ಉಬರ್ ಬುಕ್ ಮಾಡಿದ್ದು ಚಂದ್ರಯಾನಕ್ಕಾ? ಕೋಟಿ ಮೀರಿದ ಕ್ಯಾಬ್ ಬಿಲ್ ನೋಡಿ ಪ್ರಯಾಣಿಕ ಶಾಕ್

ಉಬರ್ ಕ್ಯಾಬ್‌ನಲ್ಲಿ ಪ್ರಯಾಣಿಸಿದ ಗ್ರಾಹಕರೊಬ್ಬರು ಬಿಲ್ ನೋಡಿ ಶಾಕ್‌ಗೊಳಗಾದ ಘಟನೆ ನೋಯ್ಡಾದಲ್ಲಿ ನಡೆದಿದೆ. ಕಳೆದ ಶುಕ್ರವಾರ ದೀಪಕ್ ತೆಂಗುರಿಯಾ, ಅವರು ಉಬರ್ ಆಟೋ ಬುಕ್ ನೋಯ್ಡಾಗೆ ಮಾಡಿ ಪ್ರಯಾಣ ಮಾಡಿದ್ದಾರೆ. ಬುಕ್ಕಿಂಗ್ ವೇಳೆ ಅವರಿಗೆ ಪ್ರಯಾಣದ ದರ 62 ರೂಪಾಯಿ ತೋರಿಸಿದೆ. ಆದರೆ ಪ್ರಯಾಣ ಮುಗಿದ ನಂತರ ಆಪ್‌ನಲ್ಲಿ ಬಿಲ್‌ ನೋಡಿ ಅವರು ಹೌಹಾರುವಂತಾಗಿದೆ.

Did the Uber driver take Passenger to Chandrayaan Man shocked to see the cab bill exceeding crores akb

ನವದೆಹಲಿ: ಉಬರ್ ಕ್ಯಾಬ್‌ನಲ್ಲಿ ಪ್ರಯಾಣಿಸಿದ ಗ್ರಾಹಕರೊಬ್ಬರು ಬಿಲ್ ನೋಡಿ ಶಾಕ್‌ಗೊಳಗಾದ ಘಟನೆ ನೋಯ್ಡಾದಲ್ಲಿ ನಡೆದಿದೆ. ಕಳೆದ ಶುಕ್ರವಾರ ದೀಪಕ್ ತೆಂಗುರಿಯಾ, ಅವರು ಉಬರ್ ಆಟೋ ಬುಕ್ ನೋಯ್ಡಾಗೆ ಮಾಡಿ ಪ್ರಯಾಣ ಮಾಡಿದ್ದಾರೆ. ಬುಕ್ಕಿಂಗ್ ವೇಳೆ ಅವರಿಗೆ ಪ್ರಯಾಣದ ದರ 62 ರೂಪಾಯಿ ತೋರಿಸಿದೆ. ಆದರೆ ಪ್ರಯಾಣ ಮುಗಿದ ನಂತರ ಆಪ್‌ನಲ್ಲಿ ಬಿಲ್‌ ನೋಡಿ ಅವರು ಹೌಹಾರುವಂತಾಗಿದೆ. ಆಪ್‌ ಬಿಲ್‌ನಲ್ಲಿ ಇವರ ಪ್ರಯಾಣದ ದರ 62ರ ಬದಲು 7.66 ಕೋಟಿ ರೂಪಾಯಿ ತೋರಿಸಿದೆ. ಅದು ಪ್ರಯಾಣ ಅಂತ್ಯಗೊಳ್ಳುವ ಮೊದಲೇ..!

ಈ ವಿಚಾರವನ್ನು ದೀಪಕ್ ಸ್ನೇಹಿತ ಆಶಿಶ್ ಮಿಶ್ರಾ ಎಂಬುವವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ. ವೀಡಿಯೋದಲ್ಲಿ ಇಬ್ಬರು ಬಾರಿ ಮೊತ್ತದ ಬಿಲ್ ನೋಡಿ ಚರ್ಚಿಸುತ್ತಿರುವುದು ಕಾಣಿಸುತ್ತಿದೆ.  ಉಬರ್ ಬಿಲ್‌ನಲ್ಲಿ ತೋರಿಸುತ್ತಿರುವ ಬಿಲ್ ಅನ್ನು  ನೋಡಿ ನಿಮ್ಮ ಬಿಲ್‌ನಲ್ಲಿ ಎಷ್ಟು ತೋರಿಸುತ್ತಿದೆ ಎಂದು ಅಶಿಶ್ ಅವರು ಕೇಳುತ್ತಿರುವಾಗ ದೀಪಕ್ ಅವರು 7,66, 83, 762 ರೂಪಾಯಿ ಎಂದು ಅಚ್ಚರಿ ಹಾಗೂ ಶಾಕ್‌ನಿಂದ ಹೇಳುತ್ತಿರುವುದು ಕೇಳಿಸುತ್ತಿದೆ. ಅಲ್ಲದೇ ಇವರಿಗೆ ಕಾಯುವಿಕೆ ಸಮಯದ ಶುಲ್ಕವಾಗಿ 5,99,09189 ರೂ. ವಿಧಿಸಲಾಗಿದೆ. ತಮಾಷೆಯೆಂದರೆ ಇದರಲ್ಲಿ 75 ರೂಪಾಯಿ ಪ್ರಮೋಷನಲ್ ಶುಲ್ಕ ಎಂದು ಕಡಿತಗೊಳಿಸಲಾಗಿದೆ. ತಾನು ಚಾಲಕನನ್ನು ಬಂದ ನಂತರ ಕಾಯುವಂತೆ ಮಾಡಿಯೇ ಇಲ್ಲವಾದ್ದರಿಂದ ಇಲ್ಲಿ ಕಾಯುವಿಕೆಗೆ ಬಿಲ್ ಹಾಕಬಾರದು ಎಂದು ದೀಪಕ್ ಹೇಳುತ್ತಿದ್ದಾರೆ. ಒಂದು ವೇಳೆ ತಾನು ಚಂದ್ರಯಾನ ಮಾಡಿದರು ಇಷ್ಟೊಂದು ಬಿಲ್ ಬರುತ್ತಿರಲಿಲ್ಲ ಎಂದುದೀಪಕ್ ಅವರು ಹೇಳುವುದನ್ನು ಕೇಳಬಹುದಾಗಿದೆ. 

8 ಕಿ.ಮಿಗೆ 1,334 ರೂ ಚಾರ್ಜ್ ಮಾಡಿ ಉಬರ್, ಕೋರ್ಟ್ ಮೆಟ್ಟಿಲೇರಿದ ಗ್ರಾಹಕನಿಗೆ ಸಿಕ್ತು 10 ಸಾವಿರ ರೂ!

ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹಾಸ್ಯಮಯವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.  ಘಟನೆಗೆ ಸಂಬಂಧಿಸಿದಂತೆ ಉಬರ್ ಇಂಡಿಯಾ ಕ್ಷಮೆ ಕೇಳಿದ್ದು, ಈ ಬಗ್ಗೆ ತನಿಖೆ ಮಾಡುವುದಾಗಿ ಹೇಳಿದೆ. ನಿಮಗೆ ಉಂಟಾಗಿರುವ ತೊಂದರೆಗೆ ಕ್ಷಮೆ ಕೇಳುತ್ತೇವೆ. ಈ ಸಮಸ್ಯೆ ಬಗ್ಗೆ ಚರ್ಚೆ ಮಾಡುವುದಕ್ಕೆ ನಮಗೆ ಸ್ವಲ್ಪ ಸಮಯ ನೀಡಿ. ತನಿಖೆ ನಂತರ ಮುಂದಿನ ಅಪ್‌ಡೇಟ್ ಜೊತೆ ನಿಮ್ಮ ಮುಂದೆ ಬರುತ್ತೇವೆ ಎಂದು ಉಬರ್ ಇಂಡಿಯಾ ಪ್ರತಿಕ್ರಿಯಿಸಿದೆ. 

ಅತ್ಯಂತ ಕಠಿಣ ಭಾರತವನ್ನೇ ಗೆದ್ದರೆ ವಿಶ್ವವನ್ನೇ ಗೆದ್ದಂತೆ, ಸಂಚಲನ ಸೃಷ್ಟಿಸಿದ ಉಬರ್ CEO !

 

Latest Videos
Follow Us:
Download App:
  • android
  • ios