ಕನ್ನಡ ಮಾತನಾಡದ ಬೆಂಗಳೂರಿಗರ ಬಗ್ಗೆ ಈ ಚೀನಿ ಯುವತಿಗೆ ಬೇಸರ, ಕನ್ನಡ ಮಾತನಾಡಿ ಅಂತಾಳೆ ಕೇಳಿ!
ಕರ್ನಾಟಕದಲ್ಲಿದ್ದುಕೊಂಡು ಕನ್ನಡ ಮಾತನಾಡೋದು ನಮಗೆ ಮುಜುಗರ. ಕನ್ನಡದಲ್ಲಿ ಮಾತನಾಡಿದ್ರೆ ಅಶಿಕ್ಷಿತರು ಅಂದುಕೊಳ್ತಾರೆಂಬ ಕಾರಣಕ್ಕಾದ್ರೂ ಒಂದಿಷ್ಟು ಇಂಗ್ಲೀಷ್ ಬಳಸುವ ಜನರಿದ್ದಾರೆ. ಹೀಗೆ ಮಾಡಿದ್ರೆ ಕನ್ನಡ ಹೇಗೆ ಉಳಿಯಲು ಸಾಧ್ಯ. ನೀವೂ ಅವ್ರಲ್ಲಿ ಒಬ್ಬರಾಗಿದ್ದರೆ ಚೀನಾ ಹುಡುಗಿ ಹೇಳೋದನ್ನು ಒಮ್ಮೆ ಕೇಳಿ.
ನವೆಂಬರ್ ಒಂದು ಬಂದ್ರೆ ಎಲ್ಲೆಡೆ ಕನ್ನಡ ಡಿಂಡಿಂ ಮೊಳಗುತ್ತದೆ. ನಾವೆಲ್ಲ ಕನ್ನಡಿಗರು, ನಮ್ಮ ಭಾಷೆ ಕನ್ನಡ ಅಂತಾ ಹೆಮ್ಮೆಯಿಂದ ಹೇಳುವ ಜನರು ನವೆಂಬರ್ ಎರಡನೇ ತಾರೀಕು ಮತ್ತೆ ತಮ್ಮ ಹಳೆ ವರಸೆಗೆ ಮರಳುತ್ತಾರೆ. ಕನ್ನಡ ಮರೆತುಹೋಗಿ ಅಲ್ಲಿ ಇಂಗ್ಲೀಷ್, ಹಿಂದಿ ಸೇರಿದಂತೆ ಬೇರೆ ಭಾಷೆಗಳು ಬಂದಿರುತ್ತವೆ. ನಾವು ಕನ್ನಡಿಗರಾಗಿಯೇ ಕನ್ನಡದಲ್ಲಿ ಮಾತನಾಡೋದಿಲ್ಲ ಎನ್ನುವುದು ಬಹಳ ಬೇಸರದ ಸಂಗತಿ.
ಶಾಲೆಗಳಲ್ಲಿ ಮಕ್ಕಳಿಗೆ ಇಂಗ್ಲೀಷ್ (English) ಮಾತನಾಡೋದು ಕಡ್ಡಾಯವಾಗಿರಬಹುದು ಆದ್ರೆ ಇದು ಪಾಲಕರಿಗೆ ಅನ್ವಯಿಸೋದಿಲ್ಲ. ಪಾಲಕರು ಹಾಗೆ ಶಿಕ್ಷಕರಿಗೆ ಕನ್ನಡ (Kannada) ಬಂದ್ರೂ ಇಂಗ್ಲೀಷ್ ನಲ್ಲಿ ಮಾತನಾಡೋರು ಕರ್ನಾಟಕದಲ್ಲಿ ಹೆಚ್ಚಿದ್ದಾರೆ. ಇಂಗ್ಲೀಷ್ ಮಾತನಾಡೋದು ಸ್ಟೆಟಸ್ ಎಂದುಕೊಂಡವರೇ ಹೆಚ್ಚು. ಬೀದಿ ಬದಿ ವ್ಯಾಪಾರಿಗಳಿಂದ ಹಿಡಿದು ಶಾಲೆಯವರೆಗೆ ಎಲ್ಲ ಕಡೆ ಇಂಗ್ಲೀಷ್ ಮಾತನಾಡುವವರಿಗೆ ಸಿಗವು ಗೌರವ ಕನ್ನಡ ಮಾತನಾಡೋರಿಗೆ ಸಿಗೋದಿಲ್ಲ. ಕನ್ನಡ ಮಾತನಾಡುವವರನ್ನು ಈಗಿನ ಜನರು ಅಶಿಕ್ಷಿತರಂತೆ ನೋಡ್ತಾರೆ. ನಾವೇ ನಮ್ಮ ಭಾಷೆ (Language) ಯಲ್ಲಿ ಮಾತನಾಡಿಲ್ಲ ಅಂದ್ಮೇಲೆ ಬೇರೆ ರಾಜ್ಯದಿಂದ ಬಂದಿರೋರಿಗೆ ಕನ್ನಡ ಮಾತನಾಡಿ ಅನ್ನೋದು ಹೇಗೆ?
ತಮಿಳುನಾಡು, ಆಂಧ್ರಪ್ರದೇಶ, ದೆಹಲಿ, ರಾಜಸ್ಥಾನ, ಹರ್ಯಾಣ, ಗುಜರಾತ್ ಹೀಗೆ ನಾನಾ ರಾಜ್ಯಗಳಿಂದ ಬಂದವರ ಸಂಖ್ಯೆ ಕರ್ನಾಟಕದಲ್ಲಿ ಹೆಚ್ಚಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೆಲೆಯೂರಿರುವ ಅನೇಕ ಬೇರೆ ರಾಜ್ಯದ ಜನರಿಗೆ ನಾಲ್ಕೈದು ವರ್ಷವಾದ್ರೂ ಕನ್ನಡ ಬರ್ತಿಲ್ಲ. ಅದಕ್ಕೆ ಕಾರಣ ನಾವು ಕನ್ನಡಿಗರು. ಕನ್ನಡ ಭಾಷೆಯನ್ನು ಅವರಿಗೆ ಕಲಿಸುವ ಅಥವಾ ಕನ್ನಡದಲ್ಲಿ ಮಾತನಾಡುವ ಪ್ರಯತ್ನ ಮಾಡದೆ, ನಮಗೆ ಹಿಂದಿ ಅಥವಾ ತಮಿಳು ಬರುತ್ತೆ ಅನ್ನೋದನ್ನು ತೋರಿಸಲು ಅದೇ ಭಾಷೆಯಲ್ಲಿ ಮಾತನಾಡ್ತೇವೆ. ಆಗ ಅವರು ಕನ್ನಡ ಕಲಿಯೋದು ಹೇಗೆ?
96 ಕೆಜಿ ತೂಕವಿದ್ದ ಹಳೆಯ ಪೋಟೋ ಹಂಚಿಕೊಂಡ ನಟಿ ಸಾರಾ, ಬಳುಕುವ ಬಳ್ಳಿಯಂತಾಗಿದ್ದು ಹೇಗೆ?
ಇದೇ ವಿಷ್ಯವನ್ನು ಚೀನಾದ ಹುಡುಗಿಯೊಬ್ಬಳು ಕನ್ನಡಿಗರಿಗೆ ಹೇಳಿದ್ದಾಳೆ. ಕನ್ನಡಿಗ ದೇವರಾಜ್ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಚೀನಾ ಹುಡುಗಿಯ ಈ ವಿಡಿಯೋ ವೈರಲ್ ಆಗಿದೆ. ಸ್ಥಳೀಯ ಭಾಷೆ ಹಾಗೂ ಸಂಸ್ಕೃತಿಯನ್ನು ಗೌರವಿಸಿ ಎಂದು ಚೀನಾ ಹುಡುಗಿ ಹೇಳೋದನ್ನು ನೀವು ಕೇಳಬಹುದು. ನಮಸ್ಕಾರ, ನನ್ನ ಹೆಸರು ಗೌರಿ. ಚೆನ್ನಾಗಿದ್ದೀರಾ ಎಂದೇ ವಿಡಿಯೋ ಶುರು ಮಾಡುವ ಗೌರಿ, ನನಗೆ ಭಾರತ ಅಂದ್ರೆ ತುಂಬಾ ಇಷ್ಟ ಎನ್ನುತ್ತಾರೆ. ಬೆಂಗಳೂರು ನನ್ನಿಷ್ಟದ ನಗರ ಎಂದ ಗೌರಿ, ಪ್ರತಿ ವರ್ಷ ನಾನು ಬೆಂಗಳೂರಿಗೆ ಬರುತ್ತೇನೆ ಎನ್ನುತ್ತಾರೆ. ಗೌರಿಗೆ ಬೆಂಗಳೂರಿನ ಜನರ ಬಗ್ಗೆ ಒಂದು ಆರೋಪವಿದೆ. ಬೆಂಗಳೂರಿನ ಜನರು ಕನ್ನಡ ಮಾತನಾಡೋದಿಲ್ಲ ಎಂದು ಗೌರಿ ಹೇಳೋದನ್ನು ನೀವು ಕೇಳ್ಬಹುದು. ಜನರು ಸ್ಥಳೀಯ ಭಾಷೆಯನ್ನು ಮಾತನಾಡೋದಿಲ್ಲ. ಕನ್ನಡ ಗೊತ್ತಿಲ್ಲ ಎಂದು ಹೇಳಬೇಡಿ. ಟ್ರೈ ಮಾಡಿ ಎಂದು ಗೌರಿ ಹೇಳಿದ್ದಾರೆ. ನನ್ನನ್ನು ನೋಡಿ ಜನ ಇಂಗ್ಲೀಷ್ ನಲ್ಲಿ ಮಾತನಾಡ್ತಾರೆ. ಆದ್ರೆ ನಾನು ಕನ್ನಡದಲ್ಲಿ ಮಾತನಾಡ್ತೇವೆ ಎನ್ನುವ ಗೌರಿ, ನಿಮಗೆ ಕನ್ನಡ ಬರಲ್ವಾ ಎನ್ನುವ ಮೂಲಕ ಕನ್ನಡ ಬಿಟ್ಟು ಇಂಗ್ಲೀಷ್ ನಲ್ಲಿ ಮಾತನಾಡುವ ಜನರಿಗೆ ಛಾಟಿ ಏಟು ನೀಡಿದ್ದಾರೆ.
ನೈರ್ಮಲ್ಯ ಮುಖ್ಯ ಹೌದು, ಆದ್ರೂ ಸಂಭೋಗಕ್ಕಿಂತ ಮೊದಲು ಪ್ಯುಬಿಕ್ಸ್ ಹೇರ್ ಶೇವ್ ಮಾಡ್ಬುಹುದಾ?
ಮಾಲ್‌ನಲ್ಲಿ ಇಂಗ್ಲೀಷ್ ಮಾತನಾಡ್ತಾರೆ ಸರಿ, ಆದ್ರೆ ರಸ್ತೆ ಬದಿ ವ್ಯಾಪಾರಿಗಳು ಕೂಡ ಕನ್ನಡ ಬಿಟ್ಟು ಇಂಗ್ಲೀಷ್ ನಲ್ಲಿ ಮಾತನಾಡ್ತಾರೆ ಎಂದು ಗೌರಿ ಬೇಸರ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಉದಾಹರಣೆ ಕೂಡ ನೀಡಿದ್ದಾರೆ. ಇದಕ್ಕೆ ಎಷ್ಟು ಅಂತಾ ಕನ್ನಡದಲ್ಲಿ ಕೇಳಿದ್ರೆ, ಮೇಡಂ ಹಂಡ್ರೆಟ್ ರೂಪಿ ಎನ್ನುತ್ತಾರೆ. ಬೇಡ ಕಾಸ್ಟ್ಲಿ ಎಂದು ಇಂಗ್ಲೀಷ್ ನಲ್ಲಿ ಹೇಳ್ತಾರೆ. ಮೇಡಂ ಕಮ್. ಹವ್ ಮಚ್ ಯು ಗಿವ್ ಮಿ ಅಂತಾ ಇಂಗ್ಲೀಷ್ ನಲ್ಲಿ ಕೇಳ್ತಾರೆ ಎನ್ನುವ ಗೌರಿ, ಬೇರೆ ರಾಜ್ಯದಿಂದ ಬರುವ ಜನರಿಗೆ ಇಲ್ಲಿನ ಸ್ಥಳೀಯರು ಕನ್ನಡ ಕಲಿಯುವ ಯಾವುದೇ ಅವಕಾಶ ನೀಡೋದಿಲ್ಲ ಎನ್ನುತ್ತಾರೆ. ನಾವು ನಮ್ಮ ಭಾಷೆ, ಸಂಸ್ಕೃತಿಯನ್ನು ಕಲಿಬೇಕು. ನಮ್ಮ ಸ್ಥಳೀಯ ಭಾಷೆಯಲ್ಲಿ ಮಾತನಾಡಬೇಕು . ಆಗ ವಿದೇಶದಿಂದ ಬರುವ ಜನರೂ ಸ್ಥಳೀಯ ಭಾಷೆ ಕಲಿಯುತ್ತಾರೆ ಎಂಬುದು ಗೌರಿ ಮಾತು. ದಯವಿಟ್ಟು ಕನ್ನಡದಲ್ಲಿ ಮಾತನಾಡಿ ಎಂದು ಗೌರಿ ವಿನಂತಿ ಮಾಡಿದ್ದಾರೆ.