ಕನ್ನಡದ ಯೂಟ್ಯೂಬರ್ ಡಾ. ಬ್ರೋ ನೇಪಾಳದ ಕುಮಾರಿ ಪದ್ಧತಿಯ ಬಗ್ಗೆ ವಿಡಿಯೋ ಮಾಡಿದ್ದಾರೆ. ಕುಮಾರಿಯೆಂದರೆ ದೇವಿಯಂತೆ ಪೂಜಿಸಲ್ಪಡುವ ಹೆಣ್ಣು ಮಗು. ಕುಮಾರಿಯನ್ನು ಆಯ್ಕೆ ಮಾಡುವ ವಿಧಾನ, ಪೂಜೆ, ನಂಬಿಕೆಗಳು ಹಾಗೂ ಕುಮಾರಿಯಾದ ನಂತರದ ಜೀವನದ ಬಗ್ಗೆ ಡಾ. ಬ್ರೋ ಮಾಹಿತಿ ನೀಡಿದ್ದಾರೆ. ಈ ವಿಡಿಯೋಗೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕನ್ನಡದ ದಿ ಬೆಸ್ಟ್ ಯೂಟ್ಯೂಬರ್ ಡಾ. ಬ್ರೋ (Kannada The Best YouTuber Dr. Bro) ನೇಪಾಳದಲ್ಲಿದ್ದಾರೆ. ನೇಪಾಳ (Nepal)ದ ಜನ ದೇವತೆ ಎಂದು ಪೂಜಿಸುವ ಕುಮಾರಿ ಪರಿಚಯವನ್ನು ಡಾ. ಬ್ರೋ ಅಚ್ಚುಕಟ್ಟಾಗಿ ಜನರಿಗೆ ತಿಳಿಸಿದ್ದಾರೆ. ಡಾ. ಬ್ರೋ ಮುಂದಿನ ವಿಡಿಯೋ ಯಾವಾಗ ಅಂತ ಪ್ರಶ್ನೆ ಮಾಡ್ತಿದ್ದ ಜನರಿಗೆ, ನೇಪಾಳ ಜನರ ಸಂಸ್ಕೃತಿಯಲ್ಲಿ ಒಂದಾದ ಕುಮಾರಿ ಪೂಜೆಯನ್ನು ಪರಿಚಯಿಸಿ ವೀಕ್ಷಕರಿಗೆ ಖುಷಿ ನೀಡಿದ್ದಾರೆ. 

ನೇಪಾಳದಲ್ಲಿ ಮಕ್ಕಳನ್ನು ದೇವಿಯಂತೆ ಪೂಜಿಸಲಾಗುತ್ತದೆ. ಜೀವಂತ ದೇವಿ ಎಂದು ಮಕ್ಕಳನ್ನು ಅವರು ನಂಬುತ್ತಾರೆ. ಆ ಕುಮಾರಿಯರು ವಾಸವಾಗಿರುವ ಜಾಗಕ್ಕೆ ಭೇಟಿ ನೀಡಿದ್ದ ಡಾ. ಬ್ರೋ, ನೇಪಾಳದಲ್ಲಿ ಮಗುವನ್ನು ಕುಮಾರಿಯಾಗಿ ಹೇಗೆ ಆಯ್ಕೆ ಮಾಡಿಕೊಳ್ತಾರೆ, ಅವರಿಗೆ ಪೂಜೆ ಹೇಗೆ ನಡೆಯುತ್ತೆ, ಅವರು ನಕ್ಕರೆ ಏನು ಅರ್ಥ ಎಂಬೆಲ್ಲ ಮಾಹಿತಿಯನ್ನು ನೀಡಿದ್ದಾರೆ. 

ನೇಪಾಳದಲ್ಲಿ ಮಕ್ಕಳಿಗೆ ಪೂಜೆ : ಹೆಣ್ಣು ಮಕ್ಕಳು ಹುಟ್ಟಿದ ಕ್ಷಣದಿಂದಲೇ ಅವರನ್ನು ಮನೆಯಿಂದ ಬೇರ್ಪಡಿಸಲಾಗುತ್ತದೆ. ಅವರನ್ನು ಕುಮಾರಿ ಎಂದು ಕರೆಯಲಾಗುತ್ತದೆ. ಕುಮಾರಿಯನ್ನು ಹಿಂದೂಗಳು ಪೂಜಿಸುವ ಶಕ್ತಿ ದೇವತೆ ಮಹಾಕಾಳಿಯ ಒಂದು ರೂಪ ಎಂದು ನೇಪಾಳಿಗಳು ನಂಬುತ್ತಾರೆ. ದೇವಿಯಾಗಿ ಆಯ್ಕೆಯಾಗೋದು ಸುಲಭವಲ್ಲ. ಹೆಣ್ಣು ಮಕ್ಕಳು 32 ಹಂತಗಳಲ್ಲಿ ಕಠಿಣ ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ. 108 ಎಮ್ಮೆ ಹಾಗೂ 108 ಕುರಿಯ ದೇಹವನ್ನು ಕತ್ತರಿಸಿ ಇಡಲಾಗುತ್ತದೆ. ಯಾವುದೇ ಭಯವಿಲ್ಲದೆ ಅದನ್ನು ದಾಟುವ ಹುಡುಗಿಗೆ ಕುಮಾರಿ ಮುಂದಿನ ಹಂತಕ್ಕೆ ಆಯ್ಕೆಯಾಗ್ತಾಳೆ. ನಂತ್ರ ಕುರಿ ತಲೆ ಇರುವ ಕೋಣೆಯಲ್ಲಿ ಇಡೀ ರಾತ್ರಿಯನ್ನು ಕುಮಾರಿ ಕಳೆಯಬೇಕು. ಎಲ್ಲ ಪರೀಕ್ಷೆ ಗೆದ್ದ ಮೇಲೆ ಆಕೆಗೆ ಕುಮಾರಿ ಎಂಬ ಪಟ್ಟ ಕಟ್ಟಲಾಗುತ್ತದೆ. ವಿಶೇಷ ದೇವಸ್ಥಾನದಲ್ಲಿ ಅವರನ್ನು ಇರಿಸಲಾಗುತ್ತದೆ. ಕುಮಾರಿ ದೊಡ್ಡವರಾಗ್ತಿದ್ದಂತೆ ಅವರು ಪಟ್ಟದಿಂದ ಕೆಳಗಿಳಿದು ಸಾಮಾನ್ಯರಂತೆ ಜೀವನ ನಡೆಸಬಹುದು. ಇನ್ನೊಬ್ಬರಿಗೆ ಪಟ್ಟಾಭಿಷೇಕ ನಡೆಯುತ್ತದೆ. ಈ ಕುಮಾರಿಯನ್ನು ಅಲ್ಲಿನ ಪ್ರತಿಯೊಬ್ಬರು ಪೂಜಿಸುತ್ತಾರೆ. ಪ್ರತಿ ದಿನ ಅಲ್ಲಿಗೆ ಬರುವ ನೂರಾರು ಭಕ್ತರನ್ನು ಆಶೀರ್ವದಿಸುವ ಕೆಲಸ ಕುಮಾರಿಯದ್ದು. 

ಕಂಡವರ ತೋಟದಲ್ಲಿ ಆಪಲ್ ತಿನ್ನೋದೇ ಮಜ, ಹೊಸ ಸ್ಟೈಲ್ ನಲ್ಲಿ ಡಾ. ಬ್ರೋ ಮಿಂಚಿಂಗ್

ಕುಮಾರಿಯನ್ನು ಅವಿನಾಶಿ ಅಂದ್ರೆ ಎಂದಿಗೂ ಅಂತ್ಯವಿಲ್ಲದವರು ಎಂದು ಪರಿಗಣಿಸಲಾಗುತ್ತದೆ. ಕುಮಾರಿ ತಮ್ಮನ್ನು ದುಷ್ಟಶಕ್ತಿಗಳಿಂದ ರಕ್ಷಿಸುತ್ತಾಳೆ ಎಂದು ಜನರು ನಂಬುತ್ತಾರೆ. ಸಾವಿರಾರು ಹಿಂದೂಗಳು ಮತ್ತು ಬೌದ್ಧರು ಅನೇಕಾನೇಕ ವರ್ಷಗಳಿಂದ ಕುಮಾರಿಯನ್ನು ಪೂಜಿಸುತ್ತಾರೆ ಬಂದಿದ್ದಾರೆ. ಕೆಲ ಕುಮಾರಿಯರು ತಮ್ಮದೇ ವಿಶೇಷತೆಯನ್ನು ಹೊಂದಿರುತ್ತಾರೆ. ಡಾ. ಬ್ರೋ ತೋರಿಸಿದ ಕುಮಾರಿಯೊಬ್ಬರು ಎಂದೂ ನಗೋದಿಲ್ಲ, ಅಳೋದಿಲ್ಲ. ಒಂದ್ವೇಳೆ ಅವರು ಯಾವುದೇ ವ್ಯಕ್ತಿಯನ್ನು ನೋಡಿ ಅತ್ತರೆ ಅವರಿಗೆ ಕಷ್ಟಬರ್ತಿದೆ ಎಂದರ್ಥ. ಅದೇ ನಕ್ಕರೆ ಅವ್ರು ಸತ್ರು ಎಂದೇ ಜನರು ನಂಬುತ್ತಾರೆ. 

ನೇಪಾಳದ ಭಕ್ತಪುರಕ್ಕೆ ಭೇಟಿ ನೀಡಿದ ಡಾ.ಬ್ರೋ, ಕುಮಾರಿಗೆ ಸಂಬಂಧಿಸಿದ ಅನೇಕ ವಿಷ್ಯಗಳನ್ನು ತಮ್ಮ ಯೂಟ್ಯೂಬ್ ನಲ್ಲಿ ತಿಳಿಸಿದ್ದಾರೆ. ಕುಮಾರಿ ಪಾಲಕರನ್ನು ಮಾತನಾಡಿಸಿದ್ದಾರೆ. ಮಗು ಕುಮಾರಿಯಾಗೋದು ಹೆಮ್ಮೆ ಎನ್ನುವ ಪಾಲಕರು, ಮಗುವನ್ನು ಎಲ್ಲರೂ ಪೂಜಿಸೋದು ಖುಷಿ ನೀಡಿದೆ ಎಂದಿದ್ದಾರೆ. ಕುಮಾರಿಯನ್ನೂ ಮಾತನಾಡಿಸಿದ ಡಾ. ಬ್ರೋ, ಮಗು ದೇವರು ಎನ್ನುತ್ತಾರೆ, ದೇವರ ಸ್ಥಾನದಲ್ಲಿ ಮಗುವನ್ನು ಕುಳಿಸಿದ್ದು, ಅವರನ್ನು ಮಾತನಾಡಿಸಿದ್ದು ಖುಷಿ ನೀಡಿದೆ. ಇದು ಇಲ್ಲಿನವರ ನಂಬಿಕೆ ಎನ್ನುತ್ತ ಕುಮಾರಿಗೆ ಪೂಜೆ ಮಾಡಿದ್ದಾರೆ. ಹಿಂದೆ ಕುಮಾರಿಯಾಗಿ ಈಗ ಪಟ್ಟದಿಂದ ಕೆಳಗಿಳಿದ ಹುಡುಗಿಯ ಅನುಭವವನ್ನೂ ವೀಕ್ಷಕರ ಮುಂದಿಟ್ಟಿದ್ದಾರೆ.

ತಲೆಗೆ ಮೊಟಕುತ್ತೆ, ಮೈಮೇಲೆ ನೆಗೆದು ಪರಚುತ್ತೆ ! ಈ ಕೋತಿ ಕಾಟಕ್ಕೆ ಜನ ಸುಸ್ತೋ ಸುಸ್ತು

ಡಾ. ಬ್ರೋ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ ಬಂದಿದೆ. ಬೇಗ ಮದುವೆಗೆ ಹುಡುಗಿ ಸಿಗ್ಲಿ ಅಂತ ಡಾ. ಬ್ರೋ ಕುಮಾರಿ ಮುಂದೆ ಬೇಡಿಕೊಂಡಿದ್ದಾರೆ ಅಂತ ಕಾಲೆಳೆದಿದ್ದಾರೆ. ನೇಪಾಳಕ್ಕೆ ಹೋಗಿ, ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ವಿಡಿಯೋ ಮಾಡಿದ ಡಾ. ಬ್ರೋ ಅವರನ್ನು ಜನರು ಮನಸ್ಪೂರ್ವಕವಾಗಿ ಹೊಗಳಿದ್ದಾರೆ. 

YouTube video player