8 ಕಿ.ಮಿಗೆ 1,334 ರೂ ಚಾರ್ಜ್ ಮಾಡಿ ಉಬರ್, ಕೋರ್ಟ್ ಮೆಟ್ಟಿಲೇರಿದ ಗ್ರಾಹಕನಿಗೆ ಸಿಕ್ತು 10 ಸಾವಿರ ರೂ!
ನಗರಗಳಲ್ಲಿ ಟ್ಯಾಕ್ಸಿ ಸೇವೆ ಹೆಚ್ಚು ಜನಪ್ರಿಯ. ಬಹುತೇಕರ ಸಾರಿಗೆ ಸಂಪರ್ಕ ಇದಾಗಿದೆ. ಹೀಗೆ ಉಬರ್ ಬುಕ್ ಮಾಡಿ 15 ನಿಮಿಷದಲ್ಲಿ 8.8 ಕಿ.ಮೀ ದೂರ ಕ್ರಮಿಸಿದ ಗ್ರಾಹಕರನಿಗೆ ಬರೋಬ್ಬರಿ 1,334 ರೂಪಾಯಿ ಚಾರ್ಜ್ ಮಾಡಿದೆ. ಪಾವತಿ ಮಾಡಿ ಕೋರ್ಟ್ ಮೆಟ್ಟಿಲೇರಿದ ಗ್ರಾಹಕನಿಗೆ 10,000 ರೂಪಾಯಿ ಪರಿಹಾರ ನೀಡಲು ಕೋರ್ಟ್ ಸೂಚಿಸಿದೆ.
ಚಂಡಿಘಡ(ಮಾ.19) ದೇಶದ ಬಹುತೇಕ ನಗರ, ಪಟ್ಟಣಗಳಲ್ಲಿ ಆನ್‌ಲೈನ್ ಟ್ಯಾಕ್ಸಿ ಸೇವೆಗಳು ಲಭ್ಯವಿದೆ. ಹಲವು ಕಂಪನಿಗಳು ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ನೀಡುತ್ತಿದೆ. ಈ ಪೈಕಿ ಉಬರ್ ಬುಕ್ ಮಾಡಿ ತೆರಳಿದ ಗ್ರಾಹನಿಕೆ ಬರೋಬ್ಬರಿ 1,334 ರೂಪಾಯಿ ಚಾರ್ಜ್ ಮಾಡಿದ ಘಟನೆ ನಡೆದಿತ್ತು. ಕೇವಲ 8.8 ಕಿಲೋಮೀಟರ್ ದೂರದ ಪ್ರಯಾಣಕ್ಕೆ 1,334 ರೂಪಾಯಿ ಚಾರ್ಜ್ ಮಾಡಲಾಗಿತ್ತು. ಕೇವಲ 15 ನಿಮಿಷದ ಪ್ರಯಾಣಕ್ಕೆ ದುಬಾರಿ ಮೊತ್ತ ಚಾರ್ಜ್ ಮಾಡಲಾಗಿದೆ. ಹಣ ಪಾವತಿ ಮಾಡಿದ ಗ್ರಾಹಕ, ಗ್ರಾಹಕರ ಕೋರ್ಟ್ ಮೆಟ್ಟಿಲೇರಿದ್ದ. ಇದೀಗ ಕೋರ್ಟ್ ಗ್ರಾಹಕನಿಗೆ 10,000 ರೂಪಾಯಿ ಪರಿಹಾರ ನೀಡಲು ಸೂಚಿಸಿದ ಘಟನೆ ಚಂಡಿಘಡದಲ್ಲಿ ನಡೆದಿದೆ.
ಚಂಡಿಘಡ ನಿವಾಸಿ ಅಶ್ವಾನಿ ಪ್ರಶಾರ್ ಉಬರ್ ಬುಕ್ ಮಾಡಿದ್ದಾರೆ. ಆಗಮಿಸಿದ ಉಬರ್ ಟ್ಯಾಕ್ಸಿಯೊಂದಿಗೆ ರಾತ್ರಿ 10.40ಕ್ಕೆ ಪ್ರಯಾಣ ಆರಂಭಿಸಿದ್ದಾರೆ. 10.57ಕ್ಕೆ ನಿಗಿದತ ಸ್ಥಳ ತಲುಪಿದ್ದಾರೆ. 8.8 ಕಿಲೋಮೀಟರ್ ದೂರದ ಪ್ರಯಾಣಕ್ಕೆ ಉಬರ್ 1,334 ರೂಪಾಯಿ ಚಾರ್ಜ್ ಮಾಡಿದೆ. ಬುಕ್ ಮಾಡುವಾಗ 359 ರೂಪಾಯಿ ತೋರಿಸಿತ್ತು. ಆದರೆ ರೈಡ್ ಅಂತ್ಯವಾದಾಗ ದುಬಾರಿ ಮೊತ್ತ ತೋರಿಸಿದೆ. ಬೇರೆ ದಾರಿ ಕಾಣದ ಪಾವತಿ ಮಾಡಿದ ಅಶ್ವಾನಿ ಪ್ರಶಾರ್, ನೇರವಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಬೆಂಗಳೂರು ಏರ್‌ಪೋರ್ಟ್‌ನಿಂದ ಕ್ಯಾಬ್ ಬುಕ್, 50 ನಿಮಿಷ ವೇಟಿಂಗ್ ಟೈಮ್ ಕಂಡು ಕಂಗಾಲಾದ ಪ್ರಯಾಣಿಕ!
ಗ್ರಾಹಕರ ಆಯೋಗ ಈ ಕುರಿತು ವಿಚಾರಣೆ ನಡೆಸಿದ. ದಾಖಲೆಗಳನ್ನು ಪರಿಶೀಲಿಸಿದೆ. ಎರಡೂ ವಾದ ವಿವಾದಗಳನ್ನು ಆಲಿಸಿದೆ. ಉಬರ್ ದಾಖಲೆ ಪರಿಶೀಲಿಸಿದ್ದರೆ. ಕಿಲೋಮೀಟರ್‌ಗೆ 150 ರೂಪಾಯಂತೆ ಚಾರ್ಜ್ ಮಾಡಿರುವುದು ಪತ್ತೆಯಾಗಿದೆ. 8.8 ಕಿಲೋಮೀಟರ್‌ಗೆ ಹೆಚ್ಚುವರಿ ಹಣ ಪಡೆದಿರುವುದು ಸಾಬೀತಾಗಿದೆ. ಈ ಪ್ರಕರಣ ಸಂಬಂಧ ಗ್ರಾಹಕರ ಕೋರ್ಟ್ ಉಬರ್‌ಗೆ 20,000 ರೂಪಾಯಿ ದಂಡ ವಿಧಿಸಿದೆ. ಈ ಪೈಕಿ 10,000 ರೂಪಾಯಿ ಗ್ರಾಹಕನಿಗೆ ನೀಡುವಂತೆ ಸೂಚಿಸಿದೆ.
ಇತ್ತ ಪ್ರಕರಣ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ಉಬರ್ ಟ್ರಿಪ್ ವಿಭಾಗ, ಹೆಚ್ಚುವರಿಯಾಗಿ ಪಡೆದ 975 ರೂಪಾಯಿಯನ್ನು ಗ್ರಾಹಕನಿಗೆ ಹಿಂದಿರುಗಿಸಿದೆ. ಇದೀಗ ಗ್ರಾಹಕನಿಗೆ 10,000 ರೂಪಾಯಿ ಹಾಗೂ ಕೋರ್ಟ್‌ಗೆ 10,000 ರೂಪಾಯಿ ಒಟ್ಟು 20,000 ರೂಪಾಯಿ ಪಾವತಿಸಬೇಕಿದೆ. ತಾಂತ್ರಿಕ ಕಾರಣದಿಂದ ಈ ಸಮಸ್ಯೆಯಾಗಿದೆ. ಹೆಚ್ಚುವರಿಯಾಗಿ ಪಾವತಿ ಮಾಡುತ್ತಿಲ್ಲ ಎಂದು ಉಬರ್ ಹೇಳಿದೆ. ತಪ್ಪಾಗಿರುವುದನ್ನು ಒಪ್ಪಿಕೊಂಡಿರುವ ಉಬರ್ ಇದೀಗ 20,000 ರೂಪಾಯಿ ಪಾವತಿ ಮಾಡಿದೆ.
ಓಲಾ, ಊಬರ್ ಸೇರಿ ಎಲ್ಲ ಟ್ಯಾಕ್ಸಿಗಳಿಗೆ ಏಕರೂಪ ದರ ನಿಗದಿಗೊಳಿಸಿದ ಸರ್ಕಾರ; 4 ಕಿ.ಮೀ.ಗೆ 100 ರೂ. ಚಾರ್ಜ್