Asianet Suvarna News Asianet Suvarna News

ತಾಲಿಬಾನಿ ಎಂಟ್ರಿ, ಆಫ್ಘನ್‌ನಲ್ಲಿ ಶುರುವಾಯ್ತು ಮಕ್ಕಳನ್ನು ಲೈಂಗಿಕ ಗುಲಾಮರನ್ನಾಗಿಸೋ ಪದ್ಧತಿ!

ಪ್ರತಿಯೊಂದು ದೇಶವೂ ತನ್ನದೇ ಪದ್ಧತಿ, ನಿಯಮಗಳನ್ನು ಹೊಂದಿದೆ. ಆದ್ರೆ ಕೆಲವೊಂದು ದೇಶ  ಪದ್ಧತಿ ಹೆಸರಿನಲ್ಲಿ ನೀಡ್ತಿರುವ ಹಿಂಸೆ ದಂಗಾಗಿಸುತ್ತದೆ. ಈ ದೇಶದಲ್ಲಿ ಎಂಟು ವರ್ಷದ ಗಂಡು ಮಕ್ಕಳು ಓಡಾಡೋದೆ ಕಷ್ಟವಾಗಿದೆ.
 

Bacha Bazi In Afghanistan Taliban Where Adolescent Boys Are Sexually Abused roo
Author
First Published Nov 16, 2023, 2:32 PM IST

ತಾಲಿಬಾನಿ ಎಂಟ್ರಿಯಾಗ್ತಿದ್ದಂತೆ  ಅಫ್ಘಾನಿಸ್ತಾನ ಮತ್ತೊಮ್ಮೆ ತನ್ನ ಹಳೆಯ ಬಣ್ಣಕ್ಕೆ ತಿರುಗಿದೆ. ಬಚ್ಚಾ ಬಾಜಿಯನ್ನು ಹೆಸರಿಸುವ ಸಂಪ್ರದಾಯ ಮತ್ತೆ ವೇಗ ಪಡೆಯುತ್ತಿದೆ. ಬಚ್ಚಾ ಬಾಜಿಯಲ್ಲಿ ಹದಿಹರೆಯದ ಅಥವಾ ಕಿರಿಯ ವಯಸ್ಸಿನ ಮಕ್ಕಳನ್ನು ಪ್ರಬಲ ತಾಲಿಬಾನ್ ಜನರು ತಮ್ಮ ಮನರಂಜನೆಗಾಗಿ ಖರೀದಿಸುತ್ತಾರೆ. ಅವರಿಗೆ ಡಾನ್ಸ್ ತರಬೇತಿ ನೀಡೋದಲ್ಲದೆ ಅವರನ್ನು ಶೋಷಣೆ ಮಾಡಲಾಗುತ್ತದೆ. ನಾವಿಂದು ಈ ಬಚ್ಚಾ ಬಾಜಿ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ. 

ಬಚ್ಚಾ ಬಾಜಿ (Baccha Bazi) ಅಂದ್ರೇನು? : ಬಚ್ಚಾ ಬಾಜಿ ಪರ್ಷಿಯನ್ ಪದದಿಂದ ಹುಟ್ಟಿಕೊಂಡಿದೆ. ಇದರರ್ಥ ಮಕ್ಕಳ (Children) ಆಟ. 8 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗರನ್ನು ಲೈಂಗಿಕ ಗುಲಾಮರನ್ನಾಗಿ ಇರಿಸಲಾಗುತ್ತದೆ. ಇದನ್ನು ಬಚ್ಚಾ ಬಾಜಿ ಎಂದು ಕರೆಯಲಾಗುತ್ತದೆ. ಗಡ್ಡ ಬರದ ಮಕ್ಕಳನ್ನು ಮಾತ್ರ ಇದಕ್ಕೆ ಆಯ್ಕೆ ಮಾಡಲಾಗುತ್ತದೆ. ಮಕ್ಕಳಿಗೆ ಗಡ್ಡ ಬೆಳೆಯಲು ಶುರುವಾಗ್ತಿದ್ದಂತೆ ಅವರನ್ನು ಇದ್ರಿಂದ ಬಿಡಿಸಲಾಗುತ್ತದೆ. 

ಬರೀ ಕಲರ್ಸ್ ಕನ್ನಡದ ಬೃಂದಾವನದಲ್ಲಿ ಮಾತ್ರವಲ್ಲ, ಇದು 199 ಇರೋ ನೈಜ ತುಂಬು ಕುಟುಂಬ!

ಯಾವಾಗ ಶುರುವಾಯ್ತು ಬಚ್ಚಾ ಬಾಜಿ?: ವಿಶ್ವದಾದ್ಯಂತ ಹೆಣ್ಮಕ್ಕಳ ಶೋಷಣೆ (Harassment) ಇದೇ ರೀತಿ ನಡೆಯುತ್ತದೆ. ಅವರನ್ನು ಖರೀದಿ ಮಾಡಿ ಅವರ ಮೇಲೆ ಶೋಷಣೆ ಮಾಡೋದನ್ನು ನಾವು ಕೇಳಿದ್ದೇವೆ. ಆದ್ರೆ ಅಪಘಾನಿಸ್ತಾನದಲ್ಲಿ ಗಂಡು ಮಕ್ಕಳ ಶೋಷಣೆ ನಡೆಯುತ್ತಿದೆ. ಇದು ಶುರುವಾಗಿದ್ದು 19 ನೇ ಶತಮಾನದಲ್ಲಿ. ಆಗ ಅಫ್ಘಾನಿಸ್ತಾನದಲ್ಲಿ ಕಾಲರಾ ಹರಡಿತ್ತು. ಆಗ ಅಲ್ಲಿನ ಉಗ್ರಗಾಮಿಗಳು, ಮಹಿಳೆಯರು ಕುಣಿತ, ಗಾಯನದಂತಹ ಚಟುವಟಿಕೆ ಮಾಡುವುದರಿಂದಲೇ ಈ ರೋಗ ಬಂದಿದೆ ಎಂದರು. ಅಲ್ಲದೆ ಹೆಣ್ಣು ಮಕ್ಕಳು ಸಾರ್ವಜನಿಕ ಸ್ಥಳದಲ್ಲಿ ಡಾನ್ಸ್ ಮಾಡುವುದನ್ನು ನಿಷೇಧಿಸಲಾಯ್ತು. ಮನರಂಜನೆಗಾಗಿ ಅಪಘಾನಿಸ್ತಾನದ ಪುರುಷರು ಬಚ್ಚಾ ಬಾಜಿ ಶುರು ಮಾಡಿದ್ರು. 

ಭಾರತದ ಆಗರ್ಭ ಶ್ರೀಮಂತರಿಗೆ ಇಲ್ಲೇ ಮದುವೆಯಾಗುವ ಕನಸು, ಒಂದು ದಿನದ ಬಾಡಿಗೆ 15 ಲಕ್ಷ ರೂ!

ಎಲ್ಲಿಂದ ಬರ್ತಾರೆ ಈ ಮಕ್ಕಳು? : ಬಡ ಕುಟುಂಬದ ಮಕ್ಕಳನ್ನು ಟಾರ್ಗೆಟ್ ಮಾಡಲಾಗುತ್ತದೆ. ಒಮ್ಮೆ ಮಕ್ಕಳ ಮೇಲೆ ತಾಲಿಬಾನಿಗಳ ಕಣ್ಣು ಬಿತ್ತು ಅಂದ್ರೆ ತಪ್ಪಿಸಿಕೊಳ್ಳೋದು ಕಷ್ಟ. ಇದಕ್ಕೆ ಒಪ್ಪದೆ ಹೋದ್ರೆ ಬೆದರಿಕೆ ಹಾಕ್ತಾರೆ. 

ಬಡ ಕುಟುಂಬದ ಮಕ್ಕಳಿಗೆ ಶಿಕ್ಷಣ ನೀಡ್ತೇವೆ, ಆಹಾರ ನೀಡ್ತೇವೆ ಎಂಬ ನಂಬಿಕೆ ನೀಡಿ ಮಕ್ಕಳನ್ನು ಕರೆತರಲಾಗುತ್ತದೆ. ನಂತ್ರ ಮಕ್ಕಳಿಗೆ ಡಾನ್ಸ್ ತರಬೇತಿ ನೀಡಲಾಗುತ್ತದೆ. ಅವರು ಹೆಣ್ಣು ಮಕ್ಕಳಂತೆ ಡಾನ್ಸ್ ಮಾಡಬೇಕು. ಅವರು ಮಹಿಳಾ ನೃತ್ಯಗಾರ್ತಿಯಂತೆ ಕಂಗೊಳಿಸಬೇಕು. ರೇಷ್ಮೆ ಬಟ್ಟೆಗಳನ್ನು ಧರಿಸಿ ಬರಿಗಾಲಿನಲ್ಲಿ ನೃತ್ಯ ಮಾಡಬೇಕು. ಅವರ ಮುಂಭಾಗದ ಕೂದಲನ್ನು ಕತ್ತರಿಸಲಾಗುತ್ತದೆ.  ಹಿಂಭಾಗದಲ್ಲಿ ಉದ್ದವಾದ ಕೂದಲು ಬಿಡಬೇಕು. ಅಲ್ಲದೆ ಹುಬ್ಬುಗಳಿಗೆ ಅವರು ಕಪ್ಪು ಬಣ್ಣ ಬಳಿಯಬೇಕು. ಇದೇ ಅವರ ಗುರುತಾಗಿದೆ.

ಇಲ್ಲಿಂದ ಹೊರ ಬಂದ ಮಕ್ಕಳು ಏನಾಗ್ತಾರೆ? : ಹದಿನಾರು ವರುಷದ ನಂತ್ರ ಮಕ್ಕಳನ್ನು ವಾಪಸ್ ಕಳುಹಿಸಲಾಗುತ್ತದೆ. ಆದ್ರೆ ಹಿಂಸೆ ಅನುಭವಿಸಿದ ಮಕ್ಕಳು ಮತ್ತೆ ನಾರ್ಮಲ್ ಆಗೋದು ಕಷ್ಟ. ಅವರು ಕುಡಿತದ ಚಟಕ್ಕೆ ಬಲಿಯಾಗಿರುತ್ತಾರೆ. ಈ ಮಕ್ಕಳನ್ನು ಅವರ ಕುಟುಂಬಸ್ಥರು ಕೂಡ ಸ್ವೀಕರಿಸೋದಿಲ್ಲ. ಹಾಗಾಗಿ ಅನೇಕರು ಅಡ್ಡ ದಾರಿಯಲ್ಲಿ ಹಣ ಸಂಪಾದನೆ ಶುರು ಮಾಡ್ತಾರೆ. ಕೆಲ ಮಕ್ಕಳು ತಾಲಿಬಾನಿ ಸೇನೆಯಲ್ಲಿ ಕೆಲಸ ಮಾಡ್ತಾರೆ. ಬಚ್ಚಾ ಬಾಜಿಗೆ ಸೇರಿದ್ದ ಮಕ್ಕಳಿಗೆ ಸಮಾಜದಲ್ಲಿ ಗೌರವ ಸಿಗೋದಿಲ್ಲ.

ಬಚ್ಚಾ ಬಾಜಿಯನ್ನು ಮೇ 2017 ರಲ್ಲಿ ಅಕ್ರಮ ಎಂದು ಘೋಷಿಸಲಾಯಿತು. ಅಫ್ಘಾನಿಸ್ತಾನದ ಕಾನೂನಿನಡಿಯಲ್ಲಿ ಇದಕ್ಕೆ  7 ವರ್ಷಗಳ ಜೈಲು ಶಿಕ್ಷೆಯಾಗ್ಬೇಕಿತ್ತು. ಆದ್ರೆ  ಈವರೆಗೂ ಯಾರಿಗೂ ಶಿಕ್ಷೆಯಾದ ವರದಿಯಾಗಿಲ್ಲ. ಪ್ರಸ್ತುತ, ತಾಲಿಬಾನ್ ಆಳ್ವಿಕೆಯ ಅಫ್ಘಾನಿಸ್ತಾನದಲ್ಲಿ ಸಲಿಂಗಕಾಮಕ್ಕೆ ಕಠಿಣ ಶಿಕ್ಷೆ ಇದೆ. ಆದರೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ನಡೆಯುತ್ತಲೇ ಇವೆ.  
 

Follow Us:
Download App:
  • android
  • ios