Asianet Suvarna News Asianet Suvarna News

Christmas : ಈ ದೇಶದಲ್ಲಿಲ್ಲ ಕ್ರಿಸ್ಮಸ್ ಸಂಭ್ರಮಾಚರಣೆ

ವಿಶ್ವದಲ್ಲಿ ಅನೇಕ ದೇಶಗಳಿವೆ. ಪ್ರತಿಯೊಂದು ದೇಶವೂ ತನ್ನದೇ ನಿಯಮದಡಿ ನಡೆಯುತ್ತದೆ. ಹಬ್ಬಗಳ ಬಗ್ಗೆಯೂ ಪ್ರತಿ ದೇಶ ಕೆಲವೊಂದು ರೂಲ್ಸ್ ಮಾಡಿಕೊಂಡಿದೆ. ವಿಶ್ವದ ಬಹುತೇಕ ದೇಶಗಳಲ್ಲಿ ಸಂಭ್ರಮದಿಂದ ಆಚರಣೆ ಮಾಡುವ ಕ್ರಿಸ್ಮಸ್ ಗೆ ಕೆಲ ದೇಶದಲ್ಲಿ ಮಾನ್ಯತೆಯಿಲ್ಲ.
 

Christmas Day Is Not Celebrated In These Countries Of The World
Author
First Published Dec 2, 2022, 3:56 PM IST

ಇಡೀ ವಿಶ್ವದಲ್ಲಿಯೇ ಅತ್ಯಂತ ವಿಜ್ರಂಭಣೆಯಿಂದ ಆಚರಣೆ ಮಾಡುವ ಹಬ್ಬವೆಂದ್ರೆ ಕ್ರಿಸ್ಮಸ್. ಡಿಸೆಂಬರ್ 25ರಂದು ನಡೆಯುವ ಕ್ರಿಸ್ಮಸ್ ಸಂಭ್ರಮಾಚರಣೆಗೆ ಸಿದ್ಧತೆ ಜೋರಾಗಿ ನಡೆದಿದೆ. ಕ್ರೈಸ್ತ ಸಮುದಾಯದವರು ಮಾತ್ರವಲ್ಲದೆ ಹಿಂದುಗಳು ಕೂಡ ಕ್ರಿಸ್ಮಸ್ ಹಬ್ಬವನ್ನು ಆಚರಿಸುತ್ತಾರೆ. ಮನೆ ಮುಂದೆ ಕ್ರಿಸ್ಮಸ್ ಟ್ರೀ ಹಾಕಿ, ಅದಕ್ಕೆ ಬಣ್ಣ ಬಣ್ಣದ ಲೈಟ್ ಹಾಕಿ, ಪರಸ್ಪರ ಉಡುಗೊರೆ ನೀಡಿ, ಕೇಕ್ ಕತ್ತರಿಸಿ ಹಬ್ಬ ಆಚರಿಸುವವರಿದ್ದಾರೆ. ಕ್ರೈಸ್ತ ಸಮುದಾಯದವರು ಚರ್ಚ್ ನಲ್ಲಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸ್ತಾರೆ. ಬರೀ ಮನೆಗಳಲ್ಲಿ ಮಾತ್ರವಲ್ಲ ಕ್ರಿಸ್ಮಸ್ ದಿನ ಅನೇಕ ಕಡೆ ಪಾರ್ಟಿಗಳು ನಡೆಯುತ್ತವೆ. 

ಕ್ರಿಸ್ಮಸ್ (Christmas) ದಿನವನ್ನು ಹೇಗೆ ಸಂಭ್ರಮಿಸಬೇಕು ಎನ್ನುವ ಬಗ್ಗೆ ಈಗಾಗಲೇ ಪ್ಲಾನ್ ಶುರುವಾಗಿದೆ. ಪ್ರವಾಸ (Trip), ಪಾರ್ಟಿ ಯೋಜನೆ ನಡೆಯುತ್ತಿದೆ. ಕ್ರಿಸ್ಮಸ್ ನಂತ್ರ ಹೊಸ ವರ್ಷದವರೆಗೆ ಒಂದು ವಾರಗಳ ಕಾಲ ಮಕ್ಕಳಿಗೆ ರಜೆ ಇರುವ ಕಾರಣ, ಕ್ರಿಸ್ಮಸ್ ಹಬ್ಬವನ್ನು ಹೆಚ್ಚು ಅದ್ಧೂರಿಯಾಗಿ ಆಚರಿಸುವ ಪ್ರದೇಶಕ್ಕೆ ಭೇಟಿ ನೀಡಲು ಜನರು ಪ್ಲಾನ್ ಮಾಡ್ತಿದ್ದಾರೆ. ಭಾರತ ಮಾತ್ರವಲ್ಲದೆ ವಿಶ್ವ (World) ದ ಅನೇಕ ದೇಶ (Country) ಗಳಲ್ಲಿ ಕ್ರಿಸ್ಮಸ್‌ ಹಬ್ಬಕ್ಕಾಗಿ ಜನರು ಕಾತರದಿಂದ ಕಾಯುತ್ತಿದ್ದಾರೆ. ನಿಮಗೆ ಅಚ್ಚರಿಯಾಗಬಹುದು, ವಿಶ್ವದ ಎಲ್ಲ ದೇಶಗಳಲ್ಲೂ ಕ್ರಿಸ್ಮಸ್ ಆಚರಣೆ ನಡೆಯೋದಿಲ್ಲ. ಕೆಲ ದೇಶಗಳಲ್ಲಿ ಕ್ರಿಸ್ಮಸ್ ಹಬ್ಬವನ್ನು ಆಚರಿಸೋದಿಲ್ಲ. ನಾವಿಂದು ಯಾವ ದೇಶದಲ್ಲಿ ಕ್ರಿಸ್ಮಸ್ ಹಬ್ಬ ನಡೆಯಲ್ಲ  ಎಂಬುದನ್ನು ನಿಮಗೆ ಹೇಳ್ತೆವೆ. 

ಈ ದೇಶದಲ್ಲಿಲ್ಲ ಕ್ರಿಸ್ಮಸ್ ಸಂಭ್ರಮ : 
ಲಿಬಿಯಾ :
ಆಫ್ರಿಕನ್ ಖಂಡದಲ್ಲಿರುವ ಲಿಬಿಯಾದಲ್ಲಿ ಅನೇಕ ವರ್ಷಗಳಿಂದ ಕ್ರಿಸ್ಮಸ್ ದಿನವನ್ನು ಆಚರಿಸುವುದಿಲ್ಲ. ಲಿಬಿಯಾದಲ್ಲಿ ಕ್ರಿಸ್ಮಸ್ ಸಂಭ್ರಮವನ್ನು ನಾವು ಕಾಣಲು ಸಾಧ್ಯವಿಲ್ಲ. ಕ್ರಿಸ್ಮಸ್ ದಿನದಂದು ಇಲ್ಲಿನ ಜನರು ತಮ್ಮ ಸ್ಥಳೀಯ ಹಬ್ಬವನ್ನು ಆಚರಿಸುತ್ತಾರೆ. 

ಅಫ್ಘಾನಿಸ್ತಾನ : ಹಲವು ವರ್ಷಗಳಿಂದ ಕ್ರಿಸ್ಮಸ್ ದಿನವನ್ನು ಆಚರಿಸದ ದೇಶಗಳಲ್ಲಿ ಅಫ್ಘಾನಿಸ್ತಾನ ಕೂಡ ಒಂದು. ಕ್ರಿಸ್ಮಸ್ ದಿನ, ಸಂಭ್ರಮಾಚರಣೆ, ಪಾರ್ಟಿ ಮಾಡುವುದನ್ನು ಇಲ್ಲಿನ ಜನರು ವಿರೋಧಿಸುತ್ತಾರೆ. ಅಫ್ಘಾನಿಸ್ತಾನದಲ್ಲಿರುವ ಆಫ್ಘನ್ ಜನರು, ಇಂಗ್ಲಿಷ್ ಹಬ್ಬಗಳನ್ನು ಆಚರಿಸುವುದಿಲ್ಲ. ಹಾಗಾಗಿಯೇ ಇಲ್ಲಿ ಕ್ರಿಸ್ಮಸ್ ಸಡಗರವನ್ನು ನೋಡಲು ಸಾಧ್ಯವಿಲ್ಲ. 

ವಿದೇಶ ಪ್ರಯಾಣ ಮಾಡೋ ಮುನ್ನ ಅಲ್ಲಿನ ರೂಲ್ಸ್ ತಿಳಿದಿರಲಿ: ಇಲ್ಲಾಂದ್ರೆ ಜೈಲೇ ಗತಿ

ಪಾಕಿಸ್ತಾನ : ಭಾರತದ ನೆರೆಯ ರಾಷ್ಟ್ರವಾದ ಪಾಕಿಸ್ತಾನ  ಡಿಸೆಂಬರ್ 25 ರಂದು ಕ್ರಿಸ್ಮಸ್ ಹಬ್ಬವನ್ನು ಆಚರಿಸುವುದಿಲ್ಲ. ಡಿಸೆಂಬರ್ 25 ರಂದು  ದೇಶದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರ ಜನ್ಮದಿನವನ್ನು ಪಾಕಿಸ್ತಾನದಲ್ಲಿ ಆಚರಿಸಲಾಗುತ್ತದೆ.  ಹಾಗಾಗಿ  ಈ ದಿನ ರಜೆ ಘೋಷಣೆ ಮಾಡಲಾಗುತ್ತದೆ. ಆದ್ರೆ ಕ್ರಿಸ್ಮಸ್ ಹಬ್ಬದ ನಿಮಿತ್ತ ರಜೆ ನೀಡುವುದಿಲ್ಲ. 

ಸೊಮಾಲಿಯಾ : ಆಫ್ರಿಕನ್ ದೇಶ ಸೊಮಾಲಿಯಾ ಕೂಡ ಕ್ರಿಸ್ಮಸ್ ದಿನವನ್ನು ಆಚರಿಸದ ದೇಶವಾಗಿದೆ. ಧಾರ್ಮಿಕ ಕಾನೂನುಗಳನ್ನು ಇಲ್ಲಿ ಜಾರಿಗೊಳಿಸಲಾಗಿದೆ. ಹಾಗಾಗಿ ದೇಶವು 2015 ರ ನಂತ್ರ ಕ್ರಿಸ್ಮಸ್ ಹಬ್ಬವನ್ನು ಆಚರಿಸುವುದಿಲ್ಲ. ಇಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ನಿಷೇಧವಿದೆ. 

ಭಾರತದ ಈ ಸುಂದರ ನಗರಗಳನ್ನು ನೋಡಲು ಭಾರತೀಯರಿಗೇ ಬೇಕು ಪರವಾನಗಿ!

ಯೆಮೆನ್ : ಕ್ರಿಸ್ಮಸ್ ಹಬ್ಬವನ್ನು ನಿಷೇಧಿಸಿರುವ ದೇಶಗಳಲ್ಲಿ ಯೆಮೆನ್ ಕೂಡ ಸೇರಿದೆ. ಇದು ಮಧ್ಯಪ್ರಾಚ್ಯದಲ್ಲಿರುವ ದೇಶವಾಗಿದೆ. ಇಲ್ಲಿನ ಜನರು ಕೂಡ ಕ್ರಿಸ್ಮಸ್ ಹಬ್ಬವನ್ನು ಆಚರಿಸುವುದಿಲ್ಲ.

ಇರಾನ್ : ಕ್ರಿಸ್ಮಸ್ ಹಬ್ಬದ ಆಚರಣೆ ನಿಷೇಧಿಸಿರುವ ದೇಶಗಳಲ್ಲಿ ಇರಾನ್ ಕೂಡ ಒಂದು. ಇಲ್ಲಿನ ಜನರು ತಮ್ಮ ಧರ್ಮವನ್ನು ಮಾತ್ರ ಅನುಸರಿಸುತ್ತಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎನ್ನುವ ಕಾರಣಕ್ಕೆ ಇಲ್ಲಿನ ಜನರು ಕ್ರಿಸ್ಮಸ್ ದಿನವನ್ನು ಆಚರಿಸುವುದಿಲ್ಲ.

ಈ ದೇಶಗಳಲ್ಲಿ ನೀರಸವಾಗಿರುತ್ತೆ ಕ್ರಿಸ್ಮಸ್ ಆಚರಣೆ : ಕ್ರಿಸ್ಮಸ್ ಹಬ್ಬವನ್ನು ಇನ್ನು ಕೆಲ ದೇಶಗಳಲ್ಲಿ ಹೆಚ್ಚು ವಿಜ್ರಂಭಣೆಯಿಂದ ಆಚರಿಸುವುದಿಲ್ಲ. ಅದ್ರಲ್ಲಿ ಭಾರತದ ನೆರೆಯ ರಾಷ್ಟ್ರ ಭೂತಾನ್ ಕೂಡ ಸೇರಿದೆ. ಇದಲ್ಲದೆ, ಬಹ್ರೇನ್, ಕಾಂಬೋಡಿಯಾ, ಉಜ್ಬೇಕಿಸ್ತಾನ್, ಇಸ್ರೇಲ್ ಮತ್ತು ಟರ್ಕಿಯಂತಹ ದೇಶಗಳಲ್ಲೂ ಹೆಚ್ಚು ಅದ್ಧೂರಿಯಿಲ್ಲದೆ ಕ್ರಿಸ್ಮಸ್ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಣೆ ಮಾಡಲಾಗುತ್ತದೆ. Christmas,celebrate,countries,world 

Follow Us:
Download App:
  • android
  • ios