ದೇವರನಾಡಿನ ದೇವಿಕುಲಂನಲ್ಲಿದೆ ಸೀತೆ ಸ್ನಾನ ಮಾಡಿದ ಸರೋವರ

ದೇವರ ನಾಡು ಕೇರಳ (Kerala) ಪ್ರವಾಸಿಗರ ಫೇವರಿಟ್ ಪ್ಲೇಸ್. ಅದರಲ್ಲೂ ಮುನ್ನಾರ್‌ (Munnar)ಗೆ ಪ್ರತಿನಿತ್ಯ ಸಾವಿರಾರು ಮಂದಿ ಪ್ರವಾಸಿಗರು ವಿಸಿಟ್ (Visit) ಮಾಡ್ತಾರೆ. ಆದ್ರೆ ಮುನ್ನಾರ್‌ಗೆ ಹೋದವರು ಮಿಸ್ ಮಾಡ್ದೆ ವಿಸಿಟ್ ಮಾಡಬೇಕಾದ ಕೆಲವೊಂದು ಜಾಗಗಳಿವೆ. ಅವು ಯಾವುವು ?

Devikulam A Beautiful Hill Station In Gods Own Country Keralas Munnar Vin

ಮುನ್ನಾರ್ (Munnar) ಭಾರತದ ಕೇರಳ (Kerala) ರಾಜ್ಯದ ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯಲ್ಲಿರುವ ಒಂದು ಗಿರಿಧಾಮವಾಗಿದೆ. ಮುನ್ನಾರ್ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ದೇಶದ ಅತ್ಯಂತ ಉತ್ತಮ ಗಿರಿಧಾಮಗಳಲ್ಲಿ ಒಂದು. ಪಶ್ಚಿಮಘಟ್ಟಗಳಲ್ಲಿ ಸುಮಾರು ಆರು ಸಾವಿರ ಅಡಿಗಳ ಎತ್ತರದಲ್ಲಿ ಮುನ್ನಾರ್ ನೆಲೆಗೊಂಡಿದೆ, ಈ ಗಿರಿಧಾಮವು ಪ್ರವಾಸಿಗರಿಗೆ ಸ್ವರ್ಗ ವಾಗಿದೆ. ಆದ್ರೆ ಮುನ್ನಾರ್‌ಗೆ ತೆರಳಿದಾಗ ಬರೀ ಚಹಾ ತೋಟಗಳು ಸೌಂದರ್ಯವನ್ನು ಮಾತ್ರ ಸವಿಯುವುದಲ್ಲ. ಮುನ್ನಾರ್‌ನಲ್ಲಿ ಭೇಟಿ ನೀಡಬೇಕಾದ ಇನ್ನೂ ಕೆಲವೊಂದು ಅತ್ಯದ್ಭುತ ಪ್ರದೇಶಗಳಿವೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

ದೇವಿಕುಲಂ–ರಾಮಾಯಣದ ಸೀತೆ ದೇವಿಕುಲಂನಲ್ಲಿ ಸ್ನಾನ ಮಾಡಿದಳು
ದೇವಿಕುಲಂ ಗಿರಿಧಾಮದಲ್ಲಿರುವ ಅತ್ಯಂತ ಪ್ರಸಿದ್ಧವಾದ ಪ್ರವಾಸಿ ತಾಣವಾಗಿದೆ. ಹುಲ್ಲುಹಾಸುಗಳು ಮತ್ತು ಚಹಾ ಮತ್ತು ಮಸಾಲೆಗಳ ತೋಟದ ಹಚ್ಚ ಹಸಿರಿನ ಬೆಟ್ಟಗಳಿಂದ ಆವೃತವಾಗಿದೆ. ಈ ಗಿರಿಧಾಮ ಮುನ್ನಾರ್ ನಿಂದ ಸುಮಾರು 15 ಕಿಮೀ ದೂರದಲ್ಲಿದೆ ಮತ್ತು ಸಮುದ್ರ ಮಟ್ಟದಿಂದ 1800 ಮೀ ಎತ್ತರದಲ್ಲಿದೆ. ರಾಮಾಯಣದ ಸೀತಾ ದೇವಿಯು ಸರೋವರದ ನೀರಿನಲ್ಲಿ ಸ್ನಾನ ಮಾಡಿದ್ದಳಂತೆ. ಅಂದಿನಿಂದ ಈ ಸ್ಥಳವನ್ನು ದೇವಿಕುಲಂ ಎಂದು ಕರೆಯಲಾಗುತ್ತದೆ.

ಬೆಂಗಳೂರಿಗರೇ ಬೀಚ್ ನೋಡಬೇಕಂದ್ರೆ ಈ ಪ್ಲೇಸಿಗೆ ವಿಸಿಟ್ ಮಾಡ್ಬಹುದು!

ಈ ಸರೋವರಕ್ಕೆ ದೇವತೆಯ ಸರೋವರ ಎಂಬ ಅರ್ಥವಿದೆ. ದೇವಿಕುಲಂ ಸರೋವರವು ತನ್ನ ಪವಿತ್ರತೆಗೆ ಮಾತ್ರವಲ್ಲದೆ ಅದರ ಪರಿಹಾರ ಶಕ್ತಿಗಳಿಗೂ ಹೆಸರುವಾಸಿಯಾಗಿದೆ. ಅಲ್ಲದೆ, ಸರೋವರವು ಟ್ರೌಟ್ ಮೀನುಗಾರಿಕೆಗೆ ಹೆಸರುವಾಸಿಯಾಗಿದೆ. 

ಕುಂಡಲ ಸರೋವರ - ಏಷ್ಯಾದ ಮೊದಲ ಕಮಾನು ಅಣೆಕಟ್ಟು
ಏಷ್ಯಾದ ಮೊದಲ ಕಮಾನು ಅಣೆಕಟ್ಟು ಕುಂಡಲ ಸರೋವರ. ಹನ್ನೆರಡು ವರ್ಷಗಳಿಗೊಮ್ಮೆ ನೀಲ ಕುರುಂಜಿ ಅರಳುವ ಬೆಟ್ಟಗಳನ್ನು ಹೊಂದಿರುವ ಕುಂಡಲ, ಸುತ್ತಲೂ ಕಣಿವೆಗಳೊಂದಿಗೆ ಕುಣದಲ ಸರೋವರವನ್ನು ಕನಸಿನ ಸ್ಥಳವನ್ನಾಗಿ ಮಾಡುತ್ತದೆ. ಈ ಸ್ಥಳ ಮುನ್ನಾರ್‌ನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಕುಂಡಲ ಸರೋವರದಲ್ಲಿ ಪೆಡಲ್ ಬೋಟಿಂಗ್ ಮತ್ತು ಸ್ಪೀಡ್ ಬೋಟಿಂಗ್ ಈ ಸ್ಥಳದಲ್ಲಿ ಮತ್ತೊಂದು ಮೋಜಿನ ಚಟುವಟಿಕೆಯಾಗಿದೆ. ಸುತ್ತಲೂ ಹರಡಿರುವ ಹಸಿರು ಬೆಟ್ಟಗಳ ದೃಶ್ಯಾವಳಿಗಳನ್ನು ಹೊಂದಿರುವ ಕನ್ನಡಿಯಂತಹ ಸರೋವರವು ಭವ್ಯವಾದ ನೋಟವನ್ನು ನೀಡುತ್ತದೆ.

ಆನಮುಡಿ - ದಕ್ಷಿಣ ಭಾರತದ ಅತಿ ಎತ್ತರದ ಶಿಖರ
ಚಾರಣಿಗರು, ಪರ್ವತಾರೋಹಿಗಳು, ಛಾಯಾಗ್ರಾಹಕರು, ವನ್ಯಜೀವಿ ಉತ್ಸಾಹಿಗಳು, ಪ್ರಕೃತಿ ಪ್ರೇಮಿಗಳಿಗೆ ಆನೆಮುಡಿ ಶಿಖರ ಭೇಟಿ ನೀಡಲು ಅತ್ಯುತ್ತಮ ಸ್ಥಳವಾಗಿದೆ. ಆನಮುಡಿ ಶಿಖರ (8842 ಅಡಿ), ದಕ್ಷಿಣ ಭಾರತದ ಅತಿ ಎತ್ತರದ ಶಿಖರವು ಮುನ್ನಾರ್‌ನ ಪ್ರಮುಖ ಟ್ರೆಕ್ಕಿಂಗ್ ತಾಣವಾಗಿದೆ.

ಪ್ರವಾಸಿಗರನ್ನು ಸೆಳೆಯುವ ಚಾರ್ಮಾಡಿಯ ಮಿನಿ ಜಲಪಾತಗಳು

ಚೋಕ್ರಮುಡಿ ಶಿಖರ- ಸೂರ್ಯೋದಯ ವೀಕ್ಷಿಸಲು ಉತ್ತಮ ಸ್ಥಳ
ಚೋಕ್ರಮುಡಿಯ ಶಿಖರದಲ್ಲಿ ಉರಿಯುತ್ತಿರುವ ಸೂರ್ಯೋದಯವನ್ನು ನೀವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಚೋಕ್ರಮುಡಿ ಶಿಖರವು ಮತ್ತೊಂದು ಎತ್ತರದ ಶಿಖರವಾಗಿದೆ. ಆದರೆ ಶ್ರೇಣಿಯಿಂದ ಪ್ರತ್ಯೇಕವಾಗಿದೆ. ದಟ್ಟವಾದ ಕಾಡುಗಳು, ಕಣಿವೆಗಳು, ಪರ್ವತಗಳು ಮತ್ತು ಹಚ್ಚ ಹಸಿರಿನ ತೋಟಗಳು ಈ ಶಿಖರದಲ್ಲಿ ಕಣ್ಣಿಗೆ ಬೀಳುತ್ತವೆ . ಚಾರಣಿಗರಿಗೂ ಚೋಕ್ರಮುಡಿ ಶಿಖರವನ್ನು ಭೇಟಿ ಮಾಡಲೇಬೇಕು. ಏಕೆಂದರೆ ಇದು ನಂಬಲಾಗದ ಮುನ್ನಾರ್ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ.

ಬ್ಲಾಸಮ್ ಪಾರ್ಕ್- ಅತ್ಯುತ್ತಮ ಮಕ್ಕಳ ಸ್ನೇಹಿ ಸ್ಥಳ
ಬ್ಲಾಸಮ್ ಪಾರ್ಕ್‌ ಮಕ್ಕಳಿಗೆ ಸಮಯ ಕಳೆಯಲು ಅತ್ಯುತ್ತಮ ಸ್ಥಳವಾಗಿದೆ. ಬೆರಗುಗೊಳಿಸುವ ಹಸಿರು ಕಣ್ಮನ ತಣಿಸುತ್ತದೆ. ಗುಡ್ಡಗಾಡು ಇಳಿಜಾರುಗಳೊಂದಿಗೆ ವಿಸ್ತರಿಸಲ್ಪಟ್ಟಿದೆ. ಬ್ಲಾಸಮ್ ಪಾರ್ಕ್, ವಾಟರ್ ಸೈಕ್ಲಿಂಗ್, ಸ್ಕೇಟಿಂಗ್, ಟ್ರೀಹೌಸ್, ರೋಪ್‌ವೇಗಳು, ಬೋಟಿಂಗ್ ಸಮ್ ಪಾರ್ಕ್ ಎಲ್ಲವನ್ನೂ ಹೊಂದಿದೆ. ಹೀಗಾಗಿ ಮುನ್ನಾರ್‌ಗೆ ಹೋದಾಗ ಈ ಅತ್ಯದ್ಭುತ ಸ್ಥಳಗಳನ್ನು ವಿಸಿಟ್ ಮಾಡೋದನ್ನು ಮರೀಬೇಡಿ.

Latest Videos
Follow Us:
Download App:
  • android
  • ios