Asianet Suvarna News Asianet Suvarna News

ಕಾಸರಗೋಡಿನ ಅನಂತಪುರ ಸರೋವರ ಕ್ಷೇತ್ರದಲ್ಲಿ ಅಚ್ಚರಿ, ಬಬಿಯಾ ಬಳಿಕ ಮರಿ ಮೊಸಳೆ ಪ್ರತ್ಯಕ್ಷ!

ಇತಿಹಾಸ ಪ್ರಸಿದ್ಧ ಕೇರಳದ ಕಾಸರಗೋಡಿನ ಅನಂತಪುರ ಅನಂತಪದ್ಮನಾಭ ದೇವಾಲಯದಲ್ಲಿ ಸರೋವರದಲ್ಲಿ ಮರಿ ಮೊಸಳೆಯೊಂದು ಪ್ರತ್ಯಕ್ಷವಾಗಿದೆ. ದೇವರ ಪ್ರತಿಬಿಂಬ ಎಂದೇ ಕರೆಯಲ್ಪಟ್ಟಿದ್ದ ಮೊಸಳೆ ಬಬಿಯಾ ಹರಿಪಾದ ಸೇರಿದ ಬಳಿಕ ಈಗ ಬಬಿಯಾ ಪ್ರತಿರೂಪವೇ ಕಾಣಿಸಿಕೊಂಡಿರುವುದು ಭಕ್ತಾಧಿಗಳ ಅಚ್ಚರಿಗೆ ಕಾರಣವಾಗಿದೆ.

Baby crocodile sighting in area of Anantapur temple Kasaragod Vin
Author
First Published Nov 12, 2023, 10:41 AM IST

ಇತಿಹಾಸ ಪ್ರಸಿದ್ಧ ಕೇರಳದ ಕಾಸರಗೋಡಿನ ಅನಂತಪುರ ಅನಂತಪದ್ಮನಾಭ ದೇವಾಲಯ ದಲ್ಲಿ ದೇವರ ಪ್ರತಿಬಿಂಬ ಎಂದೇ ಕರೆಯಲ್ಪಟ್ಟಿದ್ದ ಮೊಸಳೆ ಬಬಿಯಾ ಹರಿಪಾದ ಸೇರಿದ ಬಳಿಕ ಈಗ ಬಬಿಯಾ ಪ್ರತಿರೂಪವೇ ಎಂಬಂತೆ ಸರೋವರದಲ್ಲಿ ಮರಿ ಮೊಸಳೆಯೊಂದು ಪ್ರತ್ಯಕ್ಷವಾಗಿದೆ. ಒಂದು ವಾರದ ಹಿಂದೆ ಭಕ್ತರೊಬ್ಬರು ಕ್ಷೇತ್ರದ ಸರೋವರದಲ್ಲಿ ಮೊಸಳೆ ಕಂಡ ಬಗ್ಗೆ ಮಾಹಿತಿ ನೀಡಿದ್ದರು. ಈಗ ಕ್ಷೇತ್ರದ ಆಡಳಿತ ಮಂಡಳಿ ಮೊಸಳೆ ಇರುವುದನ್ನು ಖಚಿತಪಡ ಸಿದೆ. 

ದೇವರ ಪ್ರತಿಬಿಂಬ ಎಂದೇ ಹೇಳಲಡುತ್ತಿರುವ ಮರಿ ಮೊಸಳೆ ಸಂಜೆ ವೇಳೆ ಕಾಣಿಸಿದ್ದು, ಭಕ್ತರಲ್ಲಿ ಖುಷಿ ತಂದಿದೆ. ಇದು ಕ್ಷೇತ್ರದ ಸರೋವರದಲ್ಲಿ ಕಾಣಿಸಿಕ ಮೂರನೇ ಮರಿ ಮೊಸಳೆಯಾಗಿದೆ. ಇದಕ ಮೊದಲು ಬಬಿಯಾ ಮೊಸಳೆಗೂ ಮುನ್ನವೆ ಇದ್ದ ಮೊಸಳೆಯನ್ನು ಬ್ರಿಟಿಷರು ಗುಂಡಿಟ್ಟು ಕೊಂದಿದ್ದರು. ಬಳಿಕ ಪ್ರತ್ಯಕ್ಷವಾದ ಬಬಿಯ ಮೊಸಳೆ 75 ವರ್ಷ ಕಾಲ ನಿರುಪದ್ರವಿಯಾಗಿ ಬದುಕಿತ್ತು. ವರ್ಷದ ಹಿಂದೆ ಮೃತಪಟ್ಟಿತ್ತು.

ಮಹಾಕಾಲನ ಭಸ್ಮಲೋಕ; ಉಜ್ಜಯಿನಿಯ ಮಹಾಕಾಲೇಶ್ವರನ ದರ್ಶನಕ್ಕಾಗಿ ಪಯಣ

ಮಗು ಮೊಸಳೆ ನೋಡಬೇಕೆಂದು ಹಠ ಹಿಡಿದಾಗ ಪ್ರತ್ಯಕ್ಷವಾಯ್ತು ಮರಿ ಮೊಸಳೆ
ಗಡಿನಾಡು ಕಾಸರಗೋಡಿನ ಸರೋವರ ಕ್ಷೇತ್ರ ಅನಂತಪುರ ಪುರಾಣ ಪ್ರಸಿದ್ಧ ಕ್ಷೇತ್ರವಾಗಿದೆ. ಇಲ್ಲಿನ ಅನಂತಪದ್ಮನಾಭ ದೇಗುಲ ಹಲವು ಐತಿಹ್ಯಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿನ ಸರೋವರದಲ್ಲಿ ದೇವರ ಮೊಸಳೆ ಅದೂ ಸಸ್ಯಾಹಾರಿ ಮೊಸಳೆ ಇದ್ದು, ಇದನ್ನು ನೋಡಲೆಂದೇ ದೂರ ದೂರದಿಂದ ಭಕ್ತಾಧಿಗಳು ಆಗಮಿಸುತ್ತಿದ್ದರು. 13 ತಿಂಗಳ ಹಿಂದೆ ಅಂದರೆ 2022ರ ಅಕ್ಟೋಬರ್ 9ರಂದು ಬಬಿಯಾ ಮೊಸಳೆ ನಿಧನವಾಗಿತ್ತು. 

ಕಾಞಂಗಾಡಿನಿಂದ ಬಂದ ಭಕ್ತ ಕುಟುಂಬಕ್ಕೆ ಈ ಮರಿ ಮೊಸಳೆ ಕಾಣಿಸಿಕೊಂಡಿದೆ. ಅವರು ನ. 07 ರಂದು ಅನಂತ ಪದ್ಮನಾಭನ ಸನ್ನಿಧಾನಕ್ಕೆ ಬಂದಿದ್ದರು. ಆಗ ಅವರ ಜೊತೆಗಿದ್ದ ಮಗು, ಮೊಸಳೆ ನೋಡಬೇಕೆಂದು ಹಠ ಹಿಡಿಯಿತು. ಮೊಸಳೆ ಇಲ್ಲ ಎಂದು ತಾಯಿ ಸಮಾಧಾನಪಡಿಸಿದರೂ ಮಗು ಹಠ ಬಿಡಲಿಲ್ಲ. ಇದೇ ಸಂದರ್ಭದಲ್ಲಿ ಪವಾಡ ಎಂಬಂತೆ ಗುಹೆಯಿಂದ ಮೊಸಳೆ ಹೊರ ಬಂದು ದರ್ಶನ ನೀಡಿದೆ. ಕುಟುಂಬ ಸದಸ್ಯರು ಆ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ದೇವಸ್ಥಾನದ ಆಡಳಿತ ಮಂಡಳಿಗೆ ತೋರಿಸಿದ್ದಾರೆ.

ಈ ದೇವಸ್ಥಾನದಲ್ಲಿ ಅಲ್ಲಾ-ಉದಲ್ ನಿತ್ಯವೂ ಅದೃಶ್ಯವಾಗಿ ಬಂದು ಶಾರದೆಯನ್ನು ಪೂಜಿಸುತ್ತಾನಂತೆ!

ವಿಷಯ ತಿಳಿದ ಕೂಡಲೇ ಸರೋವರದ ಬಳಿ ಬಂದರೆ ಮೊಸಳೆ ಮಾಯವಾಗಿತ್ತು. ಮೊಸಳೆಯನ್ನು ಮೊದಲ ಬಾರಿ ಕಂಡ ಕುಟುಂಬ ಮತ್ತೆ ಬಂದಾಗ ಅವರಿಗೆ ಮತ್ತೆ ಮೊಸಳೆಯ ದರ್ಶನವಾಯಿತು. ಆ ಮೂಲಕ ನೆರೆದಿದ್ದವರಿಗೆಲ್ಲಾ ಮೊಸಳೆ ದರ್ಶನ ಭಾಗ್ಯ ನೀಡಿತು. ಅರ್ಚಕರು, ಆಡಳಿತ ಮಂಡಳಿ, ಭಕ್ತಾದಿಗಳು, ಸಾರ್ವಜನಿಕರು ಅಚ್ಚರಿಗೊಂಡರು.

Follow Us:
Download App:
  • android
  • ios