Asianet Suvarna News Asianet Suvarna News

ಸ್ವರ್ಗಕ್ಕೆ ದಾರಿ ತೋರಿಸುವ ಈ ಮೆಟ್ಟಿಲು ಹತ್ತೋಕೆ ಧೈರ್ಯ ಬೇಕು

ಪ್ರವಾಸದಲ್ಲಿ ಆಸಕ್ತಿಯಿರುವವರು, ಸಾಹಸಕ್ಕೆ ಕೈ ಹಾಕುವವರು ಹೊಸ ಹೊಸ ಪ್ರದೇಶ ವೀಕ್ಷಿಸಲು ಮುಂದಾಗ್ತಾರೆ. ವಿಶ್ವದಲ್ಲಿ ಪ್ರವಾಸಿ ತಾಣಗಳು ಸಾಕಷ್ಟಿದೆ. ಕೆಲವೊಂದು ಸ್ಥಳವನ್ನು ನೋಡ್ಬೇಕೆಂದ್ರೆ ನಿಮ್ಮ ಗುಂಡಿಗೆ ಗಟ್ಟಿಯಾಗಿರಬೇಕು. 
 

Dangerous And Scary Stairs
Author
First Published Dec 14, 2022, 3:38 PM IST

ಮೆಟ್ಟಿಲು ಏರೋದು ಇಳಿಯೋದು ಭಾರತೀಯರಿಗೆ ದೊಡ್ಡ ವಿಷ್ಯವೇನಲ್ಲ. ಯಾಕೆಂದ್ರೆ ಭಾರತದ ಬಹುತೇಕ ಯಾತ್ರಾ ಸ್ಥಳಗಳು ಪರ್ವತ ಪ್ರದೇಶದಲ್ಲಿವೆ. ಹಾಗಾಗಿ ಭಕ್ತರು ನೆಚ್ಚಿನ ದೇವರ ದರ್ಶನ ಪಡೆಯಲು ಸಾವಿರಾರು ಮೆಟ್ಟಿಲುಗಳನ್ನು ಹತ್ತುತ್ತಾರೆ. ಮೆಟ್ಟಿಲುಗಳು ಅಗಲವಾಗಿ, ನಡೆಯಲು ಆರಾಮದಾಯಕವಾಗಿದ್ದರೆ ಉತ್ತಮ. ಆದ್ರೆ ಕೆಲ ಮೆಟ್ಟಿಲುಗಳು ಅಪಾಯಕಾರಿಯಾಗಿರುತ್ತವೆ. ಸ್ವಲ್ಪ ಎಚ್ಚರ ತಪ್ಪಿದ್ರೂ ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತದೆ. ವಿಶ್ವದಲ್ಲಿ ಅಂಥ ಅಪಾಯಕಾರಿ ಮೆಟ್ಟಿಲುಗಳನ್ನು ಹೊಂದಿರುವ ಪ್ರದೇಶಗಳೂ ಸಾಕಷ್ಟಿದೆ. ನಾವಿಂದು ಅಪಾಯಕಾರಿ ಮೆಟ್ಟಿಲುಗಳನ್ನು ಹೊಂದಿರುವ ಪ್ರದೇಶಗಳ ಬಗ್ಗೆ ನಿಮಗೆ ಮಾಹಿತಿ ನೀಡ್ತೆವೆ.

ಆಂಗ್ ಕರ್ ವಾಟ್ (Angkor Wat) ದೇವಾಲಯ (Temple) : ಆಂಗ್ ಕರ್ ವಾಟ್ ದೇವಾಲಯ ಕಾಂಬೋಡಿಯಾದಲ್ಲಿರುವ ದೇವಾಲಯವಾಗಿದೆ. ಇದು 162.6 ಹೆಕ್ಟೇರ್ ಪ್ರದೇಶದಲ್ಲಿದ್ದು ವಿಶ್ವದ ಅತಿದೊಡ್ಡ ಧಾರ್ಮಿಕ ಸ್ಮಾರಕವಾಗಿದೆ. ಇಲ್ಲಿರುವ ಮೆಟ್ಟಿಲು (Stairs) ಗಳು ಭಯಾನಕವಾಗಿದೆ. ಸ್ವರ್ಗಕ್ಕೆ ಹೋಗುವ ಮೆಟ್ಟಿಲು ಎಂದೇ ಇದನ್ನು ಕರೆಯಲಾಗುತ್ತದೆ. ಶೇಕಡಾ 70ರಷ್ಟು ಮೆಟ್ಟಿಲು ಶಿಥಿಲವಾಗಿದೆ. ಮೆಟ್ಟಿಲನ್ನು ಹತ್ತಲು ಮತ್ತೆ ಇಳಿಯಲು ಹಗ್ಗದ ಸಹಾಯವನ್ನು ಪಡೆಯಬೇಕಾಗುತ್ತದೆ. ಇದು ಭಗವಂತ ವಿಷ್ಣು (Vishnu) ವಿನ ದೊಡ್ಡ ದೇವಾಲಯವಾಗಿದೆ. ವಿಷ್ಣು ದರ್ಶನ ಮಾಡ್ಬೇಕೆಂದ್ರೆ ನಿಮ್ಮ ಗುಂಡಿಗೆ ಗಟ್ಟಿಯಾಗಿರಬೇಕು. 

ಬಟು ಗುಹೆಗಳು : ವಿಶ್ವದ ಅತ್ಯಂತ ಎತ್ತದರ ಮುರುಗನ್ ಮೂರ್ತಿ ಇರುವ ಸ್ಥಳವಿದು. ಬಟು ಗುಹೆ ಮಲೇಷ್ಯಾದ ಗೊಂಬಾಕ್ ಜಿಲ್ಲೆಯಲ್ಲಿವೆ. ಈ ಗುಹೆಗಳು ಸುಣ್ಣದ ಕಲ್ಲಿನ ಬೆಟ್ಟದ ಮೇಲೆ ನೆಲೆಗೊಂಡಿವೆ. ಈ ಗುಹೆಗಳ ಹೊರತಾಗಿ ಇಲ್ಲಿ ಹಲವಾರು ದೇವಾಲಯಗಳಿವೆ. ಈ ಬೆಟ್ಟದ ಮೂಲಕ ಬಟು ನದಿ ಹರಿಯುತ್ತದೆ. ಅದಕ್ಕಾಗಿಯೇ ಇದನ್ನು ಬಟುವಿನ ಗುಹೆಗಳು ಎಂದು ಕರೆಯಲಾಗುತ್ತದೆ. ಮುರುಗನ್ ಮೂರ್ತಿ ದರ್ಶನಕ್ಕೆ  ಗುಹೆಯೊಳಗೆ 50 ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. 

ಸ್ಟ್ಯಾಚ್ಯು ಆಫ್ ಲಿಬರ್ಟಿ (Statue of Liberty) : ಸ್ಟ್ಯಾಚ್ಯೂ ಆಫ್ ಲಿಬರ್ಟಿ ಹೆಸರನ್ನು ಎಲ್ಲರೂ ಕೇಳಿರ್ತೀರಿ. ಇದು ನ್ಯೂಯಾರ್ಕ್ ಬಂದರಿನಲ್ಲಿದೆ. ಇಲ್ಲಿ 305 ಅಡಿ ಎತ್ತರವಿರುವ ತಾಮ್ರದ ಬೃಹತ್ ವಿಗ್ರಹವಿದೆ. 22 ಅಂತಸ್ತಿನ ಪ್ರತಿಮೆಯ ಮೇಲ್ಭಾಗವನ್ನು ತಲುಪಲು  354 ಅಂಕುಡೊಂಕಾದ ಮೆಟ್ಟಿಲುಗಳನ್ನು ಏರಬೇಕು.

ಫ್ಲೋರಾಲಿ ಮೆಟ್ಟಿಲುಗಳು : ನಾರ್ವೆಯ ಫ್ಲೋರಾಲಿ ವಿಶ್ವದ ಅತಿ ಎತ್ತರದ ಮೆಟ್ಟಿಲು ಎಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿ ಒಟ್ಟು 4,444 ಮೆಟ್ಟಿಲುಗಳಿವೆ. ಅವುಗಳ ಎತ್ತರ 2,427 ಅಡಿ. ಈ ಮೆಟ್ಟಿಲುಗಳನ್ನು ಕಲ್ಲಿನಿಂದ ಮಾಡಲಾಗಿಲ್ಲ. ಇವು ಮರದಿಂದ ಮಾಡಿದ ಮೆಟ್ಟಿಲುಗಳಾಗಿವೆ.  ಈ ಮೆಟ್ಟಿಲುಗಳನ್ನು ಏರಿ ಮೇಲಕ್ಕೆ ಹೋಗುವುದು ಐಫೆಲ್ ಟವರ್ ಅನ್ನು 2 ಕ್ಕಿಂತ ಹೆಚ್ಚು ಬಾರಿ ಹತ್ತಿದಂತೆ. 100 ವರ್ಷಗಳ ಹಿಂದೆ ಈ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ.

ವಿಚಿತ್ರ ರೀತಿಯಲ್ಲಿ ನ್ಯೂ ಇಯರ್ ಆಚರಿಸೋ ದೇಶವಿದು!

ಹುಷಾನ್ ಪರ್ವತ : ಇದು ಚೀನಾದಲ್ಲಿದ್ದು, ಅತ್ಯಂತ ಅಪಾಯಕಾರಿ ಮೆಟ್ಟಿಲಾಗಿದೆ. ಈ ಮೆಟ್ಟಿಲುಗಳನ್ನು ಇಲ್ಲಿಯವರೆಗೆ ಯಾರೂ ಎಣಿಸಲು ಸಾಧ್ಯವಾಗಿಲ್ಲ. ಮೆಟ್ಟಿಲ ಮೇಲೇರಿ ಹೋದ್ರೆ ಸ್ವರ್ಗದ ನೋಟವನ್ನು ಕಣ್ತುಂಬಿಕೊಳ್ಳಬಹುದು.  

ಹೈಕು ಮೆಟ್ಟಿಲುಗಳು : ಇವುಗಳನ್ನು ಕೂಡ ಸ್ವರ್ಗದ ಮೆಟ್ಟಿಲುಗಳು ಎಂದೂ ಕರೆಯುತ್ತಾರೆ. ಅವು ಮರದಿಂದ ಮಾಡಲ್ಪಟ್ಟಿದೆ. ಇಲ್ಲಿ ಒಟ್ಟು 3922 ಮೆಟ್ಟಿಲುಗಳಿವೆ. 1987 ರ ನಂತರ ಈ ಮೆಟ್ಟಿಲನ್ನು ಬಂದ್ ಮಾಡಲಾಗಿದೆ. ಆದ್ರೆ ಅನೇಕರು ಇದನ್ನು ಹತ್ತುತ್ತಾರೆ. ಇದು ಅಮೆರಿಕಾದಲ್ಲಿದೆ. 

ತೆಹಾಂಗ್ ಮೆಟ್ಟಿಲುಗಳು : ತೆಹಾಂಗ್‌ನ ಮೆಟ್ಟಿಲುಗಳು ಚೀನಾದಲ್ಲಿದೆ. ತೆಹಾಂಗ್ ಮೆಟ್ಟಿಲುಗಳ ಎತ್ತರ 300 ಅಡಿ. ಮೆಟ್ಟಿಲು ಹತ್ತಲು ದೈಹಿಕವಾಗಿ ಸದೃಢವಾಗಿರಬೇಕು. ಅರವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮಾತ್ರ ಈ ಮೆಟ್ಟಿಲುಗಳನ್ನು ಹತ್ತಬಹುದು.

Solo Travel Destinations: ಭಾರತದ ಈ ಸ್ಥಳಗಳು ಹುಡುಗೀರಿಗೆ ಸೋಲೋ ಟ್ರಿಪ್ ಮಾಡೋಕೆ ಬೆಸ್ಟ್

ಇಂಕಾ ಮೆಟ್ಟಿಲು : ಈ ಮೆಟ್ಟಿಲುಗಳು ಪೆರುವಿನ ಮಂಚು ಪಿಚು ಬೆಟ್ಟದಲ್ಲಿದೆ. ಈ ಮೆಟ್ಟಿಲುಗಳು ಗ್ರಾನೈಟ್‌ನಿಂದ ಮಾಡಲ್ಪಟ್ಟಿದೆ. ಜಾರುವ ಕಾರಣ ಇದನ್ನು ಹತ್ತುವುದು ಕಷ್ಟ. ಇದರ ಎತ್ತರ 600 ಅಡಿಗಳಿಗಿಂತ ಹೆಚ್ಚು. ಇಲ್ಲಿಗೆ ಪ್ರತಿನಿತ್ಯ 400ಕ್ಕೂ ಹೆಚ್ಚು ಪ್ರವಾಸಿಗರು ಬರುತ್ತಾರೆ. 
 

Follow Us:
Download App:
  • android
  • ios