ವಿದೇಶ ಪ್ರಯಾಣ ಮಾಡೋ ಮುನ್ನ ಅಲ್ಲಿನ ರೂಲ್ಸ್ ತಿಳಿದಿರಲಿ: ಇಲ್ಲಾಂದ್ರೆ ಜೈಲೇ ಗತಿ
ಅನೇಕ ದೇಶಗಳಲ್ಲಿ ಕೆಲವು ವಿಷಯಗಳ ಬಗ್ಗೆ ನಿಯಮಗಳು ತುಂಬಾ ಕಟ್ಟುನಿಟ್ಟಾಗಿರುತ್ತವೆ. ನೀವು ಒಂದು ದೇಶದಲ್ಲಿ ಟ್ರಾವೆಲ್ ಮಾಡಲು ಬಯಸಿದರೆ, ಒಮ್ಮೆ ಈ ನಿಯಮಗಳ ಬಗ್ಗೆ ತಿಳಿದುಕೊಳ್ಳಿ.ಕೆಲವು ದೇಶಗಳಲ್ಲಿ ಹಣ ಕೇಳಿದ್ರೆ ಜೈಲಿಗೆ ಹಾಕಿದ್ರೆ, ಕೆಲವು ದೇಶಗಳಲ್ಲಿ ಕೈಯಲ್ಲಿ ಊಟ ಮಾಡೋದನ್ನು ನಿಷೇಧಿಸಲಾಗಿದೆ. ಅವುಗಳ ಬಗ್ಗೆ ತಿಳಿಯೋಣ.
ನಾವು ಸಾಮಾನ್ಯವಾಗಿ ವಿದೇಶ ಪ್ರಯಾಣ (foreign tour) ಮಾಡುತ್ತೇವೆ, ಅಲ್ಲಿನ ಬಗ್ಗೆ ನಾವು ಎಲ್ಲಾ ತಿಳಿದಿದ್ದೇವೆ ಎಂದು ನೀವು ಅಂದುಕೊಂಡಿರುತ್ತೀರಿ. ಆದರೆ ಅಲ್ಲಿನ ಎಲ್ಲದರ ಬಗ್ಗೆ ನೀವು ತಿಳಿದಿರೋದಿಲ್ಲ. ಅಂದರೆ ಅನೇಕ ವಿಷಯಗಳ ಬಗ್ಗೆ ಪ್ರಯಾಣಿಸುವವರಿಗೆ ತಿಳಿದಿರುವುದಿಲ್ಲ. ಕೆಲವೊಂದು ದೇಶಗಳಲ್ಲಿ ನೀವು ಸಣ್ಣ ವಿಷಯಗಳಲ್ಲಿ ತಪ್ಪು ಮಾಡಿದ್ರೂ, ಅಲ್ಲಿನ ಸರ್ಕಾರವು ನಿಮ್ಮನ್ನು ಜೈಲಿಗೆ ಹಾಕಬಹುದು. ಹೌದು, ನೀವು ವಿದೇಶಕ್ಕೆ ಪ್ರಯಾಣಿಸಲು ಹೊರಟಿದ್ದರೆ, ಒಂದು ಸಣ್ಣ ತಪ್ಪು ನಿಮ್ಮನ್ನು ಶಿಕ್ಷೆಗೊಳಗಾಗುವಂತೆ ಮಾಡಬಹುದು. ಅವುಗಳ ಬಗ್ಗೆ ತಿಳಿಯೋಣ.
ಫ್ರಾನ್ಸ್: ದೇಶದಲ್ಲಿ ಸಾಮಾನ್ಯವಾಗಿ ನಮ್ಮ ಬಳಿ ಹಣ ಇಲ್ಲದಾಗ ನಾವು ಬೇರೆಯವರ ಬಳಿ ಹಣ ಕೇಳುತ್ತೇವೆ. ಯಾರು ಕೊಡಬೇಕೋ ಅವರು ನಿಮಗೆ ಆರಾಮವಾಗಿ ಸಹಾಯ ಮಾಡುತ್ತಾರೆ ಮತ್ತು ಯಾರು ಕೊಡುವುದಿಲ್ಲವೋ ಅವರು ಹಿಂದೇಟು ಹಾಕುತ್ತಾರೆ. ಆದರೆ ಫ್ರಾನ್ಸ್ ನ ಬಗ್ಗೆ ನಿಮಗೆ ತಿಳಿದಿಲ್ಲದಿರಬಹುದು, ಇಲ್ಲಿ ಹಣವನ್ನು ಕೇಳುವುದನ್ನು (begging for money) ನಿಷೇಧಿಸಲಾಗಿದೆ. ಹೌದು, ನೀವು ಈ ದೇಶದಲ್ಲಿ ಹಣ ಕೇಳಲು ಸಾಧ್ಯವಿಲ್ಲ.
ಉಕ್ರೇನ್: ಒಬ್ಬರ ದಿನವನ್ನು ಖುಷಿಯಾಗಿರುವಂತೆ ಮಾಡಲು ಒಂದು ಹೂವು ಕೊಟ್ರೆ ಸಾಕು ಅಲ್ವಾ? ಹೂವುಗಳಿಗೆ ಮನಸ್ಸನ್ನು ಸಂತೋಷಗೊಳಿಸುವ ಶಕ್ತಿ ಇದೆ. ಆದರೆ ಉಕ್ರೇನ್ ನಲ್ಲಿ ನೀವು 2, 4, 6, ಅಷ್ಟು ಸಂಖ್ಯೆಯ ಹೂವುಗಳನ್ನು ನೀಡಲು ಸಾಧ್ಯವಿಲ್ಲದಂತೆ, ಸಮಸಂಖ್ಯೆಯ ಹೂವುಗಳನ್ನು (even number flowers) ನೀಡುವುದನ್ನು ಇಲ್ಲಿ ನಿಷೇಧಿಸಲಾಗಿದೆ.
ನ್ಯೂಜಿಲೆಂಡ್: ಭಾರತದಲ್ಲಿ ನಾವು ಎದುರಿಗೆ ವಾಹನ ಇದ್ರೆ ಎಷ್ಟು ಸಲ ಹಾರ್ನ್ ಮಾಡಲ್ಲ ಹೇಳಿ. ನಿಮ್ಮ ಗಾಡಿಯ ಮುಂಭಾಗದ ಕಾರನ್ನು ತೆಗೆಯಲು ಹಾರ್ನ್ (horn)ಮಾಡಬೇಕು, ಆದರೆ ನ್ಯೂಜಿಲೆಂಡ್ ನಲ್ಲಿ ಇದನ್ನು ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಿದರೆ, ಮುಂದೆ ಇರುವ ವ್ಯಕ್ತಿಯನ್ನು ಅವಮಾನಿಸುತ್ತಿದ್ದೀರಿ ಎಂದರ್ಥ.
ಜಪಾನ್: ನೀವು ರೆಸ್ಟೋರೆಂಟ್ ಗೆ ಹೋದಾಗ, ಅಲ್ಲಿನ ಆಹಾರವನ್ನು ಇಷ್ಟಪಟ್ಟಾಗ ಅಥವಾ ಸಿಬ್ಬಂದಿಯ ಸೇವೆಯು ಉತ್ತಮವಾಗಿದ್ದರೆ ನೀವು ಸಿಬ್ಬಂದಿಗೆ ಈ ಬಗ್ಗೆ ಹೇಳಬಹುದು ಮತ್ತು ಅವರನ್ನು ಹೊಗಳಬಹುದು, ಆದರೆ ಜಪಾನ್ ನಲ್ಲಿ ಹಾಗೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಚಿಲಿ: ಭಾರತದಲ್ಲಿ, ಕೈಯಿಂದ ತಿನ್ನುವ ಸಂಪ್ರದಾಯವಿದೆ, ಕೈಯಿಂದ ತಿನ್ನುವುದನ್ನು ಸಹ ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಆದರೆ ಚಿಲಿಯಲ್ಲಿ ಕೈಯಿಂದ ಆಹಾರವನ್ನು (eating in hands) ತಿನ್ನುವುದನ್ನು ನಿಷೇಧಿಸಲಾಗಿದೆ. ಎಂತಹ ವಿಚಿತ್ರ ಅಲ್ವಾ? ಚಿಲಿಗೆ ನೀವು ಹೋಗೋದಾದ್ರೆ, ಕೈಯಿಂದ ಮಾತ್ರ ತಿನ್ಲೇ ಬೇಡಿ.
ಸಿಂಗಾಪುರ್: ಟ್ರಾವೆಲ್ ಮಾಡೋವಾಗ ನಮಗೆ ಹಸಿವಾದಾಗಲೆಲ್ಲಾ, ನಾವು ಸಾಮಾನ್ಯವಾಗಿ ನಮ್ಮ ಆಹಾರ ಡಬ್ಬಗಳನ್ನು ತೆರೆಯುತ್ತೇವೆ, ಆದರೆ ಇದು ಸರಿಯಾದ ವಿಷಯವಲ್ಲ ಏಕೆಂದರೆ ಅದರಿಂದ ಗಲೀಜಾಗುತ್ತೆ ಮತ್ತು ಇತರ ಜನರಿಗೆ ಸಮಸ್ಯೆ ಸಹ ಉಂಟಾಗುತ್ತೆ. ಆದರೆ ಭಾರತದಲ್ಲಿ ಇದನ್ನು ನಿಷೇಧಿಸಲಾಗಿಲ್ಲ, ಆದರೆ ಸಿಂಗಾಪುರದಲ್ಲಿ ನೀವು ಸಾರ್ವಜನಿಕ ಸಾರಿಗೆಯಲ್ಲಿ (eating in public transport) ತಿಂಡಿ ತಿನ್ನಲು ಸಾಧ್ಯವಿಲ್ಲ.