Asianet Suvarna News Asianet Suvarna News

ಇಂಡೋನೇಷ್ಯಾ ಟ್ರಿಪ್ ಹೋಗ್ತಿದ್ದೀರಾ... ಹಾಗಿದ್ರೆ ಇದ್ನ ಮಿಸ್ ಮಾಡ್ಬೇಡಿ

ಇಂಡೋನೇಷ್ಯಾ ಪ್ರವಾಸ ಹೋಗುವವರಿಗೆ ಹೊಸ ಆಕರ್ಷಣೆಯಾಗಿ  ಪ್ರಕೃತಿಯ ವಿಸ್ಮಯವೊಂದು  ಕಾಯುತ್ತಿದೆ. ಇಲ್ಲಿನ ಶಾಂತವಾದ ಸಮುದ್ರವೊಂದರಲ್ಲಿ  ಡಾನ್ಸ್‌ ಮಾಡುತ್ತಿದ್ದಾಗಲೇ ಕಲ್ಲಾದಂತೆ ನೋಡುಗರಿಗೆ ಅನಿಸುವ ಸುಂದರವಾದ ಡಾನ್ಸಿಂಗ್ ಮರಗಳಿವೆ. 

do you know what is the main attraction of Indonesia tourism read here akb
Author
Bangalore, First Published Jun 14, 2022, 2:56 PM IST

ಒಂದೊಂದು ಪ್ರವಾಸಿ ತಾಣವೂ ಒಂದೊಂದು ಸೋಜಿಗದಿಂದ ಕೂಡಿರುತ್ತದೆ. ಇದೇ ಕಾರಣಕ್ಕೆ ಅವು ಜಗತ್ತಿನ ಅದ್ಭುತಗಳಾಗುತ್ತವೆ. ಫ್ರಾನ್ಸ್‌ ಪ್ರೇಮಿಗಳಿಗೆ ಹೇಳಿದ ಸ್ಥಳವಾದರೆ ನಮ್ಮ ಗೋವಾ (Goa) ಎಣ್ಣೆ ಮೋಜು ಮಸ್ತಿಗೆ ಫೇಮಸ್‌ ಹೀಗೆ. ಒಂದೊಂದು ಸ್ಥಳವೂ ಒಂದೊಂದು ಅದ್ಭುತವಾಗಿರುತ್ತದೆ. ಹಾಗೆಯೇ ನೀವೇನಾದರೂ ದ್ವೀಪ ರಾಷ್ಟ್ರ (Island nation) ಇಂಡೋನೇಷ್ಯಾ (Indonesia) ಪ್ರವಾಸ ಹೋಗುವವರಿದ್ದರೆ ಈ ಸ್ಥಳಕ್ಕಂತೂ ಭೇಟಿ ನೀಡಲೇಬೇಕು. ಇದು ಇಂಡೋನೇಷ್ಯಾದ ಇತ್ತೀಚಿನ ಬಹಳ ಅತ್ಯಾಕರ್ಷಕ ಪ್ರದೇಶವಾಗಿದೆ. ಇಲ್ಲಿ ಡಾನ್ಸ್ ಮಾಡುವ ಮರಗಳಿವೆ. 

ಮನುಷ್ಯರು ನೃತ್ಯ (Dance) ಮಾಡುವುದು ಸಾಮಾನ್ಯ, ಪ್ರಾಣಿಗಳು ನೃತ್ಯ ಮಾಡುವುದನ್ನು ನೀವು ನೋಡಿರಬಹುದು. ಆದರೆ ಮರಗಳು ನೃತ್ಯ ಮಾಡುವುದೆಂದರೆ ನಂಬಲಾಗದು ಅಲ್ವಾ. ಆದರೆ ಇಂಡೋನೇಷಿಯನ್ ದ್ವೀಪದಲ್ಲಿ ನೃತ್ಯ ಮರಗಳು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. (tourist Attraction) ಇಂಡೋನೇಷ್ಯಾದ ಶಾಂತ ದ್ವೀಪದಲ್ಲಿ, ಮರಗಳನ್ನು ವಿವಿಧ ನೃತ್ಯದ ಭಂಗಿಗಳಲ್ಲಿ ಕಾಣಬಹುದು. ಉಪ್ಪು ನೀರು ಮತ್ತು ಮರಳಿನಲ್ಲಿ ನಿಂತಿರುವ ನಿತ್ಯಹರಿದ್ವರ್ಣದ ಮರಗಳು ಶಾಸ್ತ್ರೀಯ ನೃತ್ಯದ ಭಂಗಿಯನ್ನು ತೋರುವ ರೀತಿಯಲ್ಲಿ ಬೆಳೆದಿವೆ ಹೀಗಾಗಿಯೇ  ಅವುಗಳನ್ನು ನೃತ್ಯ ಮಾಡುವ ಮರಗಳು ಎಂದೂ ಕರೆಯುತ್ತಾರೆ.

 
 
 
 
 
 
 
 
 
 
 
 
 
 
 

A post shared by Nature (@nature)

 

ಈ ಸುಂದರವಾದ ಮತ್ತು ಶಾಂತಿಯುತವಾದ ದ್ವೀಪವು ಅನೇಕ ವಿಷಯಗಳಿಗೆ ಹೆಸರುವಾಸಿಯಾಗಿದೆ. ಇದು ತನ್ನ ನೈಸರ್ಗಿಕ ಸೌಂದರ್ಯದಿಂದ (Natural Beauty) ಜನರನ್ನು ಆಕರ್ಷಿಸುತ್ತದೆ. ಆದರೆ ಈ ಸ್ಥಳವನ್ನು ಇನ್ನಷ್ಟು ವಿಶೇಷವಾಗಿಸುವುದು ಈ ವಿಶಿಷ್ಟವಾದ ನಿತ್ಯಹರಿದ್ವರ್ಣದ ಡಾನ್ಸಿಂಗ್‌ ಮರಗಳು.

ಸೂರ್ಯೋದಯದ ವೇಳೆ (Sun Rise) ಮತ್ತು ಸೂರ್ಯ ಅಸ್ತಮಿಸಿದಾಗ (Sun set), ಈ ಮರಗಳಿಂದಾಗಿ ಸಮುದ್ರ ತೀರವು ಇನ್ನಷ್ಟು ಸುಂದರವಾಗಿರುತ್ತದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಫೋಟೋ ತೆಗೆಯಲು ಇದು ಅತ್ಯಂತ ಪ್ರಿಯವಾದ ಸ್ಥಳವಾಗಿದೆ. ಈ ಮರಗಳು ಸಮುದ್ರತೀರದಲ್ಲಿ ನೆಲೆಗೊಂಡಿವೆ ಮತ್ತು ಅವುಗಳ ಆಕಾರವು ತುಂಬಾ ವಿಚಿತ್ರವಾಗಿದೆ. ನೃತ್ಯ ಮಾಡುವಾಗಲೇ ಅವು ಇದ್ದಲ್ಲೇ ಕಲ್ಲಾದವೇನೋ ಎಂದು ನೋಡುಗರು ಭಾವಿಸುವಂತಿವೆ ಈ ಮರಗಳು. 

ಪ್ರವಾಸಿಗರ ಸಂಖ್ಯೆ ಹೆಚ್ಚಾಗ್ತಿದ್ದಂತೆ ಹೋಮ್ ಸ್ಟೇ ಆಗಿ ಬದಲಾಗ್ತಿದೆ ಮನೆ

ಈ ಮರಗಳ ಆಕಾರವೂ ಸಾಮಾನ್ಯ ಮರಗಳಿಗಿಂತ ಸ್ವಲ್ಪ ಭಿನ್ನವಾಗಿದೆ. ಸಾಮಾನ್ಯವಾಗಿ, ಮರಗಳ ಕೊಂಬೆಗಳು ಬೇರುಗಳಿಗಿಂತ ದೊಡ್ಡದಾಗಿರುತ್ತವೆ ಮತ್ತು ದಟ್ಟವಾಗಿರುತ್ತವೆ. ಆದರೆ ಈ ಮರಗಳ ಬೇರುಗಳು ನೇರವಾಗಿ ಮತ್ತು ದೊಡ್ಡದಾಗಿರುತ್ತವೆ ಮತ್ತು ಕೊಂಬೆಗಳು ತೆಳುವಾಗಿರುತ್ತವೆ. ಸಮುದ್ರದ ಅಲೆಗಳ ಚಲನೆಯಿಂದಾಗಿ, ನಿತ್ಯಹರಿದ್ವರ್ಣದ ಈ ಮರಗಳ ಬೇರುಗಳು ಹೊರಬರುತ್ತವೆ ಮತ್ತು ಅವು ತುಂಬಾ ಸುಂದರವಾಗಿ ಕಾಣುತ್ತವೆ. ವೃತ್ತಿಪರ ಛಾಯಾಗ್ರಾಹಕರು (Professional Photographer) ತೆಗೆದ ಹಾಗೂ ಪ್ರವಾಸಿಗರು ಸರಳವಾಗಿ ಕ್ಲಿಕ್ ಮಾಡಿದ ಈ ಮರಗಳ ಚಿತ್ರಗಳು ತುಂಬಾ ವಿಶಿಷ್ಟವಾಗಿದ್ದು, ಅವುಗಳು ನೋಡುಗರನ್ನು ಬೆರಗುಗೊಳಿಸುತ್ತಿವೆ. 

ಕಡಿಮೆ ಬಜೆಟ್ ನಲ್ಲಿ ಕೇದಾರನಾಥ-ಬದರೀನಾಥ ಕ್ಷೇತ್ರ ದರ್ಶನ ಮಾಡಿ ಬನ್ನಿ

ಈ ಮರಗಳ ಸೌಂದರ್ಯವನ್ನು ವಿವಿಧ ಛಾಯಾಗ್ರಾಹಕರು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಚಿತ್ರಗಳನ್ನು ನೇಚರ್ ಎಂಬ ಇನ್ಸ್ಟಾಗ್ರಾಮ್‌ ಐಡಿಯಿಂದ ಪೋಸ್ಟ್ ಮಾಡಲಾಗಿದೆ. ಇದು ಮರಗಳ ಸೌಂದರ್ಯವನ್ನು ತೋರಿಸುತ್ತದೆ. ಒಂದು ವೇಳೆ ನೀವೆಲ್ಲಾದರು ಇಂಡೋನೇಷ್ಯಾ ಪ್ರವಾಸ ಹೋಗುವವರಿದ್ದಲ್ಲಿ ಈ ಸ್ಥಳವನ್ನು ನೋಡಲು ಮರೆಯದಿರಿ. 
 

Follow Us:
Download App:
  • android
  • ios