April ಪ್ರವಾಸಕ್ಕಾಗಿ ಈ ಸ್ಥಳಗಳು ಬೆಸ್ಟ್

ರಜೆಯಲ್ಲಿ ಎಲ್ಲಿಗಾದ್ರೂ ಹೋಗ್ಬೇಕು, ಆದ್ರೆ ಎಲ್ಲಿಗೆ ಎಂಬ ಚಿಂತೆ ಅನೇಕರನ್ನು ಕಾಡುತ್ತದೆ. ಹಳೆ ಊರು ಸುತ್ತಿ ಬೋರ್ ಆಗಿರೋರು ಹೊಸ ಪ್ರದೇಶದ ಹುಡುಕಾಟ ನಡೆಸ್ತಾರೆ. ಬೇಸಿಗೆಯಲ್ಲಿ ಬೀಚ್ ಬೇಡ ಎನ್ನುವವರು ಭಾರತದ ಈ ಐದು ಸ್ಥಳಗಳನ್ನು ಕಣ್ತುಂಬಿಕೊಂಡು ಬನ್ನಿ. 
 

best places in India to visit in April

ಮಾರ್ಚ್ ತಿಂಗಳು ಮುಗಿತಿದೆ. ಮಕ್ಕಳಿಗೆ ರಜೆ (Vacation) ಶುರುವಾಗ್ತಿದೆ. ಬಿಡುವಿಲ್ಲದ ಕೆಲಸ (Work) ದ ಮಧ್ಯೆ ರಿಲ್ಯಾಕ್ಸ್ (Relax) ಆಗಲು ಇದು ಒಳ್ಳೆ ಸಮಯ. ಕಳೆದ ಎರಡು ವರ್ಷಗಳಿಂದ ಎಲ್ಲಿಗೂ ಪ್ರವಾಸ (Tour) ಹೋಗದ ಜನರು ಕೊರೊನಾ (Corona) ಮಧ್ಯೆಯೇ ಪ್ರವಾಸದ ಪ್ಲಾನ್ ಶುರು ಮಾಡಿದ್ದಾರೆ. ಏಪ್ರಿಲ್ ನಲ್ಲಿ ಪ್ರವಾಸದ ಪ್ಲಾನ್ ಮಾಡುತ್ತಿರುವವರು ವಿದೇಶಿ (Abroad) ಪ್ರವಾಸಕ್ಕೆ ತೆರಳಲು ಸ್ವಲ್ಪ ಭಯಪಡ್ತಿದ್ದಾರೆ. ನೀವೂ ಭಾರತ (India) ದಲ್ಲಿಯೇ ಟ್ರಿಪ್ (Trip) ಪ್ಲಾನ್ ಮಾಡ್ತಿದ್ದರೆ ನಮ್ಮ ದೇಶದಲ್ಲಿ ಸಾಕಷ್ಟು ಪ್ರವಾಸಿ ಸ್ಥಳಗಳಿವೆ. ಏಪ್ರಿಲ್ ನಲ್ಲಿ ಬಿಸಿಲು ಹೆಚ್ಚಿರುವ ಕಾರಣ ಎಲ್ಲರೂ ಕೂಲ್ ಕೂಲ್ (Cool cool) ಪ್ರದೇಶಕ್ಕೆ ಹೋಗಲು ಇಷ್ಟಪಡ್ತಾರೆ. ಭಾರತದಲ್ಲಿ ತಂಪನೆಯ ಅನುಭವ ನೀಡುವ, ನಿಸರ್ಗ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುವ ಅನೇಕ ಪ್ರವಾಸಿ ಸ್ಥಳಗಳಿವೆ. ಏಪ್ರಿಲ್ ತಿಂಗಳಿನಲ್ಲಿ ಸುತ್ತಬಹುದಾದ ಭಾರತದ ಸುಂದರ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ಇಲ್ಲಿದೆ.

ಭಾರತದಲ್ಲಿವೆ ಅದ್ಭುತ ಪ್ರವಾಸಿ ತಾಣಗಳು 

ಪಹಲ್ಗಂ (Pahalgam) : ಜಮ್ಮು ಮತ್ತು ಕಾಶ್ಮೀರದಲ್ಲಿರುವ ಅತ್ಯಂತ ಸುಂದರವಾದ ಗಿರಿಧಾಮ ಪಹಲ್ಗಂ. ಏಪ್ರಿಲ್‌ನಲ್ಲಿ ಈ ಸ್ಥಳಕ್ಕೆ ನೀವು ಆರಾಮವಾಗಿ ಭೇಟಿ ನೀಡಬಹುದು. ಜನಪ್ರಿಯ ಪ್ರವಾಸಿ ತಾಣ ಹಾಗೂ ಗಿರಿಧಾಮ ಇದಾಗಿದೆ. ಅಲ್ಲಿ ಅವಂತಿಪುರ ದೇವಸ್ಥಾನ, ಸರನ್ ಹಿಲ್ಸ್, ಮಮ್ಲೇಶ್ವರ ದೇವಸ್ಥಾನ, ಪಹಲ್ಗಂ ಗಾಲ್ಫ್ ಕೋರ್ಸ್, ಕೊಲ್ಹೋಯ್ ಗ್ಲೇಸಿಯರ್, ಚಂದನ್ವಾರಿ ಮತ್ತು ಕೆಲ ಸರೋವರಗಳಿವೆ. ಅಲ್ಲಿನ ಸುಂದರ ಪರಿಸರ ಪ್ರವಾಸಿಗರನ್ನು ಸೆಳೆಯುವುದ್ರಲ್ಲಿ ಎರಡು ಮಾತಿಲ್ಲ. ಹಚ್ಚ ಹಸಿರಿನ ಗಿರಿಧಾಮ ಹಾಗೂ ಪ್ರಾಚೀನ ಸರೋವರ ಇಲ್ಲಿನ ಕೇಂದ್ರಬಿಂದು. 

ಮನಾಲಿ (Manali) : ಹನಿಮೂನ್ ಗೆ ಹೇಳಿ ಮಾಡಿಸಿದ ಜಾಗ ಮನಾಲಿ. ಭಾರತದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಮನಾಲಿಯೂ ಒಂದು. ಪಿರ್ ಪಂಜಾಲ್ ಮತ್ತು ಧೌಲಾಧರ್ ಶ್ರೇಣಿಯಲ್ಲಿ ನೆಲೆಗೊಂಡಿರುವ ಅತ್ಯಂತ ಜನಪ್ರಿಯ ಗಿರಿಧಾಮ ಇದಾಗಿದೆ. ಕುಲುವಿನಿಂದ ಕೇವಲ 450 ಕಿಲೋಮೀಟರ್ ದೂರದಲ್ಲಿ ಮನಾಲಿಯಿದೆ. ಸದಾ ಮಂಜಿನಿಂದ ಆವೃತವಾದ ಕಣಿವೆಗಳು ಕಣ್ಮುನ ಸೆಳೆಯುತ್ತವೆ. ಇದೇ ಕಾರಣಕ್ಕೆ ಇದನ್ನು ಬೆಳ್ಳಿಯ ಕಣಿವೆ ಎಂದು ಕರೆಯಲಾಗುತ್ತದೆ. ಮಣಿಕರಣ್ ಸಾಹಿಬ್, ಹಿಡಿಂಬಾ ದೇವಾಲಯ ಸೇರಿದಂತೆ ಹಲವು ಸುಂದರ ಸ್ಥಳಗಳು ಇಲ್ಲಿವೆ. ಸಾಹಸ ಕ್ರೀಡೆಗಳನ್ನು ನೀವು ಅಲ್ಲಿ ಆನಂದಿಸಬಹುದಾಗಿದೆ.  

ಶಿಮ್ಲಾ (Shimla) : ಶಿಮ್ಲಾ ಕೂಡ ಜನಪ್ರಿಯ ಗಿರಿಧಾಮಗಳಲ್ಲಿ ಒಂದಾಗಿದೆ. ಶಿಮ್ಲಾ ಹಿಮಾಚಲ ಪ್ರದೇಶದ ರಾಜಧಾನಿಯಾಗಿದೆ. ದಿ ರಿಡ್ಜ್ ಶಿಮ್ಲಾ, ಮಾಲ್ ರೋಡ್, ಜಖು ಹಿಲ್ ಮತ್ತು ದೇವಸ್ಥಾನ, ಸೋಲನ್ ಇತ್ಯಾದಿ ಪ್ರವಾಸಿ ತಾಣಗಳು ಅಲ್ಲಿವೆ. ತಣ್ಣನೆಯ ಗಾಳಿ, ಬೆಟ್ಟಗಳ ಸಾಲು,ಬಣ್ಣದ ಹೂಗಳು,ಸುರಂಗಗಳು ನಿಸರ್ಗ ಪ್ರೇಮಿಗಳನ್ನು ಸೆಳೆಯುತ್ತದೆ.  

ಹೊಸಪೇಟೆ RAILWAY STATIONಗೆ ಹಂಪಿಯ ಸ್ಪರ್ಶ

ನೈನಿತಾಲ್ (Nainital) : ನೈನಿತಾಲ್ ಉತ್ತರಾಖಂಡದ ಕುಮಾವೂನ್ ಬೆಟ್ಟಗಳ ನಡುವೆ ನೆಲೆ ನಿಂತಿದೆ. ಇದು ಉತ್ತರಾಖಂಡದ ನ್ಯಾಯಾಂಗ ರಾಜಧಾನಿಯಾಗಿದೆ. ಇಲ್ಲಿ ಕಣ್ಣಿನ ಆಕಾರದಲ್ಲಿರುವ ನೈನಿ ಸರೋವರ, ನೈನಾ ದೇವಿ ದೇವಸ್ಥಾನ, ಮಾಲ್ ರಸ್ತೆ, ಸ್ನೋ ವ್ಯೂ ಪಾಯಿಂಟ್, ಟಿಫಿನ್ ಟಾಪ್ ಸೇರಿದಂತೆ ಹಲವು ಸುಂದರ ಸ್ಥಳಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಇಲ್ಲಿ ಅತಿ ಎತ್ತರದ ನೈನಿ ಶಿಖರವಿದೆ. ಇಲ್ಲಿನ ಗಿರಿಧಾಮಗಳು ವರ್ಷಪೂರ್ತಿ ಪ್ರವಾಸಿಗರನ್ನು ಆಕರ್ಷಿಸುತ್ತವೆ.

Happy Nation Finland ಜನರ ಸಂತೋಷದ ರಹಸ್ಯ ಇಲ್ಲಿದೆ!

ಗ್ಯಾಂಗ್ಟಕ್ (Gangtok) : ಸಿಕ್ಕಿಂನಲ್ಲಿರುವ ಗ್ಯಾಂಗ್ಟಕ್ ಒಂದು ಸುಂದರ ಪ್ರವಾಸಿ ಸ್ಥಳವಾಗಿದೆ. ಇಲ್ಲಿ ನೀವು ನಾಥು ಲಾ ಪಾಸ್, ತಾಶಿ ವ್ಯೂ ಪಾಯಿಂಟ್, ಎಂಜಿ ರಸ್ತೆ, ಹನುಮಾನ್ ಟೋಕ್ ಮತ್ತು ರೇಶಿ ಹಾಟ್ ಸ್ಪ್ರಿಂಗ್ಸ್  ಗೆ ಭೇಟಿ ನೀಡಬಹುದು.   

Latest Videos
Follow Us:
Download App:
  • android
  • ios