ಸುಂದರವಾದ ತಾಜ್ ಮಹಲ್ ಹಿಂದೆ ಇದೆ ಅಸಹ್ಯ ಜಗತ್ತು: 10 ವರ್ಷದ ಬಾಲಕಿಯ ಟ್ವಿಟ್ ವೈರಲ್

ತಾಜ್‌ ಮಹಲ್ ವಿಶ್ವ ಪ್ರಸಿದ್ಧ ಪ್ರವಾಸಿ ತಾಣ, ವಿಶ್ವ ಪಾರಂಪರಿಕ ಸ್ಥಳಗಳಲ್ಲಿ ಒಂದಾಗಿರುವ ಪ್ರೇಮಸೌಧ ತಾಜ್‌ ಮಹಲ್‌ಗೆ ಪ್ರತಿನಿತ್ಯ ಜಗತ್ತಿನೆಲ್ಲೆಡೆಯಿಂದ ಸಾವಿರಾರು ಪ್ರವಾಸಿಗರು ಆಗಮಿಸಿ ಶ್ವೇತ ಶಿಲೆಯಿಂದ ನಿರ್ಮಿತವಾದ ಈ ಭವ್ಯ ಮಹಲ್‌ನ್ನು ಕಣ್ತುಂಬಿಕೊಳ್ಳುತ್ತಾರೆ. 

behind the beautiful taj mahal there is worst plastic waste akb

ತಾಜ್‌ ಮಹಲ್ ವಿಶ್ವ ಪ್ರಸಿದ್ಧ ಪ್ರವಾಸಿ ತಾಣ, ವಿಶ್ವ ಪಾರಂಪರಿಕ ಸ್ಥಳಗಳಲ್ಲಿ ಒಂದಾಗಿರುವ ಪ್ರೇಮಸೌಧ ತಾಜ್‌ ಮಹಲ್‌ಗೆ ಪ್ರತಿನಿತ್ಯ ಜಗತ್ತಿನೆಲ್ಲೆಡೆಯಿಂದ ಸಾವಿರಾರು ಪ್ರವಾಸಿಗರು ಆಗಮಿಸಿ ಶ್ವೇತ ಶಿಲೆಯಿಂದ ನಿರ್ಮಿತವಾದ ಈ ಭವ್ಯ ಮಹಲ್‌ನ್ನು ಕಣ್ತುಂಬಿಕೊಳ್ಳುತ್ತಾರೆ. ಆದರೆ ಈ ತಾಜ್ ಮಹಲ್‌ ಎಷ್ಟು ಸುಂದರವೋ ಅದಕ್ಕೆ ತದ್ವಿರುದ್ಧ ಎಂಬಂತೆ ತಾಜ್‌ ಮಹಲ್ ಹಿಂಬಂದಿಯ ಪ್ರದೇಶವಿದೆ. ಸಾವಿರಾರು ಪ್ಲಾಸ್ಟಿಕ್‌ ತಾಜ್ಯಗಳಿಂದ ಈ ಪ್ರದೇಶ ತುಂಬಿದ್ದು, ಪರಿಸರಕ್ಕೆ ದೊಡ್ಡ ಮಾರಕವೆನಿಸಿದೆ. 

ಈ ತ್ಯಾಜ್ಯದಿಂದ ಪರಿಸರಕ್ಕಾಗುತ್ತಿರುವ ಹಾನಿಯ ಬಗ್ಗೆ 10 ವರ್ಷದ ಬಾಲಕಿಯೊಬ್ಬಳು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಟ್ವಿಟ್ ಮಾಡಿದ್ದಳು. ಈ ಟ್ವಿಟ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಆಗ್ರಾ ಮುನ್ಸಿಪಲ್‌ ಕಾರ್ಪೋರೇಷನ್ ಕ್ರಮಕ್ಕೆ ಮುಂದಾಗಿದೆ. ಪರಿಸರ ಹೋರಾಟಗಾರ್ತಿಯಾಗಿರುವ 10 ವರ್ಷದ ಬಾಲಕಿ ಮಣಿಪುರದ (Manipuri) ಲುಸಿಪ್ರಿಯಾ ಕಂಗುಜಮ್‌ (Lucipriya Kangujam) ಆ ಪ್ರದೇಶದ ದುಸ್ಥಿತಿಯ ಫೋಟೋವನ್ನು ತೆಗೆದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಳು. ಇದಾದ ಬಳಿಕ ಆಗ್ರಾ ಮುನ್ಸಿಪಲ್‌ ಕಾರ್ಪೋರೇಷನ್, ಈ ಪ್ರದೇಶದಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯವನ್ನು ಕಾಪಾಡಲು ವಿಫಲವಾದ ನೈರ್ಮಲ್ಯ ಕಂಪನಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. 

Taj Mahal: ತಾಜ್‌ನ ರಹಸ್ಯ ಕೋಣೆಗಳು ಖಾಲಿ: ವಿವಾದಕ್ಕೂ ಮೊದಲೇ ಚಿತ್ರ ಬಿಡುಗಡೆ


ಈ ಪುಟ್ಟ ಪರಿಸರ ಹೋರಾಟಗಾರ್ತಿ ಲುಸಿಪ್ರಿಯಾ ಒಂದು ಬಾರಿ ಬಳಸುವ ಪ್ಲಾಸ್ಟಿಕ್‌ನ ಉತ್ಪಾದನೆ ಹಾಗೂ ಬಳಕೆಯನ್ನು ನಿಯಂತ್ರಿಸುವಲ್ಲಿ ಕಳಪೆ ಸಾಧನೆ ತೋರಿದ ಭಾರತದ ಕ್ರಮವನ್ನು ಟೀಕೆ ಮಾಡಿದ್ದರು. ಆದಾಗ್ಯೂ, ಲುಸಿಪ್ರಿಯಾ ಅವರ ಟ್ವಿಟ್‌ ಆಗ್ರಾದ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಲು ಸಕಾರಾತ್ಮಕ ಪರಿಣಾಮ ಬೀರಿತು. ಆಗ್ರಾ ವಿಭಾಗೀಯ ಆಯುಕ್ತರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತಾಜ್ ಮಹಲ್ ಹಿಂಭಾಗದ ಫೋಟೋದ ಹಿಂದಿನ ನೈಜತೆಯನ್ನು ತಿಳಿಸುವಂತೆ ಒತ್ತಾಯಿಸಿದರು.

ಯಮುನಾ ನದಿಯ ನೀರಿನ ಮಟ್ಟ ಕಡಿಮೆಯಾದಾಗಲೆಲ್ಲಾ ನದಿಯ ಮೇಲ್ಭಾಗದಲ್ಲಿರುವ ನಗರಗಳಿಂದ ನದಿಯಲ್ಲಿ ಹರಿದು ಬರುವ ಪ್ಲಾಸ್ಟಿಕ್ ತ್ಯಾಜ್ಯವು ನದಿಯ ಒಂದು ಬದಿಯಲ್ಲಿ ಸಂಗ್ರಹಗೊಳ್ಳುತ್ತದೆ ಎಂದು ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್ ಟ್ವೀಟ್ ಮಾಡಿದೆ. ಅವರು ನಿಯಮಿತವಾಗಿ ನದಿಯ ದಡವನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ಲಿಸಿಪ್ರಿಯಾ ಅವರು ಫೋಟೋದಲ್ಲಿ ತೋರಿಸಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಅದೇ ದಿನ ನಿಗಮದ ಸಿಬ್ಬಂದಿ ತೆಗೆದಿದ್ದಾರೆ ಎಂದು ಅದು ಹೇಳಿದೆ.

ಇಡೀ ವಿಶ್ವಕ್ಕೇ ಪ್ರೇಮಸೌಧ ತಾಜ್‌ಮಹಲ್, ಆದ್ರೆ ಈ 5 ಹಳ್ಳಿಯವರು ದ್ವೇಷಿಸ್ತಾರೆ, ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಿ!
 

ಆಗ್ರಾ ಟೂರಿಸ್ಟ್ ವೆಲ್ಫೇರ್ ಚೇಂಬರ್ ಕಾರ್ಯದರ್ಶಿ ವಿಶಾಲ್ ಶರ್ಮಾ (Vishal Sharma) ಅವರು ಲುಸಿಪ್ರಿಯಾ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದು, ಫೋಟೋವನ್ನು  ಮೇ 27 ರಂದು ತೆಗೆದಿರುವಂತೆ ತೋರುತ್ತಿರುವುದಾಗಿ ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್ ಹೇಳಿಕೊಂಡರೂ ತಾಜ್ ಮಹಲ್‌ನ ಹಿಂಭಾಗವು ಒಂದು ಸತ್ಯ ವಿಚಾರ. ಅದೊಂದು ಸಂಪೂರ್ಣ ಅವ್ಯವಸ್ಥೆ ಎಂದು ಅವರು ಹೇಳಿದ್ದಾರೆ.

ಏತನ್ಮಧ್ಯೆ, ಸಮಾಜವಾದಿ ಪಕ್ಷದ ನಾಯಕ (Samajwadi Party) ಮನೀಶ್ ಜಗನ್ ಅಗರವಾಲ್ (Manish Jagan Agrawal) ಅವರು ಮಣಿಪುರಿ ಹುಡುಗಿಯನ್ನು (Manipuri girl) ವಿದೇಶಿ ಎಂದು ಕರೆದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಮನೀಶ್ ಜಗನ್ ಅಗರವಾಲ್ ಅವರು ಟ್ರೋಲ್‌ಗೆ ಗುರಿಯಾಗಿದ್ದಾರೆ. ಅಲ್ಲದೇ ಬಾಲಕಿ ಲುಸಿಪ್ರಿಯಾ ಕೂಡ ಮನೀಶ್ ಜಗನ್ ಅಗರವಾಲ್ ಅವರ ಟ್ವಿಟ್‌ಗೆ ಪ್ರತಿಕ್ರಿಯಿಸಿದ್ದು, ತಾನು ವಿಶ್ವಸಂಸ್ಥೆಯಲ್ಲಿ ಎಂಟು ಬಾರಿ ಭಾರತವನ್ನು ಪ್ರತಿನಿಧಿಸಿದ ಹೆಮ್ಮೆಯ ಭಾರತೀಯಳು ಎಂದು ಹೇಳಿಕೊಂಡರು.
 

Latest Videos
Follow Us:
Download App:
  • android
  • ios