Viral Video : ಇಲ್ಲಿ ಚಾಲಕನಿಲ್ಲದೆ ಓಡ್ತಿದೆ ಟ್ಯಾಕ್ಸಿ!
ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಮನುಷ್ಯ ತನ್ನ ಕೆಲಸವನ್ನು ಸುಲಭ ಮಾಡಿಕೊಳ್ತಿದ್ದಾನೆ. ಸಂಚಾರ ದಟ್ಟಣೆಯಲ್ಲಿ ವಾಹನ ಚಲಾಯಿಸುವು ಟೆನ್ಷನ್ ಕಡಿಮೆ ಮಾಡಿಕೊಳ್ಳಲು ಸ್ವಯಂ ಚಾಲಿದ ವಾಹನ ತಯಾರಿಸ್ತಿದ್ದಾನೆ. ಕೆಲವೆಡೆ ಈಗಾಗ್ಲೇ ಕಾರು ರಸ್ತೆಗಿಳಿದಿದೆ.
ನಾವೀಗ ಟೆಸ್ಲಾ ಯುಗದಲ್ಲಿದ್ದೇವೆ. ಕಾರು ಕಲಿತು ಅದನ್ನು ಚಲಾಯಿಸುವ ಅಗತ್ಯವಿಲ್ಲ. ಸ್ವಯಂ ಚಾಲಿತ ಕಾರನ್ನು ನೀವು ಖರೀದಿ ಮಾಡ್ಬಹುದು. ಕಾರು ಖರೀದಿ ಮಾಡೋದು ಇರಲಿ, ಎಷ್ಟೇ ಧೈರ್ಯವಿದೆ ಎಂದ್ರೂ ಸ್ವಯಂಚಾಲಿತ ಟ್ಯಾಕ್ಸಿಯಲ್ಲಿ ಕುಳಿತುಕೊಂಡು ಹೋಗೋಕೇ ಕಷ್ಟವಾಗುತ್ತೆ. ಹೃದಯ ಬಡಿತ ಹೆಚ್ಚಾಗೋದು ಮಾಮೂಲಿ. ಒಂದೆರಡು ಬಾರಿ ಪ್ರಯಾಣ ಬೆಳೆಸಿದ ನಂತ್ರ ನಿಮಗೆ ಇದು ಅಭ್ಯಾಸವಾಗ್ಬಹುದು.
ಚೀನಾ (China) ದ ಬೀಜಿಂಗ್ ನ ವಿಡಿಯೋ (Video) ಒಂದು ಸದ್ಯ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಸ್ವಯಂ ಚಾಲಿತ (Self Driving) ಕಾರನ್ನು ನೀವು ನೋಡ್ಬಹುದು. ಅಲ್ಲಿ ನೀವು ಸ್ವಯಂ ಚಾಲಿತ ಕಾರನ್ನು ಬುಕ್ ಮಾಡಿದ್ರೆ ಕಾರು, ನೀವಿರುವ ಜಾಗಕ್ಕೆ ಬರುತ್ತದೆ. ನೀವು ತಲುಪಬೇಕಾದ ಗಮ್ಯ ಸ್ಥಳಕ್ಕೆ ನಿಮ್ಮನ್ನು ಸುರಕ್ಷಿತವಾಗಿ ತಲುಪಿಸುವ ಕೆಲಸವನ್ನು ಅದು ಮಾಡುತ್ತದೆ.
India Lover : ಒಮ್ಮೆ ಭಾರತಕ್ಕೆ ಬಂದ ಇವರಿಗೆ ವಾಪಸ್ ಹೋಗೋ ಮನಸ್ಸಾಗ್ಲಿಲ್ಲ..
ವೈರಲ್ ಆದ ವಿಡಿಯೋ ಒಂದು ನಿಮಿಷದ್ದಾಗಿದೆ. ಚಾಲಕನಿಲ್ಲದ ಟ್ಯಾಕ್ಸಿ ರಸ್ತೆ ಬದಿಯಲ್ಲಿ ನಿಂತಿರುವ ವ್ಯಕ್ತಿಯ ಬಳಿ ಬಂದು ನಿಲ್ಲುತ್ತದೆ. ನಂತರ ವ್ಯಕ್ತಿಯು ಟ್ಯಾಕ್ಸಿಯ ಬಾಗಿಲಿನ ಸ್ಕ್ರೀನ್ ಮೇಲೆ ಏನನ್ನೋ ಟೈಪ್ ಮಾಡುತ್ತಾನೆ. ಹೀಗೆ ಮಾಡಿದಾಗ ಕಾರಿನ ಬಾಗಿಲು ತೆರೆಯುತ್ತದೆ. ನಂತರ ವ್ಯಕ್ತಿಯು ತನ್ನ ಕುಟುಂಬದೊಂದಿಗೆ ಕಾರಿನೊಳಗೆ ಕುಳಿತುಕೊಳ್ಳುತ್ತಾನೆ. ವಾಹನವು ಡ್ರೈವರ್ ಇಲ್ಲದೆ ಚಲಿಸಲು ಪ್ರಾರಂಭಿಸುತ್ತದೆ. ವಾಹನದಲ್ಲಿ ಅಳವಡಿಸಲಾಗಿರುವ ಡಿಸ್‌ಪ್ಲೇಯಲ್ಲಿ ಕಾರಿನ ಸುತ್ತಮುತ್ತಲಿನ 3ಡಿ ನಕ್ಷೆ ಗೋಚರಿಸುತ್ತದೆ.
ಈ ವೀಡಿಯೊವನ್ನು ಜೂನ್ 14 ರಂದು ಎರಿಕ್ (@ErikSolheim) ಹೆಸರಿನ ಬಳಕೆದಾರರು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಬೀಜಿಂಗ್‌ನಲ್ಲಿ ಡ್ರೈವರ್ ಇಲ್ಲದೆ ಟ್ಯಾಕ್ಸಿ ತೆಗೆದುಕೊಳ್ಳಿ ಎಂದು ಶೀರ್ಷಿಕೆ ಹಾಕಿದ್ದಾರೆ. ಈಗ ಈ ವಿಡಿಯೋ ಇನ್ನೂ ಅನೇಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಚರ್ಚೆಯಾಗ್ತಿದೆ. ಈ ವೀಡಿಯೊ ನೂರಾರು ಲೈಕ್ ಬಂದಿದ್ದು, ಸಾವಿರಾರು ಬಾರಿ ವೀಕ್ಷಣೆ ಮಾಡಲಾಗಿದೆ. ವಿಡಿಯೋಕ್ಕೆ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ. ಕೆಲ ಬಳಕೆದಾರರು ಇದನ್ನು ನಂಬೋದು ಕಷ್ಟ ಅಂದ್ರೆ ಮತ್ತೆ ಕೆಲವರು ಅದ್ಭುತವೆಂದು ವರ್ಣಿಸಿದ್ದಾರೆ. ಟೆಸ್ಲಾಗೆ ಅನೇಕರು ಧನ್ಯವಾದ ಹೇಳಿದ್ದಾರೆ.
Unknown Facts: ಹಗಲಿಗಿಂತ ರೈಲು ರಾತ್ರಿ ಹೊತ್ತು ಫಾಸ್ಟ್ ಆಗಿ ಹೋಗೋದ್ಯಾಕೆ?
ಸೆಲ್ಫ್ ಡ್ರೈವಿಂಗ್ ಟ್ಯಾಕ್ಸಿ (Self Driving Taxi) : ಸ್ವಯಂ ಚಾಲಿತ ಕಾರನ್ನು ಚಾಲಕ ರಹಿತ ಕಾರು ಎಂದೂ ಕರೆಯಲಾಗುತ್ತದೆ. ಹುಂಡೈ ಕೂಡ ಇಂಥಹ ಕಾರನ್ನು ಸಿದ್ಧಪಡಿಸುತ್ತಿದೆ. ಇದಕ್ಕೆ ಹುಂಡೈ ರೋಬೋ ರೈಡ್ ಎಂದು ಹೆಸರಿಟ್ಟಿದೆ. ಈ ಕಾರನ್ನು ಕೋರಿಯಾದಂತ ಜನನಿಬಿಡಿ ಪ್ರದೇಶದಲ್ಲೂ ಚಲಾಯಿಸಬಹುದು ಎನ್ನಲಾಗಿದೆ. ಹುಂಡೈ ಮಾತ್ರವಲ್ಲ ಗೂಗಲ್ ಸೇರಿದಂತೆ ಪ್ರಪಂಚದಾದ್ಯಂತದ ಅನೇಕ ಕಂಪನಿಗಳು ಸೆಲ್ಫಿ ಡ್ರೈವಿಂಗ್ ಕಾರುಗಳಲ್ಲಿ ಕೆಲಸ ಮಾಡುತ್ತಿವೆ. ಇದ್ರಲ್ಲಿ ಗೂಗಲ್ ಇತಿಹಾಸ ಹಳೆಯದು. ಗೂಗಲ್ ಎರಡು ಪ್ರಮುಖ ಮಾದರಿಯನ್ನು ಸಿದ್ಧಪಡಿಸಿದೆ.
ಈ ಹಿಂದೆ ಸ್ವಯಂ ಚಾಲಿತ ಕಾರಿನ ಪರೀಕ್ಷೆ ವೇಳೆ ಪಾದಾಚಾರಿಯೊಬ್ಬ ಬಲಿಯಾಗಿದ್ದ ಎಂಬುದನ್ನು ನೆನೆಯಬಹುದು.
ಸ್ವಯಂ ಚಾಲಿತ ಕಾರಿಗೆ ಕ್ಯಾಮರಾ (Camera for Self operated camera) : ಸ್ವಯಂ ಚಾಲಿತ ಕಾರುಗಳಿಗೆ ಹೆಚ್ಚಿನ ರೆಸಲ್ಯೂಶನ್ ನೋಡಲು ಸಹಾಯವಾಗಲೆಂದು ಕ್ಯಾಮೆರಾ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ರಸ್ತೆ ಚಿಹ್ನೆಗಳು ಮತ್ತು ಗುರುತುಗಳನ್ನು ಓದಲು ಕ್ಯಾಮೆರಾಗಳನ್ನು ಬಳಸಲಾಗುತ್ತದೆ. ಸ್ವಯಂ-ಚಾಲನಾ ವಾಹನಗಳ ಸುತ್ತಲೂ ವಿವಿಧ ಲೆನ್ಸ್ ಗಳನ್ನು ಅಳವಡಿಸಲಾಗುತ್ತದೆ.
ಟೆಸ್ಲಾ ಕಾರು (Tesla Car) : ಟೆಸ್ಲಾ ಈ ಹಿಂದೆ ಅರೆ ಸ್ವಯಂಚಾಲಿತ ಕಾರನ್ನು ತಯಾರಿಸಿತ್ತು. ಇತ್ತೀಚೆಗೆ ಸ್ವಯಂ ಚಾಲನಾ ಸಾಫ್ಟ್ ವೇರ್ ನವೀಕರಣ ಮಾಡಿದೆ. ಟೆಸ್ಲಾ ತನ್ನ ಫುಲ್ ಸೆಲ್ಫ್ ಡ್ರೈವಿಂಗ್ ವೈಶಿಷ್ಟ್ಯದ ಕಾರಿನ ಬೆಲೆಯನ್ನು ಮತ್ತೊಮ್ಮೆ ಹೆಚ್ಚಿಸಿದೆ. ಈ ಬಾರಿ ಕಾರಿನ ಬೆಲೆ 15,000 ಡಾಲರ್ ಆಗಿದೆ. ಕೆಲವು ತಿಂಗಳ ಹಿಂದೆ ವೆಚ್ಚ 10,000 ಡಾಲರ್ ನಿಂದ 12,000 ಡಾಲರ್ ಗೆ ಏರಿಕೆಯಾಗಿತ್ತು.