Asianet Suvarna News Asianet Suvarna News

ಬರೀ ಕಲರ್ಸ್ ಕನ್ನಡದ ಬೃಂದಾವನದಲ್ಲಿ ಮಾತ್ರವಲ್ಲ, ಇದು 199 ಇರೋ ನೈಜ ತುಂಬು ಕುಟುಂಬ!

ಈಗ ಮನೆಯಲ್ಲಿ ಮೂರು – ನಾಲ್ಕು ಮಂದಿ ಇದ್ರೆ ಹೆಚ್ಚು. ಇರೋ ನಾಲ್ವರಲ್ಲೇ ನೂರಾರು ಗಲಾಟೆ ಪ್ರತಿ ದಿನ ನಡೆಯುತ್ತದೆ. ಆದ್ರೆ ಒಂದೇ ಮನೆಯಲ್ಲಿ 199 ಮಂದಿ ವಾಸಿಸೋದು ಸಾಮಾನ್ಯವಲ್ಲ. ಯಾವುದೇ ಅಹಂ ಇಲ್ಲದೆ ಬದುಕುತ್ತಿರುವ ಈ ಕುಟುಂಬ ಎಲ್ಲರಿಗೆ ಮಾದರಿ. 
 

Hundred Ninty Nine Members World Largest Family Lives Under One Roof roo
Author
First Published Nov 15, 2023, 1:09 PM IST

ಮನೆಯಲ್ಲಿ ಗಂಡ – ಹೆಂಡತಿ, ಮಕ್ಕಳಿರೋದೇ ಕಷ್ಟವಾಗಿದೆ. ಮಕ್ಕಳ ಸಂಖ್ಯೆ ಒಂದರ ಬದಲು ಎರಡಾದ್ರೆ ಖರ್ಚು ಹೆಚ್ಚು ಎನ್ನುವವರಿದ್ದಾರೆ. ಆದ್ರೆ ಭಾರತದ ಈಶಾನ್ಯ ರಾಜ್ಯವಾದ ಮಿಜೋರಾಂನಲ್ಲಿರುವ ಬಕ್ತವಾಂಗ್ ಗ್ರಾಮದಲ್ಲಿ ವಿಶ್ವದ ಅತಿದೊಡ್ಡ ಕುಟುಂಬ ನೆಲೆಸಿದೆ. ಒಂದೇ ಮನೆಯಲ್ಲಿ ಅತ್ತೆ, ಮಾವ, ಮಗ – ಸೊಸೆ ಇದ್ರೆ ಜಗಳ ಎನ್ನುವ ಈ ಕಾಲದಲ್ಲಿ ಒಂದೇ ಮನೆಯಲ್ಲಿ 199 ಮಂದಿ ನೆಲೆಸಿದ್ದಾರೆ. ಈ ಮನೆಯ ಮುಖ್ಯಸ್ಥನ ಹೆಸರು ಪು ಜಿಯೋನಾ ಎಂದಾಗಿತ್ತು. 

38 ಪತ್ನಿಯರು, 89 ಮಕ್ಕಳು, ಅವರ ಪತ್ನಿಯರು ಮತ್ತು 36 ಮೊಮ್ಮಕ್ಕಳ ಜೊತೆ ಪು ಜಿಯೋನಾ (Pu Ziona) ವಾಸವಾಗಿದ್ದರು. ಆದ್ರೆ ಅಧಿಕ ರಕ್ತದೊತ್ತಡ (High Blood Pressure) ಮತ್ತು ಸಕ್ಕರೆ ಖಾಯಿಲೆಯಿಂದಾಗಿ 2021 ರಲ್ಲಿ ತನ್ನ 76 ವರ್ಷದಲ್ಲಿ ಪು ಜಿಯೋನಾ ಸಾವನ್ನಪ್ಪಿದ್ದಾರೆ. ಆದ್ರೆ ಅವರ ಸಾವಿನ ನಂತ್ರವೂ ಮನೆಯವರೆಲ್ಲ ಒಟ್ಟಿಗೆ ವಾಸವಾಗಿದ್ದು ಅಚ್ಚರಿ ಮೂಡಿಸಿದ್ದಾರೆ. ಕೆಲ ಮೊಮ್ಮಕ್ಕಳಿಗೆ ಈಗ ಮದುವೆ (marriage) ಯಾಗಿದೆ. ಇಲ್ಲಿ ಕೆಲವರು ಒಂದೇ ಪತ್ನಿ ಹೊಂದಿದ್ದರೆ ಮತ್ತೆ ಕೆಲವರು ಎರಡು ಪತ್ನಿಯನ್ನು ಹೊಂದಿದ್ದಾರೆ. ಎಲ್ಲ ಸೇರಿ 199 ಮಂದಿ ಈ ಮನೆಯಲ್ಲಿದ್ದಾರೆ.

ಒಟ್ಟಿಗೆ ಊಟ ಮಾಡುತ್ತೆ ಕುಟುಂಬ: ನಿಮಗೆ ಅಚ್ಚರಿ ಆಗ್ಬಹುದು, ಮನೆಯ 199 ಸದಸ್ಯರು ದಿನದಲ್ಲಿ ಎರಡು ಬಾರಿ ಒಟ್ಟಿಗೆ ಕುಳಿತು ಆಹಾರ ಸೇವನೆ ಮಾಡ್ತಾರೆ. ದೊಡ್ಡ ಹಾಲ್ ನಲ್ಲಿ ಎಲ್ಲರೂ ಊಟ ಮಾಡೋದ್ರಿಂದ ಕ್ಯಾಂಟೀನ್ ನಂತೆ ಮನೆ ಕಾಣುತ್ತದೆ. ತಮ್ಮ ಕೆಲಸವನ್ನು, ದಿನದ ಖರ್ಚನ್ನು ಎಲ್ಲರೂ ಹಂಚಿಕೊಳ್ತಾರೆ. ಒಟ್ಟುಕುಟುಂಬ ಪದ್ಧತಿಯಿಂದ ಜನರು ಓಡ್ತಿದ್ದರೆ ಇಲ್ಲಿನ ಜನರು ಪು ಜಿಯೋನಾ ನೀತಿಯನ್ನು ಪಾಲಿಸಿಕೊಂಡು ಬರ್ತಿದ್ದಾರೆ. ಆದ್ರೂ ಅವರು ಸತ್ತಮೇಲೆ ಕೆಲವೊಂದು ಬದಲಾವಣೆ ಆಗ್ತಿದೆ.

ಸಿಂಗಲ್‌ ಮದರ್ಸ್‌ಗೇ ಸ್ಫೂರ್ತಿ ಈ ಸೀತಾ ದೇವಸ್ಥಾನ, ಇಲ್ಲಿ ರಾಮನ ಮೂರ್ತಿಯೂ ಇಲ್ಲ!

ಕುಟುಂಬದಲ್ಲಿರುವ ಕೆಲವರು ತಮ್ಮ ಮಕ್ಕಳನ್ನು ಓದಲು ನಗರಕ್ಕೆ ಕಳಿಸುವ ಆಲೋಚನೆ ಮಾಡ್ತಿದ್ದಾರೆ. ಮಕ್ಕಳಿಗೆ ಒಳ್ಳೆ ಶಿಕ್ಷಣ ಸಿಗಲಿ ಎನ್ನುವುದು ಅವರ ಉದ್ದೇಶವಾಗಿದೆ. ಹಾಗೆ ಎಲ್ಲರೂ ಒಟ್ಟಿಗೆ ಇರಲು ಸಹಾಯವಾಗ್ಲಿ ಎನ್ನುವ ಕಾರಣಕ್ಕೆ ಒಂದು ದೊಡ್ಡ ಮನೆಯನ್ನು ನಿರ್ಮಿಸಲಾಗ್ತಿದೆ. 

ಪು ಜಿಯೋನಾ  ಮಿಜೋರಾಂ ರಾಜ್ಯದಲ್ಲಿ ಚುವಾನ್ ಥಾರ್ ಕೊಹ್ರಾನ್ ಎಂದು ಕರೆಯಲ್ಪಡುವ  ಕ್ರಿಶ್ಚಿಯನ್ ಪಂಥವನ್ನು ಮುನ್ನಡೆಸಿದರು.  ಅನೇಕರು ಜಿಯೋನಾರನ್ನು ನಂಬುತ್ತಿದ್ದರು. ಜಿಯೋನಾ ಒಂದಾದ್ಮೇಲೆ ಒಂದು ಮದುವೆ ಮಾಡಿಕೊಂಡ್ರೂ ಯಾರೂ ವಿರೋಧ ಮಾಡಲಿಲ್ಲ. ಅನೇಕರು ತಮ್ಮ ಮಕ್ಕಳನ್ನು ಅವರಿಗೆ ಸಂತೋಷದಿಂದ ಮದುವೆ ಮಾಡಿಕೊಟ್ಟರು. ಚುವಾನ್ ಥಾರ್ ಕೊಹ್ರಾನ್ ಬಹುಪತ್ನಿತ್ವವನ್ನು ಬೆಂಬಲಿಸುತ್ತದೆ. 2,600 ಸದಸ್ಯರು ಇದನ್ನು ಬೆಂಬಲಿಸುತ್ತಾರೆ. ಅವರಲ್ಲಿ ಹೆಚ್ಚಿನವರು ಬಕ್ತಾವಾಂಗ್‌ನಲ್ಲಿ ವಾಸಿಸುತ್ತಿದ್ದಾರೆ. 

ಆಸ್ಟ್ರೇಲಿಯಾದಲ್ಲಿ ಅನುಶ್ರೀ: ಮಾನವನಾಗಿ ಹುಟ್ಟಿದ ಮೇಲೆ ಏನೇನ್​ ಕಂಡೆ ಎಂದ ಕುಡ್ಲ ಬೆಡಗಿಗೆ ಫ್ಯಾನ್ಸ್​ ರಿಪ್ಲೈ ಹೀಗಿದೆ

ಜಿಯೋನಾ ಸಾವನ್ನಪ್ಪಿ ಎರಡು ವರ್ಷ ಕಳೆದಿದ್ದರೂ, ಕುಟುಂಬಸ್ಥರು ಅವರನ್ನು ಈಗ್ಲೂ ಪ್ರೀತಿ ಮಾಡ್ತಾರೆ. ಮನೆಯ ಅನೇಕ ಜಾಗದಲ್ಲಿ ಅವರ ಫೋಟೋವನ್ನು ನೋಡ್ಬಹುದು. ಜಿಯೋನಾದ ಮೌಲ್ಯಗಳು ಮತ್ತು ಆದರ್ಶಗಳಿಗೆ ಕುಟುಂಬಸ್ಥರು ಬದ್ಧರಾಗಿದ್ದಾರೆ.  ಮನೆಯಲ್ಲಿರುವ ಇಷ್ಟೊಂದು ಜನರಿಗೆ ಊಟ, ಬಟ್ಟೆ ನೀಡುವುದು ಸುಲಭವಲ್ಲ. ಮನೆಯಲ್ಲಿರುವ ಎಲ್ಲ ಸದಸ್ಯರು ಪರಸ್ಪರ ಕೆಲಸ, ಖರ್ಚನ್ನು ಹಂಚಿಕೊಳ್ತಾರೆ. ಕೆಲವರು ಮಾಂಸಕ್ಕಾಗಿ ಸುಮಾರು 100 ಹಂದಿಗಳನ್ನು ಸಾಕಲು ಹಂದಿ ಸಾಕಾಣಿಕೆಯನ್ನು ನಡೆಸುತ್ತಾರೆ. ಕೆಲವರು ಹೊಲಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ಕೆಲವರು ಬಡಗಿಗಳಾಗಿದ್ದಾರೆ.

ಇಷ್ಟೊಂದು ಜನರಿಗೆ ಅಡುಗೆ ಮಾಡೋದು ಸುಲಭವಲ್ಲ. ದಿನಕ್ಕೆ 80 ಕೆಜಿ ಅಕ್ಕಿ ಬೇಯಿಸಲಾಗುತ್ತದೆ. ದೊಡ್ಡ ಪಾತ್ರೆಯಲ್ಲಿ ಅಡುಗೆ ಮಾಡೋದ್ರಿಂದ ಅದನ್ನು ಕ್ಲೀನ್ ಮಾಡೋದು ಕೂಡ ಕಷ್ಟ. ಆದ್ರೆ ಎಲ್ಲರೂ ಪರಸ್ಪರ ನೆರವಾಗುವ ಕಾರಣ ಸಮಸ್ಯೆ ಕಾಡುವುದಿಲ್ಲ. ಅನಾರೋಗ್ಯ ಅಥವಾ ಯಾವುದೇ ಆರ್ಥಿಕ ಸಮಸ್ಯೆಯಾಗಿರಲಿ, ನಾವು ಪ್ರತಿ ಪರಿಸ್ಥಿತಿಯಲ್ಲೂ ಪರಸ್ಪರರ ಜೊತೆ ನಿಲ್ಲುತ್ತೇವೆ ಇದು ನಮ್ಮ ಕುಟುಂಬದ ಪಾಸಿಟಿವ್ ಅಂಶವೆಂದು ಕುಟುಂಬದ ಸೊಸೆ ಹೆಮ್ಮೆಯಿಂದ ಹೇಳ್ತಾರೆ.
 

Follow Us:
Download App:
  • android
  • ios