Solo Travel Destinations: ಭಾರತದ ಈ ಸ್ಥಳಗಳು ಹುಡುಗೀರಿಗೆ ಸೋಲೋ ಟ್ರಿಪ್ ಮಾಡೋಕೆ ಬೆಸ್ಟ್
ಸೇಫ್ಟಿ ಕಾರಣಗಳಿಂದಾಗಿ, ಅನೇಕ ಬಾರಿ ಮಹಿಳೆಯರು ಬಯಸಿದರೂ ಸೋಲೋ ಟ್ರಾವೆಲ್ ಮಾಡಲು ಸಾಧ್ಯವಾಗೋದಿಲ್ಲ. ಆದ್ರೆ ನಿಮಗೆ ಸೋಲೋ ಟೂರ್ ಮಾಡೋದು ಅಂದ್ರೆ ತುಂಬಾನೆ ಇಷ್ಟ ಅಂದ್ರೆ ಇಲ್ಲಿ ಸೇಫ್ ತಾಣಗಳ ಬಗ್ಗೆ ಹೇಳ್ತೀವಿ. ಇಂದು ಭಾರತದಲ್ಲಿ ಸುರಕ್ಷಿತ ಮತ್ತು ಎಲ್ಲಾ ರೀತಿಯಲ್ಲಿ ಅತ್ಯುತ್ತಮವಾಗಿರುವಂತಹ 5 ಸ್ಥಳಗಳ ಬಗ್ಗೆ ಇಲ್ಲಿ ತಿಳಿಯೋಣ.
ಮದುವೆಗೆ ಮೊದಲು ನೀವು ಸೋಲೋ ಟ್ರಾವೆಲ್(Solo travel) ಮಾಡಿ ಎಂಜಾಯ್ ಮಾಡಲು ಬಯಸೋದಾದ್ರೆ, ಸುಂದರ ಮಾತ್ರವಲ್ಲದೆ ಸುರಕ್ಷಿತವಾದ ಅತ್ಯತ್ತಮ ಸ್ಥಳಗಳನ್ನು ಗುರುತಿಸಿ. ಭಾರತದ ಕೆಲವು ಸ್ಥಳಗಳು ಈ ವಿಷಯದಲ್ಲಿ ಸಂಪೂರ್ಣವಾಗಿ ಅತ್ಯುತ್ತಮವಾಗಿವೆ. ಇಲ್ಲಿ ನೀವು ಹಗಲಿನಲ್ಲಿ ಮಾತ್ರವಲ್ಲದೆ ರಾತ್ರಿಯಲ್ಲಿಯೂ ಮುಕ್ತವಾಗಿ ತಿರುಗಾಡಬಹುದು. ಆದ್ದರಿಂದ ಹೆಚ್ಚು ಲೇಟ್ ಮಾಡದೆ, ಈ ತಾಣಗಳ ಬಗ್ಗೆ ತಿಳಿದುಕೊಳ್ಳೋಣ.
ಮೇಘಾಲಯ(Meghalaya)
ಶಿಲ್ಲಾಂಗ್ (Shillong) ಮೇಘಾಲಯದ ಒಂದು ನಗರವಾಗಿದ್ದು, ಅಲ್ಲಿ ನೀವು ಏಳು ರಾಜ್ಯಗಳ ನಾಗರಿಕತೆ ಮತ್ತು ಸಂಸ್ಕೃತಿಯ ಒಂದು ಸುಂದರ ನೋಟವನ್ನು ಕಾಣಬಹುದು. ಶಿಲ್ಲಾಂಗ್ ನ ಮತ್ತೊಂದು ವಿಶೇಷತೆಯೆಂದರೆ, ನಿಮ್ಮ ಟ್ರಾನ್ಸ್ಪೋರ್ಟ್ ವೆಚ್ಚವನ್ನು ಸಹ ಇಲ್ಲಿ ಉಳಿಸಬಹುದು, ಯಾಕಂದ್ರೆ ಶಿಲ್ಲಾಂಗ್ ಬಹಳ ಸಣ್ಣ ನಗರವಾಗಿದೆ. ಆದರೆ ನೀವು ಇಲ್ಲಿಗೆ ಬಂದರೆ, ನೀವು ಮೇಘಾಲಯವನ್ನು ನೋಡಬೇಕು. ಇಲ್ಲಿ ನೀವು ಡೌಕಿ ನದಿಯನ್ನು ನೋಡಬಹುದು, ಇದು ಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮವಾಗಿದೆ.
ಪಾಂಡಿಚೇರಿ(Pondicherry)
ಸೋಲೋ ಟ್ರಿಪ್ ಗಳಿಗೆ ಪಾಂಡಿಚೆರಿ ಅತ್ಯುತ್ತಮವಾಗಿದೆ. ಈ ತಾಣ ಬಜೆಟ್ ಸ್ನೇಹಿಯೂ ಆಗಿದೆ. ಪಾಂಡಿಚೇರಿಯ ಕಡಲತೀರಗಳ ಸೌಂದರ್ಯವೂ ಅದ್ಭುತವಾಗಿದೆ. ಪಾಂಡಿಚೇರಿಯಲ್ಲಿ ಹೆಚ್ಚು ಜನಸಂದಣಿ ಇರೋದಿಲ್ಲ. ಪಾಂಡಿಚೇರಿಗೆ ಸೋಲೋ ಪ್ರವಾಸ ಮಾಡೋದು ಮಹಿಳೆಯರಿಗೆ ಉತ್ತಮ ಆಯ್ಕೆಗಳಾಗಿವೆ. ಇಲ್ಲಿನ ಶಾಂತ ವಾತಾವರಣವು ನಿಮಗೆ ವಿಶ್ರಾಂತಿ ನೀಡುತ್ತೆ ಮತ್ತು ಪ್ರವಾಸವನ್ನು ಸ್ಮರಣೀಯವಾಗಿಸುತ್ತೆ.
ಅಲ್ಲದೇ ನೀವು ಇಲ್ಲಿ ಮೆಡಿಟೇಶನ್ ಸೆಂಟರ್ ಗೆ(Meditation) ಸಹ ಭೇಟಿ ನೀಡಿ, ತುಂಬಾ ಉತ್ತಮವಾದ ಸಮಯ ಕಳೆಯಬಹುದು. ಅಂದ್ರೆ ಇಲ್ಲಿ ನೀವು ಮನ ಶಾಂತಿಯನ್ನು ಸಹ ಪಡೆಯಬಹುದು. ಬೀಚ್ ಗಳಲ್ಲೂ ಎಂಜಾಯ್ ಮಾಡಬಹುದು.ಕಡಿಮೆ ದರದಲ್ಲಿ ನೀವು ಇಲ್ಲಿ ನಿಮಗೆ ಬೇಕೆನಿಸಿದಂತೆ ಎಂಜಾಯ್ ಮಾಡಬಹುದು.
ಅಂಡಮಾನ್ ಮತ್ತು ನಿಕೋಬಾರ್(Andaman and Nicobar)
ಬೀಚ್ ತಾಣವಾಗಿ ಗೋವಾ ಅತ್ಯಂತ ಜನಪ್ರಿಯ ತಾಣವಾಗಿದೆ, ಆದರೆ ಅಂಡಮಾನ್ ಮತ್ತು ನಿಕೋಬಾರ್ ಸುರಕ್ಷತೆಯ ದೃಷ್ಟಿಯಿಂದ ಅತ್ಯುತ್ತಮವಾಗಿದೆ. ಸುತ್ತಲೂ ಹರಡಿರುವ ನೈಸರ್ಗಿಕ ಸೌಂದರ್ಯ ಮತ್ತು ಸ್ವಚ್ಛ ಕಡಲತೀರಗಳು ಸೋಲೋ ಟ್ರಾವೆಲನ್ನು ಬೆಸ್ಟ್ ಮತ್ತು ಮೆಮೊರೇಬಲ್ ಮಾಡುತ್ತೆ.
ಲೇಹ್(Leh)
ನೀವು ಪ್ರಯಾಣವನ್ನು ಇಷ್ಟಪಡುತ್ತಿದ್ದರೆ, ನೀವು ಲೇಹ್ ಕವರ್ ಮಾಡಬೇಕು. ಇಲ್ಲಿ ಚಳಿಗಾಲದಲ್ಲಿ ವಿಭಿನ್ನ ಮತ್ತು ಬೇಸಿಗೆಯಲ್ಲಿ ವಿಭಿನ್ನ ನೋಟವಿದೆ, ಆದ್ದರಿಂದ ನೀವು ಇಷ್ಟಪಡುವ ಯಾವುದೇ ಋತುವಿನಲ್ಲಿ ಇಲ್ಲಿಗೆ ಟ್ರಾವೆಲ್ ಪ್ಲಾನ್ ಮಾಡಿ. ಝನ್ಸ್ಕರ್ ನದಿ, ಪ್ಯಾಂಗಾಂಗ್ ಸರೋವರ, ಖರ್ದುಂಗ್ಲಾ ಪಾಸ್ನಂತಹ ಅನೇಕ ಸ್ಥಳಗಳು ನಿಮ್ಮ ಪ್ರವಾಸವನ್ನು ವಿನೋದಮಯವಾಗಿಸುತ್ತೆ. ನೀವು ಬೈಕ್ ರೈಡ್ ಇಷ್ಟ ಪಡುವಂತವರಾದ್ರೆ ಇದು ಬೆಸ್ಟ್ ಪ್ಲೇಸ್.
ಜೈಸಲ್ಮೇರ್
ರಾಜಸ್ಥಾನವು(Rajasthan) ಭಾರತದ ಅತ್ಯಂತ ಸುಂದರವಾದ ರಾಜ್ಯಗಳಲ್ಲಿ ಒಂದಾಗಿದೆ. ಅಲ್ಲಿ ಸಾಕಷ್ಟು ದೇವಾಲಯ, ಕೋಟೆ, ಅರಮನೆಗಳಿವೆ, ಜೊತೆಗೆ ಮೌಂಟ್ ಅಬು ಹಿಲ್ ಸ್ಟೇಷನ್ ಗಳೂ ಇವೆ, ಇಲ್ಲಿಗೆ ನೀವು ಸೋಲೋ ಟ್ರಿಪ್ ಪ್ಲಾನ್ ಮಾಡಬಹುದು. ಅದು ಜೈಪುರ ಅಥವಾ ಜೋಧಪುರ, ಉದಯಪುರ ಅಥವಾ ಬಿಕಾನೇರ್ ಆಗಿರಲಿ, ಪ್ರತಿಯೊಂದು ನಗರವು ತನ್ನದೇ ಆದ ವಿಶೇಷತೆಗೆ ಹೆಸರುವಾಸಿಯಾಗಿದೆ.
ನೀವು ಸಾಹಸವನ್ನು ಇಷ್ಟಪಡುವವರಾದ್ರೆ, ಜೈಸಲ್ಮೇರ್ (Jaisalmer) ಅತ್ಯುತ್ತಮ ಪ್ಲೇಸ್. ಅಲ್ಲಿ ನೀವು ಪಟ್ವಾ ಬಂಗಲೆ, ಕುಲಧಾರಾ ಹಳ್ಳಿಯನ್ನು ನೋಡಬಹುದು ಮತ್ತು ಸ್ಯಾಂಡ್ ಡೂನ್ಸ್ ಗಳಲ್ಲಿ ವಿವಿಧ ಚಟುವಟಿಕೆಗಳನ್ನು ಆನಂದಿಸಬಹುದು. ಜೈಸಲ್ಮೇರ್ ಮರುಭೂಮಿಯಲ್ಲಿ ಟೆಂಟ್ ಸ್ಥಾಪಿಸುವ ಮೂಲಕ ರಾತ್ರಿಯನ್ನು ಕಳೆಯುವ ಮಜವೇ ಬೇರೆ. ನೀವು ಇಲ್ಲಿಗೆ ಬಂದರೆ, ಸ್ಥಳೀಯ ನೃತ್ಯವನ್ನು ನೋಡಬಹುದು, ಹಾಗೇ ಸಾಕಷ್ಟು ಎಂಜಾಯ್ ಮಾಡ್ಬಹುದು.