ಈ ಮೂರು ದಿನ ಊಟಿ, ನೀಲಗಿರಿ ಪ್ರವಾಸ ಬೇಡ, ಸ್ಥಳೀಯ ಜಿಲ್ಲಾಡಳಿತ ಎಚ್ಚರಿಕೆ

ಇಲ್ಲಿಯ ನೀಲಗಿರಿ ಬೆಟ್ಟಗಳಲ್ಲಿ ಮೇ 18 ರಿಂದ 20 ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆಯಿದೆ. ಆದ್ದರಿಂದ ಊಟಿ ಸೇರಿದಂತೆ ಇಲ್ಲಿಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿಷೇಧ ಹೇರಲು ಚಿಂತನೆ ನಡೆದಿದೆ.

expected Heavy rainfall  Tourists urged to avoid travelling Ooty and Nilgiris cautioned gow

ನೀಲಗಿರಿ (ತ.ನಾಡು): ಇಲ್ಲಿಯ ನೀಲಗಿರಿ ಬೆಟ್ಟಗಳಲ್ಲಿ ಮೇ 18 ರಿಂದ 20 ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆಯಿದೆ. ಆದ್ದರಿಂದ ಊಟಿ ಸೇರಿದಂತೆ ಇಲ್ಲಿಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಯಾರೂ ಭೇಟಿ ನೀಡಬಾರದೆಂದು ನೀಲಗಿರಿ ಜಿಲ್ಲಾಡಳಿತ ಶುಕ್ರವಾರ ಎಚ್ಚರಿಕೆ ನೀಡಿದೆ.

ಮೇ 18, 19 ಮತ್ತು 20 ರಂದು 6 ರಿಂದ 20 ಸೆ.ಮೀ ಮಳೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಇಲ್ಲಿ ಪ್ರಮುಖವಾಗಿ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಿದೆ. ಈ ಕಡೆ ಪ್ರವಾಸ ಕೈಗೊಳ್ಳುವ ಪ್ರವಾಸಿಗರು ನಿಮ್ಮ ಪ್ರವಾಸವನ್ನು ಮುಂದೂಡಬೇಕು ಎಂದು ಜಿಲ್ಲಾಧಿಕಾರಿ ಎಂ ಅರುಣಾ ತಿಳಿಸಿದ್ದಾರೆ.

30 ವರ್ಷದೊಳಗಿನ 30 ಜನ ಪೋರ್ಬ್ಸ್ ಉದ್ಯಮಿಗಳ ಪಟ್ಟಿಯಲ್ಲಿ ಬೆಂಗಳೂರಿನ ಐವರಿಗೆ ಸ್ಥಾನ!

ಎಲ್ಲಾ ಸಂಬಂಧಿತ ಇಲಾಖೆಗಳು ಕಟ್ಟೆಚ್ಚರದಲ್ಲಿವೆ. ಅಂದಾಜು 3,500 ವಿಪತ್ತು ನಿರ್ವಹಣಾ ಮಂದಿ ಮತ್ತು ಅಗತ್ಯ ಉಪಕರಣಗಳು ನಿಯೋಜನೆಗೆ ಸಿದ್ಧವಾಗಿವೆ. ಹೆಚ್ಚುವರಿಯಾಗಿ, ಸುಮಾರು 450 ತಾತ್ಕಾಲಿಕ ಆಶ್ರಯಗಳನ್ನು ಸ್ಥಾಪಿಸಲಾಗಿದೆ ಮತ್ತು ನಿವಾಸಿಗಳು ತಮ್ಮ ಸುರಕ್ಷತೆಗಾಗಿ ಮನೆಯೊಳಗೆ ಇರುವಂತೆ ಸೂಚಿಸಲಾಗಿದೆ.

ಸಂಡೇ ಟೈಮ್ಸ್ ಶ್ರೀಮಂತರ ಪಟ್ಟಿಯಲ್ಲಿ ನೆಗೆತ ಕಂಡ ರಿಷಿ ಸುನಕ್ ದಂಪತಿ, ಪತ್ನಿಯ ಆಸ್ತಿಯೇ ಜಾಸ್ತಿ!

ಈ ನಡುವೆ ಪರಿಸರ ಸಂರಕ್ಷಣೆ ದೃಷ್ಟಿಯಿಂದ ತಮಿಳುನಾಡಿನ ಪ್ರಸಿದ್ಧ ಪ್ರವಾಸಿ ತಾಣಗಳಾದ ಕೊಡಕೈನಾಲ್‌ ಮತ್ತು ಊಟಿ ಗಿರಿಧಾಮಕ್ಕೆ ತೆರಳಲು ಇ-ಪಾಸ್‌ ಕಡ್ಡಾಯಗೊಳಿಸಲಾಗಿದೆ. ಭೇಟಿ ನೀಡಲು ಯೋಜಿಸುತ್ತಿರುವ ಪ್ರವಾಸಿಗರಿಗೆ ಈಗ ನೀಲಗಿರಿ ಚಾರಣಕ್ಕೆ ಕಡ್ಡಾಯವಾಗಿ ಇ-ಪಾಸ್ ಪಡೆಯಬೇಕು. ನೀಲಗಿರಿ ಮತ್ತು ಕೊಡೈಕೆನಾಲ್‌ಗೆ ವಾಹನ ಪ್ರವೇಶವನ್ನು ನಿಯಂತ್ರಿಸುವ ಪ್ರಕ್ರಿಯೆಗಾಗಿ, ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಈ ಜನಪ್ರಿಯ ಗಿರಿಧಾಮಗಳಿಗೆ ಭೇಟಿ ನೀಡಲು ಉದ್ದೇಶಿಸಿರುವ ವಾಹನಗಳಿಗೆ ಇ-ಪಾಸ್‌ ಕಡ್ಡಾಯ  ಮಾಡಬೇಕೆಂದು ಆಯಾ ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಿದೆ. ಈ ಆದೇಶ ಮೇ 7ರಿಂದ ಜೂನ್‌ 30ರ ಅವಧಿಗೆ ಸೀಮಿತವಾಗಿರಲಿದೆ.

 

Latest Videos
Follow Us:
Download App:
  • android
  • ios