ಶೇವಿಂಗ್​ ಮಾಡಿಸಿಕೊಂಡ್ರೆ 800 ರೂ. ಬೋಳಿಸ್ತಾರೆ ... ಖಾಲಿ ದೋಸೆಗೂ 450 ಕೇಳ್ತಾರೆ ... ಅಬ್ಬಬ್ಬಾ ಎಲ್ಲಿದು ಅಂತೀರಾ?

ಅತ್ಯಂತ ದುಬಾರಿ ಎನಿಸಿರುವ ಪುಟ್ಟ ದ್ವೀಪದ ಕುರಿತು ಡಾ.ಬ್ರೋ ಇಂಟರೆಸ್ಟಿಂಗ್​ ಮಾಹಿತಿ ನೀಡಿದ್ದಾರೆ. ಅದ್ಯಾವ ರಾಷ್ಟ್ರ ಗೊತ್ತಾ?
 

Dr Bro has given interesting information about the little island Jubuti suc

ಶೇವಿಂಗ್​ ಮಾಡಿಸಿಕೊಂಡ ಮೇಲೆ ಗೊತ್ತಾಗುತ್ತೆ ಇದಕ್ಕೆ 800 ರೂಪಾಯಿ ಅಂತ, ಒಂದೇ ಒಂದು ಖಾಲಿ ದೋಸೆ ತಿಂದ್ರೂ ಅದಕ್ಕೆ 450 ರೂಪಾಯಿ! 20 ರೂಪಾಯಿ ಬಿಸ್ಕೆಟ್​ ಇಲ್ಲಿ 120 ರೂಪಾಯಿ...! ಅಬ್ಬಬ್ಬಾ ಇಂಥ ದುಬಾರಿ ಹೋಟೆಲ್​ ಯಾವುದು, ಅದು ಎಲ್ಲಿದೆ ಅಂತ ಕೇಳ್ತೀರಾ? ಇದರ ಬಗ್ಗೆ ಸಂಪೂರ್ಣ ಮಾಹಿತಿ ಕೊಟ್ಟಿದ್ದಾರೆ  ಡಾ.ಬ್ರೋ.  ದೇಶ-ವಿದೇಶಗಳ ಇಂಟರೆಸ್ಟಿಂಗ್​ ಮಾಹಿತಿ ನೀಡುತ್ತಿರುವ ಡಾ.ಬ್ರೋ ಅರ್ಥಾತ್​ ಗಗನ್​ ಅವರು ಕೆಲ ತಿಂಗಳ ಹಿಂದೆ ಮಾಡಿರುವ ಈ ಕುತೂಹಲದ ದೇಶದ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್​ ಆಗುತ್ತಿದೆ.

ಇಷ್ಟೆಲ್ಲಾ ದುಬಾರಿ ಬೆಲೆ ಬಾಳುವ ದೇಶ ಯಾವುದು ಗೊತ್ತಾ? ಅದೇ ಜುಬುಟಿ. ಹೆಚ್ಚಿನ ಜನರು ಇದರ ಹೆಸರು ಕೇಳಿರಲಿಕ್ಕಿಲ್ಲ. ಅತ್ಯಂತ ಚಿಕ್ಕ ದೇಶ ಎನಿಸಿದೆ  ಜಿಬುಟಿ. ಇದರ ಜನಸಂಖ್ಯೆ 10 ಲಕ್ಷ ಮಾತ್ರ. ಇದೊಂದು ದ್ವೀಪ.  ಜಗತ್ತಿನಲ್ಲೇ ಎರಡನೇ ಅತಿ ಹೆಚ್ಚು ಜನಸಂಖ್ಯೆಯ ಭೂಖಂಡ ಆಫ್ರಿಕಾದಲ್ಲಿರುವ ಪುಟ್ಟ ರಾಷ್ಟ್ರವಿದು. ಇದರ ಬಗ್ಗೆ ರೋಚಕ ಅನುಭವಗಳನ್ನು ಡಾ.ಬ್ರೋ ಹೇಳಿದ್ದಾರೆ. ಭೂತ-ಪ್ರೇತಗಳು ಇರುವ ದ್ವೀಪರಾಷ್ಟ್ರ ಎಂದೂ ಇದಕ್ಕೆ ಕರೆಯಲಾಗುತ್ತದೆ.  ಅಸಲಿಗೆ ಹೇಳಬೇಕೆಂದರೆ, ಈ ದೇಶದ ವಿಸ್ತೀರ್ಣ ಕೇವಲ 23 ಸಾವಿರದ 200 ಚದರ ಕಿ.ಮೀ. ಹಾಗೆ ಹೇಳುವುದಾದರೆ ಇದು  ಕೇರಳ ರಾಜ್ಯಕ್ಕಿಂತಲೂ  ಕಡಿಮೆ ವಿಸ್ತೀರ್ಣ ಹೊಂದಿರುವ ದ್ವೀಪ ರಾಷ್ಟ್ರ.  ಜಿಬುಟಿ ಭೌಗೋಳಿಕವಾಗಿ ಆಯಕಟ್ಟಿನ ಜಾಗದಲ್ಲಿದೆ. ಇದೇ ಕಾರಣಕ್ಕೆ ಬಲಾಢ್ಯ ರಾಷ್ಟ್ರಗಳ ಮಿಲಿಟರಿಗೆ ಇದೇ ಅಚ್ಚುಮೆಚ್ಚಿನ ತಾಣ. ಇದರ ಆರ್ಥಿಕತೆ ನಡೆಯುತ್ತಿರುವುದೇ ಚೀನಿ ಸಾಲದ ಆಧಾರದಲ್ಲಿ. 

ಬಾವಿಯ ತುಂಬಾ ಹೆಣಗಳ ರಾಶಿ: ಶ್ರೀರಾಮ ಉಳಿದ ಪ್ರಯಾಗರಾಜ್​ನ ಕೌತುಕ ವಿವರಿಸಿದ್ದಾರೆ ಡಾ.ಬ್ರೋ

ಅಷ್ಟೇ ಅಲ್ಲದೇ, ಅಂತಾರಾಷ್ಟ್ರೀಯ ಹಡಗುಗಳ ಸಂಚಾರ ಮಾರ್ಗವಾಗಿರುವ ಪ್ರಸಿದ್ಧ ಸುಯೇಜ್ ಕಾಲುವೆ, ಕೆಂಪು ಸಮುದ್ರ ಮತ್ತು ಗಲ್ಫ್‌ ಆಫ್ ಏಡನ್‌ಗೂ ಇದರ ನಂಟಿದ್ದು, ಇದರ ಬಗ್ಗೆ ಕೆಲವೊಂದು ಮಾಹಿತಿಗಳನ್ನು ಡಾ.ಬ್ರೋ ನೀಡಿದ್ದಾರೆ. ಈ ದ್ವೀಪವನ್ನು ಅಲ್ಲಿಯ ಜನ ಸೈತಾನ್​ ಎಂದು ಕರೆಯುತ್ತಾರಂತೆ. ಅರ್ಥಾತ್​ ಭೂತ-ಪ್ರೇತಗಳು ಇರುವ ಜಾಗ ಎಂದು. ಇದಕ್ಕೆ ಕಾರಣವೇನೆಂದರೆ, ಈ ದ್ವೀಪದ ಸಮೀಪ ಹೋದವರು ಯಾರೂ ವಾಪಸ್​ ಬರುವುದೇ ಇಲ್ಲವಂತೆ. ಹಿಂದೆ ಹಡಗಿನಲ್ಲಿ ಹೋಗಿದ್ದ ಮೀನುಗಾರರ ಗುಂಪು ವಾಪಸಾಗಲೇ ಇಲ್ಲವಂತೆ. ಇಲ್ಲಿನ ಸುದ್ದಿ ಕೇಳಿದ ಪ್ರಯಾಣಿಕನೊಬ್ಬ ತಾನೂ ನೋಡೇ ಬಿಡೋಣ ಎಂದು ದ್ವೀಪದ ಸಮೀಪ ಹೋದಾಗ ಚಿತ್ರ-ವಿಚಿತ್ರ ಪ್ರಾಣಿಗಳು ಎದುರಾಗಿ ಸತ್ತೆನೋ ಎದ್ದೆನೋ ಎಂದು ವಾಪಸ್​ ಓಡಿ ಬಂದಿರುವ ಬಗ್ಗೆ ಡಾ.ಬ್ರೋ ತಿಳಿಸಿದ್ದು, ಇದೇ ಕಾರಣಕ್ಕೆ ಯಾರೂ ಅದರ ಸಮೀಪ ಹೋಗುವುದಿಲ್ಲ ಎನ್ನುವ ಮಾಹಿತಿ ನೀಡಿದ್ದಾರೆ.

ಇಲ್ಲಿಯ ಜನರ ಆಹಾರ ಬ್ರೆಡ್​.  ಅವರು ನಿತ್ಯ ಸೇವನೆ ಮಾಡೋದು ಫ್ರೆಂಚ್ ಬ್ರೆಡ್. ಉದ್ದುದ್ದ ಇರುವ ಈ ಫ್ರಾನ್ಸ್ ಬ್ರೆಡ್ ಅಲ್ಲಿ ನಿತ್ಯದ ಆಹಾರವಾಗಿದೆ. ಕುತೂಹಲದ ಮಾಹಿತಿ ಎಂದರೆ ಜಿಬುಟಿಯಲ್ಲೂ ಜನರು ಫ್ರಾನ್ಸ್ ಬ್ರೆಡ್ ನೆಚ್ಚಿಕೊಂಡಿದ್ದಾರೆ.  ಜಿಬುಟಿ ಜನರು ಹೆಚ್ಚು ಸೇವನೆ ಮಾಡುವ ಫ್ರೆಂಚ್ ಬ್ರೆಡನ್ನು ಫ್ರಾನ್ಸ್ ನಲ್ಲಿ ಬ್ಯಾಗೆಟ್ ಎಂದು ಕರೆಯಲಾಗುತ್ತದೆ. ಅದನ್ನು ಗೋಧಿ ಹಿಟ್ಟು, ನೀರು, ಯೀಸ್ಟ್ ಮತ್ತು ಉಪ್ಪು ಈ ನಾಲ್ಕು ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಈ ನಾಲ್ಕು ಪದಾರ್ಥದಿಂದ ತಯಾರಾಗುವ ಬ್ರೆಡನ್ನು ಸಾಂಪ್ರದಾಯಿಕ ಫ್ರೆಂಚ್ ಬ್ರೆಡ್ ಎಂದು ಕರೆಯಲಾಗುತ್ತದೆ. ಆದ್ರೆ ಈಗ ಅದಕ್ಕೆ ಬೇರೆ ಪದಾರ್ಥಗಳನ್ನು ಬೆರೆಸುವ ರೂಢಿ ಬೇರೆ ದೇಶಗಳಲ್ಲಿದೆ. ಬ್ಯಾಗೆಟ್  ಸುಮಾರು 5 ರಿಂದ 6 ಸೆಂ.ಮೀ ವ್ಯಾಸವನ್ನು ಹೊಂದಿರುತ್ತದೆ. ಸುಮಾರು 65 ಸೆಂ.ಮೀ ಉದ್ದವನ್ನು ಹೊಂದಿರುತ್ತದೆ.  ಬ್ಯಾಗೆಟ್  ಕ್ಲಾಸಿಕ್ ಒಂದು ಗರಿಗರಿಯಾದ ಕ್ರಸ್ಟ್ನೊಂದಿಗೆ ಬಿಳಿಯಾಗಿರುತ್ತದೆ ಮತ್ತು ಯೀಸ್ಟ್ನೊಂದಿಗೆ ಹುಳಿಯಾಗುತ್ತದೆ. ಫ್ರಾನ್ಸ್‌ ಕಾನೂನಿನ ಪ್ರಕಾರ, ಉದ್ದವಾದ ಬ್ರೆಡ್ ಗೆ ಎಣ್ಣೆ ಅಥವಾ ಕೊಬ್ಬನ್ನು ಸೇರಿಸಲಾಗುವುದಿಲ್ಲ ಎಂಬ ಮಾಹಿತಿಯನ್ನೂ ಡಾ.ಬ್ರೋ ನೀಡಿದ್ದಾರೆ. 

ಗಂಗಾ, ಯಮುನೆ, ಸರಸ್ವತಿಯ ಒಡಲು ತ್ರಿವೇಣಿ ಸಂಗಮದ ಸಂಪೂರ್ಣ ದರ್ಶನ ಮಾಡಿ ಪುಳಕಿತರಾದ ಭಕ್ತರು
 

ಇದರ ವಿಡಿಯೋದ ಲಿಂಕ್​ ಇಲ್ಲಿದೆ:

ಶೇವಿಂಗ್​ ಮಾಡಿಸಿಕೊಂಡ್ರೆ 800 ರೂ... ಖಾಲಿ ದೋಸೆಗೆ 450 ರೂ... ಅಬ್ಬಬ್ಬಾ ಎಲ್ಲಿದು ಅಂತೀರಾ?


 

Latest Videos
Follow Us:
Download App:
  • android
  • ios