Bengaluru ಕುರಿತ ಈ ವಿಷಯಗಳು ಸ್ವತಃ ಬೆಂಗಳೂರಿಗರಿಗೇ ಗೊತ್ತಿಲ್ಲ!
ಬೆಂಗಳೂರು ಮೆಟ್ರೋಪಾಲಿಟನ್ ಸಿಟಿ. ಜಗತ್ತಿನ ಪ್ರಮುಖ ಮಹಾನಗರಗಳಲ್ಲೊಂದಾಗಿ ಹೆಸರು ಮಾಡಿದೆ. ಆದರೆ, ಬೆಂಗಳೂರು ಕುರಿತ ಬಹಳಷ್ಟು ಆಸಕ್ತಿಕಾರಿ ವಿಷಯಗಳು ಸ್ವತಃ ಬೆಂಗಳೂರಿಗರೇ ತಿಳಿದಿಲ್ಲ. ಅವೇನು ಎಂದು ತಿಳಿಯೋ ಕುತೂಹಲವಿದ್ಯಾ?
ಬೆಂಗಳೂರು(Bengaluru) ವಿಶ್ವಪ್ರಸಿದ್ಧ ನಗರಗಳಲ್ಲೊಂದು. ನಮ್ಮ ರಾಜ್ಯದ ರಾಜಧಾನಿ. ಐಟಿ ಕಂಪನಿಗಳಿಂದ ತುಂಬಿ ಭಾರತದ ಸಿಲಿಕಾನ್ ವ್ಯಾಲಿ(Silicon valley) ಎಂಬ ಹೆಸರೂ ಪಡೆದಿದೆ. ಇಂಥ ಈ ಬೆಂಗಳೂರಿನಲ್ಲಿ ರಾಜ್ಯದೆಲ್ಲ ಹಳ್ಳಿ ಮೂಲೆಮೂಲೆಗಳಿಂದಲ್ಲದೆ, ದೇಶವಿದೇಶಗಳ ಜನರೂ ಉದ್ಯೋಗ, ಓದಿಗಾಗಿ ಬಂದು ನೆಲೆಸುತ್ತಾರೆ. ನಂತರ ಇಲ್ಲಿನ ಹವಾಮಾನ, ಅವಕಾಶಗಳು ಮುಂತಾದ ಕಾರಣಗಳಿಂದಾಗಿ ಬೆಂಗಳೂರನ್ನೇ ಸ್ವಂತ ಊರಾಗಿಸಿಕೊಳ್ಳುತ್ತಾರೆ. ಬೆಂಗಳೂರಿನಲ್ಲಿ ಕೋಟಿ ಮೀರಿದ ಜನಸಂಖ್ಯೆ ನೆಲೆಸಿದೆ. ಆದರೂ ಇಲ್ಲಿನ ಕೆಲ ಆಸಕ್ತಿಕಾರಿ ವಿಷಯಗಳು ಇಲ್ಲಿ ನೆಲೆಸಿದವರಿಗೇ ಗೊತ್ತಿಲ್ಲ. ಹಾಗಿದ್ದರೆ ಬೆಂಗಳೂರು ಕುರಿತ
ಕುತೂಹಲಕಾರಿ ವಿಷಯಗಳೇನು ನೋಡೋಣ.
ನಗರಗಳಲ್ಲೇ ಎತ್ತರದ ನಗರ
ಬೆಂಗಳೂರು ತನ್ನ ಚೆಂದದ ಹವಾಮಾನ(climate)ಕ್ಕಾಗಿ ಹೆಸರಾಗಿದೆ. ಇಲ್ಲಿನ ಹೆಚ್ಚು ಬಿಸಿಲೂ ಅಲ್ಲದ, ಅತಿ ತಂಪೂ ಅಲ್ಲದ ವಾತಾವರಣ ವರ್ಷವಿಡೀ ಹಿತಕರವಾಗಿರುತ್ತದೆ. ಇದಕ್ಕೆ ಕಾರಣವೇನು ಗೊತ್ತಾ? ಬೆಂಗಳೂರು ಸಮುದ್ರ ಮಟ್ಟದಿಂದ 3000 ಅಡಿ ಎತ್ತರದಲ್ಲಿದೆ. ಭಾರತದ ಪ್ರಮುಖ ನಗರಗಳಲ್ಲೇ ಸಮುದ್ರ ಮಟ್ಟದಿಂದ ಇಷ್ಟು ಎತ್ತರದಲ್ಲಿರುವ(Highest elevation) ನಗರ ಮತ್ತೊಂದಿಲ್ಲ.
ಮಾಲ್ಗುಡಿ ಡೇಸ್(Malgudi Days)ಗೆ ಪ್ರೇರಣೆ
ಆರ್.ಕೆ. ನಾರಾಯಣ್ ಬರೆದ 'ಮಾಲ್ಗುಡಿ ಡೇಸ್' ಯಾರಿಗೆ ತಾನೇ ಗೊತ್ತಿಲ್ಲ? ಈ ಪುಸ್ತಕದಲ್ಲಿರುವ ಎಲ್ಲ 32 ಕತೆಗಳೂ ಮಾಲ್ಗುಡಿ ಎಂಬ ಕಲ್ಪನಾತ್ಮಕ ಊರಿನಲ್ಲಿ ಘಟಿಸುವುದು. ಈ ಕಲ್ಪನಾತ್ಮಕ ಊರಿಗೆ ನಾರಾಯಣ್ ಅವರಿಗೆ ಪ್ರೇರಣೆಯಾಗಿದ್ದು ಬೆಂಗಳೂರಿನ ಚೆಂದದ ಏರಿಯಾಗಳಾದ ಮಲ್ಲೇಶ್ವರಂ ಹಾಗೂ ಬಸವನಗುಡಿ. ಅದಕ್ಕೆಯೇ ಮಲ್ಲೇಶ್ವರಂ(Maleshwaram)ನ ಮೊದಲ ಮೂರು ಲೆಟರ್‌ಗಳು ಹಾಗೂ ಬಸವನಗುಡಿ(Baswangudi)ಯ ಕೊನೆಯ ಅಕ್ಷರಗಳು ಸೇರಿ 'ಮಾಲ್ಗುಡಿ' ಎಂಬ ಹೆಸರು ಹುಟ್ಟಿದೆ.
Powerful Zodiac Signs: ಕನ್ನಡತಿಯ ಭುವಿ ಪಾತ್ರದಂತೋರು ಯಾವ ರಾಶಿಯಲ್ಲಿ ಹುಟ್ಟಿರುತ್ತಾರೆ ಗೊತ್ತಾ?
ಭಾರತದ ಮೊದಲ ವಿದ್ಯುತ್ ನಗರ
ಬೆಂಗಳೂರಿನ ಕೆ.ಆರ್ ಮಾರ್ಕೆಟ್‌ನಲ್ಲಿ ನಿಂತಿರುವ ಬೀದಿದೀಪಗಳು ನಮ್ಮ ದೇಶದ ಮೊದಲ ವಿದ್ಯುತ್(electricity) ದೀಪಗಳು ಎಂಬುದು ನಿಮಗೆ ಗೊತ್ತೇ? ಹೌದು, 1905ರಲ್ಲಿ ಶಿವನಸಮುದ್ರ(Shivanasamudra)ದ ಜಲವಿದ್ಯುತಾಗಾರದಿಂದ ಮೊದಲ ಬಾರಿಗೆ ವಿದ್ಯುತ್ ಹರಿಸಿದ್ದು ಬೆಂಗಳೂರಿನಲ್ಲಿ ತಯಾರು ಮಾಡಿಕೊಂಡಿದ್ದ ಈ ಬೀದಿದೀಪಗಳಿಗೆ. ಅಲ್ಲಿಗೆ ಇಡೀ ಭಾರತದಲ್ಲೇ ಮೊದಲ ವಿದ್ಯುತ್ ಬೆಳಕನ್ನು ಕಂಡಿದ್ದು ಬೆಂಗಳೂರು.
ರವೆ ಇಡ್ಲಿ(Rava idli) ಹುಟ್ಟಿದ್ದು ಇಲ್ಲಿಯೇ!
ನೀವು ಬೆಳಗಿನ ತಿಂಡಿಗೆ ಚಟ್ನಿಗದ್ದಿ ಬಾಯಿ ಚಪ್ಪರಿಸಿಕೊಂಡು ತಿನ್ನುವ ಆ ರವೆ ಇಡ್ಲಿ ಹುಟ್ಟಿದ್ದು ಬೆಂಗಳೂರಿನಲ್ಲಿ. ಹೋಟೆಲ್ ಉದ್ದಿಮೆಯಲ್ಲಿ ದೊಡ್ಡ ಹೆಸರಾಗಿರುವ ಮಾವಳ್ಳಿ ಟಿಫನ್ ಸೆಂಟರ್(ಎಂಟಿಆರ್)ನ ತವರು ಬೆಂಗಳೂರು. ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಅಕ್ಕಿಯು ಹೆಚ್ಚು ಸಿಗುತ್ತಿರಲಿಲ್ಲ. ಆಗ ಈ ಎಂಟಿಆರ್ ರವೆಯನ್ನಿಟ್ಟುಕೊಂಡು ಇಡ್ಲಿ ತಯಾರಿಸುವ ಪ್ರಯೋಗ ಮಾಡಿತಂತೆ. ಹಾಗೆ ಹುಟ್ಟಿದ್ದೇ ರವೆ ಇಡ್ಲಿ. ದಕ್ಷಿಣ ಭಾರತದ ತಿಂಡಿಯ ಮೆನುವಿನಲ್ಲಿ ಈಗ ರವೆ ಇಡ್ಲಿಗೆ ಪ್ರಮುಖ ಸ್ಥಾನವಿದೆ.
Russia Ukraine Crisis: ಪ್ರಾಣ ಉಳಿಸಿಕೊಳ್ಳುವ ಪಲಾಯನದಲ್ಲಿ ಪ್ರಾಣಿಗಳನ್ನು ಮರೆಯದ ಉಕ್ರೇನಿಯನ್ನರು
ದೇಶದಲ್ಲೇ ಟ್ರಾಫಿಕ್ ಇಲ್ಲಿ ಹೆಚ್ಚು
ಜಗತ್ತಿನಲ್ಲೇ ಅತಿ ಹೆಚ್ಚು ಟೂ ವ್ಹೀಲರ್ಸ್ ಇರುವುದು ಬೆಂಗಳೂರಿನಲ್ಲಿ ಎಂಬುದು ಎಂಥ ಸೋಜಿಗವಲ್ಲವೇ? ಅಷ್ಟೇ ಅಲ್ಲ, ಮುಂಬೈ, ದೆಹಲಿಯಂಥ ಮಹಾನಗರಗಳಿದ್ದೂ ಭಾರತದಲ್ಲಿ ಅತಿ ಹೆಚ್ಚು ಟ್ರಾಫಿಕ್(traffic) ಏರ್ಪಡುವುದು ಬೆಂಗಳೂರಿನಲ್ಲಿ.
ಫ್ರೀಡಂ ಪಾರ್ಕ್(Freedom Park) ಜೈಲಾಗಿತ್ತು!
ಬೆಂಗಳೂರಿನ ಫ್ರೀಡಂ ಪಾರ್ಕ್ ಯಾರಿಗೆ ತಾನೇ ಗೊತ್ತಿಲ್ಲ? ಎಲ್ಲ ಹೋರಾಟ, ಪ್ರತಿಭಟನೆಗಳು ನಡೆಯುವುದು ಸಾಮಾನ್ಯವಾಗಿ ಇಲ್ಲಿಯೇ. ಈಗ ಸ್ವಾತಂತ್ರ್ಯದ ಉದ್ಯಾನ ಎಂದೇ ಹೆಸರಾಗಿರುವ ಈ ಸ್ಥಳ ಹಿಂದೆ ಸೆಂಟ್ರಲ್ ಜೈಲಾಗಿತ್ತು ಎಂಬುದು ಎಂಥ ಅಣಕವಲ್ಲವೇ? 1975ರ ತುರ್ತುಸ್ಥಿತಿ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜ್‌ಪೇಯಿ(Atal Bihari Vajpaye) ಸೇರಿದಂತೆ ಬಹಳಷ್ಟು ನಾಯಕರು ಈ ಜೈಲಿನಲ್ಲಿ ಬಂಧಿಯಾಗಿದ್ದರು.