ಹಬ್ಬಕ್ಕೆ ವಿಮಾನದಲ್ಲೇ ಹೋಗಿ, 1000 ರೂ.ಉಳಿಸಿ – ಇಲ್ಲಿದೆ ಭರ್ಜರಿ ಆಫರ್
ಹಬ್ಬಕ್ಕೆ ಊರಿಗೆ ಹೋಗ್ಬೇಕು ಅಂದ್ರೆ ಜೇಬು ಖಾಲಿಯಾಗೋದು ಗ್ಯಾರಂಟಿ. ಗಗನಕ್ಕೇರಿರೋ ಟಿಕೆಟ್ ನೋಡಿ ಜನರು ದಂಗಾಗ್ತಿದ್ದಾರೆ. ಆದ್ರೆ ಐಆರ್ ಸಿಟಿಸಿ ಮಾತ್ರ ಭರ್ಜರಿ ಉಡುಗೊರೆ ನೀಡ್ತಿದೆ. 1000 ರೂಪಾಯಿ ಉಳಿಸೋ ಬಂಪರ್ ಆಫರ್ ಬಿಟ್ಟಿದೆ.
ದೀಪಗಳ ಹಬ್ಬ ದೀಪಾವಳಿಗೆ (Diwali) ಇನ್ನೇನು ಕೆಲವೇ ದಿನ ಬಾಕಿ ಇದೆ. ದಸರಾ ಸಂಭ್ರಮ (Dussehra celebration) ಎಲ್ಲೆಡೆ ಮನೆ ಮಾಡಿದೆ. ವಿಜಯದಶಮಿ (Vijayadashami), ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗುವ ತಯಾರಿಯಲ್ಲಿ ಜನರಿದ್ದಾರೆ. ಆದ್ರೆ ರೈಲು, ಬಸ್ ಟಿಕೆಟ್ ಸಿಗೋದು ಸುಲಭವಲ್ಲ. ರೈಲಿನಲ್ಲಿ ವೇಟಿಂಗ್ ಲೀಸ್ಟ್ ಮಾರುದ್ದ ಇದೆ. ಆರು, ಮೂರು ತಿಂಗಳ ಹಿಂದೆಯೇ ಜನರು ದೀಪಾವಳಿಗೆ ಟಿಕೆಟ್ ಬುಕ್ ಮಾಡಿದ್ದಾರೆ. ಟ್ರೈನ್ ಟಿಕೆಟ್ (Train Ticket) ಇಲ್ಲ, ವಿಮಾನ ಪ್ರಯಾಣ ದುಬಾರಿ ಎನ್ನುವ ಜನರು ನಿರಾಶೆಗೊಳ್ಳಬೇಕಾಗಿಲ್ಲ. ಮನೆ ತುಂಬ ದೀಪ ಹಚ್ಚಿ, ಸಿಹಿ ತಿಂದು ಸಂಭ್ರಮಿಸುವ ದೀಪಾವಳಿಯನ್ನು ನೀವು ಕುಟುಂಬಸ್ಥರ ಜೊತೆಯೇ ಆಚರಿಸಿಕೊಳ್ಬಹುದು. ಸರಿಯಾದ ಸಮಯಕ್ಕೆ ಊರು ತಲುಪಬಹುದು. ಅದಕ್ಕೆ ಐಆರ್ ಸಿಟಿಸಿ (IRCTC) ಅವಕಾಶ ಮಾಡ್ಕೊಟ್ಟಿದೆ. ಐಆರ್ ಸಿಟಿಸಿ ಬಂಪರ್ ಆಫರ್ (bumper offer) ನೀಡ್ತಿದೆ.
ಆಹಾರ - ಮದುವೆ: ಯಹೂದಿಗಳ ನಿಯಮ ಕಟ್ಟುನಿಟ್ಟು
ನೀವು ಟ್ರೈನ್ ಬದಲು ಅಗ್ಗದ ಬೆಲೆಗೆ ವಿಮಾನ ಟಿಕೆಟ್ ಬುಕ್ ಮಾಡಿ ಊರು ತಲುಪಬಹುದು. ಹಬ್ಬಕ್ಕೆ ಮುನ್ನ ಹಾಗೂ ಹಬ್ಬದ ಸಂದರ್ಭದಲ್ಲಿ ಅನೇಕ ಕಂಪನಿಗಳು ಫ್ಲೈಟ್ ಟಿಕೆಟ್ಗೆ ಆಫರ್ ನೀಡುತ್ವೆ. ಈಗ ಐಆರ್ ಸಿಟಿಸಿ ವಿಶೇಷ ಕೊಡುಗೆ ನೀಡ್ತಿದೆ. ಐಆರ್ ಸಿಟಿಸಿ ತನ್ನ ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದೆ. ಅದ್ರ ಪ್ರಕಾರ, ನೀವು ಆರ್ ಬಿಎಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಫ್ಲೈಟ್ ಟಿಕೆಟ್ ಬುಕ್ ಮಾಡಿದ್ರೆ ನಿಮಗೆ ಶೇಕಡಾ 5ರಷ್ಟು ಡಿಸ್ಕೌಂಟ್ ಸಿಗ್ತಿದೆ. ಉದಾಹರಣೆಗೆ ನೀವು 7500 ರೂಪಾಯಿ ಮೌಲ್ಯದ ಟಿಕೆಟ್ ಬುಕ್ ಮಾಡ್ತಿದ್ದರೆ ನಿಮಗೆ 1000 ರೂಪಾಯಿ ರಿಯಾಯಿತಿ ಸಿಗುತ್ತದೆ. ಅಂದ್ರೆ ನೀವು 6500 ರೂಪಾಯಿ ಪಾವತಿ ಮಾಡಿದ್ರೆ ಸಾಕು.
ಎಲ್ಲಿ ಟಿಕೆಟ್ ಬುಕ್ ಮಾಡಿದ್ರೆ ಸಿಗುತ್ತೆ ರಿಯಾಯಿತಿ? : ನೀವು ಫ್ಲೈಟ್ ಟಿಕೆಟ್ ಬುಕ್ ಮಾಡ್ತಿದ್ದರೆ ಐಆರ್ ಸಿಟಿಸಿ ಏರ್ ಅಪ್ಲಿಕೇಷನ್ ಅಥವಾ https://www.irctc.co.in/nget/train-search ನಲ್ಲಿ ನೀವು ಟಿಕೆಟ್ ಬುಕ್ ಮಾಡ್ಬೇಕು. ಈಗಾಗಲೇ ಈ ಆಫರ್ ಪ್ರಯಾಣಿಕರಿಗೆ ಲಭ್ಯವಿದೆ. ಈ ಪ್ಲಾನ್ ಸೆಪ್ಟೆಂಬರ್ 26ರಿಂದಲೇ ಶುರುವಾಗಿದ್ದು, ಅಕ್ಟೋಬರ್ 25ರವರೆಗೆ ಐಆರ್ ಸಿಟಿಸಿ ನೀಡ್ತಿರುವ ಈ ಪ್ಲಾನ್ ಲಾಭವನ್ನು ನೀವು ಪಡೆಯಬಹುದು.
ಅಂಬಾನಿ ನಿದ್ದೆಗೆಡಿಸಿದ ವಿಐ: 175 ರೂ ರಿಚಾರ್ಜ್‌ಗೆ ಉಚಿತ 10 ಜಿಬಿ ಡೇಟಾ, 15 ಒಟಿಟಿ ಪ್ಲಾಟ್‌ಫಾರ್ಮ್!
ಫ್ಲೈಟ್ ಬುಕ್ ಮಾಡುವ ಮುನ್ನ ಇದೆಲ್ಲ ತಿಳಿದಿರಲಿ : ಹಬ್ಬಕ್ಕೆ ನೀವು ಊರಿಗೆ ಹೋಗ್ತೀರಿ ಎಂದಾದ್ರೆ ಮೂರು ತಿಂಗಳ ಮೊದಲೇ ಟಿಕೆಟ್ ಬುಕ್ ಮಾಡೋದು ಒಳ್ಳೆಯದು. ಈ ಸಮಯದಲ್ಲಿ ಟಿಕೆಟ್ ಬೆಲೆ ಕಡಿಮೆಯಿರುತ್ತದೆ. ಹಬ್ಬ ಹತ್ತಿರ ಬಂದಂತೆ, ಕಂಪನಿಗಳು ಟಿಕೆಟ್ ಬೆಲೆಯನ್ನು ಏರಿಸುತ್ವೆ. ವಿನಾ ಕಾರಣ ಅತಿ ಹೆಚ್ಚು ಹಣ ನೀಡಿ ನೀವು ಪ್ರವಾಸ ಕೈಗೊಳ್ಳುವ ಅನಿವಾರ್ಯತೆ ಎದುರಾಗುತ್ತದೆ. ಶನಿವಾರ ಮತ್ತು ಭಾನುವಾರ ನೀವು ವಿಮಾನ ಪ್ರಯಾಣಕ್ಕೆ ಪ್ಲಾನ್ ಮಾಡಿದ್ದರೆ ಮಂಗಳವಾರ ಸಂಜೆ 5 ಗಂಟೆ ನಂತ್ರ ಟಿಕೆಟ್ ಬುಕ್ ಮಾಡಿ. ಈ ದಿನ ಅತ್ಯಂತ ಕಡಿಮೆ ಬೆಲೆಗೆ ನೀವು ಟಿಕೆಟ್ ಬುಕ್ ಮಾಡ್ಬಹುದು. ವಾರಾಂತ್ಯದಲ್ಲಿ ಪ್ರಯಾಣ ಬೆಳೆಸೋದು ದುಬಾರಿ. ಸೋಮವಾರ ಮತ್ತು ಬುಧವಾರದ ನಡುವೆ ಹಾರಾಟ ನಡೆಸುವ ವಿಮಾನಗಳು ವಾರಾಂತ್ಯದ ವಿಮಾನಗಳಿಗಿಂತ ಶೇಕಡಾ 12 ರಿಂದ ಶೇಕಡಾ 20ರಷ್ಟು ಅಗ್ಗವಾಗಿರುತ್ತವೆ.