಂ ಎನ್ನಿಸುತ್ತದೆ.
ಹೌದು, ಸಮುದ್ರದಲ್ಲಿ 300 ಅಡಿಗೂ ಆಳಕ್ಕೆ ಹೋಗಿ ಸಾವಿರಾರು ವರ್ಷಗಳ ಹಿಂದೆ ಮುಳುಗಿದ ಕೃಷ್ಣನ ದ್ವಾರಕೆಯನ್ನು ಕಣ್ತುಂಬಿಕೊಳ್ಳುವುದೆಂದರೆ ಎಂಥ ರೋಮಾಂಚನವಲ್ಲವೇ? ಇಂಥದೊಂದು ಭಾಗ್ಯವನ್ನು ಕರುಣಿಸುವ ಉದ್ದೇಶದಿಂದ ಗುಜರಾತ್ ಸರ್ಕಾರವು ದೇಶದಲ್ಲೇ ಮೊದಲ ಬಾರಿಗೆ ಸಬ್‌ಮೆರೀನ್(ಜಲಾಂತರ್ಗಾಮಿ) ಪ್ರವಾಸೋದ್ಯಮಕ್ಕೆ ಕೈ ಹಾಕಿದೆ.
ಗುಜರಾತ್ ಸರ್ಕಾರವು ಮಜಗಾವ್ ಡಾಕ್‌ಯಾರ್ಡ್ ಲಿಮಿಟೆಡ್(MDL) ಸಹಯೋಗದೊಂದಿಗೆ ದೇಶದ ಮೊದಲ ಜಲಾಂತರ್ಗಾಮಿ ಪ್ರವಾಸೋದ್ಯಮ ಯೋಜನೆ ಸಿದ್ಧಪಡಿಸಿದೆ. ಎಲ್ಲವೂ ಅಂದುಕೊಂಡಂತೆ ಆದರೆ, 2024 ರ ದೀಪಾವಳಿಯ ಮೊದಲು ಈ ಜಲಾಂತರ್ಗಾಮಿ ನೌಕೆ ಕಾರ್ಯಾರಂಭಿಸಲಿದೆ.
ರಾಮ ಮಂದಿರ ಮಂತ್ರಾಕ್ಷತೆ ಮೆರವಣಿಗೆ ಮೇಲೆ ಕಲ್ಲು ತೂರಾಟ, ಭಕ್ತರಿಗೆ ಗಾ ...
ಜಲಾಂತರ್ಗಾಮಿಯ ಮೂಲಕ ಪ್ರವಾಸಿಗರು ಸಮುದ್ರದ ಕೆಳಗೆ ಸುಮಾರು 300 ಮೀಟರ್ ಧುಮುಕುವ ಅಭೂತಪೂರ್ವ ಅವಕಾಶವನ್ನು ಹೊಂದಿರುತ್ತಾರೆ ಮತ್ತು ದ್ವೀಪವನ್ನು ಸುತ್ತುವರೆದಿರುವ ಸಮುದ್ರ ಜೀವಿಗಳ ನೇರ ಅನುಭವವನ್ನು ಪಡೆಯುತ್ತಾರೆ. ಇದು ಶ್ರೀಕೃಷ್ಣನಿಂದ ರಚಿಸಲ್ಪಟ್ಟ ಮುಳುಗಿದ ನಗರ ದ್ವಾರಕೆಯಲ್ಲಿ ಸುತ್ತಾಡುವ ಅವಕಾಶ ಕಲ್ಪಿಸಲಿದೆ. ದ್ವಾರಕಾದ ಪುರಾತತ್ವ ಇತಿಹಾಸವು ನಿಗೂಢವಾಗಿ ಮುಚ್ಚಿಹೋಗಿದೆ. ಶ್ರೀಕೃಷ್ಣನ ಪುರಾತನ ರಾಜ್ಯವು ಗೋಮತಿ ನದಿಯ ಅರಬ್ಬಿ ಸಮುದ್ರದ ಸಂಗಮಕ್ಕೆ ಸಮೀಪದಲ್ಲಿದೆ ಮತ್ತು ಕೃಷ್ಣನ ಮರಣದ ನಂತರ ನಗರವು ಸಮುದ್ರದ ಕೆಳಗೆ ಮುಳುಗಿತು ಎಂದು ನಂಬಲಾಗಿದೆ.
ಗಂಡ 9 ಲಕ್ಷ ದುಡಿತಾನೆ: ನಿರ್ವಹಣೆಗೆ ತಿಂಗಳಿಗೆ 2.5 ಲಕ್ಷ ಕೊಡ್ಬೇಕು : ...
ಒಮ್ಮೆಗೆ 30 ಪ್ರಯಾಣಿಕರು
ಯೋಜಿತ ಜಲಾಂತರ್ಗಾಮಿ ಸುಮಾರು 35 ಟನ್ ತೂಕವಿರುತ್ತದೆ ಮತ್ತು ಒಂದು ಸಮಯದಲ್ಲಿ 30 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುತ್ತದೆ. ಹೇಳಲಾದ ಜಲಾಂತರ್ಗಾಮಿ ನೌಕೆಯನ್ನು ಎರಡು ಸಾಲುಗಳೊಂದಿಗೆ ಕಾನ್ಫಿಗರ್ ಮಾಡಲಾಗುವುದು, 24 ಪ್ರಯಾಣಿಕರಿಗೆ ಆಸನದ ಸ್ಥಳವನ್ನು ಒದಗಿಸುತ್ತದೆ. ಪ್ರತಿ ಸೀಟೂ ಕಿಟಕಿಯ ವೀಕ್ಷಣೆ ಅವಕಾಶ ಹೊಂದಿರುತ್ತವೆ. ಹಡಗನ್ನು ಇಬ್ಬರು ಅನುಭವಿ ಪೈಲಟ್‌ಗಳು ನಡೆಸುತ್ತಾರೆ ಮತ್ತು ವೃತ್ತಿಪರ ಸಿಬ್ಬಂದಿ ನೌಕೆಯಲ್ಲಿ ಇರುತ್ತಾರೆ. ಈ ಅದ್ಭುತ ಯೋಜನೆಯು ಈ ಪ್ರದೇಶದಲ್ಲಿ ಹೆಚ್ಚಿನ ಉದ್ಯೋಗ, ಹೂಡಿಕೆ ಮತ್ತು ಪ್ರವಾಸೋದ್ಯಮವನ್ನು ಸೃಷ್ಟಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.