ಡೈನಿಂಗ್‌ನಿಂದ ಮಿನಿ ಲೈಬ್ರೆರಿವರೆಗೆ: ಭಾರತ್ ಗೌರವ್ ಪ್ರವಾಸಿ ರೈಲೊಳಗೆ ಏನೇನಿದೆ ನೋಡಿ?
ಸರ್ಕಾರ ಹಾಗೂ ರೈಲ್ವೆ ಇಲಾಖೆ ಸಹಭಾಗಿತ್ವದಲ್ಲಿ ಜಾರಿಗೆ ಬಂದಿರುವ ಭಾರತ್ ಗೌರವ್ ರೈಲಿನ ಒಳಾಂಗಣ ಎಷ್ಟೊಂದು ಸುಂದರವಾಗಿದೆ. ಗೊತ್ತಾ. ಈ ವಿಶೇಷ ರೈಲಿನ ಐಷಾರಾಮಿ ಒಳಾಂಗಣವನ್ನು ತೋರಿಸುವ ಸುಂದರವಾದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನವದೆಹಲಿ: ದೇಶದ ವಿವಿಧ ಪ್ರವಾಸಿ ತಾಣಗಳಿಗೆ ತೆರಳುವವರಿಗಾಗಿ ಸರ್ಕಾರ ಹಾಗೂ ರೈಲ್ವೆ ಇಲಾಖೆ ಸಹಭಾಗಿತ್ವದಲ್ಲಿ ಜಾರಿಗೆ ಬಂದಿರುವ ಭಾರತ್ ಗೌರವ್ ರೈಲಿಗೆ ಇತ್ತೀಚೆಗಷ್ಟೇ ಚಾಲನೆ ಸಿಕ್ಕಿದ್ದು, ಬಹುತೇಕ ಎಲ್ಲರಿಗೂ ತಿಳಿದಿದೆ. ಎಸಿಯನ್ನು ಹೊಂದಿರುವ ಐಷಾರಾಮಿ ಪ್ರವಾಸಿ ರೈಲಿನಲ್ಲಿ ಯಾವೆಲ್ಲಾ ವ್ಯವಸ್ಥೆ ಇದೆ. ಒಳಾಂಗಣ ಎಷ್ಟೊಂದು ಸುಂದರವಾಗಿದೆ. ಗೊತ್ತಾ. ಈ ವಿಶೇಷ ರೈಲಿನ ಐಷಾರಾಮಿ ಒಳಾಂಗಣವನ್ನು ತೋರಿಸುವ ಸುಂದರವಾದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರನ್ನು ಒಮ್ಮೆಯಾದರು ಈ ರೈಲಿನಲ್ಲಿ ಹೋಗಬೇಕು ಎಂಬ ಆಸೆ ಹುಟ್ಟುವಂತೆ ಮಾಡುತ್ತಿದೆ.
ಭಾರತೀಯ ರೈಲ್ವೆ ಇಲಾಖೆ ಸರ್ಕಾರದ ಸಹಭಾಗಿತ್ವದಲ್ಲಿ ಇತ್ತೀಚೆಗೆ ಭಾರತ್ ಗೌರವ್ ಡಿಲಕ್ಸ್ ಏಸಿ ಪ್ರವಾಸಿ ಟ್ರೈನ್ ಅನ್ನು ಜಾರಿಗೆ ತಂದಿತ್ತು. ಈ ರೈಲೊಳಗೆ ನೀವು ಕಾಲಿಡುತ್ತಿದ್ದಂತೆ ಅಲ್ಲಿನ ಸುಂದರವಾದ ವಾತಾವರಣ ನಿಮ್ಮನ್ನು ಸೆಳೆಯುತ್ತದೆ. ಪ್ರವಾಸಿಗರಿಗೆಂದೇ ವಿಶೇಷವಾಗಿ ಡಿಸೈನ್ ಮಾಡಿದ ಈ ರೈಲಿಗೆ ಮಾರ್ಚ್ 21 ರಂದು ದೆಹಲಿಯಲ್ಲಿ ಗ್ರೀನ್ ಸಿಗ್ನಲ್ ನೀಡಲಾಗಿತ್ತು. ನಾರ್ತ್ ಈಸ್ಟ್ ಡಿಸ್ಕವರಿ: ಬಿಯಾಂಡ್ ಗುವಾಹಟಿ' ಥೀಮ್‌ನ ಭಾಗವಾಗಿ ಈಶಾನ್ಯ ರಾಜ್ಯಗಳಾದ್ಯಂತ ಪ್ರವಾಸಿಗರನ್ನು ಈ ರೈಲು ಹೊತ್ತು ಸಾಗಲಿದೆ. ರೈಲ್ವೆ ಇಲಾಖೆ ರೈಲಿನ ಒಳಾಂಗಣವನ್ನು ಸೆರೆ ಹಿಡಿದ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಸುಂದರವಾದ ಇಂಟಿರಿಯರ್ ಜೊತೆ ಡೈನಿಂಗ್, ಪುಟ್ಟ ಲೈಬ್ರೆರಿ, ಹಾಸಿಗೆ ಬೆಡ್ ಸೇರಿದಂತೆ ಇದು ಪ್ರಯಾಣಿಕರಿಗೆ ಹಲವು ಐಷಾರಾಮಿ ಸೌಲಭ್ಯಗಳನ್ನು ಸವಿಯುವ ಅವಕಾಶವನ್ನು ನೀಡಿದೆ.
ಕಾಶಿಯಾತ್ರೆ ಮೇಲೆ ಚುನಾವಣಾ ನೀತಿಸಂಹಿತೆ ಕರಿನೆರಳು: ಕಾಶಿಗೆ ಹೊರಟ ವಿಶೇಷ ರೈಲು ರದ್ದು
'ನಾರ್ತ್-ಈಸ್ಟ್ ಡಿಸ್ಕವರಿ' (North-East Discovery) ಭಾರತ್ ಗೌರವ್ ಡಿಲಕ್ಸ್ ಎಸಿ ಟೂರಿಸ್ಟ್ ರೈಲು ಪ್ರಯಾಣಿಕರಿಗೆ ತಮ್ಮ ಪ್ರಯಾಣವನ್ನು ಸ್ಮರಣೀಯವಾಗಿಸಲು ಮಿನಿ ಲೈಬ್ರರಿ, ಫೈನ್ ಡೈನಿಂಗ್ ರೆಸ್ಟೊರೆಂಟ್‌ನಂತಹ ಅತ್ಯಾಧುನಿಕ ಪ್ರಯಾಣಿಕ ಸೌಕರ್ಯಗಳನ್ನು ಹೊಂದಿದೆ ಎಂದು ರೈಲ್ವೆ ಇಲಾಖೆ ಟ್ವೀಟ್ ಮಾಡಿದೆ.
ಉಣ್ಣೆ ಬಟ್ಟೆ ಮತ್ತು ಬಿಳಿ ಹೊದಿಕೆಯ ಬೆಡ್ ಜೊತೆ ರೈಲಿನಲ್ಲಿ ಜನರು ತಮ್ಮ ಊಟ ಮಾಡಲು ದೊಡ್ಡ ಕುರ್ಚಿಗಳು ಮತ್ತು ಟೇಬಲ್‌ಗಳೊಂದಿಗೆ ಪ್ರತಿ ಕಂಪಾರ್ಟ್‌ಮೆಂಟ್‌ನಲ್ಲಿ ಎರಡು ಬರ್ತ್‌ಗಳನ್ನು ಹೊಂದಿದೆ. ಅಲ್ಲದೇ ಪ್ರವಾಸದ ಸಮಯದಲ್ಲಿ ಪ್ರವಾಸಿಗರು ಓದುವ ಹವ್ಯಾಸದವರಾದರೆ ಅವರಿಗಾಗಿ ಮಿನಿ ಲೈಬ್ರರಿಯಲ್ಲಿ (mini-library) ಸಂಸ್ಕೃತಿ, ಕಲೆ ಮತ್ತು ಪ್ರವಾಸದ ಬಗ್ಗೆ ಪುಸ್ತಕಗಳಿವೆ.
ಏ.7ರಿಂದ ರಾಮಾಯಣ ಯಾತ್ರ ರೈಲು ಆರಂಭ, ಟಿಕೆಟ್ ಬೆಲೆ, ಭೇಟಿ ಸ್ಥಳ ಸೇರಿ ಮಹತ್ವದ ಮಾಹಿತಿ!
ಈ ಪ್ರವಾಸಿ ರೈಲಿಗೆ ಮಾರ್ಚ್ 21 ರಂದು ವಿದೇಶಾಂಗ ವ್ಯವಹಾರ ಹಾಗೂ ಸಂಸ್ಕೃತಿ ರಾಜ್ಯ ಸಚಿವೆ, ಮೀನಾಕ್ಷಿ ಲೇಖಿ (Meenakshi Lekhi) ಅವರು ದೆಹಲಿ ಸಫ್ದಾರ್‌ಜಂಗ್‌ನಲ್ಲಿ (Safdarjung) ಹಸಿರು ನಿಶಾನೆ ತೋರಿದ್ದರು. ಈ ರೈಲು ಪ್ರವಾಸಿಗರನ್ನು 15 ದಿನಗಳ ಕಾಲ ಗುವಾಹಟಿ (Guwahati), ಶಿವಸಾಗರ್, ಅಗರ್ತಲಾ ಉದಯ್‌ಪುರ, ತ್ರಿಪುರ, ಜೊರ್ಹತ್ ಹಾಗೂ ಅಸ್ಸಾಂನ ಕಾಜಿರಂಗ (Kaziranga), ಉನಕೋಟಿ ದೀಮಾಪುರ್ ಹಾಗೂ ನಾಗಲ್ಯಾಂಡ್‌ನ ಕೊಹಿಮಾ, ಮೇಘಾಲಯದ ಶಿಲ್ಲಾಂಗ್ (Shillong), ಚಿರಾಪುಂಜಿ ಸ್ಥಳಗಳಿಗೆ ಕರೆದೊಯ್ಯಲಿದೆ. ಇದರೊಳಗೆ ಫಸ್ಟ್ ಎಸಿ ಹಾಗೂ ಸೆಕೆಂಡ್ ಎಸಿ ಎಂಬ ಎರಡು ರೀತಿಯ ಸೀಟುಗಳಿದ್ದು 156 ಪ್ರಯಾಣಿಕರು ಈ ರೈಲಿನಲ್ಲಿ ಪ್ರಯಾಣಿಸುತ್ತಾರೆ.