ಗಂಟೆಗೆ 120 ರಿಂದ 180 ಕಿಲೋಮೀಟರ್ ವೇಗದಲ್ಲಿ ವಂದೇ ಭಾರತ್ ರೈಲುಗಳು ಚಲಿಸಬಲ್ಲವು.
ತುರ್ತು ಪರಿಸ್ಥಿತಿಗಳಲ್ಲಿ ರೈಲನ್ನು ನಿಲ್ಲಿಸಲು, ಭಾರತದ ರೈಲುಗಳಲ್ಲಿ ಚೈನ್ ಎಳೆಯುವುದು ಒಂದು ಸಾಮಾನ್ಯ ವಿಧಾನವಾಗಿತ್ತು. ಆದರೆ, ಪ್ರಯಾಣಿಕರು ಬೇಕಾಬಿಟ್ಟಿ ಚೈನ್ ಎಳೆಯುವುದು ಭಾರತೀಯ ರೈಲ್ವೆಗೆ ದೊಡ್ಡ ತಲೆನೋವಾಗಿತ್ತು. ಆದರೆ, ವಂದೇ ಭಾರತ್ ಬಂದ ಮೇಲೆ ಪರಿಸ್ಥಿತಿ ಬದಲಾಗಿದೆ. ಉತ್ತಮ ಸೌಲಭ್ಯಗಳು ಮತ್ತು ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಬಂದ ವಂದೇ ಭಾರತ್ ರೈಲುಗಳು ಇತರ ರೈಲುಗಳಿಗಿಂತ ಒಂದು ಹೆಜ್ಜೆ ಮುಂದಿವೆ. ಸಮಯ ಉಳಿತಾಯದಲ್ಲೂ ವಂದೇ ಭಾರತ್ ಬೆಸ್ಟ್. ಸಾಮಾನ್ಯವಾಗಿ 10-14 ಗಂಟೆಗಳು ಬೇಕಾಗುವ ಪ್ರಯಾಣಕ್ಕೆ ವಂದೇ ಭಾರತ್‌ನಲ್ಲಿ ಕೇವಲ 8 ಗಂಟೆಗಳು ಸಾಕು. ಟಿಕೆಟ್ ದರ ಸ್ವಲ್ಪ ಹೆಚ್ಚಾದರೂ, ಉತ್ತಮ ಸೇವೆಯಿಂದ ಪ್ರಯಾಣಿಕರಿಗೆ ಯಾವುದೇ ಬೇಸರವಿಲ್ಲ. ಇನ್ನು ವಂದೇ ಭಾರತ್ ಸ್ಲೀಪರ್ ರೈಲುಗಳು ಬಂದರೆ, ಜನಪ್ರಿಯತೆ ಹೆಚ್ಚಾಗುವುದು ಗ್ಯಾರಂಟಿ.
ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುವಾಗ ತುರ್ತು ಪರಿಸ್ಥಿತಿ ಎದುರಾದರೆ ಏನು ಮಾಡಬೇಕು ಎಂಬ ಅನುಮಾನ ಹಲವರಿಗಿದೆ. ವಂದೇ ಭಾರತ್ ನಿಲ್ಲಿಸಲು ಚೈನ್ ಎಳೆದರೆ ಸಾಕಾ ಎನ್ನುವ ಪ್ರಶ್ನೆ ಎಲ್ಲರಲ್ಲಿದೆ. ಆದರೆ, ತುರ್ತು ಸಂದರ್ಭಗಳಲ್ಲಿ ರೈಲು ನಿಲ್ಲಿಸಲು ವಂದೇ ಭಾರತ್‌ನಲ್ಲಿ ಚೈನ್ ಇಲ್ಲ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು. ಹಾಗಾದರೆ ರೈಲನ್ನು ನಿಲ್ಲಿಸೋದು ಹೇಗೆ ಅನ್ನೋ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸಬಹುದು..
ಗಂಟೆಗೆ 120 ರಿಂದ 180 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ತಕ್ಷಣ ನಿಲ್ಲಿಸುವುದು ಸುಲಭವಲ್ಲ. ಆದರೆ, ಅಗತ್ಯವಿದ್ದಾಗ ರೈಲು ನಿಲ್ಲಿಸಲು ಅಥವಾ ಅಧಿಕಾರಿಗಳಿಗೆ ಮಾಹಿತಿ ನೀಡಲು ಪ್ರಯಾಣಿಕರು ಲೋಕೋ ಪೈಲಟ್‌ಗೆ ಸಂಪರ್ಕಿಸಲು ಅಲಾರಂ ವ್ಯವಸ್ಥೆ ಇದೆ. ಇದನ್ನು ಅತ್ಯಂತ ಅಗತ್ಯವಿದ್ದಾಗ ಮಾತ್ರ ಬಳಸಬೇಕು.
ಭಾರತದ ಟಾಪ್ 10 ಅತ್ಯಂತ ವೇಗದ ರೈಲುಗಳ ಬಗ್ಗೆ ನಿಮಗೆಷ್ಟು ಗೊತ್ತು?
ಅಲಾರಂ ಇರುವ ಜಾಗದಲ್ಲಿ ಕ್ಯಾಮೆರಾ ಮತ್ತು ಮೈಕ್ ಕೂಡ ಇವೆ. ಅಲಾರಂ ಮೊಳಗಿದರೆ, ಲೋಕೋ ಪೈಲಟ್‌ಗೆ ಸಿಗ್ನಲ್ ಸಿಗುತ್ತದೆ. ಕ್ಯಾಮೆರಾ ಮೂಲಕ ಲೋಕೋ ಪೈಲಟ್ ನಿಮ್ಮನ್ನು ನೋಡಬಹುದು ಮತ್ತು ಮಾತನಾಡಬಹುದು. ತುರ್ತು ಪರಿಸ್ಥಿತಿ ಎಂದು ಲೋಕೋ ಪೈಲಟ್‌ಗೆ ಖಚಿತವಾದರೆ, ರೈಲು ನಿಲ್ಲಿಸುತ್ತಾರೆ. ಅನಗತ್ಯವಾಗಿ ಅಲಾರಂ ಮೊಳಗಿಸಿದರೆ, ಭಾರತೀಯ ರೈಲ್ವೆ ಕಠಿಣ ಕ್ರಮ ಕೈಗೊಳ್ಳುತ್ತದೆ.
ಬೆಮೆಲ್ ನಿರ್ಮಿತ ಕೋಚ್ ಕಳಪೆ, ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ಟ್ರೇನ್ ಇನ್ನಷ್ಟು ವಿಳಂಬ
