ಪ್ರವಾಸಕ್ಕೆ ಬಂದವರ 70 ಮಂದಿ ರಕ್ತವಾಂತಿಗೆ ಕಾರಣವಾಗಿದ್ದೇನು?

ಪ್ರವಾಸಿಗರ ಮೇಲೆ ಅಟ್ಯಾಕ್ ಮಾಡಿದ ಪರಾವಲಂಬಿ ಸೋಂಕು. ಬ್ರಿಟನ್‌ನಲ್ಲಿ ಪ್ರವಾಸಕ್ಕೆ ಹೋದವರು ರಕ್ತ ವಾಂತಿ ಮಾಡಿಕೊಳ್ಳಲು ಕಾರಣವಾಗಿದ್ದೇಕೆ?

Britain People Vomit Blood After Get Hit With Parasitic Infection In Morocco roo

ರಜೆ ಬಂದ್ರೆ ಸಾಕು ನಾವೆಲ್ಲ ಗಂಟುಮೂಟೆ ಕಟ್ಟಿಕೊಂಡು ಪ್ರವಾಸಕ್ಕೆ ಹೋಗ್ತೇವೆ. ಬೇಸಿಗೆ ಕಾಲದಲ್ಲಿ ತಂಪಾದ ಪ್ರದೇಶವನ್ನು ಹುಡುಕಿಕೊಂಡು ಹೋಗೋದಲ್ಲದೆ ಸ್ವಿಮ್ಮಿಂಗ್ ಪೂಲ್ ಸೇರಿದಂತೆ ನೀರಿರುವ ಜಾಗದಲ್ಲಿ ಎಂಜಾಯ್ ಮಾಡ್ತೇವೆ. ಬ್ರಿಟನ್ ನ 70 ಜನರು ಕೂಡ ಅದೇ ಮಾಡಿದ್ರು. ಮೊರಾಕೊಕ್ಕೆ ರಜೆಗೆ ತೆರಳಿದ್ದರು. ಮುಂದೇನಾಗುತ್ತೆ ಎಂಬುದು ತಿಳಿಯದ ಜನರು ಮೊರಾಕೊದ ಮರ್ಕೆಚ್‌ನಲ್ಲಿರುವ ಫೋರ್ ಸ್ಟಾರ್ ಹೋಟೆಲ್ ಆಕ್ವಾ ಮಿರಾಜ್‌ನಲ್ಲಿ ತಂಗಿದ್ದರು. ಸ್ವಿಮ್ಮಿಂಗ್ ಪೂಲ್ ನಲ್ಲಿ ಸಾಕಷ್ಟು ಮೋಜು ಮಸ್ತಿ ಮಾಡಿ ನಾನ್ ವೆಜ್ ಫುಡ್ ಸವಿಯುತ್ತಿದ್ದರು. ಆದ್ರೆ ಈ ಮಸ್ತಿ ಇಷ್ಟು ದೊಡ್ಡ ಹೊಡೆತ ನೀಡುತ್ತೆ ಎನ್ನುವುದು ಅವರಿಗೆ ಗೊತ್ತಾಗ್ಲಿಲ್ಲ. ಹೊಟೇಲ್ ನಲ್ಲಿ ತಂಗಿದ್ದೇ ತಪ್ಪಾಯ್ತು. ಇಲ್ಲಿ ಪ್ರವಾಸಕ್ಕೆ ಬಂದಿದ್ದ ಬ್ರಿಟನ್ ನ 70ಕ್ಕೂ ಹೆಚ್ಚು ಮಂದಿಯ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ. ಅವರೆಲ್ಲ ಈಗ ರಕ್ತ ವಾಂತಿ ಮಾಡಿಕೊಳ್ಳುತ್ತಿದ್ದಾರೆ.  

ವರದಿಯ ಪ್ರಕಾರ, ರಜೆಯ ಮೇಲೆ ಬಂದ 70 ಕ್ಕೂ ಹೆಚ್ಚು ಬ್ರಿಟನ್ (Britain) ಜನರು ರಕ್ತ (Blood)  ವಾಂತಿ ಮಾಡಿಕೊಳ್ಳಲು ಕಾರಣ ಅವರನ್ನು ಕಾಡ್ತಿರುವ  ಪರಾವಲಂಬಿ (parasitic) ಸೋಂಕು. ರಕ್ತ ವಾಂತಿಯಾಗ್ತಿದ್ದಂತೆ ಪ್ರವಾಸಕ್ಕೆ ಬಂದಿದ್ದವರು ವೈದ್ಯರನ್ನು ಸಂಪರ್ಕಿಸಿದ್ದಾರೆ.  ಆಗ ಇ.ಕೋಲಿ, ಸಾಲ್ಮೊನೆಲ್ಲಾ ಮತ್ತು ಕ್ರಿಪ್ಟೋಸ್ಪೊರಿಡಿಯಮ್‌ನಂತಹ ಅಪಾಯಕಾರಿ ಪರಾವಲಂಬಿಗಳು ಅವರ ದೇಹ ಪ್ರವೇಶ ಮಾಡಿವೆ ಎಂಬ ಸಂಗತಿ ಗೊತ್ತಾಗಿದೆ. ಈ ಪರಾವಲಂಬಿಗಳೇ ರಕ್ತವಾಂತಿಗೆ ಕಾರಣವಾಗ್ತಿವೆ.  

ಎಟಿಎಂನಲ್ಲಿ ಬರುತ್ತೆ ಚಿನ್ನ... ದುಬೈನಲ್ಲಿ ಮಾತ್ರ ಕಾಣಸಿಗುವ ಕೆಲ ಅದ್ಭುತಗಳಿವು

ಆರು ವರ್ಷದ ಮಗುವಿನಲ್ಲೂ ಸೋಂಕು ಪತ್ತೆ :  ನಾರ್ತ್ ವೇಲ್ಸ್ ನ ಆಂಗ್ಲೆಸಿಯ ನಿವಾಸಿಯಾದ ಚೆಲ್ಸಿಯಾ ಹ್ಯಾಗೆನ್ ಕೂಡ ತನ್ನ 6 ವರ್ಷದ ಮಗಳು ಡಾರ್ಸಿಯೊಂದಿಗೆ 2022ರ ಸೆಪ್ಟೆಂಬರ್ 9ರಿಂದ 16ರವರೆಗೆ  ರೆಸಾರ್ಟ್‌ನಲ್ಲಿ ತಂಗಿದ್ದಳು. ಅಲ್ಲಿಂದ ಹಿಂತಿರುಗಿದ ನಂತ್ರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. 6 ವರ್ಷದ ಮಗಳಿಗೆ ವಾಂತಿ ಭೇದಿಯ ಲಕ್ಷಣಗಳು ಕಾಣಿಸಿಕೊಂಡಿದೆ.  ಸ್ವತಃ ಚೆಲ್ಸಿಯಾ ಕೂಡ ರಕ್ತ ವಾಂತಿ ಮಾಡಿಕೊಂಡಿದ್ದಾಳೆ. ಚಿಕಿತ್ಸೆಗಾಗಿ ವೈದ್ಯರ ಬಳಿ ಹೋದಾಗ   ಕ್ರಿಪ್ಟೋಸ್ಪೊರಿಡಿಯಮ್ ಸೋಂಕು ಇವರ ದೇಹ ಸೇರಿಸುವುದು ಪತ್ತೆಯಾಗಿದೆ. ಸದ್ಯ ಮಗಳ ಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದೆ. ಆದ್ರೆ ಚೆಲ್ಸಿಯಾ ಆರೋಗ್ಯದಲ್ಲಿ ಇನ್ನೂ ಸುಧಾರಣೆ ಕಂಡು ಬಂದಿಲ್ಲ. 

ವಿಪರೀತ ಹೊಟ್ಟೆ ನೋವು – ವಾಂತಿ : ಪ್ರವಾಸ ಮುಗಿಸಿ ಬಂದ ಚೆಲ್ಸಿಯಾಗೆ ವಿಪರೀತ ಹೊಟ್ಟೆನೋವು ಕಾಣಿಸಿಕೊಂಡಿದೆ. ಆಕೆ ಈವರೆಗೆ ಅನುಭವಿಸದ ಹೊಟ್ಟೆ ನೋವನ್ನು ಅನುಭವಿಸಿದ್ದಾಳೆ. ಅಲ್ಲದೆ ಒಂದು ದಿನ ನಿರಂತರ ವಾಂತಿಯಾಗಿದೆ. ನಂತ್ರ ಚೆಲ್ಸಿಯಾ ವೈದ್ಯರ ಬಳಿ ಹೋಗಿದ್ದಾಳೆ. ತಪಾಸಣೆ ನಡೆಸಿದಾಗ ಗ್ಯಾಸ್ಟ್ರಿಕ್ ಇನ್ ಫೆಕ್ಷನ್ ಇರುವುದು ಪತ್ತೆಯಾಗಿದೆ. ರೆಸಾರ್ಟ್‌ನಲ್ಲಿ ಸಾಕಷ್ಟು ನೈರ್ಮಲ್ಯದ ಕೊರತೆಯಿದೆ. ಇದೇ ಈ ಎಲ್ಲ ಸಮಸ್ಯೆಗೆ ಕಾರಣವೆಂದು ಚೆಲ್ಸಿಯಾ ಹೇಳಿದ್ದಾರೆ. 

HEALTH TIPS: ಡಯಾಬಿಟಿಸ್ ಇರೋರು ಈ ಪಾನೀಯ ಕುಡಿದರೆ ವಿಷದಷ್ಟೇ ಡೇಂಜರ್‌!

ಕ್ರಿಪ್ಟೋಸ್ಪೊರಿಡಿಯಮ್ ಸೋಂಕು ಎಂದ್ರೇನು ? : ಕ್ರಿಪ್ಟೋಸ್ಪೊರಿಡಿಯಮ್ ಒಂದು ರೀತಿಯ ಪರಾವಲಂಬಿ ಸೋಂಕಾಗಿದೆ.  ಇದು ಕಲುಷಿತ ನೀರಿನ ಸಂಪರ್ಕದ ಮೂಲಕ ದೇಹವನ್ನು ಪ್ರವೇಶಿಸುತ್ತದೆ. 

ಪರಾವಲಂಭಿ ಸೋಂಕು : ಇದರಲ್ಲಿ ಸಾಕಷ್ಟು ವಿಧಗಳಿವೆ. ಮಲೆರಿಯಾ ಕೂಡ ಒಂದು ಪರಾವಿಲಂಭಿ ಸೋಂಕಾಗಿದೆ. ರೋಗ ಲಕ್ಷಣ ಪತ್ತೆಯಾದ ತಕ್ಷಣ ಚಿಕಿತ್ಸೆ ಪಡೆದಲ್ಲಿ ಇದನ್ನು ಬೇಗ ಗುಣಪಡಿಸಬಹುದು.
ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಬಹಳಷ್ಟು ಎಚ್ಚರಿಕೆಯನ್ನು ತೆಗೆದುಕೊಂಡ್ರೆ ಇಂಥ ಸಮಸ್ಯೆ ಆಗದಂತೆ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ಶುದ್ಧ ನೀರಿನ ಸೇವನೆ ಮಾಡುವ ಜೊತೆಗೆ ನೈರ್ಮಲ್ಯವಿರುವ ಪ್ರದೇಶದಲ್ಲಿ ನಾವು ವಾಸ ಮಾಡಬೇಕು. ಆಹಾರ ಸೇವನೆ, ಸ್ವಿಮ್ಮಿಂಗ್ ಪೂಲ್ ಸ್ವಚ್ಛತೆ ಸೇರಿದಂತೆ ಪ್ರತಿಯೊಂದರ ಬಗ್ಗೆ ನಾವು ಕಾಳಜಿ ವಹಿಸಬೇಕಾಗುತ್ತದೆ. 
 

Latest Videos
Follow Us:
Download App:
  • android
  • ios