13 ತಿಂಗಳ ಕಂದನ ಬೇರೆ ವಿಮಾನಕ್ಕೆ ಶಿಫ್ಟ್ ಮಾಡಿದ ಏರ್‌ಲೈನ್ಸ್: ದಂಗಾದ ದಂಪತಿ
ಏರ್‌ಲೈನ್ ಸಂಸ್ಥೆಗಳು ಕೆಲವೊಮ್ಮೆ ಮಾಡುವ ಅವಾಂತರಗಳು ಅಷ್ಟಿಷ್ಟಲ್ಲ, ದುಬಾರಿ ಪ್ರಯಾಣದ ವೆಚ್ಚ ನೀಡಿದ ನಂತರವೂ ಕೆಲವು ವಿಮಾನಗಳಲ್ಲಿ ಸುಖ ಪ್ರಯಾಣ ಮರೀಚಿಕೆಯಾಗಿರುತ್ತದೆ.
ಏರ್‌ಲೈನ್ ಸಂಸ್ಥೆಗಳು ಕೆಲವೊಮ್ಮೆ ಮಾಡುವ ಅವಾಂತರಗಳು ಅಷ್ಟಿಷ್ಟಲ್ಲ, ದುಬಾರಿ ಪ್ರಯಾಣದ ವೆಚ್ಚ ನೀಡಿದ ನಂತರವೂ ಕೆಲವು ವಿಮಾನಗಳಲ್ಲಿ ಸುಖ ಪ್ರಯಾಣ ಮರೀಚಿಕೆಯಾಗಿರುತ್ತದೆ. ಕೆಲ ತಿಂಗಳ ಹಿಂದಷ್ಟೇ ಇಂಡಿಗೋ ಏರ್‌ಲೈನ್ಸ್ ವಿಶೇಷಚೇತನ ಮಗುವಿರುವ ದಂಪತಿಯನ್ನು ವಿಮಾನದಲ್ಲಿ ಪ್ರಯಾಣಿಸಲು ಬಿಡದೇ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ಆಸ್ಟ್ರೇಲಿಯಾದ ಜೋಡಿಯೊಂದು ವಿಮಾನ ಯಾನ ಸಂಸ್ಥೆಯ ಅವಾಂತರದಿಂದ ಕಂಗೆಟ್ಟಿದ್ದು ಅವರು ತಮಗಾದ ಭಯಾನಕ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಸ್ಟೆಫನಿ ಮತ್ತು ಆಂಡ್ರ್ಯೂ ಬ್ರಹಾಮ್ ದಂಪತಿ ತಮ್ಮ 13 ತಿಂಗಳ ಮಗುವಿನೊಂದಿಗೆ ಯುರೋಪಿನ ಮೂಲಕ ಪ್ರಯಾಣ ಬೆಳೆಸುತ್ತಿದ್ದರು. ಕ್ವಾಂಟಾಸ್ ಏರ್‌ಲೈನ್‌ನಿಂದ ಆಸ್ಟ್ರೇಲಿಯಾಕ್ಕೆ ಅವರ ಪ್ರಯಾಣವನ್ನು ಮತ್ತೆ ನಿಗದಿಪಡಿಸುವ ಮೊದಲು ದಂಪತಿ ತಮ್ಮ ಕಂದನೊಂದಿಗೆ ಪ್ರಯಾಣಿಸುತ್ತಿದ್ದರು. ಆದರೆ ಕ್ವಾಂಟಾಸ್ ಏರ್‌ಲೈನ್‌ನಿಂದ ಅವರ ಪ್ರಯಾಣ ಮರು ನಿಗದಿಯಾದಾಗ ವಿಮಾನಯಾನ ಸಂಸ್ಥೆ ಅವರ 13 ತಿಂಗಳ ಮಗುವಿಗೆ ಬೇರೆಯದೇ ವಿಮಾನದಲ್ಲಿ ಸೀಟು ಬುಕ್ ಮಾಡಿದೆ. ಇದನ್ನು ನೋಡಿ ದಂಪತಿಗಳು ದಂಗಾಗಿದ್ದಾರೆ.
ಸದ್ಯ ಪೈಲೆಟ್ ತಲೆ ಮೇಲೆ ಕಾಲಿಟ್ಟಿಲ್ಲ ಈಕೆ : ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಫೋಟೋ ವೈರಲ್
13 ತಿಂಗಳ ಹೆಣ್ಣು ಮಗುವಿನ ಪ್ರಯಾಣದ ವೇಳೆ ಬಾಲಕಿಯನ್ನು ಆಕೆಯ ಪೋಷಕರು ಬುಕ್ ಮಾಡಿದ್ದ ವಿಮಾನದಿಂ ಬೇರಯದೇ ವಿಮಾನದಲ್ಲಿ ಕಾಯ್ದಿರಿಸಲಾಗಿದೆ. ಇದು ತಿಳಿಯುತಿದ್ದಂತೆ ಮಗುವಿನ ಪೋಷಕರನ್ನು 21 ಗಂಟೆಗಳ ಕಾಲ ತಡೆಯಲಾಯಿತು. ಜೊತೆಗೆ ಕ್ವಾಂಟಾಸ್‌ನ ಕಸ್ಟಮರ್ ಸಪೋರ್ಟ್ ತಂಡಕ್ಕೆ 55 ಬಾರಿ ಕರೆ ಮಾಡಿದರು ಸಮಸ್ಯೆ ಮಾತ್ರ ಪರಿಹಾರವಾಗಲಿಲ್ಲ. ಅಲ್ಲದೇ ಅವರು ನಾವು ಏನೂ ತಪ್ಪು ಮಾಡಿಲ್ಲ. ನಾವು ಆಕೆಗೆ ಟಿಕೆಟ್ ಬುಕ್ ಮಾಡಿದ್ದೇವೆ ಎಂದು ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಯತ್ನಿಸಿದರೆ ಹೊರತು ಸಮಸ್ಯೆ ಪರಿಹರಿಸಲು ಕ್ರಮ ಕೈಗೊಂಡಿಲ್ಲ. ಅಲ್ಲದೇ ಈ ತಪ್ಪಿನ ಹೊಣೆ ಹೊರಲು ಕೂಡ ಅವರು ಸಿದ್ಧರಿರಲಿಲ್ಲ ಎಂದು ಸ್ಟೆಫನಿ ಹೇಳಿಕೊಂಡಿದ್ದಾರೆ. ಇದರಿಂದಾಗಿ ನಾವು ಬಹುತೇಕ 20 ಗಂಟೆ 47 ನಿಮಿಷ 13 ಸೆಕೆಂಡುಗಳ ಕಾಲ ಫೋನ್‌ನಲ್ಲೇ ಕಳೆದೆವು.
55 ಪ್ರತ್ಯೇಕ ಫೋನ್ ಕರೆಗಳ ನಂತರ ಅವರು ಅಂತಿಮವಾಗಿ ನಮಗೆ ತೆರಳಲು ಹೊಸ ವಿಮಾನಗಳನ್ನು ಕಾಯ್ದಿರಿಸಲು ಒಪ್ಪಿಕೊಂಡರು. ನಾವು ಮನೆಗೆ ತೆರಳಬೇಕಿದ್ದ ನಿಗದಿತ ದಿನಕ್ಕಿಂತ 12 ದಿನಗಳ ನಂತರ ಅವರು ನಮಗೆ ಬೇರೆ ವಿಮಾನ ನೀಡಿದರು. ಇದರಿಂದ ನಾವು ರೋಮ್‌ನಲ್ಲಿ ಎರಡು ವಾರಗಳ ವಸತಿಗಾಗಿ ಬಹುದೊಡ್ಡ ಹಣವನ್ನು ವ್ಯಯಿಸಬೇಕಾಯಿತು ಎಂದು ಸ್ಟೆಫನ್ ಹೇಳಿದ್ದಾರೆ.
ವಿಂಡೋ ಪಕ್ಕಾ ಹೋಗಲು ಸೀಟ್ ಮೇಲೆ ಹತ್ತೋದಾ ಈ ನಾರಿ? ಥೋ ಇದೆಂಥಾ ವರ್ತನೆ?
ಈ ವಿಚಾರಕ್ಕೆ ಸಂಬಂಧಿಸಿದಂತೆ ಡೈಲಿ ಮೇಲ್ ಆಸ್ಟ್ರೇಲಿಯಾ ವರದಿ ಮಾಡಿದ್ದು, ಈ ತಪ್ಪಿಗಾಗಿ Qantas ಏರ್‌ಲೈನ್ಸ್ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತದೆ ಎಂದು ಹೇಳಿದೆ. ಏರ್‌ಲೈನ್ ಮತ್ತು ಪಾಲುದಾರ KLM ನಡುವಿನ ಬ್ಯಾಕ್‌ಎಂಡ್ ಆಡಳಿತಾತ್ಮಕ ದೋಷದಿಂದಾಗಿ ಮಗುವನ್ನು ಸ್ವಯಂಚಾಲಿತವಾಗಿ ಮತ್ತೊಂದು ವಿಮಾನಕ್ಕೆ ಸ್ಥಳಾಂತರಿಸಲು ಕಾರಣವಾಯಿತು ಎಂದು ಅದು ಹೇಳಿದೆ. ಅಲ್ಲದೇ ಕುಟುಂಬಕ್ಕೆ ಹಣ ಮರು ಪಾವತಿ ಮಾಡುತ್ತೇವೆ ಎಂದು ಹೇಳಿದೆ.