ಸಖತ್‌ ಆಗಿ ಹಾರ್ನ್‌ನಲ್ಲಿ ಸಿನಿಮಾ ಗೀತೆ ಮೂಡಿಸುತ್ತಿದ್ದ ಲಾರಿ ಚಾಲಕನನ್ನು ಅಡ್ಡ ಹಾಕಿ ಲಾರಿ ನಿಲ್ಲಿಸಿದ ಕೆಲವು ಬೈಕರ್‌ಗಳು ಮತ್ತೆ ಆತನೊಂದಿಗೆ ಅದೇ ರೀತಿ ಮ್ಯೂಸಿಕ್‌ ಹಾಕುವಂತೆ ಕೇಳಿ ಸಖತ್ ಆಗಿ ಡಾನ್ಸ್‌ ಮಾಡಿದ್ದಾರೆ.

ನೀವು ತುಂಬಾ ವಿಭಿನ್ನವಾಗಿ ಹಾರ್ನ್‌ ಮಾಡುವ ಟ್ರಕ್‌ಗಳನ್ನು ನೋಡಿರಬಹುದು. ಟ್ರಾಫಿಕ್‌ಗಳಲ್ಲಿ ಒಬ್ಬರಿಗೊಬ್ಬರು ಸ್ಪರ್ಧೆ ನೀಡುವಂತೆ ಕೀ ಕೀ ಪಿಂಪಿಂ ಮಾಡುತ್ತಾ ಮನೋರಂಜನೆ ನೀಡುತ್ತಿರುವ ವಿಡಿಯೋಗಳನ್ನುನೋಡಿರಬಹುದು. ಹೀಗೆ ವಿಭಿನ್ನವಾಗಿ ಹಾರ್ನ್‌ನಲ್ಲೇ ಜನರಿಗೆ ಕೆಲ ಟ್ರಕ್‌ ಚಾಲಕರು ಮನೋರಂಜನೆ ನೀಡುತ್ತಾರೆ. ಸ್ಯಾಕ್ಸೋಫೋನ್‌ ನುಡಿಸಿದಂತೆ ಕೆಲವರು ಹಾರ್ನ್‌ನಲ್ಲೇ ಸಿನಿಮಾ ಗೀತೆಗಳನ್ನು ನುಡಿಸುತ್ತಾ ರಸ್ತೆಯಲ್ಲಿ ಚಲಿಸುವ ಪ್ರಯಾಣಿಕರಿಗೆ ಮನೋರಂಜನೆ ನೀಡುತ್ತಾರೆ. ಅದೇ ರೀತಿ ಸಖತ್‌ ಆಗಿ ಹಾರ್ನ್‌ನಲ್ಲಿ ಸಿನಿಮಾ ಗೀತೆ ಮೂಡಿಸುತ್ತಿದ್ದ ಲಾರಿ ಚಾಲಕನನ್ನು ಅಡ್ಡ ಹಾಕಿ ಲಾರಿ ನಿಲ್ಲಿಸಿದ ಕೆಲವು ಬೈಕರ್‌ಗಳು ಮತ್ತೆ ಆತನೊಂದಿಗೆ ಅದೇ ರೀತಿ ಮ್ಯೂಸಿಕ್‌ ಹಾಕುವಂತೆ ಕೇಳಿ ಸಖತ್ ಆಗಿ ಡಾನ್ಸ್‌ ಮಾಡಿದ್ದಾರೆ.

ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಕರ್ನಾಟಕ ಗೋವಾ ಗಡಿಯ ಮಧ್ಯೆ ಇರುವ ಧೂದ್‌ಸಾಗರ್ ಜಲಾಶಯದ ಸಮೀಪ ಸೆರೆಯಾದ ವಿಡಿಯೋ ಇದಾಗಿದೆ. ಹೇಳಿ ಕೇಳಿ ಇದು ಮಳೆಗಾಲ, ಎಲ್ಲೆಡೆ ಎಡೆಬಿಡದೆ ಮಳೆಯಾಗುತ್ತಿದ್ದು ಜಲಾಶಯಗಳು ತುಂಬಿ ಹರಿಯುತ್ತಿವೆ. ಹೀಗಾಗಿ ಜಲಾಶಯಗಳೆಡೆಗೆ ಜನ ದಾಂಗುಡಿ ಇಡುತ್ತಿದ್ದಾರೆ. ಬಹುತೇಕರಿಗೆ ಮಳೆ ಒಂದು ರೀತಿಯ ಹೊಸ ಉತ್ಸಾಹ ಉಲ್ಲಾಸವನ್ನು ನೀಡುತ್ತದೆ. ವರ್ಷದ ಮೊದಲ ಮಳೆಗೆ ಅನೇಕರು ಕುಣಿದು ಕುಪ್ಪಳಿಸುತ್ತಾರೆ. ಇನ್ನು ಮಳೆಗಾಲದಲ್ಲಿ ಜಲಾಶಯದತ್ತ ಪ್ರವಾಸ ಹೊರಟಿರುವ ಯುವಕರ ತಂಡವಂತೂ ಸದಾ ಏನಾದರೂ ವಿಭಿನ್ನವಾಗಿ ಮೋಜು ಮಾಡಲು ಬಯಸುತ್ತಾರೆ. ಹಾಗೆಯೇ ಇಲ್ಲಿ ದೂದ್ಸಾಗರ್ ಜಲಾಶಯಕ್ಕೆ ಹಲವು ಬೈಕ್‌ಗಳಲ್ಲಿ ಪ್ರವಾಸ ಬಂದ ಯುವಕರ ದಂಡು ಹೀಗೆ ಡಿಫರೆಂಟ್‌ ಆಗಿ ಮ್ಯೂಸಿಕ್ ಬಾರಿಸುತ್ತಿದ್ದ ಲಾರಿಯನ್ನು ಅಡ್ಡ ಹಾಕಿ ಅದರ ಮುಂದೆ ಸಖತ್ ಆಗಿ ಕುಣಿದಿದ್ದಾರೆ.

ಲಾಕ್‌ಡೌನ್‌ ಎಫೆಕ್ಟ್‌: ನಾಡಿನತ್ತ ಮುಖ ಮಾಡಿದ ಪ್ರಾಣಿಗಳು, ವಾಹನಗಳ ಹಾರ್ನ್‌ಗೆ ಬೆದರಿ ಪ್ರಾಣ ಬಿಟ್ಟ ಕಾಡುಕೋಣ..!

ದೂದ್‌ ಸಾಗರ್ (Falls) ಪ್ರವಾಸ ಮುಗಿಸಿ ಬೈಕ್‌ನಲ್ಲಿ ಹೊರಟಿದ್ದ ಯುವಕರ ದಂಡಿನ ಹಿಂದೆ ಈ ಲಾರಿ ಚಾಲಕ ಮ್ಯೂಸಿಕಲ್ ಹಾರ್ನ್‌ ಅನ್ನು ಬಾರಿಸಿದ್ದಾನೆ. ಈ ಹಾರ್ನ್‌ ಮ್ಯೂಸಿಕ್‌ ಕೇಳಿ ಯುವಕರು ಹುಚ್ಚರಂತಾಗಿದ್ದು, ಇವರು ಜೋರಾಗಿ ಬೊಬ್ಬೆ ಹೊಡೆಯಲು ಶುರು ಮಾಡಿದ್ದಾರೆ. ನಂತರ ರಸ್ತೆ ಪಕ್ಕ ಒಬ್ಬೊಬ್ಬರೇ ಬೈಕ್ ನಿಲ್ಲಿಸಿ ರಸ್ತೆ ಮಧ್ಯೆ ಕೈಗಳನ್ನು ಎತ್ತುತ್ತಾ ಸಿಳ್ಳೆ ಹೊಡೆಯುತ್ತಾ ಚಲಿಸುತ್ತಿರುವ ಲಾರಿ ಮುಂದೆ ಬಂದು ಆ ಲಾರಿ ಚಾಲಕನನ್ನು ಅಡ್ಡ ಹಾಕಿ ಇದೇ ರೀತಿ ನಾಗಿಣಿ ಮ್ಯೂಸಿಕ್‌ ಬಾರಿಸುವಂತೆ ಕೇಳಿದ್ದಾರೆ. ಯುವಕರ ಮನವಿಗೆ ಲಾರಿ ಚಾಲಕ ಕೂಡ ಖುಷ್ ಆಗಿದ್ದು, ಆತ ಹಾರ್ನ್‌ನಲ್ಲೇ ನಾಗಿಣಿ ಮ್ಯೂಸಿಕ್ ಹಾಕಿದ್ದು, ಯುವಕರು ಮಳೆಯನ್ನು ಕೂಡ ಲೆಕ್ಕಿಸದೇ ಸಖತ್ ಆಗಿ ಕುಣಿದಿದ್ದಾರೆ. ಸುತ್ತಲೂ ದಟ್ಟ ಮೋಡ ಕವಿದು ಕತ್ತಲು ಕತ್ತಲಾದ ವಾತಾವರಣವಿದ್ದು, ರಸ್ತೆ ಬದಿಯಲ್ಲಿ ಉದ್ದಕ್ಕೆ ಬೈಕ್ ನಿಲ್ಲಿಸಿದ ಯುವಕರು ಲಾರಿ ಮುಂದೆ ಕಪ್ಪೆಗಳಂತೆ ಬಿದ್ದು ಎದ್ದು ಹೊರಳಾಡಿ ಡಾನ್ಸ್ ಮಾಡುತ್ತಿರುವುದು ನೋಡಿದರೆ ಮೊಗದಲ್ಲಿ ನಗು ಉಕ್ಕಿ ಹರಿಯುತ್ತಿದೆ.

Scroll to load tweet…

ವಾಹನಗಳಿಗೆ ಶೀಘ್ರ ತಬಲಾ, ಕೊಳಲು, ಪಿಟೀಲು ಹಾರ್ನ್: ಕರ್ಕಶ ಧ್ವನಿ ತಪ್ಪಿಸಲು ಗಡ್ಕರಿ ಪ್ಲಾನ್!

ಯುವಕರ ಈ ವಿಭಿನ್ನ ರೀತಿಯ ಮೋಜಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.ಇನ್ನು ಮೋಜು ಮಾಡುವ ಬರದಲ್ಲಿ ಯುವಕರು ನಿಯಮ ಮೀರಿರುವುದು ಕೂಡ ವಿಡಿಯೋದಲ್ಲಿ ಕಾಣಿಸುತ್ತಿದೆ. ಲಾರಿಯ ಮುಂದೆ ರೇಸ್‌ ಬೈಕ್‌ಗಳಂತೆ ಬಂದ ಯುವಕರ ತಂಡದಲ್ಲಿ ಯಾರೊಬ್ಬರು ಹೆಲ್ಮೆಟ್ ಧರಿಸಿರಲಿಲ್ಲ. ಜೊತೆಗೆ ಕೆಲವೊಂದು ಬೈಕ್‌ಗಳಲ್ಲಿ ಮೂವರು ಪ್ರಯಾಣಿಸುತ್ತಿದ್ದರು.

ಈ ವಿಡಿಯೋವನ್ನು ಶ್ರೀಶ ಪಿಂಪಾಲ್ ಟೆಕ್‌ ಎಂಬ ಯೂಟ್ಯೂಬ್‌ (YT) ಖಾತೆಯಿಂದ ಈ ವಿಡಿಯೋ ಅಪ್‌ಲೋಡ್ ಆಗಿದ್ದು, ಕರ್ನಾಟಕ ಹಾಗೂ ಗೋವಾ ಗಡಿ ಭಾಗದಲ್ಲಿರುವ ಧೂದ್‌ಸಾಗರ್ ಜಲಾಶಯದ ಸಮೀಪ ಇರುವ ರಸ್ತೆಯಲ್ಲಿ ಸೆರೆಯಾದ ದೃಶ್ಯ ಎಂದು ಬರೆದುಕೊಂಡಿದ್ದಾರೆ. ವಿಡಿಯೋ ನೋಡಿದ ಕೆಲವರು ಇದನ್ನು ಕೇಂದ್ರ ಲೋಕೋಪಯೋಗಿ ಸಚಿವ ನಿತಿನ್ ಗಡ್ಕರಿ ಅವರಿಗೆ ಟ್ಯಾಗ್ ಮಾಡಿ, ಮ್ಯೂಸಿಕಲ್‌ ಹಾರ್ನ್‌ಗಳ ಸೈಡ್‌ ಇಫೆಕ್ಟ್‌ ಇದು ಎಂದು ಬರೆದುಕೊಂಡಿದ್ದಾರೆ.