Asianet Suvarna News Asianet Suvarna News

ನಂದಿ ಗಿರಿಧಾಮದ ಅಮೃತ ಸರೋವರ ಭರ್ತಿ, ಸುಂದರ ತಾಣಕ್ಕೆ ಪ್ರವಾಸಿಗರ ದಂಡು

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಸದ್ಯ ಜಿಲ್ಲೆಯಲ್ಲಿ ಸತತ ಮಳೆಯಿಂದಾಗಿ ಬೆಟ್ಟದಲ್ಲಿರುವ ಅಮೃತ ಸರೋವರ ತುಂಬಿ ಗಿರಿಧಾಮಕ್ಕೆ ಜೀವ ಕಳೆ ತಂದಿದೆ. ಸುಂದರ ಅಮೃತ ಸರೋವರ ಪ್ರವಾಸಿಗರನ್ನು ಸೆಳೆಯುತ್ತಿದೆ.

Amrita Sarovar Of Nandi Hill Attracting Tourists Vin
Author
First Published Sep 13, 2022, 3:30 PM IST

ಬಡವರ ಊಟಿಯೆಂದೇ ಖ್ಯಾತಿ ಪಡೆದು, ಪ್ರೇಮಿಗಳ ಪಾಲಿಗೆ ಸ್ಪರ್ಗವಾಗಿರುವ ನಂದಿಬೆಟ್ಟ ಸತತ ಮಳೆಯಿಂದ ತನ್ನ ಪ್ರಾಕೃತಿಕ ಸೌಂದರ್ಯದೊಂದಿಗೆ ಕಂಗೊಳಿಸುತ್ತಿದೆ. ಗಿರಿಧಾಮದಲ್ಲಿ ಅಮೃತ ಸರೋವರ ತುಂಬಿ ಹರಿಯುತ್ತಿರುವುದು ಪ್ರವಾಸಿಗರನ್ನು ಇನ್ನಷ್ಟುಆಕರ್ಷಿಸಿದೆ. ಹೌದು, ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಸದ್ಯ ಜಿಲ್ಲೆಯಲ್ಲಿ ಸತತ ಮಳೆಯಿಂದಾಗಿ ಬೆಟ್ಟದಲ್ಲಿರುವ ಅಮೃತ ಸರೋವರ ತುಂಬಿ ಗಿರಿಧಾಮಕ್ಕೆ ಜೀವ ಕಳೆ ತಂದಿದೆ.

ಸ್ಪಟಿಕ ಶುಭ್ರ ನೀರು: ನಂದಿ ಬೆಟ್ಟದ ಸುತ್ತಲೂ ಸ್ಕಂದಗಿರಿ, ಬ್ರಹ್ಮಗಿರಿ, ದಿವ್ಯಗಿರಿ ಇದ್ದು ಅಪಾರ ಸಸ್ಯ ಸಂಕುಲ ಇರುವ ನಂದಿಗಿರಿಧಾಮ ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಇದೀಗ ಮಳೆಯಿಂದ ಬೆಟ್ಟದ ಪರಿಸರಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ಗಿರಿಧಾಮದ ಪರಿಸರ ಮಳೆಯಿಂದಾಗಿಯೆ ಹಚ್ಚ ಹಸಿರಿನಿನೊಂದಿಗೆ ಕಂಗೊಳಿಸುತ್ತಿದೆ. ಇದೀಗ ಮಳೆಗೆ ಗಿರಿಧಾಮದಲ್ಲಿರುವ ಅಮೃತ ಸರೋವರ ಕಲ್ಯಾಣ ಹಲವು ದಶಕಗಳ ಬಳಿಕ ತುಂಬಿ ಹರಿಯುತ್ತಿದ್ದು ಸಾಕಷ್ಟು ಗಮನ ಸೆಳೆಯುತ್ತಿದೆ. ಅಮೃತ ಸರೋವರದಲ್ಲಿರುವ ನೀರನ್ನು ಸ್ಪಟಿಕ ಶುಭ್ರ ನೀರು ಎಂದೇ ಇತಿಹಾಸಕಾರರು ಬಣ್ಣಿಸಿದ್ದಾರೆ.

Nandi Hill Rope way ನಂದಿಗಿರಿಗೆ ರೋಪ್‌ ವೇ ನಿರ್ಮಾಣಕ್ಕೆ ರೂಪು ರೇಷೆ

ಕಳೆದ ಬಾರಿ ಮಳೆಯಿಂದ ಅಮೃತ ಸರೋವರಕ್ಕೆ ಇಷ್ಟೊಂದು ಪ್ರಮಾಣದಲ್ಲಿ ನೀರು ಬಂದಿರಲಿಲ್ಲ. ಆದರೆ ಈ ಬಾರಿ ಸತತವಾಗಿ ಸುರಿಯುತ್ತಿರುವ ಮಳೆಯಿಮದ ಅಮೃತ ಸರೋವರ ಭರ್ತಿಯಾಗಿ ನೀರು ಹರಿಯುತ್ತಿದೆಯೆಂದು ನಂದಿಬೆಟ್ಟದ ವಿಶೇಷ ಅಧಿಕಾರಿ ಗೋಪಾಲ್‌ ತಿಳಿಸಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರ ಆಗಮನ: ಸರೋವರ ಭರ್ತಿ ಆಗಿರುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಸರೋವರ ವೀಕ್ಷಣೆ ಮಾಡುತ್ತಿದ್ದಾರೆ. ಮಳೆಯಿಂದ ಬೆಟ್ಟದ ಪ್ರಾಕೃತಿಕ ಪರಿಸರಲ್ಲಿ ಸಾಕಷ್ಟುಬದಲಾವಣೆ ಬಂದಿದೆ. ಇಡೀ ಪರಿಸರ ಹಚ್ಚ ಹಸಿರಿನಿಂದ ಕೂಡಿ ಇದೆ ಎಂದು ಅವರು ತಿಳಿಸಿದರು. ಒಟ್ಟಿನಲ್ಲಿ ಪಾಲಾರ್‌, ಪೆನ್ನಾರ್‌, ಆರ್ಕಾವತಿ, ವೃಷಭಾವತಿ ಸೇರಿದಂತೆ ಹಲವು ನಂದಿಗಳ ಸಂಗಮವಾಗಿರುವ ನಂದಿಗಿರಿಧಾಮ ಜಿಲ್ಲೆಗೆ ಮುಕಟ ಪ್ರಾಯವಾಗಿದೆ.

ನಂದಿ ಗಿರಿಧಾಮಕ್ಕೂ ಬಂತು ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌
ರಾಜ್ಯ ಪ್ರವಾಸ್ಯೋದ್ಯಮ ಅಭಿವೃದ್ದಿ ನಿಗಮವು(State Tourism Development Corporation) ಕೊನೆಗೂ ಪ್ರವಾಸಿಗರಿಗೆ(Tourists) ನಂದಿಗಿರಿಧಾಮದ ಪ್ರವೇಶವನ್ನು ತಮ್ಮ ಬೆರಳತುದಿಯಲ್ಲಿ ಖಚಿತಪಡಿಸಿಕೊಳ್ಳಲು ಅನುಕೂಲವಾಗುವಂತೆ ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ಗೆ(Ticket Booking) ಹೊಸ ಸಾಫ್ಟ್‌ವೇರ್‌ ಅಳವಡಿಸಿದೆ. ಇನ್ಮೇಲೆ ಗಿರಿಧಾಮ ವೀಕ್ಷಣೆಗೆ ಬರುವರು ಆನ್‌ಲೈನ್‌ ಮೂಲಕ ಟಿಕೆಟ್‌ ಬುಕ್ಕಿಂಗ್‌ ಮಾಡಿ ತಮ್ಮ ಪ್ರವೇಶ ಖಾತ್ರಿಪಡಿಸಿಕೊಳ್ಳಬಹುದು.

Travel Tips : ಜೋಗ ಜೊತೆ ಎಷ್ಟು ಅದ್ಭುತ ಜಲಪಾತಗಳಿವೆ ಭಾರತದಲ್ಲಿ ಗೊತ್ತಾ?

ನಂದಿಗಿರಿಧಾಮ ಲಕ್ಷಾಂತರ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಅದರಲ್ಲೂ ಶನಿವಾರ, ಭಾನುವಾರ ಸುಮಾರು 18 ರಿಂದ 20 ಸಾವಿರದಷ್ಟು ಪ್ರವಾಸಿಗರು ನಂದಿಗಿರಿಧಾಮ ಪ್ರಾಕೃತಿಕ ಸೌಂದರ್ಯ(Beauty of Nature) ಸವಿಯಲೆಂದು ರಾಜ್ಯ, ಹೊರ ರಾಜ್ಯಗಳಿಂದ ಬರುತ್ತಾರೆ. ಹೀಗಾಗಿ ಪ್ರವಾಸಿಗರಿಗೆ ನಂದಿಗಿರಿಧಾಮದ ಪ್ರವೇಶ ಸುಲಭ ಆಗಬೇಕು, ಬೆರಳ ತುದಿಯಲ್ಲಿ ಟಿಕೆಟ್‌ ಬುಕ್ಕಿಂಗ್‌ ಆಗಿ ಪ್ರವಾಸಿಗರ ಪ್ರವಾಸ(Tour) ಪ್ರಯಾಸ ಆಗದಂತೆ ಇರಬೇಕೆಂಬ ಉದ್ದೇಶದಿಂದ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮ ಫೆ.14 ರಿಂದ ಆನ್‌ಲೈನ್‌ ಮೂಲಕ ಗಿರಿಧಾಮಕ್ಕೆ ಬರುವರಿಗೆ ಟಿಕೆಟ್‌ ಬುಕ್ಕಿಂಗ್‌ ಅವಕಾಶ ಕಲ್ಪಿಸಿದೆ.

ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಮೂಲಕ ನಿತ್ಯ ಪ್ರವಾಸಿಗರ ಪ್ರವೇಶಕ್ಕೆ ಮಿತಿ ಹೇರಿರುವ ಕಾರಣಕ್ಕೆ ಮುಂದಿನ ದಿನಗಳಲ್ಲಿ ನಂದಿಬೆಟ್ಟದಲ್ಲಿ ಹೆಚ್ಚಿನ ಜನದಟ್ಟಣೆಯಿಂದಾಗಿ ವಾಹನಗಳ ಸಂಚಾರ ಹೆಚ್ಚಾಗಿ ಇದರಿಂದ ಗಿರಿಧಾಮದ ಕಿರಿದಾದ ರಸ್ತೆ ತಿರುವುಗಳಲ್ಲಿ ಉಂಟಾಗುತ್ತಿದ್ದ ವಾಹನ ಸಂಚಾರ ದಟ್ಟಣೆ ಹಾಗೂ ಪರಿಸರದ ಮೇಲೆ ಉಂಟಾಗುತ್ತಿದ್ದ ಒತ್ತಡ ಆಗುತ್ತಿರುವುದನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಪ್ರವಾಸೋದ್ಯಮ ನಿಗಮದ ವೆಬ್‌ಸೈಟ್‌ನಲ್ಲಿ ಹೊಸದಾಗಿ ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಸಾಫ್ಟ್‌ವೇರ್‌ ಅಭಿವೃದ್ದಿಗೊಳಿಸಿ ಅಳವಡಿಸಲಾಗಿದೆ.

Follow Us:
Download App:
  • android
  • ios