ಲಕ್ಷದ್ವೀಪ ಪ್ರವಾಸಕ್ಕೆ ಅನುಮತಿ ಪತ್ರ ಕಡ್ಡಾಯ, ಪಡೆಯುವುದು ಹೇಗೆ? ಇಲ್ಲಿದೆ ಮಾರ್ಗಸೂಚಿ!
ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿ ಪ್ರವಾಸೋದ್ಯಮ ಉತ್ತೇಜನ ನೀಡಿದ ಬೆನ್ನಲ್ಲೇ ಭಾರಿ ಟ್ರೆಂಡ್ ಆಗಿದೆ. ಅತ್ತ ಮಾಲ್ಡೀವ್ಸ್‌ನಲ್ಲಿ ಕೋಲಾಹಲವೇ ಸೃಷ್ಟಿಯಾಗಿದೆ. ಗೂಗಲ್‌ನಲ್ಲಿ ಲಕ್ಷದ್ವೀಪ ಸರ್ಚ್ ದಾಖಲೆ ಮಟ್ಟ ತಲುಪಿದೆ. ಇದೀಗ ಲಕ್ಷದ್ವೀಪ ಪ್ರವಾಸಕ್ಕೆ ಜನರು ಆಸಕ್ತಿ ತೋರುತ್ತಿದ್ದಾರೆ. ಲಕ್ಷದ್ವೀಪಕ್ಕೆ ಭೇಟಿ ನೀಡಲು ಅನುಮತಿ ಪತ್ರ ಕಡ್ಡಾಯವಾಗಿದೆ. ಇಷ್ಟೇ ಅಲ್ಲ ಕೆಲ ಮಾರ್ಗಸೂಚಿಗಳನ್ನು ಪಾಲಿಸಬೇಕು. ಇಲ್ಲಿದೆ ಟ್ರಾವೆಲ್ ಗೈಡ್.
ನವದೆಹಲಿ(ಜ.08) ಭಾರತದ ಅತ್ಯಂತ ಸುಂದರ ತಾಣ ಲಕ್ಷದ್ವೀಪ ಇದೀಗ ಗೂಗಲ್, ಸಾಮಾಜಿಕ ಮಾಧ್ಯಮ ಸೇರಿದಂತೆ ಎಲ್ಲೆಲ್ಲೂ ಟ್ರೆಂಡ್ ಆಗಿದೆ. ಪ್ರಧಾನಿ ಮೋದಿ ಭೇಟಿ ನೀಡಿದ ಬೆನ್ನಲ್ಲೇ ಎಲ್ಲರೂ ಲಕ್ಷದ್ವೀಪ ಪ್ರವಾಸಕ್ಕೆ ಹಾತೊರೆಯುತ್ತಿದ್ದಾರೆ. ಲಕ್ಷ ದ್ವೀಪ ಪ್ರವಾಸಕ್ಕೆ ಜನರು ಹುಡುಕಾಟ ನಡೆಸುತ್ತಿದ್ದಾರೆ. ಭಾರತದ ಇತರ ಪ್ರವಾಸಿ ತಾಣಗಳಿಗೆ ಹೊರಟಂತೆ ನಾಳೆಯೇ ನೇರವಾಗಿ ಲಕ್ಷದ್ವೀಪಕ್ಕೆ ತೆರಳಲು ಸಾಧ್ಯವಿಲ್ಲ. ಕಾರಣ ಲಕ್ಷದ್ವೀಪ ಪ್ರವಾಸಕ್ಕೆ ಅನುಮತಿ ಪತ್ರ ಕಡ್ಡಾಯವಾಗಿದೆ. ಇದು ತಲೆನೋವಿನ ಕೆಲಸವೂ ಇಲ್ಲ.
35 ದ್ವೀಪಗಳ ಈ ಸುಂದರಣ ತಾಣ ಈ ಲಕ್ಷದ್ವೀಪ ಭಾರತದ ಅತೀ ಸಣ್ಣ ಕೇಂದ್ರಾಡಳಿತ ಪ್ರದೇಶ. ಲಕ್ಷದ್ವೀಪದ ನಿವಾಸಿಗಳು, ಲಕ್ಷದ್ವೀಪದಲ್ಲಿ ಕರ್ತವ್ಯದಲ್ಲಿರುವ ಸರ್ಕಾರಿ ಅಧಿಕಾರಿಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲರಿಗೂ ಅನುಮತಿ ಪತ್ರ ಕಡ್ಡಾಯವಾಗಿದೆ. ಭಾರತೀಯರು ಅಥವಾ ವಿದೇಶಿಗರು ಎಲ್ಲರಿಗೂ ಅನುಮತಿ ಪತ್ರ ಕಡ್ಡಾಯ. ಲಕ್ಷದ್ವೀಪದಲ್ಲಿರುವ 36 ಐಲ್ಯಾಂಡ್‌ಗೆ ಪ್ರವೇಶವಿಲ್ಲ. ಇದರಲ್ಲಿ ಪ್ರಮುಖವಾಗಿ ಕವರತ್ತಿ, ಅಗತ್ತಿ, ಬಂಗಾರಂ, ಕಡ್ಮಾಟ್ ಹಾಗೂ ಮಿನ್ಸೋಯ್ ಎನ್ನುವ 5 ದ್ವೀಪಗಳಿಗೆ ಮಾತ್ರ ಪ್ರವೇಶವಿದೆ.
ಮಾಲ್ಡೀವ್ಸ್ ಬುಕಿಂಗ್ ರದ್ದು; ಈಸ್ ಮೈ ಟ್ರಿಪ್‌ನಿಂದ ಚಲೋ ಆಯೋಧ್ಯೆ-ಲಕ್ಷದ್ವೀಪ ಆಫರ್ !
ಅನುಮತಿ ಪತ್ರ ಪಡೆಯಲು ಎರಡು ವಿಧಾನ
ಆನ್‌ಲೈನ್: ಆನ್‌ಲೈನ್ ಮೂಲಕ ಸುಲಭವಾಗಿ ಲಕ್ಷದ್ವೀಪ ಅನುಮತಿ ಪತ್ರ ಪಡೆಯಲು ಸಾಧ್ಯವಿದೆ. ಕೇಂದ್ರಾಡಳಿತದ ಇ ಪರ್ಮಿಟ್ ಪೋರ್ಟಲ್ ಮೂಲಕ ಲಾಗಿನ್ ಆಗಿ, ಕೆಲ ದಾಖಲೆಗಳನ್ನು ಸಲ್ಲಿಸಿ ಸುಲಭವಾಗಿ ಅನುಮತಿ ಪತ್ರ ಪಡೆಯಬಹುದು. ನಿಗದಿತ ಶುಲ್ಕ ಪಾವತಿಸಿದ ಬಳಿಕ ನೋಂದಣಿ ಮಾಡಿಕೊಂಡರೆ ಅನುಮತಿ ಪತ್ರ ಸಿಗಲಿದೆ. ನಿಮ್ಮ ಪ್ರವಾಸದ 15 ದಿನ ಮೊದಲು ಇ ಮೇಲ್ ಮೂಲಕ ಅನುಮತಿ ಪತ್ರ ತಲುಪಲಿದೆ. ಇದಕ್ಕಾಗಿ ಈ ಪೋರ್ಟಲ್ ಕ್ಲಿಕ್ ಮಾಡಿ ನೋಂದಣಿ ಮಾಡಿಕೊಲ್ಳಿ (https://epermit.utl.gov.in/pages/signup)
ಆಫ್‌ಲೈನ್: ಲಕ್ಷದ್ವೀಪ ಆಡಳಿತ ವಿಭಾಗದ ಪೋರ್ಟಲ್ ಮೂಲಕ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಅಥವಾ ಕರವತ್ತಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಅರ್ಜಿ ಪಡೆಯಬೇಕು. ಹೆಸರು, ವಿಳಾಸ ಸೇರಿದಂತೆ ಇತರ ಮಾಹಿತಿ ತುಂಬಿ ಕೆಲ ದಾಖಲೆಗಳನ್ನು ಲಗತ್ತಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ನೀಡಬೇಕು. ಈ ವಿಧಾನ ಕೊಂಚ ವಿಳಂಬವಾಗಲಿದೆ. ಅರ್ಜಿ ಡೌನ್ಲೋಡ್ ಮಾಡಿಕೊಳ್ಳಲು http://www.lakshadweeptourism.com/contact.html ಇಲ್ಲಿ ಕ್ಲಿಕ್ ಮಾಡಿ.
ಅನುಮತಿ ಪಡೆಯಲು ಬೇಕಾಗವು ಅಗತ್ಯ ದಾಖಲೆಗಳ ವಿವರ:
- ಪಾಸ್‌ಪೋರ್ಟ್ ಸೈಜ್ ಫೋಟೋ
- ಅಧಿಕೃತ ಗುರುತಿನ ಚೀಟಿ(ಆಧಾರ್ ಕಾರ್ಡ್, ಮತದಾರನ ಗುರುತಿನ ಚೀಟಿ)
- ಪ್ರಯಾಣದ ದಾಖಲೆ( ವಿಮಾನ ಟಿಕೆಟ್ ಅಥಾವ ಬೋಟ್ ಟಿಕೆಟ್)
- ಹೊಟೆಲ್ ಬುಕಿಂಗ್ ದಾಖಲೆ
ಮಾಲ್ಡೀವ್ಸ್‌ಗೆ ಮತ್ತೊಂದು ಸ್ಟ್ರೋಕ್, ಶೀಘ್ರದಲ್ಲೇ ಲಕ್ಷದ್ವೀಪದಲ್ಲಿ ವಿಮಾನ ನಿಲ್ದಾಣ!
ಅನುಮತಿ ಪಡೆಯಲು ನಿಗಧಿತ ಶುಲ್ಕ ಪಾವತಿಸಬೇಕು. ವಿದೇಶಿಗರಿಗೆ ಹಾಗೂ ಭಾರತೀಯರಿಗೆ ಪ್ರತ್ಯೇಕ ಶುಲ್ಕ ವಿಧಾನವಿದೆ. ಇನ್ನು ಅನುಮತಿ ಪತ್ರ ಲಕ್ಷದ್ವೀಪದಲ್ಲಿ 30 ದಿನ ಮಾತ್ರ ಸಿಗಲಿದೆ. ಅನುಮತಿ ಪತ್ರ ಪಡೆದವರು ಲಕ್ಷದ್ವೀಪದಲ್ಲಿ ಗರಿಷ್ಠ 30 ದಿನ ಮಾತ್ರ ತಂಗಲು ಸಾಧ್ಯವಿದೆ. 30 ದಿನಕ್ಕಿಂತ ಹೆಚ್ಚಿನ ದಿನ ಲಕ್ಷದ್ವೀಪದಲ್ಲಿ ತಂಗಲು ಸೂಕ್ತ ಕಾರಣಗಳನ್ನು, ದಾಖಲೆಗಳನ್ನು ನೀಡಬೇಕು. ಕೆಲ ವಿಶೇಷ ಹಾಗೂ ತುರ್ತು ಸಂದರ್ಭದಲ್ಲಿ ಮಾತ್ರ ಹೆಚ್ಚುವರಿ ದಿನ ತಂಗಲು ಅನುಮತಿಸಲಾಗುತ್ತದೆ.